Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈರಲ್ ವೀಡಿಯೋ: ಛೇ... ಈ ಕಾಡಾನೆಗೆ ಇರುವ ಬುದ್ಧಿ ಮನುಷ್ಯನಿಗೆ ಇಲ್ಲ
ಮೋದಿಯವರು ಸ್ವಚ್ಛ ಭಾರತ ಅಭಿಯಾನ ಪ್ರಾರಂಭಿಸಿ 6 ವರ್ಷಗಳಾಗಿವೆ, ಆದರೆ ಇಂದಿಗೂ ಅಲ್ಲಲ್ಲಿ ಕಸದ ರಾಶಿ ಬಿದ್ದಿರುವುದನ್ನು ನೋಡುತ್ತೇವೆ. ಅಲ್ಲದೆ ನಾವೆಲ್ಲ ಮಾತನಾಡುವಾಗ ನಮ್ಮ ದೇಶ ಸಿಂಗಾಪೂರದಂತೆ ಇರಬೇಕು ಎಂದು ಎಂದೆಲ್ಲಾ ಹೇಳುತ್ತೇವೆ, ಆದರೆ ಅದಕ್ಕೆ ಸರಕಾರ ಒಂದೇ ಪ್ರಯತ್ನಿಸಿದರೆ ಸಾಲದು ಪ್ರತಿಯೊಬ್ಬ ನಾಗರಿಕನೂ ಮನಸ್ಸು ಮಾಡಬೇಕು, ಇದೆಲ್ಲಾ ಇರಲಿ ಬಿಡಿ, ಇಲ್ಲ ನಾವು ಹೇಳ ಹೊರಟಿರುವುದು ಕಾಡಾನೆಯೊಂದು ಸ್ವಚ್ಛತೆಗೆ ಗಮನ ನೀಡಿರುವ ಕುರಿತು.

ಹೌದು ಆನೆಯೊಂದು ಮನೆಯೊಂದರ (ಹೋಂಸ್ಟೇ ಅಥವಾ ಮನೆನಾ ಅಂತ ನಿಖರತೆ ಇಲ್ಲ) ಸಮೀಪಕ್ಕೆ ಬರುತ್ತದೆ, ಅಲ್ಲಿಗೆ ಬಂದ ಆನೆ ಅಲ್ಲೊಂದು ಬುಟ್ಟಿ ನೋಡುತ್ತದೆ, ಅದರೊಳಗೆ ಮೆಲ್ಲನೆ ಸೊಂಡಿಲ ಇಳಿ ಬಿಡುತ್ತದೆ, ಆಗ ಅದಕ್ಕೆ ಅಲ್ಲಿ ಬುಟ್ಟಿ ಇಟ್ಟಿರುವ ಉದ್ದೇಶ ತಿಳಿಯುತ್ತದೆ. ಆಗ ಅದು ಅಲ್ಲಿಯೇ ಬಿದ್ದಿದ್ದ ಕಸವನ್ನು ತೆಗೆದು ಬುಟ್ಟಿಗೆ ಹಾಕುತ್ತದೆ. ಪಾಪ ಆನೆಗೆ ಕಸವನ್ನು ಬುಟ್ಟಿಗೆ ಹಾಕಬೇಕೆಂದು ಗೊತ್ತಾಯಿತು, ಆದರೆ ಅದನ್ನು ಬಿಸಾಡಿದ ಪುಣ್ಯಾತ್ಮರಿಗೆ ಗೊತ್ತಿರಲಿಲ್ಲ!
ಈ ಅದ್ಭುತ ಪರಿಸರ ಕಾಳಜಿಯ ವೀಡಿಯೋವನ್ನು ಅರಣ್ಯಾಧಿಕಾರಿಯಾಗಿರುವ ಪ್ರವೀಣ್ ಕಾಸ್ವನ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದು ವೀಡಿಯೋ ವೈರಲ್ ಆಗಿದೆ, ಆನೆಯ ಬುದ್ಧಿಗೆ ನೆಟ್ಟಿಗರು ಮೆಚ್ಚುಗೆಯನ್ನು ವ್ಯಕ್ತ ಪಡಿಸುತ್ತಿದ್ದಾರೆ.



Click it and Unblock the Notifications
