Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಕನ್ನಡ ಕಲಿತ ಮೇಲೆ ಬೆಂಗಳೂರಿನ ಬದುಕು ಹೇಗೆ ಬದಲಾಯ್ತು ಎಂದು ತಮ್ಮ ಅನುಭವ ಬಿಚ್ಚಿಟ್ಟ ಹೊರ ರಾಜ್ಯದ ಅಣ್ಣ ತಮ್ಮಾಸ್
ನವೆಂಬರ್ 1 ಕನ್ನಡ ರಾಜ್ಯೋತ್ಸವ, ಕನ್ನಡ ಭಾಷೆಯ ಮೇಲಿನ ಅಕ್ಕರೆ 365 ದಿನವೂ ಇರಲಿ... ಈ ದಿನದ ವಿಶೇಷವಾಗಿ ನಾವು ಹೊರ ರಾಜ್ಯದಿಂದ ಬೆಂಗಳೂರಿಗೆ ಬಂದು ಈಗ ಕನ್ನಡವನ್ನು ಕನ್ನಡಿಗರಂತೆಯೇ ಮಾತನಾಡುವ ಕೆಲ ವ್ಯಕ್ತಿಗ ಬಗ್ಗೆ ಹೇಳುತ್ತಿದ್ದೇವೆ, ಇಂಥವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗಬೇಕು.
ಕನ್ನಡ ಕಲಿಯಲ್ಲ, ಕನ್ನಡವನ್ನು ಏಕೆ ಕಲಿಯಬೇಕು ಎಂದು ನಮ್ಮ ನೆಲಕ್ಕೆ ಬಂದು ಬದುಕು ನೀಡಿದ ಬೆಂಗಳೂರನ್ನೇ ದೂರುವ ಕೃತಘ್ನರ ನಡುವೆ ಇಂಥವರು ತುಂಬಾನೇ ಆಪ್ತರಾಗುತ್ತಾರೆ. ನಮ್ಮೆಲ್ಲರ ಸ್ನೇಹಿತರ ಬಳಗದಲ್ಲಿ ಕನ್ನಡವನ್ನು ಕಲಿಯಲು ಬಯಸುವವರು ಇದ್ದೇ ಇರ್ತಾರೆ, ನಾವು ಅವರ ಜೊತೆ ಕನ್ನಡದಲ್ಲಿ ಮಾತನಾಡಲಾರಂಭಿಸಿದರೆ ಅವರಲ್ಲಿ ಹಿಂಜರಿಕೆ ದೂರಾಗಿ ಒಂದೇ ವರ್ಷದಲ್ಲಿ ಇವರು ಕನ್ನಡವರು ಎಂದನಿಸುವಷ್ಟು ಮಟ್ಟಿಗೆ ಕನ್ನಡ ಮಾತನಾಡಿಸಲಾರಂಭಿಸುತ್ತಾರೆ.

ಆಟೋ ಡ್ರೈವರ್‌ಗಳ ಜೊತೆ, ತರಕಾರಿ ಮಾರುವವರ ಜೊತೆ ಕನ್ನಡ ಮಾತನಾಡಿ ಕನ್ನಡ ಕಲಿತ ಮುಂಬೈ ಹುಡುಗ
ಇವರ ಹೆಸರು ಸುದರ್ಶನ್ ಕುಕೈನ್, ಹುಟ್ಟಿ ಬೆಳೆದಿದ್ದು ಮುಂಬೈ ಎಂಬ ಮಹಾ ನಗರದಲ್ಲಿ, ಮಾತೃ ಭಾಷೆ ತುಳು, ಹಿಂದಿ, ಮರಾಠಿ, ಇಂಗ್ಲಿಷ್ ಭಾಷೆ ಮಾತನಾಡುತ್ತಿದ್ದ ಹುಡುಗ 2011ರಲ್ಲಿ ಬೆಂಗಳೂರಿಗೆ ಬರ್ತಾರೆ, ಬೆಂಗಳೂರಿನಲ್ಲಿ ಅವರಿಗೆ ಕನ್ನಡ ಕಲಿಯುವ ಯಾವ ಅವಶ್ಯಕತೆಯೂ ಬರಲಿಲ್ಲ, ಎಲ್ಲಿ ಹೋದರೂ ಹಿಂದೆ ಮಾತನಾಡುವವರು ಸಿಗುವಾಗ ಇವರಿಗೆ ಭಾಷೆಯ ತೊಂದರೆಯಾಗಲೇ ಇಲ್ಲ, ಆದರೆ ಇವರಿಗೆ ನಾನು ಬೆಂಗಳೂರಿಗೆ ಬಂದ ಕನ್ನಡ ಕಲಿಯಲೇಬೇಕು ಎಂದನಿಸಲಾರಂಭಿಸುತ್ತದೆ.
ಆಫೀಸ್‌ನಲ್ಲಿ, ಸ್ನೇಹಿತರ ಜೊತೆ ಹಿಂದಿ, ಇಂಗ್ಲಿಷ್‌ನಲ್ಲಿ ಮಾತುಕತೆ ಹೀಗಾಗಿ ಅಲ್ಲಿ ಕನ್ನಡ ಕಲಿಯಲು ಸಾಧಯವಾಗಿಲ್ಲ, ಅವರ ಕನ್ನಡದ ಗುರುಗಳಾದವರು ಆಟೋ ಡ್ರೈವರ್‌ಗಳು, ತರಕಾರಿ ಮಾರುವವರು. ಇವರು ಆಟೋದಲ್ಲಿ ಆಫೀಸ್‌ಗೆ ಸಂಚರಿಸುವಾಗ ಬೇಕು ಅಂತಲೇ ಆಟೋದವರ ಜೊತೆ ಕನ್ನಡ ಮಾತನಾಡಲು ಯತ್ನಿಸುತ್ತಿದ್ದರು, ತರಕಾರಿ ಖರೀದಿಸಲಲು ಹೋಗುವಾಗ ರೇಟ್ ಎಷ್ಟು? ಕಡಿಮೆ ಮಾಡಿ ಅಂತೆಲ್ಲಾ ಒಂದೊಂದೇ ಶಬ್ದಗಳನ್ನು ಬಳಸಲಾರಂಭಿಸಿದರು. ಮೊದ ಮೊದಲು ಹಿಂದಿ, ಇಂಗ್ಲಿಷ್ ಮಿಶ್ರಿತ ಕನ್ನಡದಲ್ಲಿ ಮಾತನಾಡಲಾರಂಭಿಸಿದರು, ಇವರು ಕನ್ನಡ ಕಲಿಯಲು ಆಸಕ್ತಿ ತೋರುವುದನ್ನು ನೋಡಿ ಕೆಲ ಸ್ನೇಹಿತರು ಕೂಡ ಕನ್ನಡದಲ್ಲಿಯೇ ಮಾತನಾಡಲಾರಂಭಿಸಿದರು. ಹೀಗೆ ಅವರಿಗೆ ಕನ್ನಡ ಭಾಷೆ ಮೇಲೆ ಹಿಡಿತ ಬರಲಾರಂಭಿಸಿತು. ಅವರು ಹೇಳುತ್ತಾರೆ 'ಯಾವಾಗ ಕನ್ನಡ ಭಾಷೆ ಮಾತನಾಡಲಾರಂಭಿಸಿದೆನೋ ನನಗೆ ನಾನು ಹೊರಗಿನವನು ಎಂಬ ಭಾವನೆ ದೂರಾಗಿ, ನಾನು ಇಲ್ಲಿಯವನು ಎಂದನಿಸಲಾರಂಭಿಸಿತು' ಈಗ ಬೆಂಗಳೂರಿನಲ್ಲಿಯೇ ಫ್ಲ್ಯಾಟ್ ಖರೀದಿಸಿ, ಕರ್ನಾಟಕದ ಹುಡುಗಿಯನ್ನು ಮದುವೆಯಾಗಿ ಕರ್ನಾಟಕದ ಆಚಾರಗಳನ್ನು, ಸಂಪ್ರದಾಯಗಳನ್ನು ಪಾಲಿಸುತ್ತಾ ಕನ್ನಡಿಗನೇ ಆಗಿ ಹೋಗಿದ್ದಾರೆ.
ಮೂಲ ಉತ್ತರ ಭಾರತವಾದರೂ ನಾನು ಬೆಂಗಳೂರಿನವ ಎಂಬ ಹೆಮ್ಮೆ ಅಂತಾರೆ ಕಾರ್ತಿಕ್ ರಹೇಜಾ
ಇವರು ಪೋಷಕರು ಉತ್ತರ ಭಾರತದವರು, ಆದರೆ ಇವರು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ, ಶಾಲೆಯಲ್ಲಿ ಇರುವಾಗಲೇ ಕನ್ನಡ ಕಲಿಯಲಾರಂಭಿಸಿದರು ಅಲ್ಲದೆ ಕನ್ನಡ ಭಾಷೆ ಮಾತನಾಡುವ ಸ್ನೇಹಿತರಿಂದಾಗಿ ಕನ್ನಡ ಭಾಚೆ ಷೆನ್ನಾಗಿ ಮಾತನಾಡಲಾರಂಭಿಸಿದರು. ಅವರಿಗೆ ನೀವು ಎಲ್ಲಿಯವರು ಎಂದರೆ ಬೆಂಗಳೂರು ಎಂದು ಹೇಳುವಷ್ಟರಮಟ್ಟಿಗೆ ಕನ್ನಡದವರಾಗಿದ್ದಾರೆ.
ನಾನು ಬಂದಿರುವುದು ಆಂಧ್ರ ಪ್ರದೇಶದಿಂದ ವೆಂಕಟ್ ತಾರಾಕ್
ನಾನು ಬೆಂಗಳೂರಿಗೆ 2017ರಲ್ಲಿ ಬಂದೆ, ಇಲ್ಲಿ ಬಂದ ಮೇಲೆ ನನಗೆ ಕನ್ನಡ ಕಲಿಯಬೇಕೆನಿಸಿತು, ಜನರ ಜೊತೆ ಪ್ರತಿದಿನ ಮಾತನಾಡುತ್ತಾ ಕನ್ನಡ ಕಲಿಯಲಾರಂಭಿಸಿದೆ. ಕನ್ನಡ, ತೆಲುಗು ಸ್ವಲ್ಪ ಒಂದೇ ರೀತಿ ಇರುವುದರಿಂದ ಓದಲು ಕಷ್ಟವಾಗಲಿಲ್ಲ, ಆದರೆ ಕೆಲವೊಂದು ಕಷ್ಟ ಶಬ್ದಗಳನ್ನು ಹೇಳುವಾಗ ಜನ ನನ್ನ ನೋಡಿ ನಗುತ್ತಿದ್ದರು. ಕನ್ನಡ ಕಲಿತ ಬಳಿಕ ಫುಡ್ ಡೆಲಿವರಿ ಬಾಯ್ ಬಳಿ, ನೆರಹೊರೆಯವರ ಬಳಿ ಕನ್ನಡ ಮಾತನಾಡಲಾರಂಭಿಸಿದೆ, ಈಗಲೂ ನಾನು ಮಾತನಾಡುವಾಗ ನನ್ನ ಉಚ್ಛಾರಣೆಯ ಶೈಲಿ ನೋಡಿ ಸ್ನೇಹಿತರು, ಜನರು ನಗುತ್ತಾರೆ, ಆದರೂ ಕನ್ನಡವನ್ನು ಖುಷಿ ಖುಷಿಯಿಂದ ಮಾತನಾಡುತ್ತೇನೆ.
ಕನ್ನಡ ಕಲಿತಿರುವುದರಿಂದ ಬೆಂಗಳೂರು ನನಗೆ ನನ್ನ ಮನೆಯಲ್ಲಿರುವ ಅನುಭವ ನೀಡಿದೆ ಎಂದು ಹೇಳಿದ್ದಾರೆ.
ಹೀಗೆ ಕನ್ನಡ ಕಲಿತ ಅನೇಕ ಹೊರ ರಾಜ್ಯದವರು ನಮ್ಮ ನಡುವೆ ಇದ್ದಾರೆ, ಆದರೆ ಕೆಲವರು ಮಾತ್ರ ನಾನ್ಯಾಕೆ ಕಲಿಯಬೇಕು ಎಂಬ ಧಿಮಾಕಿನಿಂದ ಬೆಂಗಳೂರಿಗೆ ಬಂದು 10ವರ್ಷ ಕಳೆದರೂ ಒಂದು ಶಬ್ದವೂ ಮಾತನಾಡಲ್ಲ. ಅಂಥ ಸೊಕ್ಕಿನ ವ್ಯಕ್ತಿಗಳನ್ನ ನಿರ್ಲಕ್ಷ್ಯ ಮಾಡೋಣ, ಕನ್ನಡ ಕಲಿಯಲು ಆಸಕ್ತಿ ತೋರುವವರಿಗೆ ಅವರು ತಪ್ಪು-ತಪ್ಪು ಕನ್ನಡ ಮಾತನಬಾಡುವಾಗ ನಗಾಡದೆ ಅವರಿಗೆ ಕನ್ನಡ ಕಲಿಯಲು ಹುರಿದುಂಬಿಸೋಣ...



Click it and Unblock the Notifications











