Latest Updates
-
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ!
ನೀವೆಲ್ಲೂ ಕೇಳಿರದ ಹಿಂದೂ ದೇವಾನುದೇವತೆಗಳ ಜನ್ಮ ರಹಸ್ಯವಿದು..!
ಭಾರತವೆಂದರೆ ಪುರಾಣ, ಧರ್ಮಗ್ರಂಥಗಳ ಅಗಾರ. ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ಧರ್ಮಗ್ರಂಥಗಳಿವೆ. ಅದರಲ್ಲೂ ಹಿಂದೂ ಧರ್ಮವೆಂದರೆ ಮುಕ್ಕೋಟಿ ದೇವರನ್ನು ನಂಬುವ ಧರ್ಮ. ಧರ್ಮಗ್ರಂಥಗಳಲ್ಲಿ ಉಲ್ಲೇಖವಾಗಿರುವಂತೆ ದೇವರ ಹುಟ್ಟು ಮತ್ತು ಅವರ ಅವತಾರಗಳು ತುಂಬಾ ವಿಶೇಷವಾಗಿರುವಂತಹದ್ದಾಗಿದೆ.
ನಾವು ಪೂಜಿಸುವ ದೇವರಲ್ಲಿ ಕೆಲ ದೇವರುಗಳ ಹುಟ್ಟು ಮತ್ತು ಸಾವಿನ ಕುರಿತು ನಮಗೆ ತಿಳಿದಿರುತ್ತದೆ. ಅದು ಹಿರಿಯರಿಂದಲೋ ಅಥವಾ ನಾವೇ ಎಲ್ಲಿಯಾದರೂ ಓದಿಯೋ ತಿಳಿದಿರುತ್ತೇವೆ ಆದರೆ ಇನ್ನೂ ಕೆಲವು ದೇವರಗಳ ಜನ್ಮ ರಹಸ್ಯ ನಮಗೆ ತಿಳಿಯುವುದೇ ಇಲ್ಲ.

ಹಿಂದೂ ಪುರಾಣಗಳಲ್ಲಿ ದೇವರುಗಳ ಹುಟ್ಟು ಮತ್ತು ಅವರಿಗೆ ಇರುವ ಮಹತ್ವವನ್ನು ತಿಳಿಸಲಾಗಿದೆ. ಯಾವುದೇ ದೇವ, ದೇವತೆಗಳು ನೈಸರ್ಗಿಕ ವಿಧಾನದಿಂದ ಜನ್ಮ ತಾಳಿಲ್ಲ. ದೇವರುಗಳ ಸಾಮಾನ್ಯ ಜನ್ಮವನ್ನು ತಿಳಿದುಕೊಳ್ಳುವುದು ತುಂಬಾ ಕಷ್ಟ. ಪವಾಡ ರೀತಿಯಲ್ಲಿ ಜನ್ಮ ತಳೆದಿರುವ ಕೆಲವೊಂದು ಹಿಂದೂ ದೇವರುಗಳು ಮತ್ತು ಪಾತ್ರಗಳ ಪಟ್ಟಿಯನ್ನು ಇಲ್ಲಿ ಕೊಡಲಾಗಿದೆ.
ಸೀತೆ
ಸೀತೆಗೆ ಇರುವ ಮತ್ತೊಂದು ಹೆಸರೆಂದರೆ ಜನಕನ ಪುತ್ರಿ ಮತ್ತು ರಾಮ(ವಿಷ್ಣುವಿನ ಅವತಾರ) ದೇವರ ಪತ್ನಿ. ಆಕೆಯ ಜಾನಕಿ. ಆಕೆಯ ಜನ್ಮದ ಬಗ್ಗೆ ಇರುವ ಪುರಾಣ ಕಥೆಯೆಂದರೆ ಆಕೆ ಭೂಮಿತಾಯಿಯ ಮಗಳು. ಭೂಮಿ ಬಾಯ್ಬಿಟ್ಟಾಗ ಆಕೆ ಭೂಮಿಯಿಂದ ಜನ್ಮ ತಾಳಿದವಳು. ಭೂತಾಯಿಯ ಗರ್ಭದಿಂದ ಸೀತಾ ಮಾತೆ ಜನ್ಮ ತಾಳಿದ್ದಾಳೆ. ಆಕೆಯ ಸಾವು ಕೂಡ ಪವಾಡವೇ ಸರಿ. ಭೂಯಿಯು ಬಾಯ್ಬಿಟ್ಟು ಆಕೆಯನ್ನು ನುಂಗಿ ಮುಂದೆ ಆಗುವ ಅವಮಾನದಿಂದ ಕಾಪಾಡಿತ್ತು ಎನ್ನುವ ಪುರಾಣ ಕಥೆಯಿದೆ.
ನೂರು ಕೌರವರು
ಮಹಾಭಾರತದ ಕಥೆಯಲ್ಲಿ ಬರುವಂತೆ ಹಸ್ತಿನಾಪುರದ ರಾಣಿ ಗಾಂಧಾರಿಗೆ ಮಕ್ಕಳಾಗುವುದಿಲ್ಲ. ಋಷಿಗಳು ನೀಡಿದ ಆಶೀರ್ವಾದದಂತೆ ಆಕೆ ಮಣ್ಣಿನ ಮಡಕೆಯಲ್ಲಿ ಮಕ್ಕಳನ್ನು ಪಡೆಯಬಹುದು ಎಂದು ತಿಳಿಸಿದರು. 101 ಮಡಕೆಗಳನ್ನು ಭ್ರೂಣಗಳನ್ನು ಇಡಲಾಯಿತು. ಒಂದು ದಿನ ಈ 101 ಮಡಕೆಗಳು ಒಡೆದು ನೂರು ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣು ಜನಿಸಿದಳು. ಇದು ಹಿಂದೂ ಪುರಾಣದಲ್ಲಿರುವ ಅತ್ಯಂತ ಪವಾಡದ ಜನನ ಮಾತ್ರವಲ್ಲದೆ, ಇಂದು ನಡೆಯುತ್ತಿರುವ ಪ್ರಣಾಳ ಶಿಶುವಿನ ಪ್ರಯೋಗಕ್ಕೂ ಇದು ಪ್ರೇರಣೆಯಾಗಿದೆ.
ಬಲರಾಮ
ಕೃಷ್ಣನ ಹಿರಿಯ ಸೋದರ ಬಲರಾಮ ದೇವಕಿ ಮತ್ತು ವಸುದೇವನ ಏಳನೇ ಪುತ್ರನಾಗಿ ಜೈಲಿನಲ್ಲಿ ಜನ್ಮ ತಾಳಿದ್ದ. ದೇವಕಿಯ ಎಂಟನೇ ಪುತ್ರನಿಂದ ತನಗೆ ಸಾವು ಎಂದು ತಿಳಿದಿದ್ದ ಆಕೆಯ ಸೋದರ ಕಂಸ ಪ್ರತಿಯೊಂದು ಮಗುವನ್ನು ಕೊಲ್ಲಲು ನಿರ್ಧರಿಸಿದ್ದ. ಬಲರಾಮನೂ ಕಂಸನ ಕೈಯಲ್ಲಿ ಸಾವನ್ನು ಕಾಣಬೇಕಿತ್ತು. ಆದರೆ ವಸುದೇವನ ಇನ್ನೊಬ್ಬಳು ಪತ್ನಿ ರೋಹಿಣಿಯ ಗರ್ಭಕ್ಕೆ ಮಗುವನ್ನು ವರ್ಗಾಯಿಸಲಾಗಿತ್ತು. ಆಕೆ ಬಲರಾಮನಿಗೆ ಜನ್ಮ ನೀಡಿದಳು.
ದ್ರೌಪದಿ
ಸೀತೆ ಭೂಮಿಯಿಂದ ಜನ್ಮ ತಳೆದಿದ್ದರೆ, ದ್ರೌಪದಿಯು ಅಗ್ನಿಯಿಂದ ಜನ್ಮ ಪಡೆದವಳು. ದ್ರೌಪದಿ ಮತ್ತು ದೃಷ್ಟದ್ಯುಮ್ನ ಯಜ್ನದಿಂದ ಜನ್ಮ ಪಡೆದವರು. ರಾಜ ದ್ರುಪದ ಮಾಡಿದ ಯಜ್ಞಕ್ಕೆ ಫಲವಾಗಿ ಇವರಿಬ್ಬರ ಜನನವಾಯಿತು.
ಅಯ್ಯಪ್ಪ ದೇವರ ಜನ್ಮ
ಮಹಿಷಿ ಎನ್ನುವ ರಾಕ್ಷಸಿ ಘೋರ ತಪಸ್ಸನ್ನು ಮಾಡಿ ಬ್ರಹ್ಮ ದೇವರನ್ನು ಒಲಿಸಿಕೊಳ್ಳುತ್ತಾಳೆ. ಆಕೆ ಅಮರವಾಗಿರಬೇಕೆಂದು ವರ ಕೇಳುತ್ತಾಳೆ. ಆದರೆ ಬ್ರಹ್ಮ ದೇವರು ಇದನ್ನು ನಿರಾಕರಿಸುತ್ತಾರೆ. ಮಹಿಳೆಯಿಂದ ಜನಿಸಿದ ಯಾವ ಪುರುಷನಿಂದಲೂ ತನಗೆ ಸಾವು ಬರಬಾರದು ಎಂದು ಆಕೆ ವರ ಕೇಳುತ್ತಾಳೆ. ಬ್ರಹ್ಮ ದೇವರು ಇದಕ್ಕೆ ತಥಾಸ್ತು ಎನ್ನುತ್ತಾರೆ. ಪ್ರತಿಯೊಬ್ಬರು ಮಹಿಳೆಯಿಂದಲೇ ಜನ್ಮ ತಳೆಯಬೇಕಾಗುತ್ತದೆ ಎನ್ನುವುದನ್ನು ತಿಳಿದಿದ್ದ ಮಹಿಷಿ ಅತೀವ ಸಂತೋಷಗೊಂಡು ಮೂರು ಲೋಕದಲ್ಲಿ ದುರಂಕಾರದಿಂದ ಮೆರೆಯುತ್ತಾಳೆ.
ಮಹಿಷಿಯನ್ನು ತಡೆಯಲು ವಿಷ್ಣು ಮೋಹಿನಿಯ ಅವತಾರ ತಾಳುತ್ತಾನೆ ಮತ್ತು ಶಿವನೊಂದಿಗೆ ಸಮಾಗಮವಾಗುತ್ತದೆ. ಆಗ ಜನಿಸುವ ಮಗುವೇ ಅಯ್ಯಪ್ಪ ದೇವರು. ಆತ ಮಹಿಳೆಯ ಹೊಟ್ಟೆಯಲ್ಲಿ ಹುಟ್ಟಿದ ಮಗುವಲ್ಲ. ಇವೆಲ್ಲವೂ ದೇವರು ಮತ್ತು ಅವರ ಅವತಾರಗಳ ಬಗ್ಗೆ ಇರುವ ಕೆಲವೊಂದು ಪುರಾಣ ಕಥೆಗಳು.



Click it and Unblock the Notifications
