Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಭಾರತದ ಈ ಜಾಗಕ್ಕೆ ಪ್ರವೇಶ ನಿಷೇಧ..! ಅಪ್ಪಿ ತಪ್ಪಿ ಕಾಲಿಟ್ಟರೆ ವಾಪಾಸು ಬರೋದು ಮರೆತುಬಿಡಿ!!
ನೀವು ಜಗತ್ತಿನ ಯಾವುದೇ ಮೂಲೆಗೆ ಬೇಕಾದರು ಪ್ರವಾಸ ಮಾಡಬಹುದು ಎಂಬುದು ನಿಮ್ಮ ತಪ್ಪು ಕಲ್ಪನೆ. ಯಾಕಂದ್ರೆ ವೀಸಾ. ಪಾಸ್ ಪೋರ್ಟ್ ಇದ್ದರೂ ಕೂಡ ಜಗತ್ತಿನ ಕೆಲವು ಪ್ರದೇಶದ ಮೇಲೆ ನೀವು ಕಾಲಿಡಲು ಆಗೋದಿಲ್ಲ. ಹೌದು ಅಂತಹ ಜಾಗಗಳು ಇಂದಿಗೂ ಇವೆ. ಅದರಲ್ಲೂ ಭಾರತದಲ್ಲೂ ಕೂಡ ಅಂತಹ ಒಂದು ಸ್ಥಳವಿದೆ ಎಂಬುದು ನಿಮಗೆ ಗೊತ್ತಾ?
ಭಾರತದಲ್ಲಿ ಒಂದು ಸ್ಥಳಕ್ಕೆ ನೀವು ಕಾಲಿಡಲು ಸಾಧ್ಯವಿಲ್ಲ, ಹಾಗೆ ಅಲ್ಲಿ ಪ್ರಯಾಣ ಕೂಡ ನಿಷೇಧಗೊಂಡಿದೆ. ನಿಮ್ಮಲ್ಲಿ ಹಲವರಿಗೆ ಆ ಜಾಗ ಯಾವುದು ಎಂಬ ಕುರಿತು ಸ್ವಲ್ಪ ತಿಳಿದಿರಬಹುದು. ಅದು ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಭಾಗವಾಗಿರುವ ಉತ್ತರ ಸೆಂಟಿನೆಲ್ ದ್ವೀಪವಾಗಿದೆ. ಹಲವು ಕಾರಣಕ್ಕೆ ಈ ನಾರ್ತ್ ಸೆಂಟಿನಲ್ ಐಲ್ಯಾಂಡ್ ಯಾವಾಗಲು ಸುದ್ದಿಯಾಗುತ್ತಿರುತ್ತದೆ.

ಅಲ್ಲಿ ನೆಲೆಸಿರುವ ಬುಡಕಟ್ಟು ಮಂದಿ ಹೊರಗಿನವರನ್ನು ಸ್ವಾಗತಿಸುವುದಿಲ್ಲ. ಬದಲಿಗೆ ಅವರ ಮೇಲೆ ದಾಳಿ ಮಾಡುತ್ತಾರೆ, ಸಾಯಿಸುತ್ತಾರೆ ಕೂಡ ಇದೇ ಕಾರಣಕ್ಕೆ ಈ ದ್ವೀಪಕ್ಕೆ ತೆರಳುವುದು ನಿಷೇಧ. ಆದ್ರೆ ಈ ಸಾಹಸ ಮಾಡಿರುವ ಹಲವರು ಇಂದಿಗೂ ಪತ್ತೆಯಾಗಿಲ್ಲ. ಇತ್ತೀಚಿಗೆ ಅಮೆರಿಕನ್ ಪ್ರಜೆ ಮಿಖೈಲೊ ವಿಕ್ಟೋರೊವಿಚ್ ಪಾಲಿಯಕೋವ್, ಅವರು ನಿರ್ಬಂಧಿತ ಬುಡಕಟ್ಟು ಪ್ರದೇಶವನ್ನು ಅಕ್ರಮವಾಗಿ ಪ್ರವೇಶಿಸಲು ಮುಂದಾಗಿದ್ದ. ಆದರೆ ಮಾರ್ಚ್ 31ರಂದು ಪೊಲೀಸರು ಆತನ ಬಂಧಿಸಿದರು. ಹಾಗೆ ಗೃಹ ಇಲಾಖೆಗೆ ಮಾಹಿತಿ ನೀಡಲಾಗಿತ್ತು.
ಬಂಗಾಳ ಕೊಲ್ಲಿಯಲ್ಲಿರುವ ಉತ್ತರ ಸೆಂಟಿನೆಲ್ ದ್ವೀಪವು ಸೆಂಟಿನೆಲೀಸ್ ಬುಡಕಟ್ಟು ಜನಾಂಗದವರ ನೆಲೆಯಾಗಿದೆ. ಭಾರತ ಸರ್ಕಾರ ಈ ದ್ವೀಪವನ್ನು ವಿಶೇಷವಾಗಿ ಸಂರಕ್ಷಿತ ಬುಡಕಟ್ಟು ಪ್ರದೇಶ ಎಂದು ಘೋಷಿಸಿದೆ. ಇಲ್ಲಿ ವಾಸಿಸುವ ಸೆಂಟಿನೆಲೀಸ್ ಜನರು ಹೊರಜಗತ್ತಿನೊಂದಿಗೆ ಸಂಪರ್ಕವನ್ನೇ ಸಾಧಿಸಿಲ್ಲ. ಅವರು ಯಾವ ಸಹಾಯ ಹಾಗೆ ಯಾರ ಬೆಂಬಲವನ್ನೂ ಅಪೇಕ್ಷಿಸುವುದಿಲ್ಲ. ಹೀಗಾಗಿ ಈ ಪ್ರದೇಶಕ್ಕೆ ಪ್ರವೇಶಿಸುವುದನ್ನು ಕಟ್ಟು ನಿಟ್ಟಾಗಿ ನಿಷೇಧಿಸಲಾಗಿದೆ.
ಅವರ ಸುರಕ್ಷತೆ ಮತ್ತು ಸಂಸ್ಕೃತಿಯನ್ನು ರಕ್ಷಿಸಲು ಸರ್ಕಾರವು 'ನೋಡಿ ಆದರೆ ಮುಟ್ಟಬೇಡಿ' ಎಂಬ ನೀತಿಯನ್ನು ಅಳವಡಿಸಿಕೊಂಡಿದೆ. ಈ ಬುಡಕಟ್ಟು ಜನಾಂಗದ ಜೀವನದಲ್ಲಿ ಯಾವುದೇ ಹೊರಗಿನವರು ಹಸ್ತಕ್ಷೇಪ ಮಾಡಬಾರದು ಎಂಬುದು ಇದರ ಉದ್ದೇಶವಾಗಿದೆ. ಒಂದು ವೇಳೆ ನೀವು ಸಂಪರ್ಕ ಸಾಧಿಸಿದರೆ ಅವರಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿಯಿಂದಾಗಿ ಹಲವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಅವರ ಜನಾಂಗವೇ ಅಂತ್ಯವಾಗುವ ಅಪಾಯ ಕೂಡ ಇದೆ.
ಸೆಂಟಿನೆಲೀಸ್ ಜನರನ್ನು ಪ್ರಪಂಚದ ಕೊನೆಯ ಪೂರ್ವ ನವಶಿಲಾಯುಗದ ಬುಡಕಟ್ಟು ಜನಾಂಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಅವರಲ್ಲಿ ಇಂದಿಗೂ ಹಳೆ ಶಿಲಾಯುಗದ ಸಂಸ್ಕೃತಿ, ಆಚರ, ವಿಚಾರಗಳನ್ನೇ ಹೋಲುತ್ತದೆ. ಅವರ ಜೀವನ ಶೈಲಿ ಆಧುನಿಕ ಮಾನವರ ಜೀವನ ಶೈಲಿಗಿಂತಲೂ ಬಹಳ ಭಿನ್ನವಾಗಿದೆ. ಅವರ ಮಾನವರ ಸಂಪರ್ಕಕ್ಕೆ ಬಂದಿರುವುದು ತೀರ ಇತ್ತೀಚಿಗೆ ಹೀಗಾಗಿ ಮಾನವರ ಆಗಮನವನ್ನು ಅವರು ಅಪಾಯ ಎಂದು ಪರಿಗಣಿಸಿದ್ದಾರೆ. ಅವರನ್ನು ಭೇಟಿಯಾಗಲು ಬಯಸಿದರೆ ಜೀವಂತವಾಗಿ ವಾಪಾಸು ಬರುವುದು ಅನುಮಾನ.
ನವೆಂಬರ್ 2018 ರಲ್ಲಿ ಅಮೇರಿಕನ್ ಮಿಷನರಿ ಜಾನ್ ಅಲೆನ್ ಚೌ, ಸೆಂಟಿನೆಲೀಸ್ ಜನರೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನಿಸಿದ್ದ. ಅಲ್ಲಿನ ಜನರನ್ನು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಲು ಪ್ರೇರೇಪಿಸುವುದಾಗಿ ಆತ ಹೇಳಿದ್ದ. ಆದ್ರೆ ಬುಡಕಟ್ಟು ಜನಾಂಗದವರ ಸಂಪರ್ಕಕ್ಕೆ ಬಂದಾಗ ಅವರು ಆತನ ಹಿಡಿದು ಕೊಂದಿದ್ದರು.
ಇದಕ್ಕೂ ಮೊದಲು 2006ರಲ್ಲಿ ಇಬ್ಬರು ಮೀನುಗಾರರು ಆಕಸ್ಮಿಕವಾಗಿ ಈ ದ್ವೀಪ ಸಮೀಪಿಸಿದಾಗ ಅವರು ಬಿಲ್ಲು ಬಾಣಗಳಿಂದ ದಾಳಿಗೆ ಒಳಗಾಗಿ ಕೊನೆಯುಸಿರೆಸಳೆದಿದ್ದರು. ಹೀಗಾಗಿ ಈ ಪ್ರದೇಶಕ್ಕೆ ಪ್ರವೇಶ ನಿಷೇಧವಾಗಿದೆ.



Click it and Unblock the Notifications










