Latest Updates
-
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್!
ಈ 5 ರಾಶಿಯವರು ನಿರ್ಭೀತಿಯಿಂದ ಬದುಕುತ್ತಾರೆ!
ಮನುಷ್ಯನಿಗೆ ಒಂದಲ್ಲಾ ಒಂದು ವಿಚಾರದಲ್ಲಿ ಭಯ ಇದ್ದೇ ಇರುತ್ತೆ. ಗೆದ್ದವನಿಗೆ ಸೋಲುವ ಭಯ. ಬಡವನಿಗೆ ಶ್ರೀಮಂತನ ಭಯ. ಸಾಮಾನ್ಯ ಜನರಿಗೆ ಪೊಲೀಸರ ಭಯ. ಜನ ಸಾಮಾನ್ಯರಿಗೆ ಅಧಿಕಾರಿಗಳ ಭಯ. ಮಕ್ಕಳಿಗೆ ಪೋಷಕರ ಭಯ. ಹೀಗೆ ಪ್ರತಿಯೊಬ್ಬರಿಗೂ ಒಂದಲ್ಲ ಒಂದು ವಿಚಾರದಲ್ಲಿ ಭಯ ಇದ್ದೇ ಇರುತ್ತದೆ.

ಆದರೆ ಕೆಲವೇ ಕೆಲವು ಜನ ಮಾತ್ರ ಯಾವುದೇ ಭಯವಿಲ್ಲದೇ ದೈರ್ಯದಿಂದ ಮುನ್ನುಗುವುದು. ಯಾವುದೇ ಸಂದರ್ಭವಾದರೂ ಕೂಡ ಇವರು ಭಯ ಪಡುವ ಮಾತೇ ಇಲ್ಲ. ಎಲ್ಲವನ್ನೂ ದೈರ್ಯದಿಂದ ಎದುರಿಸುತ್ತಾರೆ. ಭಯ ಅಂದ್ರೆ ಏನು ಅನ್ನೋದೇ ಇವರಿಗೆ ಗೊತ್ತಿರೋದಿಲ್ಲ. ಅಷ್ಟಕ್ಕೂ ಯಾವುದೇ ವಿಚಾರಕ್ಕೂ ಭಯ ಪಡದೇ ಇರುವ ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.
ಮೇಷ ರಾಶಿ
ಮೇಷ ರಾಶಿಯನ್ನು ಮಂಗಳನು ಆಳುತ್ತಿದ್ದಾನೆ. ಮೇಷ ರಾಶಿಯವರು ಅಪರಿಮಿತ ಧೈರ್ಯವನ್ನು ಹೊಂದಿದ್ದಾರೆ. ಯಾವುದೇ ಕೆಲಸ ಮಾಡಬೇಕಾದರೂ ಇವರು ಹಿಂದೆ ಸರಿಯುವ ಮಾತೇ ಇಲ್ಲ. ಏನೇ ಬರಲಿ ಎದುರಿಸುತ್ತೇನೆಂದು ದೈರ್ಯದಿಂದ ಮುನ್ನುಗ್ಗುತ್ತಾರೆ. ಈ ರಾಶಿಯವರು ಸವಾಲುಗಳಿಗೆ ಬೆನ್ನು ಕೊಟ್ಟು ಓಡಿ ಹೋಗುವವರಲ್ಲ. ಬದಲಾಗಿ ಸವಾಲಿಗೆ ಎದೆಯೊಡ್ಡಿ ನಿಲ್ಲುತ್ತಾರೆ. ಭಯ ಅಂದ್ರೆ ಏನು ಅನ್ನೋದೇ ಇವರಿಗೆ ಗೊತ್ತಿರೋದಿಲ್ಲ.
ಸಿಂಹ ರಾಶಿ
ಸಿಂಹ ರಾಶಿಯನ್ನು ಸೂರ್ಯನು ಆಳುತ್ತಿದ್ದಾನೆ. ಈ ರಾಶಿಯವರಲ್ಲಿ ಆತ್ಮ ವಿಶ್ವಾಸ ಹೆಚ್ಚಾಗಿರುತ್ತದೆ. ಈ ರಾಶಿಯವರು ನಿರ್ಭೀತ ಗುಣವನ್ನು ಹೊಂದಿರುತ್ತಾರೆ. ಇವರಲ್ಲಿರುವ ಧೈರ್ಯವು ಅವರ ಅಚಲವಾದ ಸ್ವಯಂ-ಭರವಸೆಯೊಂದಿಗೆ ಗಮನ ಮತ್ತು ಬದಲಾವಣೆಯನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಇವರಲ್ಲಿರುವ ನಿರ್ಭೀತ ಗುಣವೇ ಇವರಿಗೆ ಸಮರ್ಥ ನಾಯಕತ್ವ ಜವಾಬ್ದಾರಿಯನ್ನು ನೀಡುತ್ತದೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಕೂಡ ಭಯವಿಲ್ಲದ ರಾಶಿಯವರಾಗಿರುತ್ತಾರೆ. ಇವರಲ್ಲಿರುವ ದೈರ್ಯವೇ ಇವರಿಗೆ ಅಡೆ-ತಡೆಗಳನ್ನು, ಸವಾಲಯಗಳನ್ನು ಎದುರಿಸುವುದಕ್ಕೆ ಶಕ್ತಿ ನೀಡುತ್ತದೆ. ಇವರು ಸವಾಲುಗಳನ್ನೇ ತಮ್ಮ ವಿಕಾಸದ ಮೆಟ್ಟಿಲ್ಲನ್ನಾಗಿ ಮಾಡಿಕೊಳ್ಳುತ್ತಾರೆ. ಎದುರಾಳಿ ಎಷ್ಟೇ ದೈರ್ಯವಂತನಾಗಿದ್ದರೂ ಕೂಡ ಇವರು ಹೆದರಿಕೊಳ್ಳುವವರಲ್ಲ. ಏನೇ ಆದರೂ ಗೆಲ್ಲಲೇಬೇಕು ಅಂತ ದೈರ್ಯದಿಂದ ಮುನ್ನುಗ್ಗುತ್ತಾರೆ.
ಧನು ರಾಶಿ
ಧನು ರಾಶಿಯನ್ನು ಗುರುವು ಆಳುತ್ತಿದ್ದಾನೆ. ಧನು ರಾಶಿಯವರು ಪರಿಶೋಧನೆ ಮತ್ತು ಅನ್ವೇಷಣೆಯ ನಿರ್ಭೀತ ಮನೋಭಾವವನ್ನು ಹೊಂದಿರುತ್ತಾರೆ. ಧನು ರಾಶಿಯವರಲ್ಲಿ ಅತೃಪ್ತ ಕುತೂಹಲ ಮತ್ತು ಅಜ್ಞಾತಕ್ಕೆ ಸಾಹಸ ಮನೋಭಾವ ಹೊಂದಿರುತ್ತಾರೆ. ಇವರಲ್ಲಿರುವ ಭಯವಿಲ್ಲದ ಗುಣ ಅಪಾಯಗಳು ಮತ್ತು ಸವಾಲುಗಳನ್ನು ಸ್ವೀಕರಿಸಲು ಪ್ರೋತ್ಸಾಹಿಸುತ್ತದೆ. ಇನ್ನೂ ಇವರಲ್ಲಿರುವ ಆಶಾವಾದ ಮತ್ತು ಮುಕ್ತ ಮನಸ್ಸು ಅವರನ್ನು ಜೀವನದ ಅನಿಶ್ಚಿತತೆಗಳನ್ನು ಅಚಲವಾದ ಉತ್ಸಾಹದಿಂದ ಎದುರಿಸುವಂತೆ ಮಾಡುತ್ತದೆ.
ಕುಂಭ ರಾಶಿ
ಕುಂಭ ರಾಶಿಯನ್ನು ಯುರೆನೆಸ್ ಆಳುತ್ತಿದೆ. ಕುಂಭ ರಾಶಿಯವರ ನಿರ್ಭೀತ ಸ್ವಭಾವವು ಅವರ ದೂರದೃಷ್ಟಿಯ ಚಿಂತನೆ ಮತ್ತು ನವೀನ ಮನೋಭಾವದಿಂದ ಹುಟ್ಟಿಕೊಂಡಿದೆ. ಇವರು ಸವಾಲುಗಳನ್ನು ಸ್ವೀಕರಿಸಿ ಬದಲಾವಣೆಗಾಗಿ ಪ್ರೇರೇಪಿಸುತ್ತಾರೆ. ಇವರಲ್ಲಿರುವ ದೈರ್ಯದ ಮನೋಭಾವದಿಂದ ಜೀವನದಲ್ಲಿ ದೊಡ್ಡದು ಏನನ್ನಾದರೂ ಸಾಧಿಸುವುದಕ್ಕೆ ಸಹಾಯವಾಗುತ್ತದೆ.



Click it and Unblock the Notifications