Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
60 ದೇಶ ಸುತ್ತಿದ ಯುಕೆ ಮಹಿಳೆ ಈ ದೇಶಕ್ಕೆ ಇನ್ನೆಂದು ಕಾಲಿಡಲ್ಲವೆಂದು ಶಪಥ.! ಯಾವ ದೇಶ ಗೊತ್ತಾ?
ಪ್ತತಿಯೊಂದು ದೇಶಗಳು ಕೂಡ ಪ್ರವಾಸಿಗರ ಆಗಮನಕ್ಕಾಗಿ ಕಾದಿರುತ್ತವೆ. ಪ್ರವಾಸಿಗರು ಯಾವ ದೇಶಕ್ಕೆ ಹೆಚ್ಚಾಗಿ ಆಗಮಿಸುತ್ತಾರೋ ಆದೇಶದಲ್ಲಿ ಆರ್ಥಿಕ ಸಮಸ್ಯೆ ತಲೆದೂರುವುದಿಲ್ಲ. ಇಂದಿಗೂ ಹಲವು ಸಣ್ಣ ಸಣ್ಣ ದೇಶಗಳು ಪ್ರವಾಸಿಗರನ್ನೇ ನಂಬಿಕೊಂಡಿವೆ. ಹಲವು ದೇಶಗಳು ಪ್ರವಾಸೋದ್ಯಮ ಮೇಲ್ದರ್ಜೆಗೆ ಏರಿಸಲು ಹತ್ತು ಹಲವು ರೀತಿಯ ಕ್ರಮಕ್ಕೆ ಮುಂದಾಗುವುದು ಕೂಡ ನಾವು ನೋಡಿದ್ದೇವೆ.
ಇನ್ನು ಪ್ರವಾಸಿಗರ ದೃಷ್ಟಿಯಲ್ಲಿ ಯಾವ ನಗರ ಕೆಟ್ಟದಾಗಿ ಕಾಣಿಸಲು ಆರಂಭಿಸುತ್ತದೆಯೋ ಆ ನಗರಕ್ಕೆ ಆದಾಯ ಹರಿದುಬರುವುದೇ ಕಷ್ಟವಾಗುತ್ತದೆ. ಹೀಗಾಗಿ ಪ್ರತಿಯೊಂದು ಸರ್ಕಾರವು ಆಯಾ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತಮವಾಗಿಸಲು ಸದಾ ಶ್ರಮಿಸುತ್ತದೆ. ಈಗ ಇಂಗ್ಲೆಂಡ್‌ನ ಮಹಿಳೆ ಬರೋಬ್ಬರಿ 60ಕ್ಕೂ ಹೆಚ್ಚು ದೇಶ ಸುತ್ತಾಡಿದ್ದು ಈಗ ಇದೊಂದು ದೇಶಕ್ಕೆ ಇನ್ನೊಂದು ಭೇಟಿ ನೀಡುವುದಿಲ್ಲ ಎಂದಿದ್ದಾಳೆ.

ಹಾಗಾದ್ರೆ ಯಾರು ಈ ಮಹಿಳೆ? ಯಾವ ದೇಶಕ್ಕೆ ಆಕೆ ಇನ್ನೆಂದು ಬರುವುದಿಲ್ಲ ಎಂದಿದ್ದಾಳೆ? ಆಕೆಗಾದ ಅನುಭವವೇನು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಜೆರಾಲ್ಡೈನ್ ಜೋಕ್ವಿಮ್ ಎಂಬ ಯುಕೆ ಮಹಿಳೆ ಪ್ರವಾಸ ಮಾಡುವುದನ್ನು ಹವ್ಯಾಸವಾಗಿಸಿಕೊಂಡಿದ್ದಾಳೆ. ವೆಸ್ಟ್ ಸಸೆಕ್ಸ್ ಹಿಪ್ನೋಥೆರಪಿಸ್ಟ್ ಹಾಗೂ ವೆಲ್‌ನೆಸ್ ಕೋಚ್ ಆಗಿರುವ ಆಕೆ ಎಲ್ಲಾ ದ್ವೀಪಗಳ ಸುತ್ತಾಡಿದ್ದಾಳೆ ಹಾಗೆ 60ಕ್ಕೂ ಹೆಚ್ಚು ದೇಶಗಳಿಗೆ ಭೇಟಿ ನೀಡಿದ್ದಾಳೆ. ಆದ್ರೆ ವೆನೆಜುವೆಲಾದ ಕ್ಯಾರಕಾಸ್‌ಗೆ ಭೇಟಿ ನೀಡಿದ್ದ ಆಕೆ ಅಲ್ಲಾದ ಕಹಿ ಅನುಭವ ಇನ್ನೆಲ್ಲೂ ಆಗಿಲ್ಲ ಎಂದಿದ್ದಾಳೆ.
ವೆನೆಜುವೆಲಾ ಸದ್ಯ ವಿಶ್ವದಲ್ಲೇ ಸುದ್ದಿಯಾಗುತ್ತಿರುವ ದೇಶ. ಅಲ್ಲಿನ ಆರ್ಥಿಕ ಸ್ಥಿತಿ ಪಾಥಾಳಕ್ಕೆ ಕುಸಿದಿದೆ. ನಿಮ್ಮ ಬಳಿ ಮೂಟೆ ಮೂಟೆ ಅಲ್ಲಿನ ನೋಟುಗಳಿದ್ದರೂ ನಿತ್ಯದ ಅಗತ್ಯ ಸಾಮಾಗ್ರಿಗಳ ಖರೀದಿಸಲು ಸಾಧ್ಯವಾಗದ ಸ್ಥಿತಿ ಅಲ್ಲಿದೆ. ಆ ಮಟ್ಟದ ಅರಾಜಕತೆ, ಹಣದುಬ್ಬರ ಉಂಟಾಗಿದೆ. ಹೀಗಾಗೀ ಈ ದೇಶಕ್ಕೆ ತೆರಳಿದ್ದಾಗ ಆಕೆಗಾದ ಅನುಭವವನ್ನು ಆಕೆ ಈಗ ಹಂಚಿಕೊಂಡಿದ್ದಾಳೆ.
ವೆನೆಜುವೆಲಾಗೆ ತೆರಳಿದ್ದು ದೊಡ್ಡ ಪ್ರಮಾದವಾಗಿತ್ತು. ಹಲವು ತಪ್ಪುಗಳಿಂದಾಗಿ ಈ ದೇಶಕ್ಕೆ ಮತ್ತೊಮ್ಮೆ ತೆರಳಬಾರದು ಎಂದುಕೊಂಡಿದ್ದೇನೆ ಎಂದಿದ್ದಾಳೆ. ಉರುಗ್ವೆಯ ಮಾಂಟೆವಿಡಿಯೊದಿಂದ ಕ್ಯಾರಕಾಸ್‌ಗೆ ವಿಮಾನದ ಮೂಲಕ ಆಗಮಿಸಿದ್ದರು, ಹಾಗೆ ಮೊದಲೇ ಹೋಟೆಲ್ ಬುಕ್ ಮಾಡಿದ್ದರು. ಆದ್ರೆ ವಿಮಾನದಿಂದ ಕೆಳಗಿಳಿದಾಗ ಅಲ್ಲಿಂದ ತೆರಳಲು ಯಾವುದೇ ವ್ಯವಸ್ಥೆ ಇರಲಿಲ್ಲ. ಏಕಾಂಗಿಯಾಗಿ ಕಾಯುತ್ತ ಕುಳಿತುಕೊಳ್ಳಬೇಕಾಯಿತು. ಫೋನ್ ಕೆಲಸ ಮಾಡುತ್ತಿರಲಿಲ್ಲ ರಾತ್ರಿ 1 ಗಂಟೆಯಲ್ಲಿ ಏಕಾಂಗಿಯಾಗಿ ಉಳಿಯಬೇಕಾಯಿತು.
ಮಾರನೆ ದಿನ ಡ್ರೈವರ್ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಆಗಮಿಸಿದ್ದ. ಆದ್ರೆ ಆಕೆಯ ಟ್ಯಾಕ್ಸಿಯಲ್ಲಿ ಮತ್ತೋರ್ವ ಕುಳಿತುಕೊಂಡನಂತೆ. ಇಬ್ಬರು ಅಪರಿಚಿತರ ಜೊತೆಗೆ ಆಕೆ 30 ನಿಮಿಷ ಪ್ರಯಾಣಿಸಬೇಕಾಯಿತಂತೆ. ಬಳಿಕ ಆಕೆ ನಿಗದಿತ ಹೋಟೆಲ್ ತಲುಪಿದಳಂತೆ. ಇನ್ನು ಮಾರನೆ ದಿನ ಕೂಡ ವಿಮಾಣ ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿ ಆಕೆಯ ಬ್ಯಾಗ್ ಹಿಡಿದು ಪರಾರಿಯಾಗಿದ್ದನಂತೆ. ಹಾಗೆ ಎಲ್ಲಾ ಕೆಲಸಕ್ಕೂ ನಿಗದಿಗಿಂತ ಹೆಚ್ಚು ಹಣ ಅಂದರೆ ಲಂಚ ನೀಡಬೇಕಾಗಿತ್ತಂತೆ. ಎಲ್ಲಾ ಕಡೆ ಡಾಲರ್ ನೀಡುವಂತೆ ಕೇಳುತ್ತಿದ್ದರಂತೆ.
ಹೀಗಾಗಿ ಆಕೆಯ ಪ್ರಕಾರ ಮತ್ತೆಂದು ಈ ದೇಶಕ್ಕೆ ಆಕೆ ಬರುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದಾಳಂತೆ. 60 ದೇಶಗಳಲ್ಲಿ ಈ ದೇಶಕ್ಕೆ ಮತ್ತೆ ಎಂದಿಗೂ ವಾಪಾಸು ಪ್ರವಾಸಕ್ಕೆ ಬರುವುದಿಲ್ಲ ಎಂದಿದ್ದಾಳೆ. ಉಳಿದಂತೆ ಬಹುತೇಕ ಎಲ್ಲಾ ದೇಶಗಳಲ್ಲೂ ಆಕೆ ಮರಳಬಹುದು ಎಂದಿದ್ದಾಳೆ.



Click it and Unblock the Notifications
