Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈರಲ್ ಆಯ್ತು ಪುಣೆ ಮನೆ ಕೆಲಸದಾಕೆಯ ವಿಸಿಟಿಂಗ್ ಕಾರ್ಡ್
ಇದೀಗ ಟ್ವಿಟರ್‌ನಲ್ಲಿ ಒಂದು ವಿಸಿಟಿಂಗ್ ಕಾರ್ಡ್ ತುಂಬಾ ಸೌಂಡ್ ಮಾಡುತ್ತಿದೆ. ಹೌದು ನೀವು ಹಲವು ರೀತಿಯ ವಿಸಿಟಿಂಗ್ ಕಾರ್ಡ್ ನೋಡಿರುತ್ತೀರಿ, ಬಹುಶಃ ಈ ರೀತಿಯ ಒಂದು ವಿಸಿಟಿಂಗ್ ಕಾರ್ಡ್ ನೋಡುತ್ತಿರುವುದು ಇದೇ ಮೊದಲು ಆಗಿರಬಹುದು, ನೋಡಿ. ಗೀತಾ ಕಲೆ ಎಂಬ ಮನೆ ಕೆಲಸದವರ ವಿಸಿಟಿಂಗ್ ಕಾರ್ಡ್ ನೋಡಿ, ಅವರಿಗೆ ದೇಶದ ಇವಿಧ ಕಡೆಯಿಂದ ಕೆಲದದ ಆಫರ್‌ಗಳು ಬರುತ್ತಿವೆ. ಸ್ವಲ್ಪ ಕ್ರಿಯೇಟಿವ್ ಆಗಿ ಯೋಚಿಸಿದರೆ ಕೆಲಸದ ಸಿಗುವುದು ಕಷ್ಟವೇನಿಲ್ಲ ಎಂಬುವುದಕ್ಕೆ ಈ ಪ್ರಕರಣವೇ ಸಾಕ್ಷಿ ನೋಡಿ.

ಮನೆಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಗೀತಾ ಕಲೆಗೆ ಪರಿಸ್ಥಿತಿಯ ಕಾರಣದಿಂದಾಗಿ ಕೆಲಸ ಇಲ್ಲವಾಗಿತ್ತು, ಹೀಗಾಗಿ ಹಣಕಾಸಿಗೆ ತೊಂದರೆಯಾಗುವುದು ಎಂಬ ಭಯ ಅವರನ್ನು ಕಾಡಲಾರಂಭಿಸಿತು, ಅವರು ಧನಶ್ರೀ ಎಂಬವರ ಮನೆಗೆ ಕೆಲಸಕ್ಕೆ ಹೋಗುತ್ತಿದ್ದರು, ಗೀತಕಲೆಯ ಸಪ್ಪೆ ಮೊರೆ ನೋಡಿದ ಧನಶ್ರೀ ಕೇಳಿದಾಗ ಇವರು ತಮ್ಮ ಕತೆ ಹೇಳಿದ್ದಾರೆ. ಧನಶ್ರೀಗೆ ಗೀತಾ ಅವರನ್ನು ಸಹಾಯ ಮಾಡಬೇಕೆಂಬ ಮನಸ್ಸಾಗಿದೆ. ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಧನಶ್ರೀ 24 ಗಂಟೆಯೊಳಗಾಗಿ ತಮ್ಮ ವೃತ್ತಿ ಕೌಶಲ್ಯದಿಂದ ಗೀತಾ ಅವರಿಗೆ 100 ವಿಸಿಟಿಂಗ್ ಕಾರ್ಡ್ ಮಾಡಿ, ಆ ಕಾರ್ಡ್‌ಗಳನ್ನು ಅವರಿದ್ದ ಸೊಸೈಟಿಯ ವಾಚ್‌ಮೆನ್ ಕೈಗೆ ನೀಡಿ ಹಂಚಲು ಹೇಳುತ್ತಾರೆ. ಈ ವಿಸಿಟಿಂಗ್ ಕಾರ್ಡ್ ವಿತರಣೆಯಾಗಿದ್ದೇ ಗೀತಾ ಕಲೆಗೆ ಕೆಲಸದ ಅವಕಾಶಗಳ ಮಹಾಪೂರವೇ ಹರಿದು ಬಂದಿದೆ.
ಈ ಕುರಿತು ಅಸ್ಮಿತಾ ಜಾವೇದ್‌ಕರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದೇ ತಡ, ಆ ವಿಸಿಟಿಂಗ್ ಕಾರ್ಡ್ ವೈರಲ್ ಆಗಿ ಬಿಟ್ಟಿದೆ. ಭಾರತದ ಮೂಲೆ-ಮೂಲೆಯಿಂದ ಗೀತಾ ಅವರಿಗೆ ಕರೆಗಳು ಬರುತ್ತಿವೆ. ಈಗ ಬಿಡದೆ ಸ್ದ್ದು ಮಾಡುತ್ತಿರುವ ಮೊಬೈಲ್ ನಿರ್ವಹಣೆಯೇ ಅವರಿಗೆ ತಲೆನೋವಾಗಿದೆ, ನೀವೇ ಇದಕ್ಕೆ ಒಂದು ಪರಿಹಾರ ಸೂಚಿಸಿ ಅಂತ ಧನಶ್ರೀ ಮೊರೆ ಹೋಗಿದ್ದಾರೆ ಎಂದು ಅಸ್ಮಿತಾ ಹೇಳಿಕೊಂಡಿದ್ದಾರೆ,
ನಮ್ಮಲ್ಲಿ ಕೆಲಸ ಇಲ್ಲ ಅಂತ ಕೊರಗುವವರು ಅನೆಕ ಮಂದಿ ಇದ್ದಾರೆ, ಏನಾದರೂ ಕ್ರಿಯೇಟಿವ್ ಆಗಿ ಯೋಚಿಸಿದರೆ ಸಂಪಾದನೆಯ ಬಾಗಿಲಿ ತನ್ನಿಂದ ತಾನೇ ತೆರೆದುಕೊಳ್ಳುವುದು ನೋಡಿ.



Click it and Unblock the Notifications
