Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಶ್ರಾವಣ ಮಾಸದಲ್ಲಿ ಹೇರ್ ಕಟ್, ಶೇವಿಂಗ್ ಮಾಡಿಸಬಾರದು ಅನ್ನೋದು ಇದೇ ಕಾರಣಕ್ಕೆ!
ಶ್ರಾವಣ ತಿಂಗಳು ಹಿಂದೂಗಳಿಗೆ ಪವಿತ್ರವಾದ ತಿಂಗಳು. ಈ ತಿಂಗಳನ್ನು ಶಿವನಿಗೆ ಅರ್ಪಿಸಲಾಗುತ್ತದೆ. ಜೊತೆಗೆ ಶಿವನಿಗೆ ಪ್ರಿಯವಾದ ತಿಂಗಳು ಅಂತಾನೂ ಕರೆಯಲಾಗುತ್ತದೆ. ಈ ಶ್ರಾವಣ ತಿಂಗಳಿನಲ್ಲಿ ಶಿವನ ಜೊತೆಗೆ ಪಾರ್ವತಿಯನ್ನು ಭಕ್ತಿಯಿಂದ ಪೂಜಿಸಿದ್ರೆ ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಿ ಬದುಕಿನಲ್ಲಿ ಎಲ್ಲವೂ ಒಳ್ಳೆಯದಾಗುತ್ತೆ ಅಂತಾನೂ ಹೇಳಲಾಗುತ್ತದೆ.
ಈ ತಿಂಗಳಿನಲ್ಲಿ ಶಿವನನ್ನು ನಿಷ್ಕಲ್ಮಷ ಮನಸ್ಸಿನಿಂದ ಪ್ರೀತಿಸಿದ್ರೆ ನಾವು ಅಂದುಕೊಂಡಿದ್ದೆಲ್ಲಾ ನೆರವೇರುತ್ತೆ ಅಂತ ಹೇಳಲಾಗುತ್ತದೆ. ಈ ಶ್ರಾವಣ ತಿಂಗಳಿನಲ್ಲಿ ಕೆಲವೊಂದು ಆಚರಣೆಗಳನ್ನು ಪಾಲಿಸಬೇಕು. ಅದೇ ರೀತಿ ಈ ತಿಂಗಳಿನಲ್ಲಿ ಕೆಲವೊಂದು ಕೆಲಸಗಳನ್ನು ಮಾಡಬಾರದು. ಅಷ್ಟಕ್ಕು ಈ ಶ್ರಾವಣ ಮಾಸದಲ್ಲಿ ಯಾವ ಕೆಲಸಗಳನ್ನು ಮಾಡಬಾರದು ಅನ್ನೋದನ್ನು ತಿಳಿಯೋಣ.

ಈ ತಿಂಗಳು ಹೊಸತಾಗಿ ಮದುವೆಯಾದವರಿಗೆ ವಿಶೇಷವಾದ ತಿಂಗಳು ಅಂತಾನೇ ಪರಿಗಣಿಸಲಾಗುತ್ತದೆ. ಇನ್ನೂ ಅವಿವಾಹಿತರು ಈ ಶ್ರಾವಣ ಮಾಸದಲ್ಲಿ ಶಿವನಿಗಾಗಿ ಉಪವಾಸ ವ್ರತ ಮಾಡಿದರೆ ತಮ್ಮ ನೆಚ್ಚಿನ ಸಂಗಾತಿಯನ್ನು ಪಡೆಯಬಹುದಂತೆ. ಇನ್ನೂ ಈಗಾಗಲೇ ಪ್ರೀತಿಯಲ್ಲಿ ಇರುವವರು ಭಕ್ತಿಯಿಂದ ಶಿವನನ್ನು ಬೇಡಿಕೊಂಡರೆ ಅವರ ಮಧ್ಯೆ ಪ್ರೀತಿ ಮತ್ತಷ್ಟು ಹೆಚ್ಚಾಗಲಿದ್ಯಂತೆ.
ಶ್ರಾವಣ ತಿಂಗಳಿನಲ್ಲಿ ಕೈಲಾಸದಿಂದ ಇಳಿದು ಬರುತ್ತಾನಾ ಶಿವ?
ಈ ಶ್ರಾವಣ ತಿಂಗಳಿನಲ್ಲಿ ಶಿವನು ಕೈಲಾಸದಿಂದ ಭೂಮಿಗೆ ಇಳಿದು ಬರುತ್ತಾನಂತೆ. ಇನ್ನೂ ಈ ಶ್ರಾವಣ ಮಾಸದಲ್ಲಿ ಪದ್ಮಿನಿ ಏಕಾದಶಿಯನ್ನೂ ಕೂಡ ಆಚರಣೆ ಮಾಡಲಾಗ್ತಿದ್ದು, ಭಗವಾನ್ ವಿಷ್ಣುವು ಮುಂದಿನ ನಾಲ್ಕು ತಿಂಗಳುಗಳವರೆಗೆ ಯೋಗ ನಿದ್ರಾಗೆ ಜಾರುತ್ತಾನೆ. ಮತ್ತು ಈ ಸಮಯದಲ್ಲಿ ಭಗವಾನ್ ಶಿವನು ಸೃಷ್ಟಿಯನ್ನು ನೋಡಿಕೊಳ್ಳುತ್ತಾನೆ ಎಂಬ ನಂಬಿಕೆಯಿದೆ. ಈ ಶ್ರಾವಣ ಮಾಸದಲ್ಲಿ ಮಹಾದೇವನಿಗೆ ವಿಶೇಷ ಪೂಜೆಯನ್ನು ಮಾಡಲಾಗುತ್ತದೆ.
ಇನ್ನೂ ಈ ಶ್ರಾವಣ ಮಾಸದಲ್ಲಿ ಶಿವನ ಆಶೀರ್ವಾದ ಪಡೆಯಲು ಕೆಲವೊಂದು ಕಟ್ಟು-ಪಾಡುಗಳನ್ನು ಪಾಲಿಸೋದು ತುಂಬಾನೇ ಮುಖ್ಯವಾಗುತ್ತದೆ. ಈ ಪವಿತ್ರ ಮಾಸದಲ್ಲಿ ಹೇರ್ ಕಟ್, ಶೇವಿಂಗ್ ಕೂಡ ಮಾಡಿಸಬಾರದು ಅನ್ನೋದು ಯಾಕೆ ಅನ್ನೋದನ್ನು ತಿಳಿಯೋಣ.
ಶ್ರಾವಣದಲ್ಲಿ ಹೇರ್ ಕಟ್, ಶೇವಿಂಗ್ ಮಾಡಿಸಬಾರದು ಯಾಕೆ ಗೊತ್ತಾ?
ಶ್ರಾವಣದಲ್ಲಿ ಹೇರ್ ಕಟ್ ಮಾಡಿಸಬಾರದು, ಶೇವಿಂಗ್ ಮಾಡಿಸಬಾರದು ಅನ್ನೋ ಮಾತನ್ನು ನಾವು ಕೇಳಿರ್ತೀವಿ. ಆದರೆ ಈ ರೀತಿ ನಂಬಿಕೆಗಳು ಯಾಕಿದೆ ಅನ್ನೋದು ಇಂದಿಗೂ ನಮ್ಮಲ್ಲಿ ಅನೇಕರಿಗೆ ಗೊತ್ತಿಲ್ಲ. ಇದರ ಹಿಂದಿನ ಕಾರಣ ಏನು ಅಂದ್ರೆ ಹಿಂದಿನ ಕಾಲದಲ್ಲಿ ಹೇರ್ ಕಟ್ ಮತ್ತು ಶೇವಿಂಗ್ ಗೆ ಕಬ್ಬಿಣದ ಉಪಕರಣಗಳನ್ನು ಬಳಕೆ ಮಾಡಲಾಗ್ತಿತ್ತು. ಮತ್ತು ಅವುಗಳ ಅಂಚುಗಳು ತುಂಬಾ ತೀಕ್ಷ್ಣವಾಗಿತ್ತು. ಅದರಿಂದ ಗಾಯಗಳಾಗುವ ಅಪಾಯ ಹೆಚ್ಚಿತ್ತು.
ಇನ್ನೂ ಈ ಶ್ರಾವಣ ಮಾಸದಲ್ಲಿ ಮಳೆ ಅತಿಯಾಗಿರುತ್ತದೆ. ಹಾಗೂ ಸೂರ್ಯನ ಬೆಳಕು ಇರೋದಿಲ್ಲ. ಇದ್ರಿಂದ ಗಾಯಗಳಾದಾಗ ಸೋಂಕು ತಗುಲುವ ಅಪಾಯ ಹೆಚ್ಚಿರುತ್ತದೆ. ಈ ಕಾರಣಕ್ಕಾಗಿ ಶ್ರಾವಣದಲ್ಲಿ ಕ್ಷೌರ ಮಾಡಿಸುವ ಸಂದರ್ಭದಲ್ಲಿ ಗಾಯವಾಗಿ ಸೋಂಕು ಆಗುತ್ತೆ ಅನ್ನೋ ಉದ್ದೇಶದಿಂದ ಶ್ರಾವಣದಲ್ಲಿ ಕ್ಷೌರ ನಿಷೇಧಿಸಲಾಗಿದೆ.
ಶ್ರಾವಣದಲ್ಲಿ ಉಗುರು ಕತ್ತರಿಸೋದನ್ನು ನಿಷೇಧಿಸಿರೋದು ಯಾಕೆ?
ಶ್ರಾವಣ ಮಾಸದಲ್ಲಿ ಉಗುರು ಕತ್ತರಿಸುವುದನ್ನೂ ನಿಷೇಧಿಸಲಾಗಿದೆ. ಇಷ್ಟು ಮಾತ್ರವಲ್ಲದೆ ಈ ತಿಂಗಳಲ್ಲಿ ಎಣ್ಣೆ ಬಳಸಿ ಬಾಡಿ ಮಸಾಜ್ ಮಾಡುವುದನ್ನು ಕೂಡ ನಿಷೇಧಿಸಲಾಗಿದೆ. ಈ ಮಾಸದಲ್ಲಿ ಎಣ್ಣೆ ಮಸಾಜ್ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಗ್ರಹದೋಷಗಳು ಉಂಟಾಗುವ ಸಾಧ್ಯತೆಗಳಿದೆ. ಜೊತೆಗೆ ಶ್ರಾವಣ ಪೂಜೆಯ ಲಾಭವು ಅವರಿಗೆ ಸಿಗುವುದಿಲ್ಲ ಎಂಬ ನಂಬಿಕೆ ಇದೆ. ಇನ್ನೂ ಈ ಶ್ರಾವಣ ಮಾಸದಲ್ಲಿ ಮಾಂಸಹಾರ, ಮಧ್ಯಪಾನ, ಧೂಮಪಾನದಿಂದ ದೂರವಿರಬೇಕು ಅಂತ ಹೇಳಲಾಗುತ್ತದೆ.
ಶ್ರಾವಣ ತಿಂಗಳಿನಲ್ಲಿ ಏನು ಮಾಡಬೇಕು?
ಶ್ರಾವಣ ತಿಂಗಳಿನಲ್ಲಿ ನಮ್ಮ ಮೈ ಹಾಗೂ ಮನಸ್ಸನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹಾಗೂ ಆದಷ್ಟು ಶಿವನ ಧ್ಯಾನದಲ್ಲಿ ನಿರತವಾಗಿ ಇರಬೇಕು. ಇನ್ನೂ ಕುಟುಂಬದಲ್ಲಿರುವ ಎಲ್ಲಾ ಹಿರಿಯರನ್ನು ಗೌರವ ಭಾವದಿಂದ ಕಾಣಬೇಕು. ಇನ್ನೂ ನಿಮ್ಮ ಆಸೆ ಆಕಾಂಕ್ಷೆಗಳೆಲ್ಲಾ ಈಡೇರಬೇಕೆಂದರೆ ಶಿವಲಿಂಗಕ್ಕೆ ನಿತ್ಯ ನೀರನ್ನು ಅರ್ಪಿಸಬೇಕು.
ಹಿಂದಿನ ಕಾಲದವರು ಯಾವುದಾದರೂ ಒಂದು ನಿಯಮವನ್ನು ಪಾಲಿಸಿಕೊಂಡು ಬರುತ್ತಿದ್ದರೂ ಅಂದ್ರೆ ಅದರ ಹಿಂದೆ ಒಂದು ವೈಜ್ಞಾನಿಕ ಕಾರಣ ಇರುತ್ತಿತ್ತು.



Click it and Unblock the Notifications

