Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ರಿಷಬ್ ಒಬ್ಬರೇ ಅಲ್ಲ ಬಾಲಿವುಡ್ ವಿರುದ್ಧ ಗುಡುಗಿದ್ದ ಸೌತ್ ಸೂಪರ್‌ಸ್ಟಾರ್ಸ್ ಇವರು..!
ಕಾಂತಾರ ಸಿನಿಮಾ ಅತ್ಯುತ್ತಮ ನಟನೆಗೆ ನಟ ರಿಷಬ್ ಶೆಟ್ಟಿ ಅವರಿಗೆ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಆದ್ರೆ ಅವರು ನೀಡಿರುವ ಒಂದು ಹೇಳಿಕೆಯಿಂದ ಇಡೀ ಬಾಲಿವುಡ್ ಮಂದಿ ಅವರ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ಅವರು ನೀಡಿದ್ದ ಸಂದರ್ಶನವೊಂದರಲ್ಲಿ ಹಿಂದಿ ಸಿನಿಮಾ ಇಂಡ್ರಸ್ಟ್ರಿ ಕುರಿತಂತೆ ಅವರು ನೀಡಿದ್ದ ಹೇಳಿಕೆ ಭಾರೀ ವೈರಲ್ ಆಗಿದ್ದು, ವಿರೋಧವೂ ಕೇಳಿಬಂದಿದೆ.
ಮೆಟ್ರೋ ಸಾಗ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದ ಭಾರತೀಯ ಚಿತ್ರಗಳಲ್ಲಿ ಅದರಲ್ಲೂ ಬಾಲಿವುಡ್ ಚಿತ್ರಗಳಲ್ಲಿ ಭಾರತವನ್ನು ಕೆಟ್ಟದಾಗಿ, ಕೇವಲವಾಗಿ ತೋರಿಸಿ, ಹೊರ ದೇಶಗಳಲ್ಲಿ ತೋರಿಸಿ ಅವಾರ್ಡ್ ಗೆದ್ದುಕೊಂಡು ಬಂದಿರುವುದನ್ನು ನಾನು ಗಮನಿಸಿದ್ದೇನೆ ಎಂದಿದ್ದರು. ಈ ಹೇಳಿಕೆ ವೈರಲ್ ಆದ ಬಳಿಕ ಬಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.

ರಿಷಬ್ ಶೆಟ್ಟಿ ಹೇಳಿಕೆ ಖಂಡಿಸಿರುವ ಮಂದಿ ಅವರ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರ ಪ್ರಶಸ್ತಿ ಪಡೆದ ಬಳಿಕ ರಿಷಬ್ ಶೆಟ್ಟಿ ವರ್ತನೆ ಬದಲಾಗಿದೆ. ಇದು ಒಳ್ಳೆಯ ನಡತೆಯಲ್ಲ ಎಂದು ಸಿಟ್ಟು ಹೊರಹಾಕುತ್ತಿದ್ದಾರೆ. ಆದ್ರೆ ರಿಷಬ್ ಶೆಟ್ಟಿ ಮಾತ್ರವಲ್ಲ ಇದಕ್ಕೂ ಮೊದಲು ದಕ್ಷಿಣ ಭಾರತದ ಹಲವು ನಟರು ಬಾಲಿವುಡ್ ಮಂದಿಯ ಬೆವರಿಳಿಸಿದ್ದಾರೆ. ಕೆಲವರು ನೇರವಾಗಿ ಬಾಲಿವುಡ್ ವಿರುದ್ಧ ಹೇಳಿಕೆ ನೀಡಿ ಸುದ್ದಿಯಾಗಿದ್ದರು. ಹಾಗಾದ್ರೆ ಬಾಲಿವುಡ್ ವಿರುದ್ಧ ಹೇಳಿಕೆ ನೀಡಿದ್ದ ದಕ್ಷಿಣ ಭಾರತದ ಸಿನಿಮಾ ಮಂದಿ ಯಾರು?
ಎಸ್ ಎಸ್ ರಾಜಮೌಳಿ
ಎಸ್ಎಸ್ ರಾಜಮೌಳಿ ಬಾಹುಬಲಿ ಯಶಸ್ಸಿನ ನಂತರ ಬಾಲಿವುಡ್‌ನಲ್ಲೂ ಮನೆ ಮಾತಾಗಿದ್ದರು. ಆದ್ರೆ ಬಾಹುಬಲಿ 2 ಬಿಡುಗಡೆಯ ಬಳಿಕ ಅವರ ಒಂದು ಸಂದರ್ಶನದಲ್ಲಿ ನಟ ಪ್ರಭಾಸ್ ಅವರನ್ನು ಹೊಗಳುವಾಗ ಬಾಲಿವುಡ್ ನಟ ಹೃತಿಕ್ ರೋಷನ್ ವಿರುದ್ಧ ಹೇಳಿಕೆ ನೀಡಿದ್ದರು. ಪ್ರಭಾಸ್ ಮುಂದೆ ಬಾಲಿವುಡ್‌ನ ಹೃತಿಕ್ ರೋಷನ್ ಏನು ಅಲ್ಲ ಎಂದಿದ್ದರು. ಈ ಹೇಳಿಕೆ ಭಾರೀ ಸಂಚಲನಕ್ಕೆ ಕಾರಣವಾಗಿತ್ತು. ಬಳಕ ಅವರು ಈ ಹೇಳಿಕೆಗೆ ಸ್ಪಷ್ಟನೆ ನೀಡಿದ್ದರು. ನಾನು ಬೇರೊಬ್ಬ ನಟನನ್ನು ನೋಯಿಸಲು ಈ ಮಾತು ಹೇಳಿಲ್ಲ ಎಂದಿದ್ದರು.
ಮಹೇಶ್ ಬಾಬು
ತೆಲುಗು ಚಿತ್ರರಂಗದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟ ಎನಿಸಿರುವ ಅವರು, ಭಾರತದಾದ್ಯಂತ ತಮ್ಮ ಅಭಿಮಾನಿಗಳ ಹೊಂದಿದ್ದಾರೆ. ಆದರೆ ಬಾಲಿವುಡ್ ಮಂದಿ ಒಮ್ಮೆ ಸುದ್ದಿಗೋಷ್ಟಿಯ ಸಮಯದಲ್ಲಿ ನೀವು ಬಾಲಿವುಡ್‌ನಲ್ಲಿ ಸಿನಿಮಾ ಮಾಡುತ್ತೀರಾ ಎಂದು ಕೇಳಿದ್ದರು. ಈ ಮಾತಿಗೆ ಉತ್ತರಿಸಿದ ನಟ, 'ನಾನು ದುರಹಂಕಾರಿ ಎಂದು ನನಗೆ ತಿಳಿದಿಲ್ಲ, ಆದರೆ ನನಗೆ ಬಾಲಿವುಡ್‌ನಿಂದ ಸಾಕಷ್ಟು ಆಫರ್‌ಗಳು ಬಂದಿವೆ. ಅವರು ನನ್ನನ್ನು ನಿಭಾಯಸುತ್ತಾರೆ ಎಂದು ನಾನು ಭಾವಿಸುವುದಿಲ್ಲ' ಎಂದಿದ್ದರು. ಈ ಹೇಳಿಕೆ ಸಿನಿ ಪ್ರಿಯರಿಗೆ ಶಾಕ್ ನೀಡಿತ್ತು. ಭಾರೀ ವಿವಾದವೂ ಹುಟ್ಟಿಕೊಂಡಿತ್ತು.
ಕಿಚ್ಚ ಸುದೀಪ್
ನಟ ಕಿಚ್ಚ ಸುದೀಪ್ ಹಿಂದಿ ಸಿನಿಮಾಗಳಲ್ಲೂ ನಟಿಸಿದ್ದಾರೆ. ಅಮಿತಾಬ್ ಬಚ್ಚನ್ ಜೊತೆಯೂ ನಟಿಸಿ ಸೈ ಎನಿಸಿಕೊಂಡವರು. ಆದ್ರೆ ಕನ್ನಡದ ವಿಚಾರವಾಗಿ ವೇದಿಕೆ ಮೇಲೆ ಅವರು ಆಡಿದ್ದ ಮಾತಿನಿಂದ ಬಾಲಿವುಡ್ ಮಂದಿ ಸಿಟ್ಟಿಗೆದ್ದಿದ್ದರು. ವಿಕ್ರಾಂತ್ ರೋಣ ಸಿನಿಮಾ ಪ್ರಮೋಷನ್ ವೇಳೆ ಅವರು, ಹಿಂದಿ ನಮ್ಮ ರಾಷ್ಟ್ರ ಭಾಷೆಯಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಮಾತಿಗೆ ಕೆರಳಿದ ಬಾಲಿವುಡ್ ಮಂದಿ ಸಿಟ್ಟಿಗೆದ್ದಿದ್ದರು. ನಟ ಅಜಯ್ ದೇವಗ್‌ನ್ ಟ್ವೀಟ್ ಮಾಡಿ, ಹಿಂದಿ ನಮ್ಮ ಮಾತೃಭಾಷೆ, ರಾಷ್ಟ್ರ ಭಾಷೆಯಾಗಿದೆ, ಮುಂದೆಯೂ ಇರಲಿದೆ ಎಂದು ತಿರುಗೇಟು ನೀಡಿದ್ದರು. ಆದರೆ ಇಷ್ಟಕ್ಕೆ ಸುಮ್ಮನಾಗದ ಕಿಚ್ಚ, ನಾನು ಸಹ ನನ್ನ ಭಾಷೆಯಲ್ಲೇ ಟ್ವೀಟ್ ಮಾಡಿದ್ದರೆ ಹೇಗಾಗುತ್ತಿತ್ತು ಎಂದು ಅಜಯ್ ದೇವಗನ್‌ಗೆ ತಿರುಗೇಟು ನೀಡಿದ್ದರು. ಈ ವಿಚಾರ ಬಾಲಿವುಡ್‌ನಲ್ಲಿ ಕಿಚ್ಚು ಹೊತ್ತಿಸಿತ್ತು.
ನಂದಮೂರಿ ಬಾಲಕೃಷ್ಣ
ತೆಲುಗು ನಟ ಹಾಗೂ ರಾಜಕಾರಣಿ ನಂದಮೂರಿ ಬಾಲಕೃಷ್ಣ ಬಾಲಿವುಡ್ ವಿರುದ್ಧ ಮಾತನಾಡಿ ಸುದ್ದಿಯಾಗಿದ್ರು, ಒಮ್ಮೆ ನನಗೆ ಎ.ಆರ್ ರೆಹಮಾನ್ ಯಾರೆಂದು ಗೊತ್ತಿಲ್ಲ ಆಗಾಗ ಒಂದು ಹಾಡು ಮಾಡಿ, ಆಸ್ಕರ್ ಪಡೆದು ಅವರು ಮಾಯವಾಗಿತ್ತಾರೆ ಎಂದು ಹಾಸ್ಯ ಚಟಾಕಿ ಹಾರಿಸಿದ್ರು, ಈ ಮಾತು ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡಿದ್ದು ಅಲ್ಲದೆ ಭಾರಿ ವಿರೋಧ ಕೇಳಿಬಂದಿತ್ತು.



Click it and Unblock the Notifications

