Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಆರ್ಥಿಕ ಸ್ವಾವಲಂಬನೆಯಿಂದ ಹೆಣ್ಣಿನ ಬದುಕು ಬದಲಾಗುವುದೇ? ಈ ಮಹಿಳೆಯರ ಕತೆಯೇ ಅದಕ್ಕೆ ಸಾಕ್ಷಿ
ಮಹಿಳೆಗೆ ಹಣದ ಸ್ವಾತಂತ್ರ್ಯ ಎಷ್ಟು ಮುಖ್ಯ? ಗಂಡ ಕೈ ತುಂಬಾ ದುಡಿಯುತ್ತಿರುವಾಗ ಹೆಣ್ಣಿಗೆ ದುಡಿಯುವ ಅವಶ್ಯಕತೆ ಇದೆಯೇ? ಈ ಉದ್ಯೋಗ ಎಂಬುವುದು ಹೆಣ್ಣಿನಲ್ಲಿ ಬದುಕಿನಲ್ಲಿ ಬಹು ಮುಖ್ಯವೇ ಎಂಬೆಲ್ಲಾ ಪ್ರಶ್ನೆಗಳನ್ನು ಒಂದಿಷ್ಟು ಹೆಣ್ಮಕ್ಕಳ ಬಳಿ ಕೇಳಿದೆವು ಅವರು ಹೇಳಿದ ಉತ್ತರವೂ ಹೆಣ್ಣಿಗೆ ದುಡಿಮೆವೆಂಬುವುದು ಎಷ್ಟು ಮುಖ್ಯ ಎಂಬುವುದನ್ನು ಹೇಳುತ್ತದೆ, ಅವರಲ್ಲಿ ಕೆಲವರು ಹೇಳಿದ ಅವರ ಬದುಕಿನ ಕತೆಗಳು ಬದುಕಿನಲ್ಲಿ ಹೆಣ್ಣಿಗೆ ದುಡಿಮೆ ಎಂಬುವುದುಎಷ್ಟು ಮುಖ್ಯ ಎಂಬುವುದನ್ನು ಹೇಳುತ್ತದೆ

ನಾವು ಮಾತನಾಡಿಸಿದ ಆ ಮಹಿಳೆ ಹೆಸರು ಸವಿತಾ, ಗೃಹಿಣಿಯಾಗಿದ್ದರು (ಈಗ ದುಡಿಯುವ ಅನಿವಾರ್ಯತೆ ಎದುರಾಗಿದೆ) ಅವರ ಕತೆ ಅವರೇ ಹೇಳಿದಂತೆ ' ನಾನು 18ರ ಪ್ರಾಯದಲ್ಲಿ ಮದುವೆಯಾದೆ, ಗಂಡ ಬಸ್‌ನಲ್ಲಿ ಕೆಲಸ ಮಾಡುತ್ತಿದ್ದ, ದುಡಿದು ತರುತ್ತಿದ್ದ ನಾವು ಬರುವ ಅಲ್ಪ ಆದಾಯದಲ್ಲಿ ಚೆನ್ನಾಗಿ ಇದ್ವಿ, ಇಬ್ಬರು ಮಕ್ಕಳಾಯ್ತು, ಸಂಸಾರ ಚೆನ್ನಾಗಿ ನಡೆಯುತ್ತಿತ್ತು, ಬೆಂಗಳೂರಿನಲ್ಲಿ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ವಾಸವಿದ್ದೆವು, ಮಕ್ಕಳು ಕೂಡ ಶಾಲೆಗೆ ಹೋಗುತ್ತಿದ್ದರು. ಮಕ್ಕಳ ಭವಿಷ್ಯದ ಬಗ್ಗೆ ನಮಗೆ ಚಿಂತೆ ಕಾಡುತ್ತಿತ್ತು, ಅವರು ನಾನಿರುವಾಗ ನಿನಗೆ ಚಿಂತೆ ಏಕೆ, ಏನಾದರು ದಾರಿ ಮಾಡುತ್ತೇನೆ, ನಾನು ಗಟ್ಟಿಮುಟ್ಟಾಗಿ ಇರುವಷ್ಟು ದಿನ ನಿಮ್ಮನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದರು, ಅದರಂತೆ ನೋಡಿಕೊಳ್ಳುತ್ತಿದ್ದರು, ಆದರೆ ಆ ವಿಧಿ ನನ್ನ ಬದುಕಿನ ದಿಕ್ಕನ್ನೇ ಬದಲಾಯಿಸಿತು, ಗಂಡನಿಗೆ ಜ್ವರ ಬಂತು ಆಸ್ಪತ್ರೆಗೆ ತೋರಿಸಿದ್ವಿ, ಜ್ವರ ಕಡಿಮೆಯಾಗಲಿಲ್ಲ, ನಂತರ ಡೆಂಗ್ಯೂ ಅಂತ ಗೊತ್ತಾಯ್ತು, ಆದರೆ ಚಿಕಿತ್ಸೆ ಫಲಿಸಲಿಲ್ಲ, ಸಾವನ್ನಪ್ಪಿದರು. ಅವರ ಸಾವಿನ ಬಳಿಕ ನನಗೆ ದಿಕ್ಕೇ ತೋಚಲಿಲ್ಲ,ಬಾಡಿಗೆ ತುಂಬುವ ಶಕ್ತಿ ಇರಲಿಲ್ಲ, ಮಕ್ಕಳನ್ನು ಒಂದು ವರ್ಷ ಶಾಲೆ ಹೋದರೂ ಪರ್ವಾಗಿಲ್ಲ ಅಂತ ಶಾಲೆ ಬಿಡಿಸಿದೆ, ಊರಿಗೆ ಬಂದೆ, ಆದರೆ ಊರಿಗೆ ಬಂದಾಗ ಮನೆಯವರು ಮೊದಲು ತೋರಿಸಿದ ಸಿಂಪತಿ ಕಡಿಮೆಯಾಯ್ತು, ಅವರಿಗೆ ನಾನು ಭಾರವಾದಂತೆ ವರ್ತಿಸಲಾರಂಭಿಸಿದರು, ಆವಾಗ ತೀರ್ಮಾನಿಸಿದೆ ಇಲ್ಲ ನಾನು ದುಡಿಯಲು ಪ್ರಾರಂಭಿಸಬೇಕು ಅಂತ, ಈಗ ಕೂಲಿ ಮಾಡ್ತಾ ನನ್ನ ಮಕ್ಕಳನ್ನು ಸಾಕ್ತಾ ಇದ್ದೀನಿ, ಯಾವಾಗ ದುಡಿಯಲು ಪ್ರಾರಂಭ ಮಾಡಿದ್ನೋ ನನ್ನಲ್ಲಿ ಒಂದು ರೀತಿಯ ಭರವಸೆ, ಆತ್ಮವಿಶ್ವಾಸ ಮೂಡಿತು ಎಂದು ಕಿರು ನಗೆ ಬೀರಿದರು.
ಮತ್ತೊಬದಬ ಮಹಿಳೆ ಹೆಸರು ವಂದಿತಾ, ಅವರು ತಮ್ಮ ಬದುಕಿನ ಕತೆ ತೆರೆದಿಟ್ಟದ್ದು ಹೀಗೆ 'ಅಪ್ಪ-ಅಮ್ಮ ನನ್ನ ತುಂಬಾ ಓದಿಸಿದರು, ಓದು ಮುಗಿದ ಮೇಲೆ ಕೆಲಸಕ್ಕೆ ಸೇರಿದ್ದೆ, ಸಂಬಳವೂ ಚೆನ್ನಾಗಿತ್ತು, ಮನೆಯಲ್ಲಿ ಒಂದೊಳ್ಳೆಯ ಸಂಬಂಧ ಬಂದಿದೆ, ನಿನಗೆ ಅವನು ಇಷ್ಟವಾದರೆ ಮದುವೆ ಮಾಡುವ ಅಂದರು, ರಂಜಿತ್ ಮನೆಗೆ ಬಂದಾಗ ನನಗೆ ತುಂಬಾ ಇಷ್ಟವಾದರು, ಖಾಸಗಿ ಕಂಪನಿಯಲ್ಲಿ ಒಳ್ಳೆಯ ಹುದ್ದೆ, ಅವರು ಮದುವೆಯಾದ ಮೇಲೆ ನೀನು ದುಡಿಯಲೇಬೇಕು ಎಂಬ ಒತ್ತಾಯವಿಲ್ಲ, ನಿನ್ನಷ್ಟದಂತೆ ಮಾಡಬಹುದು ಎಂದರು, ನನಗೂ ಮದುವೆಯ ಬಳಿಕ ಈ ಕೆಲಸ ಅಂತೆಲ್ಲಾ ಓಡಾಡುವ ಜಂಜಾಟ ಬೇಡ ಅಂತ ಕೆಲಸಕ್ಕೆ ಹೋಗುವ ಪ್ರಯತ್ನ ಮಾಡಲೇಇಲ್ಲ. ನಮ್ಮ ಬದುಕಿಗೆ ಏನೂ ತೊಂದರೆ ಇರಲಿಲ್ಲ, ನಾನು ಗರ್ಭಿಣಿಯಾದೆ, ನನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವುದು ಟ್ವಿನ್ಸ್ ಅಂತ ಗೊತ್ತಾದಾಗ ಖುಷಿ ಪಟ್ವಿ, ಮಕ್ಕಳಾಯ್ತು ನನ್ನ ಬದುಕಿನ ಅತ್ಯಂತ ಸುಂದರ ದಿನಗಳವು, ಒಂದು ದಿನ ನನಗೆ ಅವರ ಮೊಬೈಲ್‌ನಿಂದ ಎಮರ್ಜೆನ್ಸಿ ಮೆಸೇಜ್ ಬಂತು, ತಕ್ಷಣವೇ ಕರೆ ಮಾಡಿದಾಗ ಅತ್ತ ಕಡೆ ಯಾರೋ ರಿಸೀವ್ ಮಾಡಿ ಈ ವ್ಯಕ್ತಿಗೆ ಆಕ್ಸಿಡೆಂಟ್ ಆಗಿದೆ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗ್ತಾ ಇದ್ದೀವಿ ಅಂದ್ರು, ನಿಂತ ನೆಲ ಕುಸಿದ ಅನುಭವ, ಎಷ್ಟೋ ಬೇಗ ಬದುಕು ಬದಲಾಯ್ತು? ಮಕ್ಕಳಿಬ್ಬರ ಭವಿಷ್ಯದ ಬಗ್ಗೆ ಸಾಕಷ್ಟು ಕನಸು ಕಂಡಿದ್ವಿ, ಅವರು ನನ್ನ ಮತ್ತು ಮಕ್ಕಳನ್ನು ನಡು ನೀರಿನಲ್ಲಿ ಬಿಟ್ಟು ಹೋಗಲಿಲ್ಲ, ಅವರ ಇನ್ಸ್ಯೂರೆನ್ಸ್ ಹಣ ಮಕ್ಕಳ ಭವಿಷ್ಯಕ್ಕೆ ನೆರವಾಗುವಷ್ಟು ಬಂತು, ಆದರೆ ನನಗೆ ನಾವಿಬ್ಬರು ನಮ್ಮ ಮಕ್ಕಳ ಬಗ್ಗೆ ಕಂಡ ಕನಸು ನನಸಾಗಿಸಬೇಕು ಅನಿಸಿತು, ಹಾಗಾಗಿ ಮತ್ತೆ ಕೆಲಸಕ್ಕೆ ಸೇರಿದೆ, ರಂಜಿತ್ ನಮ್ಮೊಂದಿಗಿಲ್ಲ, ಆದರೆ ಅವನ ಕನಸುಗಳು ಸದಾ ನನ್ನೊಂದಿಗೆ ಜೀವಂತವಾಗಿದೆ, ಆ ಕನಸು ನನಸು ಮಾಡುತ್ತೇನೆ ಎಂಬ ಭರವಸೆ ಇದೆ.



Click it and Unblock the Notifications
