Latest Updates
-
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ -
ಈ 3 ರಾಶಿಗಳಿಗೆ ಜೀವನದಲ್ಲಿ ಏರಿಳಿತಗಳು! ಹಳೆಯ ನೆನಪುಗಳು ಕಾಡುತ್ತೆ -
March 09 Horoscope: ಶುಭ ಕಾರ್ಯದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚು! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ!
ಮೈಸೂರು ರಾಜಮನೆತನಕ್ಕೆ ಹೊಸ ಕುಡಿಯ ಆಗಮನ: ಆದರೆ ಯದುವೀರ್ ಅವರಿಗೆ ತಟ್ಟಲ್ಲ ಸೂತಕ, ಏಕೆ?
ಮೈಸೂರು ದಸರಾದ ಸಂಭ್ರಮ ಹೆಚ್ಚಿದೆ, ಮೂಸೂರಿನ ರಾಜಮನೆತನಕ್ಕೆ ಹೊಸ ಸದಸ್ಯನ ಆಗಮನವಾಗಿದೆ. ಆಯುಧ ಪೂಜೆಯಂದೇ ರಾಜಕುಮರನ ಆಗಮನವಾಗಿದ್ದು ಸಂಭ್ರಮ ಜೊತೆಗೆ ಸೂತಕವೂ ಆಗಿದೆ. ಸೂತಕದ ಕಾರಣದಿಂದಾಗಿ ಅರಮನೆಯ ಪೂಜಾ ವಿಧಿಗಳು ಯಾವ ರೀತಿ ನಡೆಯಲಿದೆ ಎಂಬ ಪ್ರಶ್ನೆ ಮೂಡಿದ್ದ ಇದರ ಕುರಿತಂತೆ ಅರಮನೆಯ ಪುರೋಹಿತರ ಜೊತೆ ಚರ್ಚಿಸಲಾಗುತ್ತಿದೆ.
ಯುವ ರಾಜಕುಮಾರನಿಗೆ ತಮ್ಮ ಬಂದಿದ್ದಾನೆ
ಯದುವೀರ್ ಹಾಗೂ ರಿಷಿಕಾ ದಂಪತಿಯ ಮೊದಲ ಮಗ ಆದ್ಯ ವೀರ್ ನರಸಿಂಹರಾಜ ಒಡೆಯರ್, ಈಗ ಎರಡನೇ ಮಗು ಕೂಡ ಗಂಡಾಗಿದ್ದು ಯುವ ರಾಜಕುಮಾರನ ಆಗಮನದಿಂದಾಗಿ ರಾಜಮನೆತನದ ಕುಟುಂಬದ ಖುಷಿ ಹೆಚ್ಚಾಗಿದೆ. ರಿಷಿಕಾರವರು ತುಂಬು ಗರ್ಭಿಣಿಯಾಗಿದ್ದ ಕಾರಣ ದಸರಾ ಕಾರ್ಯದಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ದಸರಾ ವಿಶೇಷ ಸಂದರ್ಭದಲ್ಲಿ ಮಗುವಿನ ಜನನ ಕೂಡ ಆಗಿದೆ.

ದಸರಾ ಸಂಬಂಧಿಸಿದ ಪೂಜಾ ಕಾರ್ಯಗಳು ನಡೆಯುತ್ತಿವೆ
ದುರ್ಗಾಷ್ಟಮಿ, ನವರಾತ್ರಿಗೆ ಸಂಂಧಿಸಿದಂತೆ ವಿಶೇಷ ಪೂಜೆಗಳು ನಡೆಯುತ್ತಿವೆ, ಅಕ್ಟೋಬರ್ 11ರಂದು ಬೆಳಗ್ಗೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿ ಹೋಮ ಮಾಡಲಾಯ್ತು, ಇದಾದ ಬಳಿಕ ಆನೆ, ಕುದುರೆ, ಹಸುವನ್ನು ಆನೆಆಗಿಲಿಗೆ ಕರೆತರಲಾಯ್ತು. ಆಯಧ ಪೂಜೆಗೆ ಆಯುಧಗಳನ್ನು ಕೂಡ ಕೊಂಡೊಯ್ಯಲಾಗಿದೆ.
ಸಂಜೆ ಖಾಸಗಿ ದರ್ಬಾರ್ ನಡೆಸುಲಿರುವ ಯದುವೀರ್ ಒಡೆಯರ್
ಇಂದು ಸಂಜೆ ಮಹರಾಜರ ಖಾಸಗಿ ದರ್ಬಾರು ನಡೆಸಲಿದ್ದಾರೆ. ನಿಯಮ ಪ್ರಕಾರ ಇದು ಮುಗಿಯುವವರೆಗೂ ಅವರು ಅರಮನೆಯಿಂದ ಹೊರಬರುವಂತಿಲ್ಲ, ಹೀಗಾಗಿ ಯದುವೀರ್ ಇನ್ನೂ ಯುವ ರಾಜಕುಮಾರನ ಭೇಟಿಯಾಗಿಲ್ಲ ಎಂದು ಅರಮನೆಯ ಮೂಲಗಳು ಹೇಳಿವೆ.
ಸೂತಕ ಸಮಯದಲ್ಲಿ ಪೂಜಾ ಕಾರ್ಯಗಳು ನಡೆಯಲಿದೆಯೇ?
ಯಾರಾದರು ತೀರಿ ಹೋದರೆ ಅಥವಾ ಮಗು ಜನಿಸಿದಾಗ ಸೂತಕ ಎಂದು ಆಚರಿಸುವ ಪದ್ಧತಿ ಹಿಂದೂ ಧರ್ಮದಲ್ಲಿದೆ, ಇದು ತಲತಲಾಂತರಗಳಿಂದ ಆಚರಿಸಿಕೊಂಡು ಬಂದಿರುವಂಥ ಪದ್ಧತಿಯಾಗಿದೆ.
ರಾಜನಿಗೆ ಸೂತಕ ತಟ್ಟಲ್ಲ ಎಂದು ಹೇಳಲಾಗುವುದು
ಪರಾಶರ ಸ್ಮೃತಿಯಲ್ಲಿ ರಾಜನಿಗೆ ಸೂತಕ ತಟ್ಟಲ್ಲ ಎಂದು ಹೇಳಲಾಗಿದೆ, ಅಲ್ಲದೆ ಪೂಜಾ ಕಾರ್ಯಕ್ಕೆ ಆಯ್ಕೆ ಮಾಡಲಾದ ರಾಜಪುರೋಹಿತನ ಮೇಲೂ ಸೂತಕ ಮಾನ್ಯವಾಗುವುದಿಲ್ಲ, ರಾಜರು, ರಾಜ ಪುರೋಹಿತರು ತಮ್ಮ ಕರ್ಮಗಳನ್ನು ಬಿಡುವಂತಿಲ್ಲ. ಇವುಗಳು ಪೂಜಾ ಕಾರ್ಯ ಪ್ರಾರಂಭಿಸಿದರೆ ಅದು ಯಾವುದೇ ಕಾರಣಕ್ಕೆ ನಿಲ್ಲುವಂತಿಲ್ಲ ಎಂದು ಹೇಳಲಾಗುವುದು.
ಇನ್ನು ಮದುವೆ, ಉಪನಯನದಂಥ ಸಂದರ್ಭದಲ್ಲಿ ನಾಂದಿಶಾಸ್ತ್ರ ಮಾಡಿದ ಮೇಲೆ ಸೂತಕ ತಟ್ಟಲ್ಲ
ವಿವಾಹ, ಉಪನಯನ ಮಾಡುವಾಗ ನಾಂದಿಶಾಸ್ತ್ರ ಮಾಡಲಾಗುವುದು, ಇದು ಮಾಡಿದ ಮೇಲೆ ಯಾವುದೇ ಸೂತಕ ತಟ್ಟಲ್ಲ ಎಂದು ಹೇಳಲಾಗುವುದು.
ಯದುವೀರ್ ಕಂಕಣಧಾರಣೆ ಮಾಡಿರುವುರಿಂದ ಸೂತಕ ಬಾಧಿಸಲ್ಲ
ಯದುವೀರ್ ಕಂಕಣಧಾರಣೆ ಮಾಡಿರುವುದರಿಂದ ಯಾವುದೇ ಸೂತಕ ತಟ್ಟಲ್ಲ, ಕಂಕಣ ಅವರನ್ನು ಎಲ್ಲಾ ಅಶೌಚಗಳಿಂದ ದೂರ ಇಡುತ್ತದೆ, ಇವರಿಗೆ ಯಾವುದೇ ಸೂತಕ ಬಾಧಿಸಲ್ಲ. ಅರಮನೆಯ ಪೂಜೆಗಳಿಗೆ ಯಾವುದೇ ಅಡ್ಡಿ ಆತಂಕಗಳಿರಲ್ಲ. ಮಗು ಜನನದ ಕಾರಣದಿಂದ ಅರಮನೆಯಲ್ಲಿ ಮಾಡಲಾಗುವ ಪೂಜೆಯಲ್ಲಿ ವ್ಯತ್ಯಾಸ ಆಗಲ್ಲ, ಎಲ್ಲವನ್ನು ನಿಯಮದಂತೆ ಮಹರಾಜರೇ ನೆರವೇರಲಿಸಲಿದ್ದರೆ.
ಪ್ರಮೋದಾದೇವಿ ಒಡೆಯರ್ ಹಾಗೂ ಯುವ ರಾಜಕುಮಾರಿಗೆ ಸೂತಕವಿದೆ
ತ್ರಿಷಿಕಾ ಅವರಿಗೆ ಮಗು ಜನಿಸಿರುವುದರಿಂದ ಪ್ರಮೋದಾದೇವಿ ಒಡೆಯರ್‌ಗೆ ಹಾಗೂ ಅವರ ಮೊಮ್ಮಗನಿಗೆ ಸೂತಕ ಇರಲಿದೆ, ಇವರುಗಳು ದಸರಾ ಮುಗಿದ ಬಳಿಕವಷ್ಟೇ ಅರಮನೆಗೆ ಬರಲಿದ್ದಾರೆ.



Click it and Unblock the Notifications











