Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಗೆ ಬರುತ್ತೆ ತ್ರಿವೇಣಿ ಸಂಗಮದ ನೀರು..! ಕೇವಲ ₹69ಕ್ಕೆ ಪುಣ್ಯ ಪಡೆಯಬಹದು!!
ವಿಶ್ವದಲ್ಲೇ ಅತೀ ದೊಡ್ಡ ಧಾರ್ಮಿಕ ಸಮ್ಮೇಳನ ಎನಿಸಿಕೊಂಡಿರುವ ಪ್ರಯಾಗ್‌ರಾಜ್‌ನ ಮಹಾ ಕುಂಭಮೇಳವು ಈಗ ಎಲ್ಲರ ಗಮನ ಸೆಳೆಯುತ್ತಿರುವ ವಿಚಾರವಾಗಿದೆ. ಅದರಲ್ಲೂ ಎಲ್ಲರಿಗೂ ಪ್ರಯಾಗ್‌ರಾಜ್‌ಗೆ ತೆರಳಿ ತ್ರಿವೇಣಿ ಸಂಗಮನದಲ್ಲಿ ಪವಿತ್ರ ಸ್ನಾನ ಮಾಡಬೇಕು ಎಂಬ ಬಯಕೆ, ಆಸೆ ಇದ್ದೇ ಇರುತ್ತೆ. ಆದ್ರೆ ಎಲ್ಲರಿಗೂ ಇದು ಸಾಧ್ಯವಾಗೋದಿಲ್ಲ. ಗಂಗಾ ಸ್ನಾನ ಮಾಡಲೆಂದು ವಿಶ್ವದ ಮೂಲೆ ಮೂಲೆಯಿಂದಲೂ ಜನರು ಆಗಮಿಸುತ್ತಾರೆ. ಆದ್ರೆ ಕೆಲವರಿಗೆ ಅಲ್ಲಿಗೆ ತೆರಳಲು ಕಷ್ಟವಾಗುತ್ತೆ.
ಇನ್ನು ತ್ರಿವೇಣಿ ಸಂಗಮದಲ್ಲಿ ಸಿಗುವ ನೀರನ್ನು ಪವಿತ್ರ ಎಂದು ನಂಬಲಾಗಿದೆ. ಹೀಗಾಗಿ ಪ್ರಯಾಗ್‌ರಾಜ್‌ನ ಈ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಿ ಅಲ್ಲಿನ ಗಂಗಾಜಲವನ್ನು ಮನೆಗೆ ತರುತ್ತಾರೆ. ಆದ್ರೆ ಎಲ್ಲರೂ ಈ ಸ್ಥಳ ತಲುಪಲು ಆಗೋದಿಲ್ಲ. ಹೀಗಾಗಿ ನೀವೀಗ ಆನ್‌ಲೈನ್‌ನಲ್ಲೇ ತ್ರಿವೇಣಿ ಸಂಗಮದ ನೀರು ಮನೆ ತರಿಸಬಹುದು.

ಈಗ ಎಲ್ಲವೂ ಆನ್‌ಲೈನ್‌ನಲ್ಲೇ ನೀವು ಖರೀದಿಸಬಹುದು. ಈ ಸಾಲಿಗೀಗ ಗಂಗಾಜಲ ಕೂಡ ಸೇರಿದೆ. ಅದರಲ್ಲೂ ತ್ರಿವೇಣಿ ಸಂಗಮದ ನೀರು ಕೂಡ ನೀವೀಗ ತರಿಸಬಹುದು. ಈ ಹಿಂದೆ ಭಾರತೀಯ ಅಂಚೆ ಮೂಲಕವೂ ಮನೆಗೆ ಗಂಗಾಜಲವನ್ನು ತರಿಸಬಹುದಿತ್ತು. ಆದ್ರೆ ಈಗ ಮಹಾಕುಂಭ ಮೇಳದ ಸಮಯದಲ್ಲಿ ತ್ರಿವೇಣಿ ಸಂಗಮದ ನೀರನ್ನೇ ತರಿಸಬಹುದು.
ಆನ್‌ಲೈನ್ ಗ್ಲೋಸರಿ ಡೆಲಿವರಿ ಆಪ್ ಆಗಿರುವ ಬ್ಲಿಂಕ್‌ಇಟ್ ಈ ರೀತಿ ಸೇವೆ ಆರಂಭಿಸಿದೆ. ಕೇವಲ 69 ರೂಪಾಯಿಗೆ 10 ನಿಮಿಷದಲ್ಲಿ ಮನೆಗೆ ನೀವು ತ್ರಿವೇಣಿ ಸಂಗಮದ ಪವಿತ್ರ ನೀರು ತರಿಸಬಹುದು. ಇದು 100 ಮಿ.ಲೀ ಬಾಟಲಿಯಲ್ಲಿ ಮನೆ ತಲುಪಲಿದೆ. ಅದರಲ್ಲಿ ಎಂಆರ್‌ಪಿ ದರವಾಗಿ 99 ರೂಪಾಯಿ ಇದ್ದು, ರಿಯಾಯಿತಿಯಲ್ಲಿ 69ರೂಪಾಯಿಗೆ ಸಿಗುತ್ತಿದೆ. ಸಾಮಾನ್ಯ ನೀರಿನ ಬಾಟಲಿಗೆ ಹೋಲಿಸಿದರೆ ಈ ದರ ಬರೋಬ್ಬರಿ 4,850 ರದಷ್ಟು ಹೆಚ್ಚಾಗಿದೆ.
ಗಂಗಾ, ಯಮುನಾ ಮತ್ತು ಸರಸ್ವತಿಯ ಪವಿತ್ರ ಸಂಗಮದಿಂದ ಈ ನೀರನ್ನು ತರಿಸಲಾಗಿದೆ. ಇದನ್ನು ಸರ್ವ್ ಧರ್ಮ್ ಎಂಬ ಸಂಸ್ಥೆಯ ಮೂಲಕ ವಿತರಿಸಲಾಗುತ್ತಿದೆ. ಧರ್ಮಕ್ಕೆ ಸಂಬಂಧಿಸಿದ ವಸ್ತುಗಳನ್ನು ವಾಣಿಜ್ಯೀಕರಿಸಲಾಗಿದೆ ಎಂಬ ಮಾತುಗಳು ಕೂಡ ಕೇಳಿಬಂದಿದೆ. ಇತ್ತಿಚಿಗೆ ವಾಣಿಜ್ಯ ಕಾರಣಕ್ಕಾಗಿ ಧಾರ್ಮಿಕ ವಸ್ತುಗಳ ಬಳಸುತ್ತಿರುವುದು ಬಹಳದಷ್ಟು ಚರ್ಚೆಗೆ ಕಾರಣವಾಗಲಿದೆ.
ಸದ್ಯ ಈ ತ್ರಿವೇಣಿ ಸಂಗಮದ ನೀರನ್ನು ವಾಣಿಜ್ಯೀಕರಣ ಮಾಡಲಾಗಿದೆ. ವ್ಯಾಪಾರದ ಉದ್ದೇಶದಿಂದ ಈ ರೀತಿ ಧಾರ್ಮಿಕ ವಸ್ತುಗಳ ಬಳಸುತ್ತಿರುವುದಕ್ಕೆ ವಿರೋಧವೂ ಇದೆ. ಹೀಗಾಗಿ ತ್ರಿವೇಣಿ ಸಂಗಮದ ನೀರನ್ನು ಬಳಸುತ್ತಿರುವ ಉದ್ದೇಶ ಉತ್ತಮವಾಗಿದ್ದರು. ಅದರಿಂದ ಲಾಭ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿದೆ.
ಕೇವಲ 1 ಲಕ್ಷ ಬಾಟಲಿಗಳು ಮಾರಾಟವಾದರೆ ಸುಮಾರು 1 ಕೋಟಿ ರೂಪಾಯಿಗಳ ಆದಾಯದ ಅಂದಾಜು ಸಂಭಾವ್ಯತೆಯೊಂದಿಗೆ, ಇದು ನಂಬಿಕೆ ಆಧಾರಿತ ವಾಣಿಜ್ಯದ ಲಾಭದಾಯಕ ಸ್ವರೂಪವನ್ನು ಎತ್ತಿ ತೋರಿಸುತ್ತದೆ. ಸದ್ಯ ಈ ತ್ರಿವೇಣಿ ಸಂಗಮದ ನೀರು ಆನ್‌ಲೈನ್‌ನಲ್ಲಿ ಸಿಗುತ್ತಿರುವುದಕ್ಕೆ ಪರವಾದ ಚರ್ಚೆಗಳು ಕೂಡ ಇದೆ.
ಇದೇ ಪ್ರಕಾರವಾಗಿ ಡಿಜಿಟಲ್ ತ್ರಿವೇಣಿ ಸ್ನಾನದ ಐಡಿಯಾ ಕೂಡ ವೈರಲ್ ಆಗಿದೆ. ಒಬ್ಬ ವಾಟ್ಸಾಪ್‌ನಲ್ಲಿ ನಿಮ್ಮ ಫೋಟೋ ಹಾಗೂ ಹಣ ಪಡೆದು ಅದನ್ನು ತ್ರಿವೇಣಿ ಸಂಗಮದಲ್ಲಿ ಮುಳುಗಿಸಿ ಡಿಜಿಟಲ್ ಸ್ನಾನ ಮಾಡಿಸುತ್ತಿರುವ ಐಡಿಯಾ ಕೂಡ ವೈರಲ್ ಆಗಿದೆ.



Click it and Unblock the Notifications
