Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಯುಗಾದಿ 2023: ಯುಗಾದಿಯಂದು ಯಾವ ದೇವರನ್ನು ಪೂಜಿಸುತ್ತಾರೆ?
ಹಿಂದೂಗಳಿಗೆ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಶುರುವಾಗುವುದು ಯುಗಾದಿಯಿಂದ. ಈ ವರ್ಷ ಮಾರ್ಚ್ 22ಕ್ಕೆ ಶುಭಕೃತ್ ಸಂವತ್ಸರ ಮುಗಿದು ಶೋಭಾಕೃತ ಸಂವತ್ಸರ ಪ್ರಾರಂಭವಾಗಲಿದೆ.

ಯುಗಾದಿ ಹಬ್ಬವೆಂದರೆ ನಮ್ಮೆಲ್ಲರಿಗೂ ಸಂಭ್ರಮದ ಆಚರಣೆ. ಈ ದಿನ ದೇವರಿಗೆ ಪೂಜಿಸಿ, ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ಬೇವು-ಬೆಲ್ಲ ಸವಿಯುತ್ತೇವೆ. ಹೊಸ ವರ್ಷದಲ್ಲಿ ಬರುವ ಖುಷಿ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ಉದ್ದೇಶದಿಂದ ಬೇವು ಬೆಲ್ಲವನ್ನು ಸವಿಯುತ್ತೇವೆ.
ಯುಗಾದಿ ಹಬ್ಬದ ದಿನ ಯಾವ ದೇವರನ್ನು ಪೂಜಿಸುತ್ತಾರೆ ಎಂಬುವುದು ಬಹುತೇಕರು ಕೇಳುವ ಪ್ರಶ್ನೆಯಾಗಿದೆ. ಯುಗಾದಿಯಂದು ಯಾವ ದೇವರನ್ನು ಪೂಜಿಸಲಾಗುವುದು ಎಂದು ನೋಡೋಣ ಬನ್ನಿ:
ಯುಗಾದಿಯಂದು ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು
ಬ್ರಹ್ಮ ಚೈತ್ರಮಾನ ಯುಗಾದಿಯಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬ ಪೌರಾಣಿಕ ನಂಬಿಕೆಯಿದೆ. ಯುಗಾದಿ ಎಂಬುವುದು ಹೊಸತನದ ಸಂಕೇತ, ಸೂಚನೆಯಾಗಿದೆ. ನೀವು ಯುಗಾದಿ ಸಮಯದಲ್ಲಿ ಪ್ರಕೃತ್ತಿಯಲ್ಲೂ ಹೊಸತನ ಕಾಣುವಿರಿ. ಒಣಲೆಗಳು ಉದುರಿ ಚಿಗುರೆಲೆಗಳು ಮೂಡಿರುತ್ತವೆ, ಪ್ರಕೃತಿ ತುಂಬಾನೇ ಸುಂದರವಾಗಿ ಕಾಣುತ್ತಿರುತ್ತದೆ. ಚಿಗುರು ಬಂದ ಮಾವಿನ ಮರದಲ್ಲಿ ಕುಳಿತು ಕೋಗಿಲೇ ಕುಹೂ ಕುಹೂ ಎಂದು ಹಾಡುತ್ತಿರುತ್ತದೆ. ಇವೆಲ್ಲಾ ನಾವು ಪ್ರಕೃತಿಯಲ್ಲಿ ಕಾಣುವ ವಿಶೇಷವಾಗಿದೆ. ಆ ಬ್ರಹ್ಮ ಇಂಥ ಸುಂದರ ಪ್ರಪಂಚವನ್ನು ಯುಗಾದಿಯಂದು ಸೃಷ್ಟಿಸಿದ ಎಂದು ಹೇಳಲಾಗುವುದು. ಆದ್ದರಿಂದ ಆ ದಿನ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು.
ಕುಲ ದೇವರನ್ನು ಪೂಜಿಸಲಾಗುವುದು
ಪ್ರತಿಯೊಬ್ಬರಿಗೂ ಅವರದ್ದೇ ಆದ ಕುಲದೇವರು ಇರುತ್ತಾರೆ. ಇಡೀ ಕುಡುಂಬ ತಮ್ಮ ಕುಟುಂಬದ ಏಳಿಗೆಗೆ, ಒಳಿತಿಗೆ ಆ ಕುಲದೈವರೇ ಕಾರಣ ಎಂದು ನಂಬಿರುತ್ತದೆ. ಈ ದಿನ ಮನೆಮಂದಿಯೆಲ್ಲಾ ಮೂಲ ಮನೆಯಲ್ಲಿ ಸೇರಿ ಕುಲದೇವರಿಗೆ ಪೂಜೆಯನ್ನು ಮಾಡಿ ನಮ್ಮೆಲ್ಲರನ್ನು ಹರಿಸಿ ಚೆನ್ನಾಗಿಡು ದೇವರೇ ಎಂದು ಬೇಡಿಕೊಳ್ಳಲಾಗುವುದು.
ಈ ದಿನ ಗಣಪತಿ, ಶಿವ-ಪಾರ್ವತಿ, ವಿಷ್ಣು-ಲಕ್ಷ್ಮಿಗೆ ವಿಶೇಷ ಪೂಜೆ ಮಾಡಲಾಗುವುದು
ಯಾವುದೇ ಪೂಜೆಯಿರಲಿ ಮೊದಲು ಶ್ರೀ ಗಣೇಶನನ್ನು ಆರಾಧಿಸುವ ಮೂಲಕವೇ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಮೊದಲು ಗಣೇಶನಿಗೆ ತೆಂಗಿನಕಾಯಿ ಒಡೆದು ನಂತರ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ಈ ದಿನ ಶಿವನ ದೇವಾಲಯ, ಶ್ರೀ ವಿಷ್ಣು ದೇವಾಲಯ, ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.
ಯುಗಾದಿಯನ್ನು ಹೇಗೆ ಆಚರಿಸಲಾಗುವುದು?
ಯುಗಾದಿ ಆಚರಣೆಯಲ್ಲಿ ಬೇವು ಬೆಲ್ಲ ಇರಲೇಬೇಕು. ಈ ನಂತರ ಯುಗಾದಿ ಪಚಡಿ ಕೂಡ ತಯಾರಿಸಲಾಗುವುದು.
ಬೆಳಗ್ಗೆ ಎದ್ದು ಸ್ನಾನ ಮಾಡಿ ಮನೆ ಮುಂದೆ ರಂಗೋಲಿ ಬಿಡಿಸಿ. ದೇವರಿಗೆ ಪೂಜೆ ಸಲ್ಲಿಸಿ ಬೇವು ಬೆಲ್ಲ ತಿಂದು ನಂತರ ಹಬ್ಬದ ಅಡುಗೆಗಳನ್ನು ಹಬ್ಬವನ್ನು ಸಂಭ್ರಮಿಸಲಾಗುವುದು.



Click it and Unblock the Notifications
