Latest Updates
-
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ! -
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು
ಕುಂಭ ರಾಶಿ ಯುಗಾದಿ ರಾಶಿಫಲ 2023: ಈ ವರ್ಷ ಶುಭವೋ, ಮಿಶ್ರಫಲವೋ?
ಎಲ್ಲರಿಗೂ ಶೋಭಾಕೃತ ಸಂವತ್ಸರ ಶುಭಾಶಯಗಳು. ಈ ಸಂವತ್ಸರ ನಿಮ್ಮೆಲ್ಲರ ಬದುಕಿನಲ್ಲಿ ಹೊಸತನ ತುಂಬಲಿ, ನಿಮ್ಮ ಬಾಳು ಬಂಗಾರವಾಗಲಿ, ಈ ಯುಗಾದಿ ನಿಮಗೆ ಹರ್ಷದ ಯುಗಾದಿ ಆಗಿರಲಿ ಎಂದು ಹೇಳುತ್ತಾ ನಾವಿಲ್ಲಿ ಕುಂಭ ರಾಶಿಯವರಿ 2023-34ರ ಯುಗಾದಿ ರಾಶಿಫಲ ನೀಡಿದ್ದೇವೆ ನೋಡಿ:
ಕುಂಭ ರಾಶಿಯವರಲ್ಲಿ 2023-24 ಯುಗಾದಿಯವರೆಗೆ ಗ್ರಹಗತಿಗಳ ಪ್ರಭಾವ:
ಕುಂಭ ರಾಶಿಯವರ ಯುಗಾದಿ ಭವಿಷ್ಯ ನೋಡುವುದಾದರೆ ರಾಹು, ಗುರು ನಿಮ್ಮ 3ನೇ ಮನೆಯಲ್ಲಿ ಇರಲಿದೆ. ಕೇತು ನಿಮ್ಮ 10ನೇ ಮನೆಯಲ್ಲಿ ಇದೆ, ಶನಿಯು ನಿಮ್ಮ ಲಗ್ನ ಮನೆಯಲ್ಲಿದೆ. ಆದ್ದರಿಂದ ಈ ವರ್ಷ ನಿಮ್ಮ ಬಾಳಲ್ಲಿ ಬೇವು-ಬೆಲ್ಲ ಎರಡೂ ಇದೆ.

ಏಕೆಂದರೆ ನಿಮಗೆ ಶನಿ ಸಾಡೇಸಾತಿ ಇದೆ. ಇದರಿಂದಾಗಿ ಈ ವರ್ಷ ಶುಭ ಹಾಗೂ ಅಶುಭ ಫಲ ಎರಡೂ ಇರಲಿದೆ. ಗುರು ಕೂಡ 3ನೇ ಮನೆಯಲ್ಲಿ ಇರುವುದರಿಂದ ಗುರುವಿನ ಅನುಕೂಲ ಶುಭ ಫಲ ನೀಡುತ್ತಾನೆ.
ಆರ್ಥಿಕ ಸ್ಥಿತಿ
ಈ ವರ್ಷ ನಿಮ್ಮ ಆರ್ಥಿಕ ಸ್ಥಿತಿಯ ಬಗ್ಗೆ ನೋಡುವುದಾದರೆ ಕೆಲವೊಂದು ಹಣ ಕಾಸಿನ ತೊಂದರೆ ಕಾಣಿಸಬಹುದು. ಬೇರೆಯವರ ಮಾತು ಕೇಳಿ ಹಣದ ಹೂಡಿಕೆ ಮಾಡಲು ಹೋಗಬೇಡಿ, ಒಂದು ವೇಳೆ ಮಾಡಿದರೆ ನಷ್ಟ ಅನುಭವಿಷಬೇಕಾಗುವುದು. ನೀವು ದುಡ್ಡಿನಲ್ಲಿ ಮೋಸ ಹೋಗುವ ಸಾಧ್ಯತೆ ಇದೆ. ಆದ್ದರಿಂದ ಯಾರಿಗಾದರೂ ಸಾಲ ನೀಡಿದರೆ ಆ ಹಣ ವಾಪಾಸು ಬರಲ್ಲ. ಅಲ್ಲದೆ ಈ ವರ್ಷ ಇರುವ ವ್ಯವಹಾರವನ್ನು ಮುಂದುವರೆಸಿಕೊಂಡು ಹೋಗಲು ಪ್ರಯತ್ನಿಸಿ, ಯಾವುದೇ ದೊಡ್ಡ ಹೂಡಿಕೆ ಮಾಡಬೇಡಿ. ಇಲ್ಲದಿದ್ದರೆ ಹಣ ನಷ್ಟವಾಗಬಹುದು. ಅಲ್ಲದೆ ಬೇರೆಯವರ ಸಾಲಕ್ಕೆ ಶ್ಯೂರಿಟಿ ಹಾಕದಿರುವುದು ಒಳ್ಳೆಯದು.
ವೃತ್ತಿ ಜೀವನ
ವೃತ್ತಿ ಜೀವನದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ಕೆಲಸದ ಒತ್ತಡ ಅಧಿಕ ಇರಲಿದೆ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತಿಲ್ಲ ಎಂದು ನಿಮಗನಿಸಬಹುದು. ಕೆಲಸ ಬದಲಾಯಿಸಬೇಕೆಂದು ಅನಿಸುವುದು. ಆದರೆ ಒಂದು ಸಲಹೆ ಏನೆಂದರೆ ನಿಮಗೆ ಸರಿಯಾದ ಒಂದು ಕೆಲಸ ಸಿಗುವ ಮೊದಲು ಕೆಲಸ ಬಿಡಬೇಡಿ. ಕೆಲಸ ಬಿಟ್ಟು ಮತ್ತು ಹುಡುಕುವ ಎಂದು ಯೋಚಿಸಿದರೆ ಕೆಲಸದ ವಿಷಯದಲ್ಲಿ ತೊಂದರೆ ಉಂಟಾಗಿ ಆರ್ಥಿಕ ಸಂಕಷ್ಟ ಎದುರಾಗುವುದು.
ಇನ್ನು ನೀವು ಕೆಲಸ ಬದಲಾಯಿಸಿ ಬೇರೆ ಕಡೆ ಹೋದರೂ ಅಲ್ಲಿಯೂ ಕೆಲಸದಲ್ಲಿ ಒತ್ತಡವಿರಲಿದೆ. ಆದ್ದರಿಂದ ನೀವು ಕೆಲಸದಲ್ಲಿನ ಸಮಸ್ಯೆ ಕಡಿಮೆ ಮಾಡಲು ಶನಿಗೆ ಪರಿಹಾರ ಮಾಡುವುದು ಒಳ್ಳೆಯದು
ಕುಟುಂಬ ಮತ್ತು ಆರೋಗ್ಯ
ಕುಟುಂಬ ಜೀವನದಲ್ಲಿ ಚಿಕ್ಕ-ಪುಟ್ಟ ಭಿನ್ನಾಭಿಪ್ರಾಯಗಳಿರುತ್ತದೆ, ಆದರೆ ಸರಿಪಡಿಸಿಕೊಂಡು ಹೋಗಲು ಪ್ರಯತ್ನಿಸಿ. ಆರೋಗ್ಯದಲ್ಲೂ ಸಣ್ಣಪುಟ್ಟ ಸಮಸ್ಯೆಗಳಿರುತ್ತದೆ.
ಶನಿಗೆ ಪರಿಹಾರ
* ಪ್ರತಿ ಶನಿವಾರ ಶನಿ ದೇವಾಲಯಕ್ಕೆ ಭೇಟಿ ನೀಡಿ.
* ಶನಿ ದೇವಾಲಯಕ್ಕೆ ಸಾಸಿವೆ ಎಣ್ಣೆ ಹಾಗೂ ಕಪ್ಪು ಎಳ್ಳು ದಾನ ಮಾಡಿ.
* ನೀವು ಮಂಗಳವಾರ ಹಾಗೂ ಶನಿವಾರ ಹನುಮಾನ್ ದೇವಾಲಯಕ್ಕೆ ಭೇಟಿ.
* ಶನಿವಾರ ನಿರ್ಗತಿಕರಿಗೆ ದಾನ ಮಾಡಿ
* ಪ್ರತಿದಿನ ಹನುಮಾನ್ ಚಾಲೀಸ ಪಠಿಸಿ.



Click it and Unblock the Notifications
