Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಅಮೆರಿಕದಲ್ಲಿ ಮೋದಿ ತಾಲಿಗೆ ಡಿಮ್ಯಾಂಡೋ ಡಿಮ್ಯಾಂಡ್
ಮೋದಿ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಾಯಕ. ಮೋದಿ ಬರೀ ನಾಯಕತ್ವದ ಗುಣಗಳಿಂದ ಮಾತ್ರವಲ್ಲ ಫಿಟ್ನೆಸ್ ವಿಷಯದಲ್ಲೂ ತುಂಬಾನೇ ಗಮನೇ ಸೆಳೆಯುತ್ತಾರೆ. ಅವರ ಆಹಾರಶೈಲಿ ಕುರಿತು ತಿಳಿಯಲು ಜನರು ತುಂಬಾನೇ ಉತ್ಸುಕರಾಗಿ ಇರುತ್ತಾರೆ. ಮೋದಿಯವರ ವಯಸ್ಸು 72, ಆದರೆ ಅವರನ್ನು ನೋಡಿಸದರೆ 50ರ ಪ್ರಾಯದವರಂತೆ ಕಾಣುತ್ತಾರೆ.
ಇನ್ನು ಅವರು ಕೆಲಸ ಮಾಡುವ ರೀತಿ, ಅವರಲ್ಲಿರುವ ಹುಮ್ಮಸ್ಸು ನೋಡಿದಾಗ 30ರ ಯುವಕರೂ ನಾಚುವಂತಿದೆ. ಪ್ರದಾನಿಯಾದ ಮೇಲೆ ಇಲ್ಲಿಯವರೆಗೆ ಒಂದು ರಜೆಯನ್ನು ಕೂಡ ಹಾಕದೆ ದಿನದಲ್ಲಿ 18 ಗಂಟೆ ದುಡಿಯುತ್ತಾರೆ. ಇವೆಲ್ಲಾ ವಿದೇಶದಲ್ಲಿರುವವರನ್ನು ಆಕರ್ಷಿಸಿದೆ. ಮೋದಿ ಯುಎಸ್‌ಗೆ ಹೋಗುತ್ತಿರುವುದರಿಂದ ಮೋದಿ ತಾಲಿ ಎಂಬ ಹೊಸ ಟ್ರಂಟ್ ಶುರುವಾಗಿದೆ.

ಅಮೆರಿಕದ ರೆಸ್ಟೋರೆಂಟ್ ನಲ್ಲಿ ಮೋದಿ ತಾಲಿ ಪ್ರಾರಂಭಿಸಿದ್ದು ಇದೀಗ ಈ ಮೋದಿ ತಾಲಿಗೆ ತುಂಬಾನೇ ಡಿಮ್ಯಾಂಡ್. ಅಲ್ಲಿರುವ ಭಾರತೀಯರಿಗೆ ಇದು ಅಚ್ಚುಮೆಚ್ಚಿನ ಆಹಾರವಾಗಿದೆ ಎಂದು ರೆಸ್ಟೋರೆಂಟ್ ನ ಶೆಫ್ ಶರಿಪದ್ ಕುಲಕರ್ಣಿ ಹೇಳಿದ್ದಾರೆ.
ಮೋದಿ ತಾಲಿಯಲ್ಲಿ ಏನೆಲ್ಲಾ ತಿನಿಸುಗಳಿರುತ್ತದೆ?
ಕಿಚಡಿ
ರಸಗುಲ್ಲ
ಸಾರ್ಸನ್ ಕಾ ಸಾಗ್
ಕಾಶ್ಮೀರಿ ದಮ್ ಆಲೂ
ಕಿಚಡಿ
ದೋಕ್ಲಾ
ಚಾಚ್
ಪಾಪಡ್
ಕಲರ್‌ಫುಲ್ ತಾಲಿ ಗಮನ ಸೆಳೆಯುತ್ತಿದೆ
ಕುಲಕರ್ಣಿಯವರು ಮೋದಿ ತಾಲಿ ಫೋಟೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಈ ರೆಸ್ಟೋರೆಂಟ್ ನ ವಿದೇಶಾಂಗ ಸಚಿವ ಎಸ್ ಜೈ ಶಂಕರ್ ಹೆಸರಿನಲ್ಲಿ ಮತ್ತೊಂದು ತಾಲಿ ಪರಿಚಯಿಸಲು ಮುಂದಾಗಿದೆ. ಅಮೆರಿಕದಲ್ಲಿರುವ ಭಾರತೀಯರಿಗೆ ಈ ಮೋದಿ ಹಾಗೂ ಎಸ್ ಜೈಶಂಕರ್ ಸ್ಟಾರ್ ಗಳು ಹಾಗಾಗಿ ಇವರಿಬ್ಬರ ಹೆಸರಿನಲ್ಲಿ ಫುಡ್ ತಾಲಿ ಮಾಡಲು ಮುಂದಾಗಿದೆ.
2023 ಸಿರಿಧಾನ್ಯದ ವರ್ಷ ಎಂದು ವಿಶ್ವ ಆರೋಗ್ಯ ಸಂಸ್ಟೆ ಕರೆದಿದೆ. 2019ರಲ್ಲಿ ಭಾರತವು ಈ ಕುರಿತು ಶಿಫಾರಸ್ಸು ಮಾಡಿತ್ತು.
ಪ್ರಧಾನಿ ಮೋದಿ ತಾಲಿ ಹೊಸತಲ್ಲ
ಕಳೆದ ವರ್ಷ ಮೋದಿ ಹುಟ್ಟುಹಬ್ಬದ ಸಮಯದಲ್ಲಿ ದೆಹಲಿಯ ಮೂಲದ ರೆಸ್ಟೋರೆಂಟ್ 56 ಇಂಚಿನ ನರೇಂದ್ರ ಮೋದಿ ತಾಲಿ ಪರಿಚಯಿಸಿತ್ತು. ಇದರಲ್ಲಿ ವೆಜ್ ಹಾಗೂ ನಾನ್‌ವೆಜ್ ಆಯ್ಕೆ ಕೂಡ ಇತ್ತು.
ಅಮೆರಿಕದ ಪ್ರೆಸಿಡೆಂಟ್ ಬಿಡೆನ್ ಮೋದಿಯವರಿಗೆ ಅಮೆರಿಕಕ್ಕೆ ಆಹ್ವಾನ ನೀಡಿದ್ದು ಜೂನ್ 22ರಂದು ಏಳು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಅಮೆರಿಕದಲ್ಲಿರುವ ಭಾರತೀಯರು ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಮೋದಿಯವರ ಆಹಾರಕ್ರಮ ಹೇಗಿರುತ್ತದೆ?
ಮೋದಿಯವರು ಸಸ್ಯಾಹಾರಿ, ತುಂಬಾ ಕಟ್ಟುನಿಟ್ಟಿನ ಆಹಾರಕ್ರಮ ಪಾಲಿಸುತ್ತಾರೆ. ಮೋದಿಯವರು ಗುಜರಾತಿ ಅಡುಗೆಯೆಂದರೂ ಅದರಲ್ಲೂ ಕಿಚಡಿ ತುಂಬಾ ಇಷ್ಟಪಡುತ್ತಾರೆ. ಪ್ರತಿದಿನ ಒಂದು ಕಪ್ ಮೊಸರು ತಿನ್ನುತ್ತಾರೆ. ವಾರಕ್ಕೊಮ್ಮೆ ಆರೋಗ್ಯಕರ ಪೋಷಕಾಂಶವಿರುವ ಪರೋಟ ಸೇವಿಸುತ್ತಾರೆ. ಹಿಮಾಲ ಪ್ರದೇಶದ ಅಣಬೆ ಸೇವಿಸುತ್ತಾರೆ. ಮೋದಿಯವರು ತಿನ್ನುವ ಅಣಬೆಯ ಸೈಂಟಿಫಿಕ್ ಹೆಸರು ಮರ್ಕ್ಯೂಲಾ ಎಕ್ಸ್ಯೂಲೆಂಟಾ.



Click it and Unblock the Notifications
