Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಯುಗಾದಿ ರಾಶಿ ಭವಿಷ್ಯ 2023 : ಮಕರ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಯುಗಾದಿಯೆಂದರೆ ಪ್ರತಿಯೊಬ್ಬರಿಗೂ ಹೊಸ ವರುಷದ ಖುಷಿ. ಹೊಸ ವರುಷಕ್ಕೆ ನಮ್ಮ ಬಾಳಲ್ಲಿ ಎಲ್ಲವೂ ಒಳ್ಳೆಯದಾಗಲಿ ಎಂಬ ಆಸೆ, ಆಕಾಂಕ್ಷೆ ಎಲ್ಲರಲ್ಲೂ ಸಾಮಾನ್ಯವಾಗಿ ಇರುತ್ತದೆ.
ಮಾರ್ಚ್ 22 ಕ್ಕೆ ದೇಶದಾದ್ಯಂತ ಎಲ್ಲರೂ ಯುಗಾದಿ ಹಬ್ಬವನ್ನು ಆಚರಣೆ ಮಾಡಲಿದ್ದಾರೆ. ಈ ವರುಷ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಕರ ರಾಶಿಯವರ ರಾಶಿ ಫಲ ಹೇಗೆದೆ ಅನ್ನೋದನ್ನ ತಿಳಿದುಕೊಳ್ಳೋಣ.

ಗ್ರಹಗಳ ಸಂಚಾರ
ಮಕರ ರಾಶಿಯಲ್ಲಿದ್ದ ಶನಿ ಜನವರಿ 17ನೇ ತಾರೀಕಿಗೆ ಕುಂಭ ರಾಶಿಗೆ ಆಗಮಿಸುತ್ತದೆ. ಇಷ್ಟು ದಿನ ಮೀನ ರಾಶಿಯಲ್ಲಿ ಸ್ಥಿತನಾಗಿದ್ದ ಗುರು ಯುಗಾದಿ ಕಳೆದ ನಂತರ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಅಂದರೆ ಚತುರ್ಥ ಭಾವಕ್ಕೆ ಪ್ರವೇಶ ಮಾಡುತ್ತಾನೆ. ಹೀಗಾಗಿ ಮಕರ ರಾಶಿಯ ಮೇಲೆ ಗುರುವಿನ ಅನುಗ್ರಹ ಇರುತ್ತದೆ. ಯುಗಾದಿ ನಂತರ ಗ್ರಹಗಳ ಬದಲಾವಣೆ ನಿಮಗೆ ಕೊಂಚ ನೆಮ್ಮದಿಯನ್ನು ತರುತ್ತದೆ.
ಕೌಟುಂಬಿಕ ಸಮಸ್ಯೆ
ಕುಟುಂಬದಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಮೇಲೆ ಕೆಲವು ತಪ್ಪುಗಳನ್ನು ಹೊರಿಸುವ ಸಂದರ್ಭ ಎದುರಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಸಮಸ್ಯೆಗಳು ಎದುರಾಗಿ ಕುಟುಂಬವೇ ಹೊರೆ ಅನಿಸುತ್ತದೆ. ಕುಟುಂಬದಲ್ಲಿ ಎಲ್ಲರೂ ಇದ್ದರೂ ಒಂಟಿ ಎಂಬ ಕೊರಗು ಕಾಡುತ್ತಿರುತ್ತದೆ. ಇದಕ್ಕೆಲ್ಲಾ ಕಾರಣ ಶನಿಯ ಪ್ರಭಾವ.
ಮಾತು ಹಿಡಿತದಲ್ಲಿರಲಿ
ವಾಕ್ ಸ್ಥಾನದಲ್ಲಿ ಶನಿ ಇರೋದ್ರಿಂದ ನೀವು ಆಡುವ ಕೆಲವೊಂದು ಮಾತುಗಳಿಂದ ನಿಮಗೆ ತುಂಬಾ ಬೇಕಾದವರನ್ನು ದೂರ ಮಾಡಿಕೊಳ್ಳುವ ಸಂದರ್ಭ ಎದುರಾಗುತ್ತದೆ. ನೀವು ಆಡುವ ಮಾತು ಅವರಿಗೆ ತಪ್ಪಾಗಿ ಕಾಣಿಸಿ ನಿಮ್ಮಿಂದ ದೂರವಾಗುವ ಸಾಧ್ಯತೆ ಇದೆ. ಹೀಗಾಗಿ ಯಾವುದೇ ವಿಚಾರದ ಬಗ್ಗೆ ಮಾತನಾಡಬೇಕಾದರೂ ಮುಂಜಾಗೃಕತೆ ಒಳ್ಳೆಯದು.
ಹಣಕಾಸಿನ ವಿಚಾರದಲ್ಲಿ ಮುಂಜಾಗೃತೆ ವಹಿಸಿ
ಯಾರಿಗಾದರೂ ಸಾಲವಾಗಿ ಹಣ ನೀಡುತ್ತೀರಿ ಅಂದರೆ ಮುಂಜಾಗೃತೆಯಿಂದಿರಿ. ಯಾಕಂದ್ರೆ ಅವರಿಂದ ಆ ಹಣ ನಿಮಗೆ ವಾಪಾಸ್ಸ್ ಸಿಗೋದು ತುಂಬಾ ಕಷ್ಟ. ನಿಮಗೆ ಬೇಕಾದಾಗ ಆ ದುಡ್ಡ ಸಿಗೋದಿಲ್ಲ. ಧನ ಮೂಲಗಳು ನಿಮ್ಮ ರಾಶಿಯಲ್ಲಿ ದುರ್ಬಲವಾಗುತ್ತದೆ. ಹೀಗಾಗಿ ಈಗಿನಿಂದಾನೇ ಉಳಿತಾಯ ಮಾಡಿಟ್ಟುಕೊಳ್ಳಿ.
ಸುಖ, ನೆಮ್ಮದಿ ಸಿಗಲಿದೆ
ಗುರು ಮೇಷ ರಾಶಿಗೆ ಪ್ರವೇಶ ಮಾಡಿದ ನಂತರ ನಿಮಗೆ ಕೊಂಚ ನೆಮ್ಮದಿ ಸಿಗಲಿದೆ. ಯಾವ ರೀತಿ ಅಂದರೆ ಕಷ್ಟದ ಸಂದರ್ಭದಲ್ಲಿ ಯಾರೋ ಒಬ್ಬರು ನಿಮ್ಮ ಸಹಾಯಕ್ಕೆ ಬರುತ್ತಾರೆ. ಗುರು ನಾಲ್ಕನೇ ಮನೆಗೆ ಬರೋದ್ರಿಂದ ಮನಸ್ಸಿಗೆ ನೆಮ್ಮದಿ, ಸುಖ ಸಿಗಲಿದೆ.
ಕೆಲಸದಲ್ಲಿ ಬದಲಾವಣೆ ಆಗುತ್ತದೆ.
ಗುರು ದಶಮ ಸ್ಥಾನವನ್ನು ನೋಡೋದ್ರಿಂದ ಕೆಲಸದಲ್ಲಿ ಏನೇ ಒತ್ತಡಗಳಿದ್ದರೂ ನಿಭಾಯಿಸಿಕೊಂಡು ಹೋಗುತ್ತೀರಿ. ನಿಮ್ಮ ಕೆಲಸದಲ್ಲಿ ಕೆಲವೊಂದು ಬದಲಾವಣೆಗಳು ಆಗುತ್ತದೆ. ನಿಮಗೆ ಒಳ್ಳೆಯ ಉದ್ಯೋಗ ದೊರಕುವ ಸಾಧ್ಯತೆ ಇದೆ. ಅಥವಾ ನೀವು ಇಷ್ಟು ದಿನ ಮಾಡುತ್ತಿದ್ದ ಕೆಲಸ ಬಿಟ್ಟು ಬೇರೆ ಜವಾಬ್ದಾರಿಗಳು ಸಿಗುವ ಸಾಧ್ಯತೆ ಇದೆ.
ಭೂಮಿ ವ್ಯಾಜ್ಯ ಪರಿಹಾರ
ನಾಲ್ಕನೇ ಮನೆಯಲ್ಲಿ ಗುರು ಇರೋದ್ರಿಂದ ಮನೆ ಅಥವಾ ಭೂಮಿ ವಿಚಾರದಲ್ಲಿದ್ದ ವ್ಯಾಜ್ಯಗಳು ಬಗೆ ಹರಿಯಲಿದೆ. ಅದ್ರಲ್ಲೂ ನವೆಂಬರ್ ಕಳೆದ ಮೇಲೆ ನಿಮ್ಮ ಎಲ್ಲಾ ಸಮಸ್ಯೆಗಳು ಬಗೆ ಹರಿಯಲಿದೆ.
ಸ್ವಂತ ಉದ್ಯೋಗ ಮಾಡುವವರಿಗೆ ಮಿಶ್ರ ಫಲ
ಸ್ವಂತ ಉದ್ಯೋಗವನ್ನು ಮಾಡುತ್ತಿರುವವರಿಗೆ ಆದಾಯ ಹಾಗೂ ಖರ್ಚು ಸಮಾನಾಗಿರಲಿದೆ. ಇನ್ನೂ ಬೇರೆಯವರ ಕೈ ಕೆಳಗೆ ಕೆಲಸ ಮಾಡುವವರಿಗೆ ಯಾವುದೇ ರೀತಿ ತೊಂದರೆ ಆಗುವುದಿಲ್ಲ. ಕೊಂಚ ಬದಲಾವಣೆ ಆಗುತ್ತದೆ. ಆದರೆ ಅದನ್ನು ನಿಭಾಯಿಸಿಕೊಂಡು ಹೋಗುವ ಶಕ್ತಿಯನ್ನು ಗುರು ನೀಡುತ್ತಾನೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಸಾಧಾರಣ ಫಲ.
ಪರಿಹಾರ
* ಪ್ರತಿ ಶನಿವಾರ ಉದ್ದಿನ ಬೇಳೆ, ಹುರುಳಿಕಾಳು, ಕಪ್ಪು ಎಳ್ಳನ್ನು ದೇವಸ್ಥಾನಕ್ಕೆ ನೀಡಿ
* ಹನುಮಾನ್ ಚಾಲಿಸ್ ಮಂತ್ರ, ದುರ್ಗಾ ಅಷ್ಟೋತ್ರ, ಗಣಪತಿ ಅಷ್ಟೋತ್ರವನ್ನು ತಪ್ಪದೇ ಪ್ರತಿದಿನ ಪಠಿಸಬೇಕು
* ತಿಂಗಳಿಗೊಮ್ಮೆ ವೃದ್ಧಾಶ್ರಮಕ್ಕೆ ಹೋಗಿ ಅವರಿಗೆ ಅವಶ್ಯಕತೆ ಇರುವ ವಸ್ತುಗಳನ್ನು ನೀಡಿ
* ಮನೆಯಲ್ಲಿ ಹಿರಿಯರಿದ್ದರೆ ಅವರ ಸೇವೆ ಮಾಡಿ
ಈ ವರ್ಷದ ಯುಗಾದಿ ಮಕರ ರಾಶಿಯವರಿಗೆ ಸಾಧಾರಣ ಮಿಶ್ರ ಫಲವಿರೋದ್ರಿಂದ ಸಾಡೆಸಾತ್ ಪ್ರಭಾವ ಇರೋದ್ರಿಂದ ತುಂಬಾನೇ ಮುಂಜಾಗೃಕತೆಯಿಂದ ಹೆಜ್ಜೆ ಇಡಬೇಕಾಗುತ್ತದೆ.



Click it and Unblock the Notifications


