Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವರ್ಷದ ಮೊದಲ ದಿನ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ...!
ಹೊಸ ವರ್ಷದ ಆಗಮನಕ್ಕೆ ಇನ್ನೇನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಅದ್ದೂರಿಯಾಗಿ ಹೊಸ ವರ್ಷ ಸ್ವಾಗತಿಸಲು ಎಲ್ಲರೂ ಕಾಯುತ್ತಿದ್ದಾರೆ. ಹೊಸ ವರ್ಷದಿಂದ ಏನೆಲ್ಲಾ ಕೆಲಸ ಮಾಡಬೇಕು, ಏನು ಮಾಡಿದ್ರೆ ಒಳಿತು ಎಲ್ಲವನ್ನೂ ಯೋಚಿಸಿರುತ್ತಾರೆ. ಆದ್ರೆ ಹೊಸ ವರ್ಷದ ಮೊದಲ ದಿನ ಏನು ಮಾಡಬಾರದು ಗೊತ್ತಾ? ಆ ದಿನ ಯಾವೆಲ್ಲಾ ವಿಚಾರಗಳಿಂದ ದೂರವಿದ್ದರೆ ಒಳಿತಾಗಲಿದೆ ಎಂಬ ಕುರಿತು ಇಲ್ಲಿದೆ ಮಾಹಿತಿ.
ಹಲವಾರು ಮಂದಿ ಹೊಸ ವರ್ಷವನ್ನು ನಿರ್ಲಕ್ಷ ಮಾಡುತ್ತಾರೆ. ಎಲ್ಲ ದಿನವೂ ಒಂದೆ ಎಂಬ ಭಾವನೆಯಲ್ಲಿರುತ್ತಾರೆ. ಆದ್ರೆ ಹೊಸ ವರ್ಷ ಎಂದಿನಂತೆ ಇರುವುದಿಲ್ಲ ಎಂಬುದು ಜ್ಯೋತಿಷ್ಯ ಶಾಸ್ತ್ರ ವಿವರಿಸುತ್ತದೆ. ಅಲ್ಲದೆ ಈ ದಿನ ಏನು ಮಾಡಬಾರದು ಏನು ಮಾಡಬೇಕು ಎಂಬುದನ್ನು ತಿಳಿಸುತ್ತದೆ. ಹಾಗಾದ್ರೆ ಜ್ಯೋತಿಷ್ಯದ ಪ್ರಕಾರ ವರ್ಷದ ಮೊದಲ ದಿನ ಏನು ಮಾಡಬೇಕು ಏನು ಮಾಡಬಾರದೆಂಬುದನ್ನು ನೋಡಿ..

ಮೊದಲ ದಿನ ದೇವಾಲಯ ಭೇಟಿ ಉತ್ತಮ
ಜ್ಯೋತಿಷ್ಯದಲ್ಲಿ ವರ್ಷದ ಮೊದಲ ದಿನ ಗಣೇಶನ ದೇವಾಲಯ ಭೇಟಿ ಮಾಡಲು ಸೂಚಿಸಲಾಗುತ್ತದೆ. ವಿಘ್ನ ನಿವಾರಕನ ಆರಾಧನೆಯಿಂದ ವರ್ಷವೆಲ್ಲಾ ವಿಘ್ನಗಳ ನಿವಾರಣೆ ಮಾಡುವ ಶಕ್ತಿ ಬೇಡಲು ದೇವಸ್ಥಾನಕ್ಕೆ ಭೇಟಿ ನೀಡಿ. ಈ ದಿನ ಆದಷ್ಟು ಧಾರ್ಮಿಕ ಆಚರಣೆಗಳಲ್ಲಿ ಭಾಗಿಯಾಗುವುದು ಉತ್ತಮವಂತೆ. ನಿಮ್ಮ ನಂಬಿಕೆಗೆ ಅರ್ಹ ಸ್ಥಳಗಳಿಗೆ ಭೇಟಿ ನೀಡುವುದು ಹಾಗೂ ಆ ದಿನದ ಬಹುಕಾಲ ಆ ಸಮಯದಲ್ಲಿ ಕಳೆಯುವುದರಿಂದ ವರ್ಷವೆಲ್ಲಾ ಧನಾತ್ಮಕ ಚಿಂತನೆ ನಿಮ್ಮಲ್ಲಿ ಉಳಿಯಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರದ ತಿಳುವಳಿಯಾಗಿದೆ.
ಹೊಸ ವಸ್ತುಗಳ ಮನೆಗೆ ತರಬೇಡಿ
ಬಹಳಷ್ಟು ಮಂದಿ ಹೊಸ ವರ್ಷದಂದೇ ಹೊಸ ವಸ್ತುಗಳನ್ನು ಮನೆಗೆ ತರುತ್ತಾರೆ. ಆದರೆ ಈ ರೀತಿ ಮಾಡುವುದು ತಪ್ಪು ಎಂದು ಶಾಸ್ತ್ರ ಹೇಳುತ್ತದೆ. ಅದರಲ್ಲಿ ಪ್ಲಾಸ್ಟಿಕ್, ಲೆದರ್‌ನಿಂದ ಮಾಡಲಾದ ವಸ್ತುಗಳನ್ನು ಈ ದಿನ ಮನೆಯೊಳಗೆ ತರುವುದು ಅಶುಭದ ಸಂಕೇತವಂತೆ. ಇದರ ಬದಲು ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳುವುದು ಉತ್ತಮವಂತೆ.
ತಡವಾಗಿ ಏಳುವುದು
ವರ್ಷದ ಆರಂಭಿಕ ದಿನದಂದೆ ತೀರಾ ತಡವಾಗಿ ಏಳುವುದು ಅಶುಭದ ಸಂಕೇತವಾಗಿರಲಿದೆ. ಜೊತೆಗೆ ಹೊಸ ವರ್ಷದಂದು ನಿತ್ಯ ಕೆಲಸಕ್ಕೆ ರಜೆ ಹಾಕುವುದು ಇಡೀ ದಿನ ಆಲಸಿಯಾಗಿ ಮಲಗಿರುವುದು ಅಶುಭಕ್ಕೆ ದಾರಿ ಮಾಡಿಕೊಟ್ಟಂತೆ.
ಪ್ರಾಣಿ ವಧೆ ಮತ್ತು ಮಾಂಸ ಸೇವನೆ
ವರ್ಷದ ಆರಂಭದ ದಿನದಲ್ಲಿ ಪ್ರಾಣಿ ವಧೆ ಮಾಡಿದರೆ ಪಾಪ ಸುತ್ತಿಕೊಳ್ಳಲಿದೆ ಎಂಬುದು ಶಾಸ್ತ್ರದ ತಿಳುವಳಿಯಾಗಿದೆ. ಮತ್ತು ಈ ದಿನ ಬಹಳಷ್ಟು ಮಂದಿ ಮಾಂಸ ಸೇವನೆ ಹಾಗೂ ಮದ್ಯಪಾನ ಮಾಡುತ್ತಾರೆ ಇದು ಸಹ ಅಶುಭದ ಸಂಕೇತವಾಗಿದೆ. ಇದಕ್ಕಿಂತ ಹೊಸ ವರ್ಷದ ದಿನದಂದು ಸಿಹಿ ತಿಂಡಿ ಹಂಚಿ, ಹೊಸ ಬಟ್ಟೆ ತೊಟ್ಟು, ಸಾತ್ವಿಕ ಆಹಾರ ಸೇವಿಸುವಂತೆ ಪ್ರೇರೇಪಿಸುತ್ತದೆ.
ಮನೆ ಸ್ವಚ್ಛಗೊಳಿಸುವುದು
ಹೊಸ ವರ್ಷದಂದೇ ಮನೆಯನ್ನು ತೊಳೆದು ಸ್ವಚ್ಛ ಮಾಡುವುದು ಸಹ ಅಶುಭವಂತೆ. ಇದಕ್ಕಿಂತ ವರ್ಷದ ಆರಂಭಕ್ಕೂ ಒಂದು ದಿನ ಮುಂಚಿತವಾಗಿ ಅಥವಾ ವರ್ಷದ ಆರಂಭಗೊಂಡು ಒಂದೆರಡು ದಿನದ ಬಳಿಕ ಮನೆಯನ್ನು ಸ್ವಚ್ಛಗೊಳಿಸಿದರೆ ಉತ್ತಮ.
ಗಾಜಿನ ವಸ್ತು ಒಡೆಯುವುದು
ಮನೆಯಲ್ಲಿ ಅಥವಾ ನೀವು ಹೊರಗಿದ್ದ ಸಂದರ್ಭದಲ್ಲೂ ಗಾಜಿನ ವಸ್ತುಗಳನ್ನು ಪಡೆಯುವ ಕೆಲಸ ಮಾಡಬೇಡಿ. ಇದರಿಂದ ಇಡೀ ವರ್ಷ ಅಶುಭ ಕಾಡಲಿದೆಯಂತೆ. ಗಾಜಿನ ವಸ್ತು ಮನೆಯಲ್ಲಿದ್ದರೆ ಅಥವಾ ನೀವು ಅದರ ಬಳಕೆ ಮಾಡುತ್ತಿದ್ದರೆ ಎಚ್ಚರವಹಿಸುವುದು ಉತ್ತಮ. ಈ ದಿನ ಗಾಜಿನ ವಸ್ತು ಪಡೆದರೆ ಅದೃಷ್ಟ ನಮ್ಮಿಂದ ದೂರಾಗಲಿದೆ ಎಂಬುದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.
ಆಹಾರ ವ್ಯರ್ಥ ಮಾಡಬೇಡಿ
ಹೊಸ ವರ್ಷದಂದು ನೀವು ಅತೀಯಾಗಿ ಆಹಾರ ವ್ಯರ್ಥ ಮಾಡಬೇಡಿ. ಇಲ್ಲದೆ ತಟ್ಟೆಯಲ್ಲಿ ಆಹಾರವನ್ನು ಬಿಟ್ಟು ಏಳಬೇಡಿ ಇದು ಅಶುಭವಂತೆ. ಇಂದು ಆಹಾರ ವ್ಯರ್ಥ ಮಾಡುವುದರಿಂದ ಸಂಪತ್ತಿನ್ನು ನಿರ್ಲಕ್ಷಿಸಿದಂತೆ. ಇದು ಸಂಕಷ್ಟ ತರಬಹುದು ಎಂದು ಹೇಳಲಾಗಿದೆ.



Click it and Unblock the Notifications
