Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಕೊಳೆಯಾದ ಉಡುಪು, ಕೆದರಿದ ಕೂದಲು, ತಲೆಯಲ್ಲಿ ಟೋಪಿ, ಮಾನಸಿಕ ಅಸ್ವಸ್ಥೆ: ಟೋಪಿ ಅಮ್ಮನ ನೋಡಿದರೆ ಏಕಿಷ್ಟು ಭಯ, ಭಕ್ತಿ?
ನಮ್ಮ ಭಾರತ ದೇಶದಲ್ಲಿ ಹಲವಾರು ಮನುಷ್ಯರನ್ನು ದೇವರೆಂದು, ದೇವ ಪುರುಷನೆಂದು, ದೇವಿಯ ಅವತಾರವೆಂದು ಆರಾಧಿಸುತ್ತೇವೆ. ಅವರೆಲ್ಲಾ ಆಧ್ಯಾತ್ಮಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುತ್ತಾರೆ, ಒಂದು ಧರ್ಮವನ್ನು ಅನುಸರಿಸುತ್ತಾರೆ, ಎಲ್ಲಾ ಧರ್ಮದಲ್ಲಿಯೂ ಈ ಆಚರಣೆ ಇದೆ, ಆದರೆ ಅವರನ್ನು ಅವರ ಧರ್ಮದ ಪ್ರಕಾರ ಕರೆಯಲಾಗುವುದು. ಸ್ವಾಮೀಜಿ, ಪಾದ್ರಿ, ಮೌಲ್ವಿ, ಮುನಿಗಳು ಹೀಗೆ ಮನುಷ್ಯರಲ್ಲಿ ದೇವರ ಸ್ವರೂಪ ಕಾಣುತ್ತೇವೆ,ಆದರೆ 'ಟೋಪಿ ಅಮ್ಮ' ಮಾತ್ರ ತುಂಬಾ ಭಿನ್ನ, ಅವಳಿಗೆ ಧರ್ಮವಿಲ್ಲ, ಮನೆಯಿಲ್ಲ ಆಕೆ ಒಬ್ಬ ಮಾನಸಿಕ ಅಸ್ವಸ್ಥೆ, ಆದರೆ ಈಕೆಯ ಆಶೀರ್ವಾದ ಸಿಕ್ಕರೆ ಸಾಕು ಎಂದು ನೂರಾರು ಭಕ್ತರು ಕಾಯುತ್ತಾರೆ.

ಯಾರು ಈ ಟೋಪಿ ಅಮ್ಮ
ಈಕೆ ತಮಿಳುನಾಡಿನ ತಿರುವಣಮಲೈಯಲ್ಲಿದ್ದಾರೆ. ಕೊಳೆಯಾದ ಬಟ್ಟೆ, ಸ್ನಾನ ಮಾಡಿ ಎಷ್ಟು ದಿನಗಳಾಯ್ತೋ. ಕೆದರಿದ ಕೂದಲು, ತಿಂದಿದ್ದು, ಕುಡಿದಿದ್ದು ಎಲ್ಲಾ ಮೈ ಮೇಲೆ ಚೆಲ್ಲಿಕೊಳ್ಳುತ್ತಾಳೆ, ಮೈಯೆಲ್ಲಾ ಕೊಳೆ, ಆದರೆ ತಲೆಯಲ್ಲಿ ಒಂದು ಟೋಪಿ, ಈಕೆ ರಸ್ತೆಯಲ್ಲಿ ಹೋಗುತ್ತಿದ್ದರೆ ಜನ ಭಕ್ತಿಯಿಂದ ಆಕೆಯನ್ನು ಹಿಂಬಾಲಿಸುತ್ತಾರೆ. ಆಕೆ ಕುಡಿದು ಬಿಸಾಡಿದ ಕಾಫಿ ಲೋಟವನ್ನು ಎತ್ತಿ ಪ್ರಸಾದ ಅಂತ ಕಣ್ಣಿಗೆ ಒತ್ತಿಕೊಳ್ಳುತ್ತಾರೆ. ಆಕೆ ತಿಂದು ಬಿಟ್ಟ ಅರ್ಧ ಆಹಾರವನ್ನು ಪ್ರಸಾದ ಅಂತ ಭಾವಿಸಿ ಸೇವಿಸುತ್ತಾರೆ.
ಉದ್ದವಾದ ಲಂಗ, ತುಂಬು ತೋಳಿನ ಶರ್ಟ್, ತಲೆಗೊಂದು ಟೋಪಿ ಇದು ಈಕೆಯ ಡ್ರೆಸ್ಸಿಂಗ್, ಆಕೆ ಯಾವತ್ತೂ ತುಂಬಾನೇ ವಿಚಿತ್ರವಾಗಿ ಕಾಣಿಸುತ್ತಾಳೆ. ಆಕೆಯನ್ನು ನೋಡಿದರೆ ಸ್ನಾನ ಮಾಡಿ ವರ್ಷಗಳೇ ಕಳೆದಂತೆ ಕಾಣುವುದು, ಮಾನಸಿಕ ಅಸ್ವಸ್ಥತೆ, ಸಾಮಾನ್ಯವಾಗಿ ಇಂಥ ವ್ಯಕ್ತಿಯನ್ನು ನೋಡಿದರೆ ಛೀ.. ಅಂತ ಜನ ದೂರ ಸರಿಯುತ್ತಾರೆ, ಆದರೆ ಟೋಪಿ ಅಮ್ಮನ ವಿಷಯದಲ್ಲಿ ಮಾತ್ರ ಆ ರೀತಿಯಲ್ಲ, ಈಕೆ ಕಣ್ಣಿಗೆ ಬಿದ್ದರೆ ಭಕ್ತಿಯಿಂದ ಆಕೆಯನ್ನು ಹಿಂಬಾಲಿಸುತ್ತಾರೆ.
ಆದರೆ ಸುತ್ತಲ ಪ್ರಪಂಚದ ಗೊಡವೆ ಆಕೆಗಿಲ್ಲ
ಟೋಪಿ ಅಮ್ಮನಿಗೆ ಇದ್ಯಾವುದು ಗೊತ್ತಿಲ್ಲ, ಆಕೆ ಗಮನವೂ ನೀಡಲ್ಲ, ಆಕೆ ಮಾನಸಿಕ ಅಸ್ವಸ್ಥೆ, ಹಸಿದಾಗ ಸಿಕ್ಕ ಆಹಾರ ತಿನ್ನುತ್ತಾಳೆ, ಅರ್ಧ ತಿಂದರೆ ಅರ್ಧ ಆಹಾರ ಮೈಮೇಲೆ ಚೆಲ್ಲಿಕೊಂಡಿರುತ್ತಾಳೆ, ಏಕೆ ನನ್ನನ್ನು ಕಂಡರೆ ಜನ ಗುಂಪು ಗುಂಪಾಗಿ ಬರ್ತಾರೆ, ಏಕೆ ನನ್ನನ್ನು ಗೌರವಿಸುತ್ತಾರೆ ಎಂಬುವುದು ಏನೂ ಗೊತ್ತಿರಲ್ಲ.
ಆಕೆಯಲ್ಲಿ ಯಾವುದೋ ಪವಾಡವಿದೆಯೆಂದು ಜನ ನಂಬುತ್ತಾರೆ
ನನ್ನಲ್ಲಿ ಏನು ಪವಾಡವಿದೆ ಎಂಬುವುದು ಆಕೆಗೆ ಗೊತ್ತಿಲ್ಲ, ಆದರೆ ಜನರು ಮಾತ್ರ ಆಕೆಯಲ್ಲಿ ಏನೋ ಪವಾಡವಿದೆ, ಆಕೆಯ ಪ್ರಸಾದ ಸಿಕ್ಕರೆ ( ಆಕೆ ತಿಂದು ಉಳಿಸಿದ ಆಹಾರ, ಕಾಫಿ ಕುಡಿದು ಬಿಸಾಡಿದ ಲೋಟ) ನಮ್ಮ ಕಷ್ಟಗಳು ದೂರಾಗುತ್ತದೆ ಎಂದು ಬಲವಾಗಿ ನಂಬಿದ್ದಾರೆ, ಹಾಗಾಗಿಯೇ ಆಕೆ ಹೋದ ಕಡೆ ಜನರ ದಂಡೇ ಹೋಗುತ್ತದೆ. ಆಕೆ ನಡೆದು ಬರುವಾಗ ಆಕೆಯ ಕಾಲಿಗೆ ಬಿದ್ದು ನಮಸ್ಕರಿಸುತ್ತಾರೆ, ಕೆಲವರು ಉರುಳು ಸೇವೆ ಮಾಡುತ್ತಾರೆ, ಅಲ್ಲಿಯ ಕೆಲ ಜನರು ಈಕೆಯಲ್ಲಿ ದೇವರನ್ನು ಕಾಣುತ್ತಿದ್ದಾರೆ.
ಹೀಗೆ ಮಾಡುವ ಬದಲು ಆಕೆಗೆ ಚಿಕಿತ್ಸೆ ಕೊಡಿಸಿ ಸಹಾಯ ಮಾಡಿ ಎಂಬ ಕಮೆಂಟ್‌ಗಳೂ ಬರುತ್ತಿವೆ
ಆಕೆಯನ್ನು ನೋಡಿದಾಗಲೇ ತಿಳಿಯುತ್ತದೆ ಆಕೆ ಮಾನಸಿಕ ಅಸ್ವಸ್ಥತೆ, ಆಕೆಗೆ ಒಳ್ಳೆಯ ವೈದ್ಯರಿಗೆ ತೋರಿಸಿ ಚಿಕಿತ್ಸೆ ಕೊಡಿಸಿದರೆ ಎಲ್ಲವೂ ಸರಿಯಾಗುತ್ತದೆ, ಆದರೆ ಜನರು ಅದು ಬಿಟ್ಟು ಈ ರೀತಿಯ ನಂಬಿಕೆಗಳಿಂದ ವರ್ತಿಸುವುದು ಸರಿಯಲ್ಲ ಎಂದು ಕೆಲವರು ಕಮೆಂಟ್ ಮಾಡುತ್ತಿದ್ದಾರೆ.
ಒಬ್ಬರು- ಇಬ್ಬರಲ್ಲ ಸಾಕಷ್ಟು ಭಕ್ತರು ಈಕೆಯನ್ನು ಆರಾಧಿಸುತ್ತಾರೆ
ತನ್ನ ಬದುಕಿನಲ್ಲಿ ಏನು ನಡೆಯುತ್ತಿದೆ ಎಂಬುವುದು ಈಕೆಗೆ ಗೊತ್ತಿಲ್ಲ, ಆದರೆ ಜನರು ತಮ್ಮ ಬದುಕಿನಲ್ಲಿನ ಕಷ್ಟ ಹೋಗಲಾಡಿಸಲು ಈಕೆಯನ್ನು ಆರಾಧಿಸುತ್ತಾರೆ, ಆದರೆ ಆಕೆ ಮಾತ್ರ ಇದ್ಯಾವುದರ ಪರಿವೇ ಇಲ್ಲದೆ ತನ್ನ ಪಾಡಿಗೆ ತಾನಿರುತ್ತಾಳೆ.
ಎಲ್ಲವೂ ಒಂದು ನಂಬಿಕೆ, ಆ ನಂಬಿಕೆಯನ್ನು ತುಂಬಾ ಪ್ರಶ್ನೆ ಮಾಡುವ ಬದಲಿಗೆ ಅದು ಅವರಿಗೆ ಸರಿ ಕಂಡರೆ ಹಾಗೇ ಬಿಡುವುದು ಒಳ್ಳೆಯದು. ಈ ರೀತಿಯ ಮಾನಸಿಕ ಅಸ್ವಸ್ಥರು ಬಂದಾಗ ಓಡಿಸುತ್ತಾರೆ, ಆದರೆ ಆಕೆಯನ್ನು ದೇವತೆ ಎಂಬಂತೆ ನೋಡುತ್ತಿರುವುದರಿಂದ ಎಲ್ಲಾ ಕಡೆಯೂ ಆಕೆಗೆ ಆಹಾರದ ತೊಂದರೆಯಾಗುತ್ತಿಲ್ಲ... ತರ್ಕಕ್ಕೆ ನಿಲುಕದ ಎಷ್ಟೋ ವಿಷಯಗಳು ನಮ್ಮ ಈ ಸಮಾಜದಲ್ಲಿದೆ ಅಲ್ಲವೇ?



Click it and Unblock the Notifications
