Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಿವಿಯ ಒಳಗಡೆ ಜೀವಂತ ಜೇಡರ ಹುಳು..! ವಿಡಿಯೋ ವೈರಲ್ ..!
ಜೇಡ ಕಂಡರೆ ಯಾರಿಗೆ ತಾನೇ ಭಯ ಇಲ್ಲ ಹೇಳಿ. ಮನೆ ತುಂಬಾ ಅಲ್ಲಲ್ಲಿ ಗೂಡು ಕಟ್ಟಿಕೊಂಡು ಇರುತ್ತದೆ. ಈ ಜೇಡಗಳಿಗೆ ಬಡವ-ಶ್ರೀಮಂತ ಅನ್ನೋ ಭೇದ-ಭಾವವಿಲ್ಲ ಎಲ್ಲರ ಮನೆಯಲ್ಲಿ ಟಿಕಾಣಿ ಹೂಡೋದೇ ಇದರ ಕೆಲಸ. ಕೆಲವೊಂದು ಸಲ ಇದ್ದಕ್ಕಿದ್ದ ಹಾಗೇ ಈ ಜೇಡಗಳು ಮೈ ಮೇಲೆ ಎರಗಿ ಬಿಡುತ್ವೆ. ಎಂತಹ ಗಟ್ಟಿ ಗುಂಡಿಗೆ ಇದ್ದವರು ಕೂಡ ಒಂದು ಸಾರಿ ಬೆಚ್ಚಿ ಬೀಳದೇ ಇರೋದಿಲ್ಲ.

ಹೌದು, ಜೇಡಗಳಲ್ಲಿ ಕೂಡ ವಿಷದ ಅಂಶ ಇರುತ್ತಂತೆ. ಮತ್ತು ಜೇಡ ಮನುಷ್ಯನ ದೇಹದ ಭಾಗಕ್ಕೆ ಕಚ್ಚಿದರೆ ಅತೀವ ನೋವು ಸಂಭವಿಸುತ್ತದೆ. ಹೀಗಾಗಿ ಒಂದು ರೀತಿಯ ಭಯವಂತೂ ಇದ್ದೇ ಇದೆ. ಜೇಡಗಳು ಎಷ್ಟು ಚಾಲಾಕಿ ಇರುತ್ತವೆ ಅಂದ್ರೆ ಅದು ಮೈ ಮೇಲೆ ಬಂದೂ ಹೋಗಿದ್ದು ಗೊತ್ತೇ ಆಗುವುದಿಲ್ಲ. ಸರ್ ಅಂತ ಬಂದು ಬಿಡುತ್ತೆ. ಅದ್ರಲ್ಲೂ ರಾತ್ರಿ ಸಮಯದಲ್ಲಿ ತುಂಬಾನೇ ಹುಷಾರಾಗಿದ್ರೆ ಒಳ್ಳೆಯದು.
ಇತ್ತೀಚಿಗಷ್ಟೇ ಒಂದು ವಿಡಿಯೋ ವೈರಲ್ ಆಗಿತ್ತು. ಆ ವಿಡಿಯೋ ನೋಡಿ ಜನ ಒಂದು ಕ್ಷಣ ಕಂಗಾಲಾಗಿದ್ರು. ಹೀಗೂ ಆಗುತ್ತಾ ಅಂತ ಲೆಕ್ಕಾಚಾರ ಹಾಕಿದ್ರು. ಅಷ್ಟಕ್ಕು ಆ ವಿಡಿಯೋದಲ್ಲಿ ಅಂತಹದ್ದೇನಿದೆ ಅನ್ನೋದನ್ನ ನೋಡೋಣ.
ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಮಲಗಿದ್ದಾನೆ. ಮತ್ತೊಬ್ಬ ವ್ಯಕ್ತಿ ಆತನ ಕಿವಿಯೊಳಗಡೆ ಇಯರ್ ಡ್ರಾಪ್ ಹಾಕುತ್ತಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆತನ ಕಿವಿಯ ಒಳಗಡೆಯಿಂದ ಪುಟ್ಟದಾದ ಜೇಡವೊಂದು ಹೊರಗಡೆ ಬರುತ್ತದೆ. ಈ ವಿಡಿಯೋ ಎಲ್ಲರನ್ನೂ ನಿಬ್ಬೆರಗಾಗುವಂತೆ ಮಾಡಿದೆ.
ಈ ಪುಟ್ಟ ಜೇಡ ಆತನ ಕಿವಿಯೊಳಗಡೆ ಹೋಗಿದ್ಹೇಗೆ? ಜೇಡವೊಂದು ಆತನ ಕಿವಿಯೊಳಗಡೆ ಹೋದಾಗ ಆತನಿಗೆ ಗೊತ್ತೇ ಆಗಿಲ್ವಾ? ಅಂತೆಲ್ಲಾ ಜನ ಪ್ರಶ್ನಿಸ್ತಿದ್ದಾರೆ. ಅದಕ್ಕೆ ಹೇಳೋದು ನಾವು ಮಲಗಿರಲಿ ಅಥವಾ ಎಚ್ಚರವಾಗಿರಲಿ ನಮ್ಮ ಮುಂಜಾಗೃತೆಯಲ್ಲಿ ನಾವಿರಬೇಕು. ಇಲ್ಲವಾದರೆ ಇದೇ ತರಹ ಸಂಕಷ್ಟಗಳನ್ನು ಅನುಭವಿಸಬೇಕಾಗುತ್ತದೆ.



Click it and Unblock the Notifications
