Latest Updates
-
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು?
ತಾಯಿಯ ಖುಣ ತೀರಿಸಲು ತೊಡೆಯ ಚರ್ಮದಿಂದ ತಾಯಿಗೆ ಚಪ್ಪಲಿ ಮಾಡಿಸಿದ ಪುತ್ರ..!
ಜಗತ್ತಿನಲ್ಲಿ ತಾಯಿ ಖುಣ ತೀರಿಸಲು ಸಾಧ್ಯವಿಲ್ಲ ಎಂಬ ಮಾತಿದೆ. ಆಕೆ ತಮ್ಮ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಿದವಳು. ಮಕ್ಕಳ ಆರೋಗ್ಯ ಬಯಸೋದೂ ಬಿಟ್ಟು ಆಕೆ ಬೇರೆನು ಮಾಡಿಯೇ ಇರುವುದಿಲ್ಲ. ಹೀಗಿರುವಾಗ ನಿಮಗೆಲ್ಲಾ ತ್ರಾತಾಯುಗದ ಶ್ರವಣ ಕುಮಾರನ ಕಥೆ ಗೊತ್ತಿರಬಹುದು. ಆತ ತನ್ನ ಭುಜದ ಮೇಲೆ ತನ್ನ ಕುರುಡ ಪೋಷಕರನ್ನು ಯಾತ್ರೆ ಮಾಡಿಸಿದ್ದ.
ಆದ್ರೆ ಇಲ್ಲೊಂದು ಕಥೆ ಸಹ ಯಾವ ಶ್ರವಣ ಕುಮಾರನಿಗಿಂತಲೂ ಕಡಿಮೆ ಇಲ್ಲ. ಆತ ತನ್ನ ತಾಯಿಗಾಗಿ ಈ ಜಗತ್ತಿನಲ್ಲೇ ಯಾರು ಮಾಡದ ಕೆಲಸ ಮಾಡಿದ್ದಾನೆ. ತಾಯಿ ಪ್ರೀತಿಗೆ ಸರಿಸಾಟಿ ಯಾರು ಇಲ್ಲ. ಸ್ವಾರ್ಥವಿಲ್ಲದೆ ಪ್ರೀತಿ ನೀಡುವ ತಾಯಿಗೆ ಇಲ್ಲೊಬ್ಬ ಮಗ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿದ್ದಾನೆ.

ಹೌದು ಈ ರೀತಿಯ ವಿಚಿತ್ರ ಘಟನೆಯೊಂದು ನಡೆದಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ಉಜ್ಜಯಿನಿಯಲ್ಲಿ. ಆತ ತನ್ನ ತಾಯಿಗೆ ಯಾರು ಊಹಿಸದ ಕೊಡುಗೆ ನೀಡಿದ್ದಾನೆ. ತನ್ನ ಪಾಪ ಕರ್ಮಗಳು ಕೊನೆಯಾಗಲಿ ಎಂದು ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿ ತಾಯಿಗೆ ನೀಡಿದ್ದಾನೆ. ರೋನಕ್ ಗುರ್ಜರ್ ಎಂಬಾತ ರಾಮಾಯಣದಿಂದ ಪ್ರೇರೇಪಿತನಾಗಿ ತನ್ನ ತಾಯಿಗೆ ಈ ರೀತಿಯ ಕೊಡುಗೆ ನೀಡಬೇಕು ಎಂದು ನಿರ್ಧರಿಸಿದ್ದನಂತೆ.
ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ
ತಾಯಿಗೆ ತನ್ನ ಚರ್ಮದಲ್ಲಿ ಚಪ್ಪಲಿ ಮಾಡಿಸಬೇಕು ಎಂದು ನಿರ್ಧರಿಸಿದ ಆತ ಚರ್ಮ ತೆಗೆಯಬೇಕಾದರೆ ಶಸ್ತ್ರ ಚಿಕಿತ್ಸೆಗೆ ಒಳಗಾಗಬೇಕಿತ್ತು. ಈ ಹಿನ್ನೆಲೆ ಆಸ್ಪತ್ರೆಗೆ ತೆರಳಿ ಈ ಕುರಿತು ವೈದ್ಯರ ಬಳಿ ತಿಳಿಸದಾಗ ಅಕ್ಷರಶಃ ಅವರು ಶಾಕ್‌ಗೆ ಒಳಗಾಗಿದ್ದರಂತೆ. ಈ ರೀತಿ ಎಂದಿಗೂ ಅವರು ಕೇಳಿರಲಿಲ್ಲ. ಆದರೆ ತೊಡೆ ಭಾಗದ ಚರ್ಮ ತೆಗೆದು ಬೇರೆ ಚಿಕಿತ್ಸೆಗೆ ಬಳಸಿರುವ ಉದಾಹರಣೆ ಇದೆ. ಯಾರಾದರು ಆಸಿಡ್ ದಾಳಿಗೆ ಒಳಗಾದರೆ ಇಲ್ಲವೆ ಬೆಂಕಿ ಅನಾಹುತದಲ್ಲಿ ಮುಖದ ಚರ್ಮ ಹಾಳಾದರೆ ತೊಡೆಯ ಚರ್ಮ ತೆಗೆದು ಶಸ್ತ್ರ ಚಿಕಿತ್ಸೆ ನೆರವೇರಿಸುತ್ತಾರೆ. ಆದರೆ ಈ ವಿಚಿತ್ರ ಪ್ರಕರಣದಲ್ಲಿ ವೈದ್ಯರಿಗೂ ಅಚ್ಚರಿಯಾಗಿತ್ತು. ಆದರೆ ವೈದ್ಯರು ಸಹ ಆ ಮಗನ ಆಸೆಗೆ ಕೈ ಜೋಡಿಸಿದ್ದಾರೆ. ಆತ ಎರಡೂ ಕಡೆ ತೊಡೆಯ ಚರ್ಮ ತೆಗೆಯಲು ಶಸ್ತ್ರ ಚಿಕಿತ್ಸೆ ನೆರವೇರಿಸಿದ್ದಾರೆ.
ಕಣ್ಣೀರಿಟ್ಟ ತಾಯಿ
ಇನ್ನು ತನ್ನ ಚರ್ಮದಿಂದ ಮಾಡಿದ್ದ ಚಪ್ಪಲಿಯನ್ನು ತಾಯಿಗೆ ನೀಡಲು ಆತ ಜಿತೇಂದ್ರ ಮಹಾರಾಜ್ ಅವರ ಧಾರ್ಮಿಕ ಕಾರ್ಯಕ್ರದಲ್ಲಿ ತಾಯಿ ಭಾಗಿಯಾಗಿದ್ದರು. ಇದೇ ಕಾರ್ಯಕ್ರಮಕ್ಕೆ ಬಂದಿದ್ದ ಪುತ್ರ ಅಲ್ಲಿಯೇ ತಾಯಿಗೆ ಚರ್ಮದ ಚಪ್ಪಲಿ ನೀಡಿದ್ದಾನೆ. ತನ್ನ ಮಗನ ತೊಡೆಯ ಚರ್ಮದಿಂದ ಮಾಡಿದ್ದ ಚಪ್ಪಲಿ ಎಂದು ತಿಳಿದ ಬಳಿಕ ತಾಯಿ ಕಣ್ಣೀರಿಟ್ಟಿದ್ದಾರೆ. ಮಗನನ್ನು ತಬ್ಬಿಕೊಂಡಾಕೆ ಕಣ್ಣೀರು ಹಾಕಿದ್ದಾರೆ. ಈ ರೀತಿಯ ಹರಕೆ ಇಟ್ಟುಕೊಳ್ಳುತ್ತಾನೆ ಎಂದು ನಾನು ಭಾವಿಸಿರಲಿಲ್ಲ ಎಂದು ಆಕೆ ಕಣ್ಣೀರಿಟ್ಟು ಆತನ ತಂಬಿಕೊಂಡರು. ಈ ರೀತಿಯ ಮಗನ ಪಡೆದಿರುವ ನಾನು ಅದೃಷ್ಟಶಾಲಿ ಎಂದು ಭಾವಿಸುತ್ತೇನೆ. ದೇವರು ಅವನ ಎಲ್ಲಾ ಕಷ್ಟಗಳನ್ನು ದೂರಮಾಡಲಿ ಎಂದು ಆಕೆ ಬೇಡಿಕೊಂಡಳು.
ಪುತ್ರನ ವಿರುದ್ಧ ಇವೆ ಕ್ರಿಮಿನಲ್ ಕೇಸ್
ಅಚ್ಚರಿ ಅಂದರೆ ತನ್ನ ತೊಡೆಯ ಚರ್ಮದಿಂದ ಚಪ್ಪಲಿ ಮಾಡಿಸಿಕೊಟ್ಟ ಪುತ್ರನ ಮೇಲೆ ಹಲವು ಕ್ರಿಮಿನಲ್ ಕೇಸ್‌ಗಳಿವೆ. ಉಜ್ಜಯಿನಿಯ ಚಿಮಂಗಂಜ್ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಧಂಚಾ ಭವನದ ನಿವಾಸಿಯಾಗಿರುವ ಈತನ ವಿರುದ್ಧ 2019ರಲ್ಲಿ ಕಾಲಿಗೆ ಗುಂಡೇಟು ಬಿದ್ದಿತ್ತು, ಪೊಲೀಸರು ಒಂದು ಕಾಲಿಗೆ ಗುಂಡು ಹಾರಿಸಿದ್ದರು. ಈತನ ವಿರುದ್ಧ ದರೋಡೆ, ಕೊಲೆ ಸೇರಿ ಒಟ್ಟು 37 ಕ್ರಿಮಿನಲ್ ಕೇಸ್‌ಗಳಿವೆ ಎಂದು ತಿಳಿದುಬಂದಿದೆ.



Click it and Unblock the Notifications
