ಟ್ರಾಫಿಕ್ ಜಾಮ್ ತಪ್ಪಿಸಲು ನದಿಯಲ್ಲಿ ಕಾರು ಚಲಾಯಿಸಿದ ಪ್ರವಾಸಿಗ..! ಆಮೇಲೆ ಆಗಿದ್ದೇನು?

ನೀವೆಂದಾದ್ರು ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ್ರಾ? ಈ ವೇಳೆ ಅಬ್ಬಬ್ಬಾ ಅಂದ್ರೆ ಏನ್ ಮಾಡಿರ್ತಿರಾ? ಒಂದಿಷ್ಟು ಸಮಯ ಕಾದು ಟ್ರಾಫಿಕ್ ಮುಗಿದ ಮೇಲೆ ವಾಹನ ಚಲಾಯಿಸುತ್ತೀರಾ. ಇಲ್ಲದೆ ಯಾವುದಾದ್ರೂ ಬೇರೆ ರಸ್ತೆ ಇದಿಯಾ ನೋಡಿ ಅಲ್ಲಿಂದ ತೆರಳುತ್ತೇವೆ. ಆದ್ರೆ ಇಲ್ಲೊಬ್ಬ ಟ್ರಾಫಿಕ್ ಜಾಮ್‌ನಿಂದ ತಪ್ಪಿಸಿಕೊಳ್ಳಲು ಮಾಡಿದ ಸಾಹಸ ಕೇಳಿದ್ರೆ ನೀವು ದಂಗಾಗ್ತಿರಾ.

ಹಿಂದಿನ ವಾರದಲ್ಲಿ ಸಾಲು ಸಾಲು ರಜೆಗಳಿದ್ದ ಕಾರಣ ಒಂದಿಷ್ಟು ಮಂದಿ ತಮ್ಮ ಬೈಕ್, ಕಾರು ಹತ್ತಿ ಪ್ರವಾಸ ಹೊರಟ್ಟಿದ್ದಾರೆ. ಇಲ್ಲೊಬ್ಬ ಕ್ರಿಸ್‌ಮಸ್ ರಜೆ ಸವಿಸಲು ತನ್ನ ಕಾರು ಹತ್ತಿ ಹಿಮಾಚಲ ಪ್ರದೇಶದತ್ತ ಪ್ರವಾಸ ಹೊರಟ್ಟಿದ್ದ. ವರ್ಷದಲ್ಲಿ ಲಕ್ಷಕ್ಕೂ ಅಧಿಕ ಪ್ರವಾಸಿಗರು ಹಿಮಾಚಲ ಪ್ರದೇಶದತ್ತ ತೆರಳುತ್ತಾರೆ. ಆದ್ರೆ ಅಲ್ಲಿಗೆ ತೆರಳುವವರೆಲ್ಲ ಪ್ರವಾಸ ಎಂಜಾಯ್ ಮಾಡುತ್ತಾರೆ ಅಂತೇನಿಲ್ಲ. ಕೆಲವರು ಇಡೀ ದಿನ ಜಾಮ್‌ಗಳಲ್ಲಿ ಸಿಲುಕಿ ಒದ್ದಾಡುತ್ತಾರೆ.

ಇದೇ ರೀತಿ ತನ್ನ ಥಾರ್ ಕಾರಿನಲ್ಲಿ ಪ್ರವಾಸ ಹೋಗಿದ್ದ ಒಬ್ಬ ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿ ಬೇರೆ ದಾರಿ ಕಾಣದೆ ನದಿಯಲ್ಲಿ ಕಾರು ಚಲಾಯಿಸಿ ಈಗ ಸುದ್ದಿಯಾಗಿದ್ದಾನೆ. ಆತನ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಲಾಹೌಲ್ ಸ್ಪಿಟಿ ಪ್ರದೇಶದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದ್ದು, ಆತ ಚಂದ್ರಾ ನದಿಯನ್ನು ತನ್ನ ಥಾರ್ ಕಾರಿನಿಂದ ದಾಟಿಸುತ್ತಿದ್ದಾನೆ.

ಇಲ್ಲಿ ಪ್ರವಾಸಿಗನ ಅದೃಷ್ಟ ಚೆನ್ನಾಗಿದ್ದು, ನದಿಯಲ್ಲಿ ಹೆಚ್ಚಿನ ನೀರು ಇಲ್ಲದ ಕಾರಣ ಸುರಕ್ಷಿತವಾಗಿ ಇನ್ನೊಂದು ದಡ ಸೇರಿಕೊಂಡಿದ್ದಾನೆ. ಆದ್ರೆ ನದಿ ಹರಿವು ಹೆಚ್ಚಾಗಿತ್ತು ಎಂದುಕೊಳ್ಳಿ ಆಗ ಆತನ ಪರಿಸ್ಥಿತಿ ಎನಾಗುತ್ತಿತ್ತು ಯೋಚಿಸಿ.

ಈ ರೀತಿ ಮಾಡುವುದು ಸರಿಯೇ?

ಆತ ತಾನು ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ರೀತಿ ಮಾಡಿರಬಹುದು ಆದರೆ ಇದು ಅನೇಕ ಅಪಾಯಗಳಿಗೆ ದಾರಿಯಾಗುತ್ತದೆ. ಈ ವಿಡಿಯೋ ನೋಡಿರುವ ಹಲವರು ಇದನ್ನೇ ಸಾಹಸ ಕ್ರೀಡೆಯಾಗಿ ತೆಗೆದುಕೊಂಡು ತಾವು ಸಹ ನದಿ ದಾಟಿಸುವ ಸಾಹಸಕ್ಕೆ ಕೈಹಾಕಿ ಜೀವಕ್ಕೆ ಅಪಾಯ ತಂದುಕೊಳ್ಳಬಹುದು. ಇಲ್ಲವೆ ತಮ್ಮ ವಾಹನದಿಂದ ನದಿ ದಾಟಿಸಲು ಯತ್ನಿಸಿ ಬೇರೆಯವರ ಜೀವಕ್ಕೂ ಅಪಾಯ ತಂದೊಡ್ಡಬಹುದು.

ಪೊಲೀಸರಿಂದ ಬಿತ್ತು ದಂಡ

ನಿಯೋಜಿತ ದಾರಿ ಬಿಟ್ಟು ಅಡ್ಡದಾರಿ ಹಿಡಿದಿದ್ದ ಚಾಲಕನಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಮೋಟಾರ್ ವಾಹನಗಳ ಕಾಯ್ದೆ 1988ರ ಅಡಿ ಚಾಲಕನಿಗೆ ದಂಡ ವಿಧಿಸಲಾಗಿದ್ದು, ಈ ವಿಷಯ ತಿಳಿದ ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದರು. ಆತ ನದಿ ಪಾರು ಮಾಡಿದ್ದನ್ನು ಕಂಡು ಮತ್ತೊಂದಿಷ್ಟು ಮಂದಿ ಈ ಸಾಹಸಕ್ಕೆ ಕೈಹಾಕಬಾರದು ಎಂದು ಪೊಲೀಸರು ಸ್ಥಳದಲ್ಲಿ ಕಟ್ಟೆಚ್ಚರ ವಹಿಸಿದ್ದರು.

Thar

ನದಿಯಲ್ಲಿ ಸಿಲುಕಿದ್ರೆ ಏನಾಗುತ್ತಿತ್ತು?

ಆತ ಟ್ರಾಫಿಕ್‌ನಿಂದ ತಪ್ಪಿಸಿಕೊಳ್ಳಲು ತನ್ನ ಕಾರನ್ನು ನದಿಯೊಳಗೆ ಇಳಿಸಿದ್ದ, ಆದರೆ ಒಂದು ವೇಳೆ ಆತ ನದಿಯ ಮಧ್ಯದಲ್ಲಿ ಸಿಲುಕಿದ್ದರೆ ಆತನ ಪ್ರಾಣಕ್ಕೆ ಸಂಚಕಾರ ಬರುತ್ತಿತ್ತು. ಹಿಮಾಚಲ ಪ್ರದೇಶದ ನದಿಗಳ ಹರಿವು ಯಾವಾಗ ಬೇಕಾದರೂ ಹೆಚ್ಚುವ ಸಂಭವವಿರುತ್ತದೆ. ಜೊತೆಗೆ ತಾಪಮಾನ ಮತ್ತಷ್ಟು ಇಳಿಕೆಯಾಗುತ್ತದೆ. ತಾಪಮಾನ ತೀರ ಇಳಿಯುವುದರಿಂದ ಆತನ ಆರೋಗ್ಯದಲ್ಲಿ ಏರುಪೇರಾಗುವ ಸಂಭವವಿರುತ್ತದೆ.

ಪ್ರವಾಸಿಗರು ವಹಿಸಬೇಕಾದ ಎಚ್ಚರಿಕೆ ಏನು?

ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಉತ್ತರಾಖಂಡ್ ಈ ಪ್ರದೇಶಗಳಿಗೆ ಚಳಿಗಾಲದಲ್ಲಿ ಪ್ರವಾಸಕ್ಕೆ ತೆರಳುವುದು ಸೂಕ್ತವಲ್ಲ. ಏಕೆಂದರೆ ಈ ಪ್ರದೇಶಗಳಲ್ಲಿ ಯಾವಾಗ ಬೇಕಾದರೂ ಹಿಮಪಾತ ಸಂಭವಿಸಬಹುದು. ಅತೀಯಾದ ಹಿಮಮಳೆ ಅಲ್ಲಿನ ರಸ್ತೆಗಳನ್ನು ಬಳಸಲಾಗದ ಸ್ಥಿತಿಗೆ ತಂದೊಡ್ಡಿರುತ್ತವೆ. ಈ ರಸ್ತೆಗಳಲ್ಲಿ ವಾಹನಗಳು ಸಿಲುಕುವುದು ಟ್ರಾಫಿಕ್ ಜಾನ್ ಸರ್ವೇ ಸಾಮಾನ್ಯವಾಗಿರುತ್ತದೆ. ಹೀಗಾಗಿ ಫೆಬ್ರವರಿ ಮುಗಿದ ಬಳಿಕ ಈ ಪ್ರದೇಶಗಳಿಗೆ ಪ್ರವಾಸ ಹೊರಡುವುದು ಉತ್ತಮವಾಗಿರುತ್ತದೆ.

ಪ್ರವಾಸಿಗರು ಈ ಪ್ರದೇಶಗಳಿಗೆ ತೆರಳಿದ್ದಾಗ ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಸ್ಥಳೀಯ ಆಡಳಿತದೊಂದಿಗೆ ಸಂಪರ್ಕ ಸಾಧಿಸಿ ಅಲ್ಲಿನ ಹವಾಮಾನ ಸ್ಥಿತಿಗತಿಯ ಬಗ್ಗೆ ಅರಿತುಕೊಂಡಿರಬೇಕು. ಅಲ್ಲದೆ ಯಾವ ಪ್ರದೇಶದಲ್ಲಿ ಅಪಾಯಗಳು ಹೆಚ್ಚಿವೆಯೋ ಅಂತಹ ಪ್ರದೇಶಕ್ಕೆ ತೆರಳುವುದನ್ನು ಆದಷ್ಟು ತಪ್ಪಿಸಬೇಕು.

English summary

Tourist Drives His Car Through River To Avoid Himachal Traffic Jam See What Happend Next

A video is now going viral on social media which shows a tourist driving his Mahindra Thar SUV through a river
X
Desktop Bottom Promotion