Latest Updates
-
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ!
ಇಡೀ ಜೀವನ ಪಾಕ್ ಜೈಲಲ್ಲಿ ಕಳೆದ 'ಬ್ಲಾಕ್ ಟೈಗರ್' ರವೀಂದ್ರ ಕೌಶಿಕ್: Gen-Zಗೆ ಗೂಢಚಾರನ ಬಗ್ಗೆ ಗೊತ್ತಾ?
ಬಾಲಿವುಡ್ ಸಿನಿಮಾಗಳಲ್ಲಿ ನೈಜ ಕಥೆ ಆಧಾರಿತ ಸಿನಿಮಾಗಳು ಈ ಹಿಂದೆಯೂ ತೆರೆಗೆ ಬಂದಿದ್ದವೂ. ಅದ್ರಲ್ಲೂ ಹಲವು ಸ್ವಾತಂತ್ರ್ಯ ಹೋರಾಟಗಾರರು, ಪೊಲೀಸ್ ಅಧಿಕಾರಿಗಳು, ಮೇಜರ್, ಮಿಲಿಟರಿ ಆಪರೇಷನ್ ಸೇರಿ ಹಲವು ನೈಜ ಘಟನೆಗಳ ಆಧಾರಿತ ಹಲವು ಸಿನಿಮಾಗಳನ್ನು ಬಾಲಿವುಡ್ ನಿರ್ಮಿಸಿದೆ. ಅದ್ರಲ್ಲೂ ಗಡಿ ಹಾಗೂ ಭಯೋತ್ಪಾದನೆ ಸಂಬಂಧಿತ ಹಲವು ಸಿನಿಮಾಗಳು ಕಮಾಲ್ ಮಾಡಿವೆ.
ಹಾಗೆ ಜನರಿಗೆ ಗೊತ್ತಿಲ್ಲದಂತಹ ಹಲವು ವಿಚಾರಗಳು, ಘಟನೆಗಳ ಕುರಿತಾಗಿಯೂ ಅದ್ಭುತ ಸಿನಿಮಾಗಳ ಮಾಡಿ ಬಾಕ್ಸ್ ಆಫಿಸ್‌ನಲ್ಲಿ ಉತ್ತಮ ಕಲೆಕ್ಷನ್ ಕೂಡ ಮಾಡಿವೆ. ಹಾಗೆ ಸ್ಪೈ ಯುನಿವರ್ಸ್ ಸಿನಿಮಾ ಸರಣಿಯನ್ನು ಸಹ ನೀವು ವೀಕ್ಷಿಸಿರಬಹುದು. ಬಾಲಿವುಡ್‌ನ ದಿಗ್ಗಜ ನಟರು ಈ ಸ್ಪೈ ಯೂನಿವರ್ಸ್ ಸಿನಿಮಾ ಸರಣಿಯಲ್ಲಿ ನಟಿಸಿದ್ದಾರೆ. ಸದ್ಯ ಈ ಸಿನಿಮಾ ಸಾಲಿಗೆ ಈಗ ರಣಬೀರ್ ಸಿಂಗ್ ಅಭಿನಯದ ಧುರಂದರ್ ಸಹ ಸೇರಿಸಿಕೊಂಡಿದೆ.

ಕೆಲ ದಿನಗಳ ಹಿಂದೆ ತೆರೆಕಂಡ ಧುರಂದರ್ 1000 ಕೋಟಿ ಕ್ಲಬ್ ಸೇರುವ ಎಲ್ಲ ಸಾಧ್ಯತೆ ಕಂಡುಬಂದಿದೆ. ಇದು ಕೂಡ ಸ್ಪೈ ಯೂನಿವರ್ಸ್ ಸಂಬಂಧಿತ ಸಿನಿಮಾ ಆಗಿದೆ. ಸಿನಿಮಾ ತಂಡ ಇದನ್ನು ನೈಜ ಜೀವನ ಆಧಾರಿತ ಚಿತ್ರ ಎಂದು ಹೇಳಿಕೊಳ್ಳದೆ ಇದ್ದರೂ ಹಲವರು ಇದೊಂದು ಗುಪ್ತಚರ ಇಲಾಖೆಯಲ್ಲಿ ಕರ್ತವ್ಯಕ್ಕಿದ್ದ ವ್ಯಕ್ತಿಯ ಜೀವನಾಧಾರಿತ ಸಿನಿಮಾ ಎಂದು ವಿಶ್ಲೇಷಿಸಲಾಗಿದೆ.
ಆದ್ರೆ ಈ ಸಿನಿಮಾ ಬಂದಿದ್ದೇ ತಡ ಆನ್‌ಲೈನ್‌ಗಳಲ್ಲಿ ರೀಲ್ಸ್‌ಗಳ ಮಳೆಯ ಸುರಿದಿದೆ. ಧುರಂದರ್‌ನ ಹಲವು ಸೀನ್‌ಗಳನ್ನು ರೀಕ್ರಿಯೇಟ್ ಮಾಡುವ ಮಂದಿ ಇನ್ಸ್‌ಸ್ಟಾಗ್ರಾಮ್ ರೀಲ್ಸ್ ಮಾಡುವುದು ನೋಡಿರಬಹುದು. ಅದ್ರಲ್ಲೂ ಸ್ಪೈ ಆಗಿ ನಾನು ಒಂದು ದಿನ ಪಾಕಿಸ್ತಾನದಲ್ಲಿ ಕಳೆದರೆ ಹೇಗಿರಲಿದೆ ಎಂಬ ಕುರಿತಾದ ವಿಡಿಯೋಗಳು ಹರಿದಾಡುತ್ತಿರುವುದು ನೀವು ಸಹ ನೋಡಿರಬಹುದು.
ಸಾವಿರಾರು ಮಂದಿ ಈ ರೀತಿಯ ವಿಡಿಯೋಗಳ ಹಂಚಿಕೊಳ್ಳುತ್ತಿದ್ದಾರೆ. ಅದರ ಜೊತೆಗೆ 'Day 1 as a spy in Pakistan' ಎಂಬ ಟ್ಯಾಗ್‌ಗಳು ಸಹ ಕಾಣಿಸಿಕೊಂಡಿವೆ. ವಿಡಿಯೋಗಳು ನೋಡಲು ನಿಮಗೆ ನಗು ತರಿಸಬಹುದು. ಹಾಗೆ ಈ 2 ನಿಮಿಷದ ವಿಡಿಯೋಗಳ ನೋಡಿ ನೀವು ಕೂಡ ಲೈಕ್ ಮಾಡಿ ಶೇರ್ ಕೂಡ ಮಾಡಿರಬಹುದು. ಆದ್ರೆ ಈ ವಿಡಿಯೋಗಳ ಹಿಂದೆ ನೈಜ ಜೀವನದ ವ್ಯಕ್ತಿಗಳ ನೊಂದ ಕಣ್ಣೀರಿನ ಕಥೆಗಳಿವೆ.
ನೀವು ತಪಾಷೆಯ ಕಾರಣಕ್ಕೆ ನೋಡುತ್ತಿರುವ ಈ ಸ್ಪೈ ಇನ್ ಪಾಕಿಸ್ತಾನ್ ಎಂಬ ವಿಡಿಯೋಗಳು ನಿಜ ಜೀವನದಲ್ಲಿ ಗೂಢಚಾರಿಯಾಗಿದ್ದವರ ಕಷ್ಟಗಳ ಅಪಹಾಸ್ಯ ಮಾಡುವಂತಿವೆ. ಅದ್ರಲ್ಲೂ ರವೀಂದ್ರ ಕೌಶಿಕ್ ಎಂಬ ಧೈರ್ಯವಂತ ಹಾಗೆ ಭಾರತದ ಇತಿಹಾಸ ಪರೆಯದ ಓರ್ವ ಪರಾಕ್ರಮಿಯ ತ್ಯಾಗವನ್ನು ಮತ್ತೆ ಮತ್ತೆ ನಾವುಗಳು ಅಪಹಾಸ್ಯ ಮಾಡುವಂತಿವೆ.
ರವೀಂದ್ರ ಕೌಶಿಕ್ ಇತಿಹಾಸ ಪುಟದಲ್ಲಿ ತನ್ನ ಹೆಸರು ಅಚ್ಚು ಒತ್ತಿದ ಭಾರತದ ಗೂಢಚಾರಿ. ಪಾಕ್ ನೆಲದಲ್ಲಿಯೇ ಇದ್ದು ಭಾರತೀಯ ಸೇನೆಗೆ ಮಾಹಿತಿ ರವಾನಿಸುತ್ತಿದ್ದ ಹೀರೋ. ಆತನ ಧೈರ್ಯ ಸಾಹಸ ಕಂಡು ಅಂದಿನ ಪ್ರಧಾನಿ ಇಂದಿರ ಗಾಂಧಿ ಆತನಿಗೆ ಬ್ಲಾಕ್ ಟೈಗರ್ ಎಂಬ ಬಿರುದು ನೀಡಿದ್ರು. ಆದ್ರೆ ನಾವಿಂದು ಆತನ ಸಾಹಸ, ತ್ಯಾಗ, ಬಲಿದಾನವನ್ನೇ ಅಪಹಾಸ್ಯಕ್ಕೆ ಬಳಸುತ್ತಿದ್ದೇವೆ. ಹಾಗಾದ್ರೆ ಯಾರು ಈ ರವೀಂದ್ರ ಕೌಶಿಕ್? ಪಾಕ್ ನೆಲದಲ್ಲಿ ಉಗ್ರರ ಎದೆಯಲ್ಲಿ ನಡುಕ ಹುಟ್ಟಿಸಿದ್ದ ಆತ ಯಾರು? ಕೊನೆಗೆ ಬಲಿಯಾಗಿದ್ದು ಹೇಗೆ ಗೊತ್ತಾ?
ಯಾರು ಈ ರವೀಂದ್ರ ಕೌಶಿಕ್?
ರವೀಂದ್ರ ಕೌಶಿಕ್ ತ್ಯಾಗ ಅರಿಯುವ ಮುನ್ನ ಆತ ಯಾರು? ಭಾರತೀಯ ಸೇನೆ ಸೇರಿದ್ದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ. ರಾಜಸ್ಥಾನದ ಸಣ್ಣ ಹಳ್ಳಿಯೊಂದರಲ್ಲಿ ಜನಿಸಿದ್ದ ಅವರು ಆರಂಭದಲ್ಲಿ ದೇಶಭಕ್ತಿಯನ್ನು ಬೆಳೆಸಿಕೊಂಡಿದ್ದರು. 1952 ಏಪ್ರಿಲ್ 11ರಂದು ಜನಿಸಿದ್ದ ಅವರು ಬಿಕಾಂ ಪದವಿ ಪಡೆದಿದ್ದರು. ಆ ಸಮಯದಲ್ಲಿ ಬಿಕಾಮ್ ಪದವಿ ಮುಗಿಸಿದರೆ ಉತ್ತಮ ಸರ್ಕಾರಿ ಕೆಲಸಗಳ ಪಡೆಯುವ ಸಾಧ್ಯತೆ ದಟ್ಟವಾಗಿತ್ತು. ಆದ್ರೆ ರವೀಂದ್ರ ಪಾಕಿಸ್ತಾನ, ಚೀನಾ ಸಂಬಂಧವಾಗಿ ಅಂದು ನಡೆಯುತ್ತಿದ್ದ ಯುದ್ದದಿಂದ ಪ್ರೇರೇಪಿತರಾಗಿದ್ದರು.
ಸೇನೆ ಸೇರಲು ಕಲಾಕ್ಷೇತ್ರದ ನೆರವು
ಕಾಲೇಜು ಜೀವನದಲ್ಲಿ ಕಲೆಯ ಕುರಿತು ಆಸಕ್ತಿ ಹೊಂದಿದ್ದ ಅವರು, ನಾಟಕ, ಮಿಮಿಕ್ರಿಗಳ ಕಡೆ ಹೆಚ್ಚು ಒಲವು ಹೊಂದಿದ್ದರು. ಆದ್ರೆ ಅವರ ಈ ಕಲೆ ಭಾರತೀಯ ಸೇನೆ ಅಧಿಕಾರಿ ಕಣ್ಣಿಗೆ ಬಿದ್ದಿತ್ತು. ಈ ಸಮಯಕ್ಕೆ ಭಾರತೀಯ ಸೇನೆಗೆ ಗೂಢಚಾರರ ಅಗತ್ಯ ಹೆಚ್ಚಾಗಿತ್ತು, ಇದೇ ಸಮಯದಲ್ಲಿ ರವೀಂದ್ರ ಲಕ್ನೋದಲ್ಲಿ ನಡೆದ ರಾಷ್ಟ್ರೀಯ ನಾಟಕೋತ್ಸವದಲ್ಲಿ ಪ್ರದರ್ಶನ ನೀಡುವವರಿದ್ದರು. ಅಲ್ಲಿನ ನಾಟಕವೊಂದರಲ್ಲಿ ಚೀನಾ ಸೆರೆಯಾದ ಭಾರತೀಯ ಸೈನಿಕನ ಪಾತ್ರ ಮಾಡಿದ್ದರು. ಅದರಲ್ಲಿ ಭಾರತೀಯ ಸೇನೆಯ ಮಾಹಿತಿ ಬಹಿರಂಗ ಪಡಿಸಲು ಚಿತ್ರಹಿಂಸೆ ನೀಡುವ ದೃಶ್ಯ ಆಗಿತ್ತು, ಈ ದೃಶ್ಯದಲ್ಲಿ ರವೀಂದ್ರ ಎಲ್ಲರ ಗಮನ ಸೆಳೆದರು. ಈ ಪಾತ್ರ ಭಾರತೀಯ ಸೇನೆ ಅಧಿಕಾರಿಗಳ ಕಣ್ಣಿಗೂ ಬಿದ್ದಿತ್ತು.
ಕೇವಲ 22 ವರ್ಷದ ಚಿಗುರು ಮೀಸೆ ಹುಡುಗನಲ್ಲಿದ್ದ ದೇಶಭಕ್ತಿಗೆ ಮನಸೋತ ಅಧಿಕಾರಿಗಳು ಆತನನ್ನು ಸೇನೆಗೆ ಭರ್ತಿ ಮಾಡಿಕೊಳ್ಳಲು ಮುಂದಾದರು. 1973ರಲ್ಲಿ ಪದವಿ ಮುಗಿಸಿದ ಅವರು ದೆಹಲಿಯಲ್ಲಿ ಕೆಲಸ ಮಾಡುವುದಾಗಿ ಹೇಳಿ ಮನೆ ಬಿಟ್ಟರು. ಆದ್ರೆ ಸಂಶೋಧನೆ ಮತ್ತು ವಿಶ್ಲೇಷಣಾ ವಿಭಾಗ (RAW)ದಲ್ಲಿ ಎರಡು ವರ್ಷಗಳ ಕಠಿಣ ತರಬೇತಿ ಆರಂಭಿಸಿದರು.
ಕಠಿಣ ಎರಡು ವರ್ಷಗಳ ನಿರಂತರ ತರಬೇತಿ ಪಡೆದರು. RAW ರವೀಂದ್ರ ಅವರನ್ನು ಗೂಢಚಾರನಾಗಿ ನೇಮಿಸಿಕೊಳ್ಳಲು ಮುಂದಾಗಿತ್ತು. ಇದಕ್ಕಾಗಿ ಅವರಿಗೆ ಉರ್ದು ಶಿಕ್ಷಣ ನೀಡಲಾಯಿತು. ಇಸ್ಲಾಂನ ಧರ್ಮ ಬೋಧನೆ, ಪಾಕಿಸ್ತಾನ ಬೌಗೋಳಿಕ ಲಕ್ಷಣವನ್ನು ಕಲಿಸುವುದು ಸೇರಿತ್ತು. ಹಾಗೆ ಅವರ ಹೆಸರನ್ನು ರವೀಂದ್ರ ಬದಲಾಗಿ ಇಸ್ಲಾಮಾಬಾದ್ ನಿವಾಸಿ ನಬಿ ಅಹ್ಮದ್ ಶಕೀರ್ ಎಂದು ಬದಲಾಯಿಸಿ ಅದಕ್ಕೆ ಬೇಕಾದ ನಕಲಿ ದಾಖಲೆಗಳನ್ನು ಕೂಡ ಸೃಷ್ಟಿಸಲಾಗಿತ್ತು.
ಪಾಕಿಸ್ತಾನದಲ್ಲಿ ಜೀವನ ಆರಂಭ
ನಕಲಿ ದಾಖಲೆಗಳ ಮೂಲಕ ಪಾಕಿಸ್ತಾನಕ್ಕೆ ತೆರಳಿದ ಅವರು ಕರಾಚಿಯ ವಿಶ್ವವಿದ್ಯಾಲಯದಲ್ಲಿ ಪ್ರವೇಶಾತಿ ಪಡೆದು LLB ಪವಿ ಅಧ್ಯಯನಕ್ಕೆ ಮುಂದಾದರು. ಇದಾದ ಬಳಿಕ ಪಾಕಿಸ್ತಾನಿ ಸೇನೆಯ ಮಿಲಿಟರಿ ಲೆಕ್ಕಪತ್ರ ವಿಭಾಗದಲ್ಲಿ ನಿಯೋಜಿತ ಅಧಿಕಾರಿಯಾಗಿ ಸೇರಿಕೊಂಡರು. ಇಲ್ಲಿಂದ ಅವರ ಗೂಢಚಾರರಾಗಿ ಒಂದೊಂದೇ ಹೆಜ್ಜೆ ಮುಂದೆ ಹೋದರು. ಇದಾದ 2 ವರ್ಷಗಳ ಬಳಿಕ ಪಾಕಿಸ್ತಾನ ಸೇನೆಗೆ ಭರ್ತಿಯಾದರು. ಇದು ಭಾರತೀಯ RAW ಗೆ ದೊಡ್ಡ ಯಶಸ್ವಿ ಆಪರೇಷನ್ ಆಗಿತ್ತು.
ರವೀಂದ್ರರು 1979 ಮತ್ತು 1983 ರ ನಡುವೆ ಭಾರತೀಯ ರಕ್ಷಣಾ ಅಧಿಕಾರಿಗಳಿಗೆ ಗೌಪ್ಯ ಮಾಹಿತಿಯನ್ನು ರವಾನಿಸಿದ್ದರು. ಹಾಗೆ ಭಾರತೀಯ ಸೇನೆಗೆ ಬೇಕಾಗಿದ್ದ ಹಲವು ಮಾಹಿತಿಗಳನ್ನು ಅವರು ಹಸ್ತಾಂತರಿಸಿದ್ದರು. ಹಾಗೆ ಪಾಕ್ ಸೇನೆಯ ಮಾಹಿತಿ ಮತ್ತಷ್ಟು ಅರಿಯಲು ಪಾಕ್ ಸೇನೆಯ ಅಧಿಕಾರಿಯೊಬ್ಬರ ಮಗಳನ್ನೇ ಅವರು ವಿವಾಹವಾದರು.
ಮತ್ತೊಬ್ಬ ಭಾರತೀಯನಿಂದಲೇ ಬಂತು ಆಪತ್ತು
ರವೀಂದ್ರ ಅವರು ಭಾರತೀಯ ಸೇನೆಗೆ ಅಗತ್ಯ ಮಾಹಿತಿ ನೀಡುತ್ತಿರುವಾಗಲೇ ಸಿಕ್ಕಿಬಿದ್ದರು. ಪಾಕಿಸ್ತಾನದಲ್ಲಿ ಬಂಧಿಯಾದರು. ಅದು ಕೂಡ ಮತ್ತೋರ್ವ ಭಾರತೀಯ ವ್ಯಕ್ತಿ ಮಾಡಿದ ಸಣ್ಣ ತಪ್ಪು ಇಬ್ಬರ ಜೀವ ಕಸಿದುಕೊಂಡಿ್ತು. ಎಲ್ಲ ಸರಿಯಾಗಿ ನಡೆಯುತ್ತಿದೆ ಎನ್ನುವಾಗ RAW ಮತ್ತೋರ್ವ ಗೂಢಚಾರನನ್ನು ಪಾಕಿಸ್ಥಾನಕ್ಕೆ ಕಳುಹಿಸಿತ್ತು. ಆತನ ಕೆಲಸ ರವೀಂದ್ರರನ್ನು ಭೇಟಿಯಾಗುವುದಾಗಿತ್ತು. ಆದ್ರೆ ಆತ ಪಾಕಿಸ್ತಾನದ ISI ಕೈಗೆ ಸಿಕ್ಕಿಬಿದ್ದಿದ್ದ. ಆತನ ಹಿಡಿದ ಪಾಕ್ ಸೇನೆ ಚಿತ್ರ ಹಿಂಸೆ ನೀಡಿತ್ತು. ಈ ಸಮಯದಲ್ಲಿ ಆತ ರವೀಂದ್ರನ ಕುರಿತಾದ ಮಾಹಿತಿ ಬಿಟ್ಟುಕೊಟ್ಟಿದ್ದ.
ಪಾಕ್ ಸೇನೆಯಲ್ಲಿದ್ದ ರವೀಂದ್ರ ಭಾರತದ ವ್ಯಕ್ತಿ, ಆತ ನಮ್ಮ ರಹಸ್ಯ ಮಾಹಿತಿ ಹಂಚಿಕೊಳ್ಳುತ್ತಿದ್ದ ಎಂಬ ವಿಚಾರ ತಿಳಿದು ಪಾಕ್ ಅಧಿಕಾರಿಗಳು ನಡುಗಿದ್ರು. ರವೀಂದ್ರರನ್ನು ಬಂಧಿಯಾಗಿಸಿದ್ರು, ಅಷ್ಟೇ ಅಲ್ಲ ನೀವು ಕನಸಿನಲ್ಲೂ ಊಹಿಸದಂತಹ ಶಿಕ್ಷೆಗಳ ನೀಡಲು ಆರಂಭಿಸಿದ್ದರು. ಉಗುರುಗಳ ಕಿತ್ತರು. ಊಟ ನೀಡದೆ ಕತ್ತಲ ಕೋಣೆಯಲ್ಲಿ ಇರಿಸಿದರು. ಸಿಯಾಲ್ಕೋಟ್ನಲ್ಲಿರುವ ವಿಚಾರಣಾ ಕೇಂದ್ರದಲ್ಲಿ ಮಾಹಿತಿಗಾಗಿ ಅವರನ್ನು ಕ್ರೂರವಾಗಿ ಚಿತ್ರಹಿಂಸೆ ನೀಡಲಾಯಿತು. 1985 ರಲ್ಲಿ ಪಾಕಿಸ್ತಾನಿ ಸುಪ್ರೀಂ ಕೋರ್ಟ್ ರವೀಂದ್ರನಿಗೆ ಮರಣದಂಡನೆ ವಿಧಿಸಿತು.
ತದನಂತರ ಅವರ ಶಿಕ್ಷೆಯಾಗಿ ಬದಲಾಯಿಸಲಾಯಿತು. ಇದಾದ ಬಳಿಕ 2001ನೇ ಇಸವಿಯ ವರೆಗೂ ಕುಟುಂಬಕ್ಕೆ ಅವರು ರಹಸ್ಯವಾಗಿ ಪತ್ರಗಳ ಬರೆಯುತ್ತಿದ್ದರು, ಆದ್ರೆ ಶ್ವಾಸಕೋಶ ಹಾಗೂ ಹೃದಯ ಸಮಸ್ಯೆಯಿಂದ ಅವರು ಜೈಲಿನಲ್ಲಿಯೇ ಕೊನೆಯುಸಿರೆಳೆದರು. ಪಾಕಿಸ್ತಾನ ಅವರ ದೇಹವನ್ನು ಸಹ ಭಾರತಕ್ಕೆ ಹಸ್ತಾಂತರಿಸಲಿಲ್ಲ. ಹಾಗೆ ಕುಟುಂಬಸ್ಥರಿಗೆ ಯಾವುದೇ ವಸ್ತುಗಳು ಅಥವಾ ಮಾಹಿತಿಯನ್ನು ನೀಡದೆ ಸಮಾಧಿ ಮಾಡಿದರು.



Click it and Unblock the Notifications












