Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹಸುವಿನ ಪ್ರಾಣ ಉಳಿಸಲು ರೈಲು ನಿಲ್ಲಿಸಿದ ಲೋಕೋ ಪೈಲೆಟ್: ವೀಡಿಯೋಗೆ ಅಪಾರ ಮೆಚ್ಚುಗೆ
ರೈಲು ಬರುವಾಗ ಹಳಿ ದಾಟುತ್ತಿದ್ದ ಹಸುವನ್ನು ನೋಡಿ ರೈಲು ನಿಲ್ಲಿಸಿದ ವೀಡಿಯೋ ವೈರಲ್ ಆಗುತ್ತಿದದ್ದು ಲೋಕೋ ಪೈಲೆಟ್ ಕಾರ್ಯಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮೂಕ ಪ್ರಾಣಿಗೆ ರಸ್ತೆ ದಾಟಲು ಅವಕಾಶ ಮಾಡಿಕೊಟ್ಟು ಮಾನವೀಯತೆ ಮೆರೆದಿದ್ದಾರೆ, ಮನುಷ್ಯತ್ವವೆಂದರೆ ಇದು ಎಂದು ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ರೈಲು ನಿಲ್ಲಿಸದಿದ್ದರೆ ಆ ಹಸುಗಳ ಪ್ರಾಣ ಹೋಗುತ್ತಿತ್ತು
ಆ ಹಸುಗಳು ಹಳಿಗಳ ಮೇಲೆ ಇತ್ತು, ಹಸುಗಳನ್ನು ನೋಡಿದ ಲೋಕೋಪೈಲೆಟ್ ರೈಲಿನ ವೇಗವನ್ನು ಕಡಿಮೆ ಮಾಡಿದರು. ಒಂದು ಹಸು ಹಲಿ ದಾಟಿದೆ, ಆದರೆ ಮತ್ತೊಂದು ಹಸು ಗೊಂದಲಕ್ಕೆ ಒಳಗಾಯ್ತು, ಅದು ಹಳಿಯಲ್ಲಿಯೇ ನಿಂತಿದ್ದರಿಂದ ರೈಲು ನಿಲ್ಲಿಸಿ ಆ ಹಸು ದಾಟಿದ ಮೇಲೆ ರೈಲು ಮುಂದೆಕ್ಕೆ ಹೋಗಿದೆ, ಆ ಹಸುವಿನ ಪ್ರಾಣ ಉಳಿಸಿದ್ದಕ್ಕೆ ತುಂಬಾನೇ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇವರು ಹಸುವನ್ನು ನೋಡಿದ್ದರಿಂದ ರೈಲು ನಿಲ್ಲಿಸಿ ಪ್ರಾಣ ಉಳಿಸಲು ಸಾಧ್ಯವಾಯ್ತು. ಅದರೆ ಎಲ್ಲಾ ಸಮಯದಲ್ಲಿ ಈ ರೀತಿ ಸಾಧ್ಯವಾಗಲ್ಲ, ಅಪಘಾತ ಸಂಭವಿಸುತ್ತದೆ.
आप लोग विडियो को अंत तक जरूर देखे और ट्रेन चालक के लिए दो शब्द जरूर लिखे,. pic.twitter.com/1TwcR0PMdV
— Naresh Yadav (@NareshYadav100) September 6, 2024
ವೇಗವಾಗಿ ಚಲಿಸುತ್ತಿದ್ದ ರೈಲು ಎದುರುಗಡೆ ಇದ್ದಕ್ಕಿದ್ದಂತೆ ಹಸು ಬಂದರೆ , ಹಸು ಅಂತಲ್ಲ ಯಾವುದೇ ಪ್ರಾಣಿ ಬಂದರೆ ಏನು ಮಾಡುವುದಕ್ಕೆ ಆಗುವುದಿಲ್ಲ. ಇತ್ತೀಚೆಗೆ ಕಾಡಾನೆಯೊಂದಕ್ಕೆ ರೈಲು ಡಿಕ್ಕಿ ಹೊಡೆದು ಕಾಡಾನೆ ನೋವಿನಿಂದ ತೆವಳಿಕೊಂಡು ಹೋಗುವ ದೃಶ್ಯ ಮನಕಲುಕುವಂತಿತ್ತು, ಕಾಡು ಪ್ರಾಣಿಗಳು ಈ ರೀತಿ ನಾಡಿಗೆ ಬರುವುದನ್ನು ತಪ್ಪಿಸಲು ಅರನ್ಯ ಇಲಾಖೆ ಯೋಜನೆಗಳನ್ನು ರೂಪಿಸಿ ಅವುಗಳನ್ನು ರಕ್ಷಣೆ ಮಾಡಬೇಕು. ಪ್ರಾಣಿಗಳು ಜೀವ ಕಳೆದುಕೊಳ್ಳುವುದನ್ನು ತಪ್ಪಿಸಬೇಕಾಗಿದೆ.
ರಸ್ತೆಯಲ್ಲಿಯೂ ಹಸುಗಳು ಎದುರಾಗುವುದು, ಅವುಗಳ ಮಾಲಿಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು
ಹಸುಗಳನ್ನು ಮೇಯಲು ಬಿಡುವಾಗ ಅವಳನ್ನು ಸುರಕ್ಷಿತವಾದ ಸ್ಥಳದಲ್ಲಿ ಬಿಟ್ಟು ಮೇಯಿಸುವ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು, ಅದರೆ ತುಂಬಾ ಜನರಿಗೆ ಹಾಲು ಕರೆಯಲು ಮಾತ್ರ ಹಸುವಿನ ನೆನಪಾಗುವುದು, ಆದರೆ ನಂತರ ಅವುಗಳನ್ನು ಮೇಯಲು ರೋಡ್‌ನಲ್ಲಿ ಬಿಟ್ಟು ಬಿಡುತ್ತಾರೆ, ಈ ರೀತಿ ರೋಡ್‌ನಲ್ಲಿ ಬಿಡುವುದರಿಂದ ಅವುಗಳಿಗೆ ಅಪಘಾತವಾಗುವ ಸಾಧ್ಯತೆ ಇದೆ, ಅವುಗಳಿಗೆ ಡಿಕ್ಕಿಯಾಗಿ ಮನುಷ್ಯರು ಪ್ರಾಣ ಕಳೆದುಕೊಂಡಿರುವ ಎಷ್ಟೋ ಘಟನೆಗಳಿವೆ. ಅದರಲ್ಲಿಯೂ ಬೈಕ್‌ನಲ್ಲಿ ಹೀಗುವವರೆಗೆ ಹೆಚ್ಚು ಅಪಾಯಕಾರಿ, ರಸ್ತೆ ಬದಿಯಲ್ಲಿರುವ ಹಸುಗಳು ಇದ್ದಕ್ಕಿದ್ದಂತೆ ರಸ್ತೆಗೆ ಬರುತ್ತದೆ, ಇನ್ನು ಕೆಲವು ಕಡೆ ಹಸುಗಳು ಗುಂಪು ಗುಂಪಾಗಿ ಮಲಗಿರುತ್ತದೆ, ಇದರಿಂದಾಗಿ ಗಾಡಿಗೆ ಮುಂದೆಕ್ಕೆ ಹೋಗುವುದೇ ಕಷ್ಟ, ಎಷ್ಟೇ ಹಾರ್ನ್ ಹೊಡೆದರೂ ಅವುಗಳು ಸೈಡ್‌ಗೆ ಹೋಗಲ್ಲ.
ಹಸುಗಳನ್ನು ರಸ್ತೆಯಲ್ಲಿ ಬಿಡುವುದರಿಂದ ಅವುಗಳಿಗೂ ತೊಂದರೆ, ಆ ದಾರಿಯಲ್ಲಿ ಪ್ರಯಾಣ ಮಾಡುವವರಿಗೂ ತೊಂದರೆ, ಬೇಜಾವ್ದಾರಿಯಿಂದ ಹಸುವನ್ನು ರಸ್ತೆಯಲ್ಲಿ ಬಿಡುವ ಮಾಲೀಕರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು, ಹಸುವನ್ನು ಸಾಕುವವರು ಅದರ ಸಂಪೂರ್ಣ ಸುರಕ್ಷತೆಯ ಗಮನಹರಿಸಬೇಕು. ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು? ಕಮೆಂಟ್ ಮಾಡಿ.



Click it and Unblock the Notifications
