Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಧನು ರಾಶಿ ಯುಗಾದಿ ರಾಶಿಫಲ (2023-24): ಈ ವರ್ಷ ಇವುಗಳಲ್ಲಿ ನಿಮಗೆ ಶುಭವೋ ಶುಭ
ಮಾರ್ಚ್ 22ಕ್ಕೆ ಶುಭಕೃತ ಸಂವತ್ಸರ ಕಳೆದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ. ಈ ಹೊಸ ಸಂವತ್ಸರ ನಿಮ್ಮ ಬಾಳಿನಲ್ಲಿ ಒಳಿತನ್ನು ತರಲಿ, ನಿಮ್ಮ ಆಸೆ ಆಕಾಂಕ್ಷೆಗಳು ಈಡೇರಲಿ.

2023-24 ಯುಗಾದಿ ರಾಶಿಫಲ ಪ್ರಕಾರ ಧನು ರಾಶಿಯವರಿಗೆ ಒಂದು ವರ್ಷ ಹೇಗಿರಲಿದೆ ಎಂದು ನೋಡೋಣ:
ಧನು ರಾಶಿಯವರ ಮೇಲೆ 4 ಪ್ರಮುಖ ಗ್ರಹಗಳ ಪ್ರಭಾವ
ಯುಗಾದಿ ರಾಶಿಫಲದ ಪ್ರಕಾರ ಧನು ರಾಶಿಯವರಲ್ಲಿ ರಾಹು-ಗುರು 5ನೇ ಸ್ಥಾನದಲ್ಲಿದೆ. ರಾಹು ನಿಮ್ಮ ರಾಶಿಯಲ್ಲಿ ನವೆಂಬರ್ 29ರವರೆಗೆ ಇರಲಿದೆ. ಏಪ್ರಿಲ್ 22ಕ್ಕೆ ನಿಮ್ಮ ರಾಶಿಯಲ್ಲಿ ಗುರು 5ನೇ ಸ್ಥಾನಕ್ಕೆ ಬರಲಿದೆ. ಇನ್ನೆರಡು ಪ್ರಮುಖ ಗ್ರಹಗಳಾದ ಕೇತು ನಿಮ್ಮ 12ನೇ ಮನೆಯಲ್ಲಿ ಶನಿ ನಿಮ್ಮ 3ನೇ ಮನೆಯಲ್ಲಿದೆ. ಈ ನಾಲ್ಕು ಗ್ರಹಗಳ ಸ್ಥಾನವೂ ನಿಮಗೆ ಅನುಕೂಲಕರವಾಗಿಯೇ ಇರಲಿದೆ. ಇವುಗಳು ನಿಮಗೆ ಶುಭ ಫಲ ನೀಡಲಿದೆ.
ಆರ್ಥಿಕ ಸ್ಥಿತಿ
ಈ ಗ್ರಹಗಳ ಸ್ಥಾನದಿಂದಾಗಿ ನಿಮ್ಮ ಆರ್ಥಿಕ ಸ್ಥಿತಿ ತುಂಬಾನೇ ಚೆನ್ನಾಗಿರಲಿದೆ. ಯಾವುದಾದರೂ ಹಳೆಯ ಸಾಲವಿದ್ದರೆ ಅದನ್ನು ಮರುಪಾವತಿ ಮಾಡುವಿರಿ. ಅಲ್ಲದೆ ಜನವರಿ 17ಕ್ಕೆ ನಿಮಗೆ ಸಾಡೇಸಾತಿಯಿಂದ ಬಿಡುಗಡೆಯಾಗಿದ್ದೀರಿ. ಹಾಗಾಗಿ ಸಾಡೇಸಾತಿ ಸಮಯದಲ್ಲಿ ಅನುಭವಿಸಿದ ಕಷ್ಟಗಳು, ನೋವುಗಳು ಎಲ್ಲವೂ ದೂರಾಗಲಿದೆ. ಈ ವರ್ಷ ಹಣ ಉಳಿತಾಯ ಮಾಡಲು ಸಾಧ್ಯವಾಗುವುದು.
ವೃತ್ತಿ ಜೀವನ
ಈ ವರ್ಷ ವೃತ್ತಿ ಜೀವನದಲ್ಲಿ ತುಂಬಾನೇ ಪ್ರಗತಿ ಕಾಣುವಿರಿ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಒಳ್ಳೆಯ ಉದ್ಯೋಗ ಅವಕಾಶಗಳು ದೊರೆಯಲಿದೆ. ಈ ವರ್ಷ ನಿಮಗೆ ಬಡ್ತಿ ಸಿಗಲಿದೆ. ನಿಮ್ಮ ಸ್ಥಾನಮಾನ, ಜವಾಬ್ದಾರಿ ಎಲ್ಲವೂ ಹೆಚ್ಚಾಗಲಿದೆ. ಈ ವರ್ಷ ಕರ್ಚು ಕಮ್ಮಿಯಿರಲಿದೆ.
ಆರೋಗ್ಯ ಹಾಗೂ ಕುಟುಂಬ ಜೀವನ
ಪಂಚಮ ಸ್ಥಾನದಲ್ಲಿ ಗುರು ಇರುವುದರಿಂದ ನಿಮಗೆ ಒಳ್ಳೆಯದಾಗಲಿದೆ. ಆಸ್ತಿಗೆ ಸಂಬಂಧಿಸಿದ ಸಮಸ್ಯೆಯಿದ್ದರೆ ಅದು ಬಗೆಹರಿಯಲಿದೆ. ಶನಿ ಸಾಡೇಸಾತಿ ಇರುವಾಗ ಕುಟುಂಬದಲ್ಲಿ ಉಂಟಾದ ಸಮಸ್ಯೆಗಳಿಂದ ಹೊರಬರುವಿರಿ. ಈ ವರ್ಷ ಗುರುದೆಸೆ ಇರುವುದರಿಂದ ನಿಮಗೆ ತುಂಬಾನೇ ಒಳ್ಳೆಯದಾಗಲಿದೆ. ವಿದ್ಯಾರ್ಥಿಗಳಿಗೆ ಈ ಸಮಯ ಅನುಕೂಲರವಾಗಿದೆ. ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಅಥವಾ ಸಂಶೋಧನೆ ಮಾಡಲು ಬಯಸಿದರೆ ಈ ಅವಧಿಯಲ್ಲಿ ನಿಮ್ಮ ಕನಸು ನನಸಾಗಲಿದೆ.
ಕುಟುಂಬದಲ್ಲಿ ಸಂತೋಷ, ನೆಮ್ಮದಿ ಇರಲಿದೆ. ಒಟ್ಟಿನಲ್ಲಿ ಈ ವರ್ಷ ಯುಗಾದಿ ನಿಮಗೆ ಬೆಲ್ಲದ ಸಿಹಿಯನ್ನೇ ಹೆಚ್ಚಾಗಿ ನೀಡಿರುವುದರಿಂದ ಈ ವರ್ಷ ಖುಷಿಯಾಗಿರುವಿರಿ.
ಪರಿಹಾರ:
ನವೆಂಬರ್‌ವರೆಗೆ ದೇವಾಲಯಕ್ಕೆ ಉದ್ದಿನ ಬೇಳೆ ದಾನ ಮಾಡುವುದು ಒಳ್ಳೆಯದು.



Click it and Unblock the Notifications

