Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಕೋವಿಡ್ 19 ವಿರುದ್ಧ ಹೋರಾಟ: ವೈದ್ಯಾಧಿಕಾರಿ ಫೋಟೋಗೆ ಮಿಡಿದ ಜನರ ಮನ
ಒಂದು ಫೋಟೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು ಆ ಫೋಟೋ ಕೊರೊನಾವೈರಸ್ ವಿರುದ್ಧ ಹೋರಾಡುತ್ತಿರುವ ನರ್ಸ್, ಡಾಕ್ಟರ್‌ಗಳ ಸೇವೆಗೆ ಹಿಡಿದಿರುವ ಕೈಗನ್ನಡಿಯಾಗಿದೆ.
ಆ ಫೋಟೋ ನೋಡುತ್ತಿದ್ದರೆ ನಿಜ ಜೀವನದ ಅಂಥ ಹೀರೋಗಳ ಬಗ್ಗೆ ಹೆಮ್ಮೆಯುಂಟಾಗುವುದು, ಅವರ ಸೇವೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು ಅನಿಸದೆ ಇರಲ್ಲ.

ಮಧ್ಯ ಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮಾಡಿರುವ ಒಂದು ಫೋಟೋ ಇದೀಗ ಇಡೀ ದೇಶದ ಜನತೆಯ ಗಮನ ಸೆಳೆದಿದೆ. ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ನಿರಂತರವಾಗಿ ವೈದ್ಯರು, ನರ್ಸ್‌ಗಳು ಶ್ರಮಿಸುತ್ತಿದ್ದಾರೆ. ಮಧ್ಯ ಪ್ರದೇಶದ ಭೋಪಾಲ್ ಜಿಲ್ಲೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಸುಧೀರ್ ದೆಹರಿಯಾ ಮಾಡಿರುವ ಕಾರ್ಯ ಎಲ್ಲರ ಗಮನ ಸೆಳೆದಿದೆ.

ವೈದ್ಯನ ಕಾರ್ಯಕ್ಕೆ ಮೆಚ್ಚುಗೆ
ಮಧ್ಯಪ್ರದೇಶದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಗಲು-ಇರಳು ಎನ್ನದೆ ಕೆಲಸ ಮಾಡಿದ ಆರೋಗ್ಯ ಅಧಿಕಾರಿ 5 ದಿನಗಳ ಬಳಿಕ ಮನೆಗೆ ತೆರಳುತ್ತಾರೆ. ಆದರೆ ಅವರು ಮನೆಯೊಳಗೆ ಹೋಗುವುದಿಲ್ಲ. ಬದಲಿಗೆ ಮನೆಯ ಗೇಟಿನ ಹೊರಗಡೆ ಕೂತು ಟೀ ಕುಡಿದು, ಪತ್ನಿ-ಮಕ್ಕಳನ್ನು ನೋಡಿ ಕೆಲಸಕ್ಕೆ ಹಿಂತಿರುಗುತ್ತಾರೆ. ಇದೀಗ ಅವರು ಮಾಡಿರುವ ಕಾರ್ಯಕ್ಕೆ ಮೆಚ್ಚುಗೆ ಸಿಕ್ಕಿದೆ.

ಕೋವಿಡ್ 19 ವಿರುದ್ಧ ಹೋರಾಡುತ್ತಿರುವ ಹೀರೋಗಳು
ಏಕೆಂದರೆ ಅವರು ಆಸ್ಪತ್ರೆಯಲ್ಲಿ ಸೋಂಕಿತರ ಸೇವೆ ಮಾಡುವುದರಿಂದ ಮನೆಗೆ ಹೋಗುವುದು ಅಷ್ಟು ಸುರಕ್ಷಿತವಲ್ಲ. ಡಾ. ಸುಧೀರ್ ಸೇರಿದಂತೆ ಲಕ್ಷಾಂತರ ವೈದ್ಯಕೀಯ ಸಿಬ್ಬಂದಿ ಕೊರೊನಾ ಎಂಬ ವೈರಸ್‌ನ ವಿರುದ್ಧ ತಮ್ಮ ಪ್ರಾಣವನ್ನು ಲೆಕ್ಕಿಸದೆ ಹೋರಾಡುತ್ತಿದ್ದಾರೆ. ಅವರ ಬಗ್ಗೆ ಹೆಮ್ಮೆ ಪಡುವುದು ಮಾತ್ರವಲ್ಲ, ಅವರಿಗೆ ಸಹಾಯ ಮಾಡುವ ಕಾರ್ಯವನ್ನು ನಾವು ಮಾಡಬೇಕಾಗಿದೆ.

ನಾವೇನು ಮಾಡಬೇಕು?
ನಾವು ಅವರಿಗೆ ಸಹಾಯ ಮಾಡಲು ಬೇರೇನೂ ಮಾಡಬೇಕಾಗಿಲ್ಲ, ನಮ್ಮ ಮನೆಯೊಳಗೆ ನಾವಿದ್ದರೆ ಸಾಕು. ಆದರೆ ನಮ್ಮ ಜನರು ಅದನ್ನು ಅರ್ಥ ಮಾಡಿಕೊಳ್ಳುತ್ತನೇ ಇಲ್ಲ, ಸ್ವಲ್ಪ ಅವಕಾಶ ಸಿಕ್ಕರೂ ಗುಂಪು-ಗುಂಪಾಗಿ ಸೇರಿ ಬಿಡುತ್ತಾರೆ. ಜನರು ಗುಂಪು ಸೇರದಂತೆ, ಕ್ವಾರೆಂಟೈನ್‌ನಲ್ಲಿ ಇರುವವರು ಹೊರಗಡೆ ಓಡಾಡದಂತೆ ಮಾಡುವುದೇ ಹರಸಾಹಸವಾಗಿದೆ.

ಕೊರೊನಾವೈರಸ್ ವಿರುದ್ಧ ಹೋರಾಡೋಣ
ಇಡೀ ದೇಶ ಕೊರೊನಾವೈರಸ್ ವಿರುದ್ಧ ಸಾರಿರುವ ಸಮರದಲ್ಲಿ ಜಯ ಸಾಧಿಸಲು ನಾವೆಲ್ಲಾ ಕೈಜೋಡಿಸೋಣ, ಮನೆಯಲ್ಲಿಯೇ ಇದ್ದು, ಈ ಮಹಾಮಾರಿ ತೊಲಗಿಸೋಣ. ಆಗಾಗ ನಿಮ್ಮ ಕೈಗಳನ್ನು ತೊಳೆಯುತ್ತಾ ಇರಿ. ಕೆಮ್ಮು, ಜ್ವರ, ಉಸಿರಾಟದ ತೊಂದರೆ ಕಾಣಿಸಿದರೆ ಕೂಡಲೇ ಇತತರಿಂದ ಅಂತರ ಕಾಯ್ದುಕೊಂಡು ವೈದ್ಯರಿಗೆ ಕರೆ ಮಾಡಿ ತಿಳಿಸಿ.ಕೋವಿಡ್ 19 ಬಗ್ಗೆ ಭಯ ಬೇಡ, ಮುನ್ನೆಚ್ಚರಿಕೆಯಿಂದ ಇರಿ.



Click it and Unblock the Notifications
