Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ರಕ್ಷಿಸಿದ ವ್ಯಕ್ತಿಗೆ ಧನ್ಯವಾದ ಹೇಳಿದ ಸ್ಲಾತ್ ಕರಡಿ ವೀಡಿಯೋ ವೈರಲ್
ಪ್ರಾಣಿಗಳಿಗೆ ಏನಾದರೂ ಸಹಾಯ ಮಾಡಿದರೆ ಅವು ಮನುಷ್ಯನಿಗಿಂತ ಹೆಚ್ಚು ನಿಯತ್ತು, ಕೃತಜ್ಞತೆ ತೋರಿಸುತ್ತವೆ ಎಂದು ಹೇಳುವುದು ಅಕ್ಷರಶಃ ನಿಜ ಎಂಬುವುದಕ್ಕೆ ಈ ವೀಡಿಯೋ ಸಾಕ್ಷಿಯಾಗಿದೆ ನೋಡಿ.

ಕರಡಿಗಳಲ್ಲಿ ಸ್ಲಾತ್ ಕರಡಿ ಎಎಂಬ ಬಗೆಯ ಕರಡಿಗಳಿವೆ. ಅವುಗಳನ್ನು ಭೂಮಿ ಮೇಲಿನ ಅತಿ ಹೆಚ್ಚಿನ ಆಲಸಿ ಪ್ರಾಣಿಯೆಂದೇ ಗುರುತಿಸಲಾಗಿದೆ. ಅದಕ್ಕೆ ಒಂದು ಎಲೆ ತಿಂದರೆ ಜೀರ್ಣವಾಗಲು 25 ದಿನಗಳು ಬೇಕಂತೆ ಅಂದ ಮೇಲೆ ಅದು ಎಷ್ಟರ ಮಟ್ಟಿಗೆ ಸೋಮಾರಿ ಪ್ರಾಣಿಯಿರಬಹುದು ಅಲ್ವಾ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಒಂದು 50 ಮೀ ಸಾಗಲು ತಾಸುಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ, ಅದಕ್ಕೆ ಇದನ್ನು ಸೋಮಾರಿ ಪ್ರಾಣಿ ಎಂದು ಕರೆಯುತ್ತಾರೆ. ಇದನ್ನು ಜೇನು ತುಪ್ಪ ಕದಿಯುವ ಕರಡಿ, ಸೋಮಾರಿ ಕರಡಿ, ಸ್ಲಾತ್ ಕರಡಿ ಎಂದೆಲ್ಲಾ ಕರೆಯುತ್ತಾರೆ.
ಈ ಕರಡಿಯ ಕುರಿತ ಒಂದು ವೀಡಿಯೋ ವೈರಲ್ ಆಗಿದೆ. ಚಿಕ್ಕ ಸೋಮಾರಿ ಕರಡಿ ಮರಿ ರಸ್ತೆ ದಾಟಲು ಕಷ್ಟ ಪಡುತ್ತಿತ್ತು. ವಾಹನಗಳು ಓಡಾಡುವ ರಸ್ತೆಯಲ್ಲಿ ಮೆಲ್ಲನೆ ಚಲಿಸುತ್ತಿದ್ದರೆ ಯಾವುದಾದರೂ ವಾಹನ ಬಂದು ಅದರ ಮೇಲೆ ಹರಿದುಕೊಂಡು ಹೋಗುವ ಅಪಾಯವಿತ್ತು. ಇದನ್ನರಿತ ವ್ಯಕ್ತಿಯೊಬ್ಬರು ತಮ್ಮ ಗಾಡಿ ನಿಲ್ಲಿಸಿ, ಅದನ್ನು ಎತ್ತಿಕೊಂಡು ಹೋಗಿ ಮರದ ಮೇಲೆ ಬಿಟ್ಟು ಬರುತ್ತಾರೆ.
ತನ್ನನ್ನು ಮರದ ಮೇಲೆ ಬಿಟ್ಟ ತಕ್ಷಣ ಕರಡಿ ತನ್ನ ಪಾಡಿಗೆ ತಾನಿರುವುದಿಲ್ಲ, ಬದಲಿಗೆ ಆ ಕರಡಿ ಆ ಮನುಷ್ಯನ ಕಡೆಗೆ ತಿರುಗಿ ಧನ್ಯವಾದ ಹೇಳಿದ ರೀತಿಯಿದೆಯೆಲ್ಲಾ ನೋಡುವಾಗ ಮನಸ್ಸು ತುಂಬಿ ಬರುತ್ತದೆ. ಇದೊಂದು ಹಳೆಯ ವೀಡಿಯೋ ಆಗಿದ್ದರೂ ಪ್ರವೀಣ್ ಕಶ್ವಾನ್ ಎಂಬ ಪೊಲೀಸ್ ಅಧಿಕಾರಿ ಈ ಸುಂದರ ವೀಡಿಯೋ ಮತ್ತೆ ಹಂಚಿಕೊಂಡಿದ್ದೇ ತಡ ವೈರಲ್ ಆಗಿದೆ.



Click it and Unblock the Notifications
