Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ತಮ್ಮ ಬಗ್ಗೆ ಮಾತ್ರ ಯೋಚನೆ ಮಾಡುವವರಂತೆ!
ಮನುಷ್ಯನಿಗೆ ಸ್ವಾರ್ಥ ಇರಬೇಕು. ಕೆಲವೊಂದು ವಿಚಾರಗಳಲ್ಲಿ ನಾವು ಸ್ವಾರ್ಥಿಗಳಾಗದಿದ್ದರೆ ಮುಂದೊಂದು ದಿನ ಅದರಿಂದ ನಾವು ಮಹಾ ಅಪಾಯವನ್ನು ಎದುರಿಸಬೇಕಾಗಬಹುದು. ಆದರೆ ಕೆಲವು ವ್ಯಕ್ತಿಗಳಲ್ಲಿ ಆ ಸ್ವಾರ್ಥ ಹೆಚ್ಚಾಗೇ ಇರುತ್ತದೆ. ಅಂತಹ ವ್ಯಕ್ತಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಏನು ಮಾಡೋದಕ್ಕೂ ಹಿಂಜರಿಯೋದಿಲ್ಲ. ಈ ರಾಶಿಯವರಲ್ಲಿ ಕೂಡ ಸ್ವಾರ್ಥವೇ ತುಂಬಿಕೊಂಡಿರುತ್ತಂತೆ. ಅವರು ತಮ್ಮ ಬಗ್ಗೆ ಮಾತ್ರ ಯೋಚಿಸುತ್ತಾರೆ. ಹಾಗಾದ್ರೆ ಆ ರಾಶಿಯವರು ಯಾರು ಎಂಬುವುದನ್ನು ತಿಳಿಯೋಣ.
ಕನ್ಯಾ ರಾಶಿ
ಕನ್ಯಾ ರಾಶಿಯವರು ಏನು ಕೆಲಸ ಮಾಡಬೇಕಾದರೂ ತುಂಬಾ ಜಾಣ್ಮೆಯಿಂದ ಮಾಡುತ್ತಾರಂತೆ. ಅವರು ಮಾಡೋ ಕೆಲಸದಲ್ಲಿ ಯಾವುದೇ ನ್ಯೂನ್ಯತೆ ಹಾಗೂ ತಪ್ಪು ಆಗದಂತೆ ಎಚ್ಚರಿಕೆ ವಹಿಸುತ್ತಾರೆ. ಬೇರೆಯವರನ್ನು ಟೀಕಿಸುವುದರಲ್ಲಿ ಇವರು ನಿಸ್ಸೀಮರು. ಆದರೆ ಅವರನ್ನು ಯಾರಾದರೂ ಟೀಕಿಸಿದರೆ ಕೇಳೋದಕ್ಕೆ ಸಿದ್ಧರಿರೋದಿಲ್ಲ. ಈ ರೀತಿ ನಡವಳಿಕೆ ಇರಬಾರದು. ಕನ್ಯಾ ರಾಶಿಯವರಿಗೆ ನೀಡುವ ಸಲಹೆ ಏನೆಂದರೆ ಬೇರೆಯವರು ನಿಮ್ಮನ್ನು ಟೀಕಿಸಿದರೆ, ಸಲಹೆ ಕೊಟ್ಟರೆ ಅದನ್ನು ತೆಗೆದುಕೊಳ್ಳುವ ಗುಣ ನಿಮ್ಮಲ್ಲಿರಲಿ.

ಸಿಂಹ ರಾಶಿ
ಜೀವನದಲ್ಲಿ ಯಾವುದೇ ಅಡೆತಡೆಗಳನ್ನು ಬೇಕಾದರೂ ಸಿಂಹ ರಾಶಿಯವರು ಎದುರಿಸುತ್ತಾರೆ. ಸಿಂಹ ರಾಶಿಯವರು ಏನೇ ಬಯಸಿದರೂ ಅದು ಅವರಿಗೆ ಸಿಗುತ್ತದೆ. ಇದೇ ಕಾರಣಕ್ಕೆ ಅವರು ಸ್ವಾರ್ಥಿಗಳಾಗೋದು. ನಮ್ಮಲ್ಲಿ ಎಲ್ಲಾ ಇದ್ದಾಗ ಅದನ್ನು ಬೇರೆಯವರಿಗೆ ಕೊಡಬೇಕಲ್ಲ ಅನ್ನೋ ಆಸೆ ಹೆಚ್ಚಾಗುತ್ತದೆ. ಸಿಂಹ ರಾಶಿಯವರಿಗೆ ನೀಡುವ ಸಲಹೆ ಏನೆಂದರೆ ನಿಮ್ಮ ಆಪ್ತರು, ನಿಮ್ಮ ಸ್ನೇಹಿತರು ನಿಮ್ಮ ಜೊತೆಗೆ ಇರಬೇಕೆಂದರೆ ಕೆಲವೊಂದು ತ್ಯಾಗಗಳನ್ನು ನೀವು ಮಾಡಲೇಬೇಕು.
ಮಿಥುನ ರಾಶಿ
ಮಿಥುನ ರಾಶಿಯವರಿಗೆ ಬಹುಮುಖ ಇರುತ್ತದೆ. ಅವರು ತಮ್ಮ ಜಾಣ್ಮೆಯಿಂದ ಯಾವ ಪರಿಸ್ಥಿತಿಗೆ ಬೇಕಾದರೂ ಹೊಂದಿಕೊಳ್ಳುತ್ತಾರೆ. ಅಲ್ಲಿ ಆ ಪರಿಸ್ಥಿತಿಗೆ ತಕ್ಕ ಹಾಗೆ ನಟಿಸುತ್ತಾರೆ. ಅಲ್ಲಿ ತಮ್ಮ ತಮಗೆ ಬೇಕಾದುದನ್ನು ಅವರು ಪಡೆದುಕೊಳ್ಳುತ್ತಾರೆ. ಮಿಥುನ ರಾಶೀಯವರು ಒಂದು ವಿಚಾರ ತಿಳಿದುಕೊಳ್ಳಬೇಕು. ಅದೇನೆಂದರೆ ಯಾರು ನಿಮ್ಮ ಕಾಳಜಿಯನ್ನು ಮಾಡೋದಿಲ್ಲ. ನಿಮಗೆ ನೀವೇ ಸಂತೋಷವಾಗಿರಲು ಕಲಿಯಬೇಕು. ನೀವು ಸ್ವಾರ್ಥಿಗಳಂತಿದ್ದರೆ ಪ್ರಪಂಚ ಕೂಡ ಹಾಗೇ ಇರುತ್ತದೆ.
ವೃಷಭ ರಾಶಿ
ವೃಷಭ ರಾಶಿಯವರು ಅವರ ಭದ್ರತೆಯನ್ನು ಕಾಯ್ದುಕೊಳ್ಳಲು ಸ್ವಾರ್ಥಿಗಳಾಗುತ್ತಾರೆ. ಇವರಲ್ಲಿ ದುರಾಸೆ ಕೂಡ ಹೆಚ್ಚಾಗಿರುತ್ತದೆ. ಇವರು ಬೇರೆಯವರ ಮುಂದೆ ಭಾವನಾತ್ಮಕವಾಗಿರುವಂತೆ ನಟಿಸುತ್ತಾರೆ. ವೃಷಭ ರಾಶಿಯವರಿಗೆ ಕೊಡುವ ಸಲಹೆ ಏನೆಂದರೆ ದುರಾಸೆಯಿಂದ ಹೆಚ್ಚಿನದ್ದಕ್ಕಾಗಿ ಹಂಬಲಿಸಬೇಡಿ. ಆದಷ್ಟು ಸಂಬಂಧಗಳನ್ನು ಉಳಿಸಿಕೊಳ್ಳೋದಕ್ಕೆ ಪ್ರಯತ್ನಿಸಿ. ಮಾತು ಆಕ್ರಮಣಾಕಾರಿಯಾಗಬಾರದು. ಆದಷ್ಟು ಶಾಂತವಾಗಿರಿ.
ಮೇಷ ರಾಶಿ
ಮೇಷ ರಾಶಿಯವರಿಗೆ ತಮಗೆ ಏನು ಬೇಕು ಹಾಗೂ ಅದನ್ನು ಹೇಗೆ ಪಡೆಯಬೇಕು ಅನ್ನೋದು ಚೆನ್ನಾಗಿ ಗೊತ್ತಿರುತ್ತದೆ. ಈ ರಾಶಿಯವರು ನಾನೇ ಮೊದಲು ಎಂದು ಯಾವಾಗಲೂ ಯೋಚಿಸುತ್ತಾರೆ. ಬೇರೆಯವರ ಬಗ್ಗೆ ಕೊಂಚವು ಯೋಚನೆ ಮಾಡೋದಿಲ್ಲ. ತನಗೆ ಬೇಕಾದುದ್ದನ್ನು ಪಡೆಯಲು ಸಾಯುವವರೆಗೂ ಬೇಕಾದರೂ ಹೋರಾಡುತ್ತಾರೆ. ವೃಷಭ ರಾಶಿಯವರಿಗೆ ನೀಡುವ ಸಲಹೆ ಏನೆಂದರೆ ತ್ಯಾಗ ಮಾಡೋದು ಜೀವನದ ಒಂದು ಸಣ್ಣ ಭಾಗವಷ್ಟೇ, ಕೆಲವೊಂದು ಸಲ ನಾವು ಬೇರೆಯವರ ಸಂತೋಷವನ್ನು ನೋಡುವುದು ಕೂಡ ತುಂಬಾನೇ ಮುಖ್ಯವಾಗುತ್ತದೆ.
ಈ ಮೇಲೆ ನಾವು ಹೇಳಿದ ವಿಚಾರಗಳು ಈ ರಾಶಿಯ ಎಲ್ಲರಿಗೂ ಅನ್ವಯವಾಗುತ್ತೆ ಅಂತ ಹೇಳೋದಿಕ್ಕಾಗೋದಿಲ್ಲ. ಆದರೆ ಹೆಚ್ಚಿನವರು ಇದೇ ಗುಣವನ್ನು ಹೊಂದಿರುತ್ತಾರೆ.



Click it and Unblock the Notifications
