Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ವಿಮಾನ ಹಾರಾಡುವಾಗಲೇ ನಿದ್ರೆಗೆ ಜಾರಿದ ಇಬ್ಬರು ಪೈಲಟ್‌ಗಳು..! ಆಮೇಲೆ ಆಗಿದ್ದೇನು..?
ವಿಮಾನ ಹಾರಾಟ ನಡೆಸುವಾಗ ಇಬ್ಬರು ಪೈಲಟ್‌ಗಳನ್ನು ಯಾರು ಸಹ ಮಾತನಾಡಿಸಲು ಆಗುವುದಿಲ್ಲ. ಅವರ ಕ್ಯಾಬಿನ್ ಬಂದ್ ಮಾಡಲಾಗಿರುತ್ತದೆ. ಜೊತೆಗೆ ಅವರ ಕ್ಯಾಬಿನ್ ಬಾಗಿಲು ತೆಗೆಯಲು ಯತ್ನಿಸಿದರು ಸಹ ಅವರ ವಿರುದ್ಧ ಕಾನೂನು ಕ್ರಮ ಖಚಿತ. ಏಕೆಂದರೆ ವಿಮಾನ ಹಾರಾಟ ನಡೆಸುವಾಗ ಪೈಲಟ್‌ಗಳು ಕೇವಲ ಹಾರಾಟದ ಕಡೆ ಮಾತ್ರ ಗಮನ ಹರಿಸಬೇಕಿರುತ್ತದೆ.
ಆದರೆ ಈ ವಿಮಾನದ ಇಬ್ಬರೂ ಪೈಲಟ್‌ಗಳು ವಿಮಾನ ಹಾರಾಟ ನಡೆಸುವಾಗಲೇ ನಿದ್ರೆಗೆ ಜಾರಿದ ಘಟನೆ ನಡೆದಿದೆ. ಹೌದು ನಿಮಗೆ ಅಚ್ಚರಿಯಾದ್ರು ಇದು ಅತ್ಯ. ಇಬ್ಬರು ವಿಮಾನ ಹಾರಾಡುವಾಗ ನಿದ್ರೆಗೆ ಜಾರಿದ್ದರು, ಹಾಗಾದರೆ ಆತ ನಿದ್ರೆ ಮಾಡಿದ ನಂತರ ಏನಾಯಿತು. ವಿಮಾನ ಸುರಕ್ಷಿತವಾಗಿ ಲ್ಯಾಂಡ್ ಆಗಿತ್ತಾ? ಎಂಬ ಕುರಿತು ಇಲ್ಲಿದೆ ಮಾಹಿತಿ.

ಇಂಡೋನೇಷ್ಯಾದಲ್ಲಿ ವಿಮಾನದ ಇಬ್ಬರು ಪೈಲಟ್‌ಗಳು 28 ನಿಮಿಷಗಳ ಕಾಲ ನಿದ್ರೆ ಮಾಡಿದ್ದ ಕಾರಣ ವಿಮಾನ ತನ್ನ ದಾರಿ ತಪ್ಪಿತ್ತು ಎಂದು ವರದಿಯಾಗಿದೆ. ಜನವರಿ 25 ರಂದು ನಡೆದ ಘಟನೆಯ ಬಗ್ಗೆ ಇಂಡೋನೇಷ್ಯಾ ಸಾರಿಗೆ ಸಚಿವಾಲಯ ತನಿಖೆಯನ್ನು ಆರಂಭಿಸಿದೆ.
ಸರ್ಕಾರಿ ಏಜೆನ್ಸಿಯಾದ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಸಮಿತಿ (KNKT) ಪ್ರಾಥಮಿಕ ವರದಿಯ ಪ್ರಕಾರ, ಆಗ್ನೇಯ ಸುಲವೇಸಿ ಪ್ರಾಂತ್ಯದ ಕೆಂಡಾರಿಯಿಂದ ಇಂಡೋನೇಷ್ಯಾದ ರಾಜಧಾನಿ ಜಕಾರ್ತಕ್ಕೆ ಹಾರಾಟ ನಡೆಸುತ್ತಿದ್ದ ಸಮಯದಲ್ಲಿ ಬಾಟಿಕ್ ಏರ್ BTK6723 ನ ಪೈಲಟ್ ಮತ್ತು ಸಹ-ಪೈಲಟ್ ಇಬ್ಬರೂ ನಿದ್ರೆಗೆ ಜಾರಿದರು. ವಿಮಾನದಲ್ಲಿದ್ದ 153 ಪ್ರಯಾಣಿಕರು ಮತ್ತು ನಾಲ್ವರು ಸಿಬ್ಬಂದಿ ಸುರಕ್ಷಿತರಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಿದೆ.
ಕೆಎನ್‌ಕೆಟಿ ವರದಿಯ ಪ್ರಕಾರ, ವಿಮಾನವು ಜಕಾರ್ತಾದಿಂದ ಕೆಂಡೇರಿಗೆ ಹೋಗಿ ನಂತರ ಹಿಂತಿರುಗಲು ನಿರ್ಧರಿಸಲಾಗಿತ್ತು. ವಿಮಾನವು 36,000 ಅಡಿ ಎತ್ತರದಲ್ಲಿ ಹಾರಾಟ ನಡೆಸುತ್ತಿದ್ದಾಗ ಪೈಲಟ್ ಸಹ-ಪೈಲಟ್‌ಗೆ ವಿಶ್ರಾಂತಿ ಪಡೆಯುವುದಾಗಿ ಹೇಳಿದ್ದ. ಮತ್ತು ಆತ ಕಾಕ್‌ಪಿಟ್‌ನಲ್ಲಿ "ಸುಮಾರು 30 ನಿಮಿಷಗಳ ಕಾಲ" ಮಲಗಿದ್ದ. ಇದಾದ ಕೆಲವೇ ನಿಮಿಷದಲ್ಲಿ ಮುಖ್ಯ ಪೈಲಟ್ ಸಹ ನಿದ್ರೆಗೆ ಜಾರಿದ್ದಾನೆ. ಸುಮಾರು 28 ನಿಮಿಷಗಳ ಕಾಲ ವಿಮಾನ ಹಾಗೆಯೇ ಹಾರಾಟ ನಡೆಸಿದೆ.
ಇಬ್ಬರು ಪೈಲಟ್‌ಗಳು ನಿದ್ರೆಗೆ ಜಾರಿಗೆ ಕೆಲವು ನಿಮಿಷದ ಬಳಿಕ ಜಕಾರ್ತಾ ಪ್ರದೇಶದ ನಿಯಂತ್ರಣ ಕೇಂದ್ರವು (ACC) BTK6723 ಪೈಲಟ್‌ಗಳನ್ನು ಸಂಪರ್ಕಿಸಲು ಪ್ರಯತ್ನಿಸಿದೆ, ಆದರೆ ಅವರಿಂದ ಯಾವುದೇ ಉತ್ತರ ಬರಲಿಲ್ಲ. ಜಕಾರ್ತಾ ಎಸಿಸಿಯು ಇತರ ಪೈಲಟ್‌ಗಳನ್ನು ಬಾಟಿಕ್ ಏರ್ ಪೈಲಟ್‌ಗಳ ಸಂಪರ್ಕಿಸುವಂತೆ ವಿನಂತಿ ಮಾಡಿತ್ತು, ಆದರೆ ಪ್ರಯೋಜನವಾಗಲಿಲ್ಲ.
ಸುಮಾರು 28 ನಿಮಿಷಗಳ ನಂತರ, ಪೈಲಟ್‌ಗೆ ಎಚ್ಚರವಾಯಿತು ಮತ್ತು ಈ ವೇಳೆ ವಿಮಾನ ತನ್ನ ಮಾರ್ಗ ಬದಲಿಸಿ ಬೇರೆ ಮಾರ್ಗದಲ್ಲಿ ಹಾರಾಟ ನಡೆಸುತ್ತಿತ್ತು. ತಕ್ಷಣ ಸಹ ಪೈಲಟ್ ಅನ್ನು ಎಚ್ಚರಗೊಳಿಸಿ ರೇಡಿಯೋ ಸಂಹವನ ಆರಂಭಿಸಲಾಯಿತು. ಬರೋಬ್ಬರಿ ಎರಡೂವರೆ ಗಂಟೆಯ ಬಳಿಕ ಜಕಾರ್ತದಲ್ಲಿ ವಿಮಾನ ಸುರಕ್ಷಿತವಾಗಿ ಬಂದಿಳಿಯಿತು.
KNKT ವರದಿಯು ಪೈಲಟ್‌ಗಳ ಹೆಸರನ್ನು ಬಹಿರಂಗಪಡಿಸಲಿಲ್ಲ, ಆದರೆ ಪೈಲಟ್ ಅನ್ನು 32 ವರ್ಷ ವಯಸ್ಸಿನವರು ಮತ್ತು ಸಹ-ಪೈಲಟ್ 28 ವರ್ಷ ವಯಸ್ಸಿನವರು ಎಂದು ತಿಳಿಸಿದೆ. ಇಬ್ಬರಿಗೂ ನಿರಂತರ ಕರ್ತವ್ಯ ವಹಿಸಿದ್ದ ಕಾರಣ ಸರಿಯಾದ ವಿಶ್ರಾಂತಿ ಸಿಗದೆ ಅವರು ನಿದ್ರೆಗೆ ಜಾರಿದ್ದಾರೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ.
ಇಂಡೋನೇಷ್ಯಾ ಸಾರಿಗೆ ಸಚಿವಾಲಯವು ಘಟನೆಯ ಬಗ್ಗೆ ತನಿಖೆ ನಡೆಸಲಿದೆ, ಜೊತೆಗೆ ಘಟನೆಗೆ ಸಂಬಂಧಿಸಿದಂತೆ ತನಿಖೆ ಮುಕ್ತಾಯಗೊಳ್ಳುವವರೆಗೂ ಇಬ್ಬರು ಪೈಲಟ್‌ಗಳನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ತಿಳಿದುಬಂದಿದೆ.



Click it and Unblock the Notifications
