Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಈ 5 ರಾಶಿಯವರು ಮಾನವೀಯತೆಯನ್ನು ಮೈ ಗೂಡಿಸಿಕೊಂಡಿರ್ತಾರೆ!
ಮನುಷ್ಯನಿಗೆ ಸ್ವಾರ್ಥಿ ಎನ್ನುವ ಹಣೆ ಪಟ್ಟಿಯಿದೆ. ಆದರೆ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯೂ ಸ್ವಾರ್ಥಿಯಾಗಿ ಇರೋದಿಲ್ಲ. ನಮ್ಮಲ್ಲೇ ಅನೇಕ ಜನ ತುಂಬಾ ಒಳ್ಳೆಯವರೂ ಇರುತ್ತಾರೆ. ಇವರು ತಮ್ಮ ಬಗ್ಗೆ ಮಾತ್ರವಲ್ಲದೇ ಬೇರೆಯವರ ಬಗ್ಗೆಯೂ ಯೋಚಿಸುತ್ತಾರೆ. ಅವರ ಬಗ್ಗೆ ಕಾಳಜಿ ಮಾಡುತ್ತಾರೆ. ಕಷ್ಟ ಕಾಲದಲ್ಲಿ ಮತ್ತೊಬ್ಬರಿಗೆ ಬೆಂಗಾವಲಾಗಿ ನಿಲ್ಲುತ್ತಾರೆ.

ಮಾನವೀಯ ಗುಣಗಳು ಯಾರಲ್ಲಿ ಇರುತ್ತೋ ಅವರ ಹೃದಯ ಮಾತ್ರ ಮತ್ತೊಬ್ಬರಿಗಾಗಿ ಮಿಡಿಯೋದು. ಅಷ್ಟಕ್ಕೂ ಯಾವ 5 ರಾಶಿಯವರಲ್ಲಿ ಮಾನವೀಯ ಗುಣಗಳು ಹೆಚ್ಚಾಗಿರುತ್ತೆ ಅನ್ನೋದನ್ನು ತಿಳಿಯೋಣ.
ಮೀನ ರಾಶಿ
ಮೀನ ರಾಶಿಯವರು ಭಾವನಾತ್ಮಕ ಸಂವೇದನೆ ಮತ್ತು ಸಹಾನುಭೂತಿಗೆ ಹೆಸರುವಾಸಿಯಾಗಿದ್ದಾರೆ. ಇವರಲ್ಲಿರುವ ನಮ್ರತೆ ಇದೆ. ಮತ್ತು ಇತರರ ಭಾವನೆಗಳು ಮತ್ತು ಅನುಭವಗಳೊಂದಿಗೆ ಸಂಪರ್ಕ ಸಾಧಿಸಲು ಇವರು ಪ್ರಯತ್ನಿಸುತ್ತಾರೆ. ಮೀನ ರಾಶಿಯವರು ತಮ್ಮ ಬಗ್ಗೆ ತಾವು ಪ್ರಚಾರ ಮಾಡಿಕೊಳ್ಳುವುದಕ್ಕಿಂತ ಹೆಚ್ಚಾಗಿ ಇತರರ ದೃಷ್ಟಿಕೋನಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚು ಗಮನಹರಿಸುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯನ್ನು ಚಂದ್ರನು ಆಳುತ್ತಿದ್ದಾನೆ. ಈ ರಾಶಿಯವರು ಕೂಡ ಭಾವನಾತ್ಮಕ ಜೀವಿಗಳು. ಮತ್ತು ಇತರರ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿರುತ್ತಾರೆ. ಕರ್ಕಾಟಕ ರಾಶಿಯವರು ತಾವು ಪ್ರೀತಿಸುವವರನ್ನು ರಕ್ಷಿಸಲು ಮತ್ತು ಪೋಷಿಸುವ ಸಹಜ ಬಯಕೆಯನ್ನು ಹೊಂದಿರುತ್ತಾರೆ. ತಮ್ಮ ಸ್ನೇಹಿತರು ಮತ್ತು ಕುಟುಂಬದ ಯೋಗಕ್ಷೇಮಕ್ಕಾಗಿ ಇವರು ನಿಸ್ವಾರ್ಥ ಸಮರ್ಪಣೆಯನ್ನು ಮಾಡುತ್ತಾರೆ. ಈ ರಾಶಿಯವರು ತಮಗಿಂತ ಇತರರ ಅಗತ್ಯತೆಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾರೆ.
ತುಲಾ ರಾಶಿ
ತುಲಾ ರಾಶಿಯನ್ನು ಶುಕ್ರನು ಆಳುತ್ತಿದ್ದಾನೆ. ಒಂದು ವಿಚಾರವನ್ನು ವಿವಿಧ ದೃಷ್ಟಿಕೋನಗಳಲ್ಲಿ ಆಲೋಚಿಸಿ ಅದನ್ನು ಅರ್ಥ ಮಾಡಿಕೊಳ್ಳುವ ಚಾಕಚಕ್ಯತೆ ಇವರಿಗೆ ಇರುತ್ತದೆ. ಹೀಗಾಗಿ ತಮ್ಮ ಮೂಗಿನ ನೇರಕ್ಕೆ ಮಾತನಾಡುವ ವ್ಯಕ್ತಿಗಳ ಮಧ್ಯೆ ಈ ರಾಶಿಯವರು ಅಪರೂಪ ಅನ್ನಿಸಿ ಬಿಡ್ತಾರೆ. ಬೇರೆಯವರ ಸಮಸ್ಯೆಗಳನ್ನು ರಾಜ ತಾಂತ್ರಿಕತೆಯಿಂದ ಬಗೆಹರಿಸುತ್ತಾರೆ. ಇವರು ತಮ್ಮ ಅಹಂಗಿಂತ ಬೇರೆಯವರ ಯೋಗಕ್ಷೇಮದ ಬಗ್ಗೆ ಹೆಚ್ಚು ಆಲೋಚಿತರಾಗಿ ಇರುತ್ತಾರೆ.
ಕನ್ಯಾ ರಾಶಿ
ಕನ್ಯಾ ರಾಶಿಯು ಬುಧನಿಂದ ಆಳಲ್ಪಡುವ ರಾಶಿಯಾಗಿದೆ. ಇವರು ಕೂಡ ನಿಖರವಾದ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಇವರು ಸೇವಾ ಕಾರ್ಯಗಳ ಮೂಲಕ ತಮ್ಮ ನಮ್ರತೆಯನ್ನು ವ್ಯಕ್ತಪಡಿಸುತ್ತಾರೆ. ಮತ್ತು ಮನ್ನಣೆಯನ್ನು ಬಯಸದೆ ಇತರರಿಗೆ ಸಹಾಯ ಮಾಡಲು ಇಚ್ಛೆಯನ್ನು ವ್ಯಕ್ತಪಡಿಸುತ್ತಾರೆ. ಕನ್ಯಾರಾಶಿಯವರು ಇತರರಿಗೆ ಸಹಾಯ ಮಾಡುವ ನಿಜವಾದ ಬಯಕೆ ಹೊಂದಿರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯನ್ನು ಶುಕ್ರನು ಆಳುತ್ತಿದ್ದಾನೆ. ವೃಷಭ ರಾಶಿಯವರು ಅವರ ಸ್ಥಿರ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಈ ರಾಶಿಯವರು ವಿಶ್ವಾಸಾರ್ಹರೂ ಆಗಿರುತ್ತಾರೆ. ನಂಬಿದವರನ್ನು ಯಾವತ್ತಿಗೂ ಕೈ ಬಿಡುವವರಲ್ಲ. ಸಾಮಾನ್ಯವಾಗಿ ಇವರು ತೆರೆಮರೆಯಲ್ಲಿ ಕೆಲಸ ಮಾಡಲು ಇಷ್ಟ ಪಡುತ್ತಾರೆ. ಈ ರಾಶಿಯವರು ಬೇರೆಯವರು ತಾವು ಮಾಡೋ ಒಳ್ಳೆ ಕೆಲಸವನ್ನು ಹೊಗಳಲಿ ಎಂದು ತೋರಿಕೆಗೆ ಕೆಲಸ ಮಾಡೋದಿಲ್ಲ.



Click it and Unblock the Notifications
