Latest Updates
-
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ
ವಿಶ್ವದ ಮೊದಲ ಏಲಿಯನ್ ದೇವಾಲಯವಿದು..! ಯಾರು ಕಟ್ಟಿಸಿದ್ದು? ಏಕೆ ಗೊತ್ತಾ?
ದೇವಾಲಯಗಳ ನಾಡು ಭಾರತದಲ್ಲಿ ಹೆಜ್ಜೆ ಹೆಜ್ಜೆಗೂ ದೇವಾಲಯ ಕಾಣಬಹುದು. ಬೀದಿ ಬೀದಿಗೂ ದೇವಾಲಯ ಇರೋದು ಕಾಮನ್. ಆದ್ರೆ ಭಾರತದಲ್ಲಿರುವಷ್ಟು ವಿಶೇಷ, ವಿಚಿತ್ರ ಸಂಪ್ರದಾಯ ಆಚರಣೆಗಳು ಬೇರೆ ಎಲ್ಲಿಯೂ ನೀವು ನೋಡಲು ಸಾಧ್ಯವಾಗುವುದಿಲ್ಲ. ಕೆಲವೊಂದು ನಮ್ಮ ಊಹೆಗೂ ಮೀರಿರುವ ಅಚ್ಚರಿಗಳು, ಕುತೂಹಲಗಳಿಗೂ ಈ ದೇವಾಲಯಗಳೂ ಕಾರಣವಾಗುತ್ತದೆ.
ಇನ್ನು ತಮಿಳುನಾಡಿನಲ್ಲಿ ದೇವಾಲಯಗಳ ಸಂಖ್ಯೆಗೆ ಕಡಿಮೆ ಇಲ್ಲ. ಅತೀ ಹೆಚ್ಚು ದೇವಾಲಯಗಳಿರುವುದು ತಮಿಳುನಾಡಿನಲ್ಲಿಯೇ. ನಟ ನಟಿಯರಿಗೆ ದೇವಾಲಯ ಕಟ್ಟುವ ಸಂಪ್ರದಾಯ ಆರಂಭವಾಗಿದ್ದೇ ತಮಿಳುನಾಡಿನಿಂದ ಎನ್ನಬಹುದು. ಆದ್ರೆ ಇಲ್ಲೊಂದು ದೇವಾಲಯವೀಗ ಸಿಕ್ಕಾಪಟ್ಟೆ ಸುದ್ದಿ ಮಾಡುತ್ತಿದೆ. ಜೊತೆಗೆ ವೈರಲ್ ಸಹ ಆಗಿದೆ.

ಏಲಿಯನ್‌ಗಳ ಕುರಿತು ಭಾರತದ ಇತಿಹಾಸದಲ್ಲಿಯೂ ಉಲ್ಲೇಖಗಳಿರುವುದನ್ನು ನೋಡಬಹುದು. ಅದರೆ ತಮಿಳುನಾಡಿನಲ್ಲಿ ಏಲಿಯನ್‌ಗೆ ದೇವಾಲಯವೇ ಇದೆ. ಹೌದು ಇದೊಂದು ಅಚ್ಚರಿಯ ವಿಚಾರವಾಗಿದ್ದು, ಏಲಿಯನ್‌ಗೆ ಉಲ್ಲಿ ಪೂಜೆ ನೆರವೇರಲಿದೆ. ಹಾಗಾದ್ರೆ ಈ ದೇವಾಲಯ ಎಲ್ಲಿದೆ? ಯಾವ ಕಾರಣಕ್ಕೆ ನಿರ್ಮಿಸಲಾಗಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ತಮಿಳುನಾಡಿನ ಸೇಲಂನಲ್ಲಿ ಲೋಕನಾಥನ್ ಎಂಬಾತ ಈ ಏಲಿಯನ್ ದೇವಾಲಯ ನಿರ್ಮಿಸಿದ್ದಾರೆ. ಮಲ್ಲಮೂಪ್ಪಂಪಟ್ಟಿಯ ರಾಮಗೌಂಡನೂರಿನ ನಿವಾಸಿ ಲೋಕನಾಥನ್ ಎಂಬ ವ್ಯಕ್ತಿ ಇದನ್ನು ನಿರ್ಮಿಸಿದ್ದಾನೆ ಎಂದು ತಿಳಿದುಬಂದಿದೆ. ಅವರು ಶ್ರೀ ಶಿವ ಕೈಲಾಸ ದೇವಾಲಯವನ್ನು ನಿರ್ಮಿಸಲು ಬಯಸಿದ್ದರು, ಅದಕ್ಕಾಗಿ ಅವರು ಎರಡು ವರ್ಷಗಳ ಹಿಂದೆ ನಿರ್ಮಾಣವನ್ನು ಪ್ರಾರಂಭಿಸಿದರು.
ಆದರೆ ಲಿಂಗ ಕೆತ್ತೆನೆ ಕಾರ್ಯ ಇನ್ನೂ ಪ್ರಕ್ರಿಯೆಯಲ್ಲಿದೆ, ಅದನ್ನು ನೆಲ ಅಂತಸ್ತಿನಲ್ಲಿ ಸ್ಥಾಪಿಸಲಾಗುತ್ತದೆ ಎಂದು ಹೇಳಿದ್ದಾರೆ. ಆದರೆ ಏಲಿಯನ್ ಮುಖ ಹೋಲುವ ಪ್ರತಿಮೆಯನ್ನೂ ಸಹ ಸ್ಥಾಪಿಸಲಾಗಿದೆ. ನೆಲಮಾಳಿಗೆಯಲ್ಲಿ ಬೇರೆ ಬೇರೆ ದೇವರುಗಳಿವೆ. ಶಿವ, ಪಾರ್ವತಿ, ಮುರುಗನ್, ಕಾಳಿಮಾತೆಗೆ ಪೂಜೆ ಸಲ್ಲಿಸಲಾಗುತ್ತದೆ.
ಲೋಕನಾಥನ್ 10 ನೇ ತರಗತಿಯವರೆಗೆ ಮಾತ್ರ ಓದಿದ್ದಾರೆ. ಕೆಲವು ವರ್ಷಗಳ ಹಿಂದೆ ಅವರು ಕೆಫೆ ನಡೆಸುತ್ತಿದ್ದರು ಮತ್ತು ಕಾಲು ನೋವಿನಿಂದ ಬಳಲುತ್ತಿದ್ದರು. ಇದರ ಪರಿಹಾರ ಕೇಳಲು ಸಿದ್ಧರ ಭಾಗ್ಯ ಎಂಬ ವ್ಯಕ್ತಿಯ ಭೇಟಿ ಮಾಡಲು ಹೋದಾಗ ಅವರ ಶಿಷ್ಯರಾದರು, ಅವರ ಮಾತುಗಳಿಂದ ಪ್ರೇರಿತರಾಗಿ ತಾವೂ ಸಹ ಸಿದ್ದರ ಭಾಗ್ಯ ಎಂಬ ಹೆಸರು ಇಟ್ಟುಕೊಂಡರು. ಅವರ ಆಸೆಯಂತೆ ದೇವಾಲಯ ಕಟ್ಟಲು ಮುಂದಾದರಂತೆ.
ತಾಳೆ ಗರಿಯ ಹಸ್ತಪ್ರತಿಗಳ ಮೇಲೆ ಸಿದ್ಧರು ಅನ್ಯಗ್ರಹ ಜೀವಿಗಳ ಬಗ್ಗೆ ಬರೆದಿದ್ದಾರೆ ಮತ್ತು ಭವಿಷ್ಯದಲ್ಲಿ ಎಲ್ಲರೂ ಅನ್ಯಲೋಕದವರನ್ನು ಪೂಜಿಸುತ್ತಾರೆ ಎಂದು ಲೋಕನಾಥನ್ ಹೇಳಿದ್ದಾರೆ. ಜೊತೆಗೆ ಈ ದೇವಾಲಯ ಕಟ್ಟಲು ಅವರು ಯಾವುದೇ ದೇಣಿಗೆ ಪಡೆಯುತ್ತಿಲ್ಲ ಬದಲಾಗಿದೆ ಈ ಸಿದ್ಧರ ಭಾಗ್ಯ ಅವರ ಶಿಷ್ಯರ ಸಹಾಯ ಪಡೆದಿದ್ದಾರೆ. ಈ ದೇವಸ್ಥಾನವನ್ನು ಕಟ್ಟಲು ಅನ್ಯಗ್ರಹ ಜೀವಿಗಳ ಅನುಮತಿಯನ್ನೂ ಪಡೆದಿದ್ದೇನೆ ಎನ್ನುತ್ತಾರೆ ಲೋಗನಾಥನ್. ನಾನೇ ಅವರ ಜೊತೆ ಮಾತನಾಡಿದ್ದೇನೆ ಎಂದೂ ಇವರು ಹೇಳುತ್ತಾರೆ.
ಇಷ್ಟರಲ್ಲೇ ದೇವಾಲಯ ಲೋಕಾರ್ಪಣೆ ಮಾಡಲಿದ್ದಾರಂತೆ. ಅಲ್ಲದೆ ಇಲ್ಲಿ ನಿತ್ಯವೂ ಏಲಿಯನ್‌ಗೆ ಪೂಜೆ ಸಲ್ಲಿಸಲಾಗುತ್ತದೆ. ನಾನು ಈ ಏಲಿಯನ್‌ಗೆ ಪೂಜೆ ಮಾಡುತ್ತೇನೆ. ನಾನು ಈ ಅನ್ಯಗ್ರಹ ಜೀವಿಗಳ ನಂಬುತ್ತೇನೆ. ಮುಂದೊಂದು ದಿನ ಅವು ದೇವಾಲಯಕ್ಕೆ ಬರುತ್ತವೆ ಎನ್ನುತ್ತಾರೆ ಲೋಕನಾಥನ್. ಈ ಏಲಿಯನ್‌ಗಳನ್ನು ಶಿವನೇ ಸೃಷ್ಟಿಸಿದನಂತೆ. ಆದರೆ ಸಿನಿಮಾಗಳಲ್ಲಿ ತೋರಿಸಿದಂತೆ ಏಳಿಯನ್‌ಗಳಿಗೆ ಕೋಡುಗಳಿಲ್ಲ. ಅವು ಮನುಷ್ಯರಿಗೆ ಕೆಟ್ಟದು ಮಾಡುವುದಿಲ್ಲ, ಅವರು ಮನುಷ್ಯರಂತೆ ನೋಟದಲ್ಲಿ ಸಾಮಾನ್ಯರು. ಅವರು ಗಂಡು ಮತ್ತು ಹೆಣ್ಣಿನ ರೂಪದಲ್ಲಿ ಇರುವ ಮನುಷ್ಯರಂತೆ. ನಾವೊಂದು ದಿನ ಅವರ ಜಗತ್ತಿಗೆ ಹೋಗಿ ನೆಲೆಸುತ್ತೇವೆ ಎಂದು ಲೋಕನಾಥನ್ ಹೇಳುತ್ತಾರೆ.



Click it and Unblock the Notifications












