Latest Updates
-
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ! -
ಬಿಸಿಲಿನ ಬೇಗೆಯಲ್ಲಿ ಮದುವೆ ಸಂಭ್ರಮ: ಅತಿಥಿಗಳ ಆರೋಗ್ಯ ಕಾಪಾಡಲು ಪ್ಲಾನ್ ಬದಲಾಯಿಸುವುದು ಅನಿವಾರ್ಯವೇ? -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಗಾರ್ಡನ್ ಮತ್ತು ಮನೆಯನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಹೀಟ್ವೇವ್ ಎಚ್ಚರಿಕೆ: ಬಿಸಿಲ ಬೇಗೆಯಿಂದ ಬಚಾವಾಗಲು ಈ ಸರಳ ಆಹಾರ ಕ್ರಮಗಳನ್ನು ಮರೆಯದಿರಿ -
ದೆಹಲಿ ಬಿಸಿಲು: ಸುಡುವ ತಾಪಮಾನದಲ್ಲೂ ಸ್ಟೈಲಿಶ್ ಆಗಿ ಕಾಣಲು ವೈರಲ್ ಆಗ್ತಿವೆ ಈ ಸಿಂಪಲ್ ಹ್ಯಾಕ್ಸ್!
ಈ 6 ರಾಶಿಯವರು ಇತರರ ಕಷ್ಟಕ್ಕೆ ಹೆಗಲು ನೀಡುತ್ತಾರೆ!
ಮನುಷ್ಯರನ್ನು ಸ್ವಾರ್ಥಿಗಳು ಅಂತ ಕರೆಯಲಾಗುತ್ತದೆ. ಈ ಜಗತ್ತಿನಲ್ಲಿ ಅತ್ಯಂತ ಸ್ವಾರ್ಥ ಹೊಂದಿರುವ ಪ್ರಾಣಿ ಯಾವುದು ಅಂತ ಕೇಳಿದ್ರೆ ಮನುಷ್ಯ ಅಂತ ಹೇಳಲಾಗುತ್ತದೆ. ಅಂತದ್ರಲ್ಲಿ ಈ ಸ್ವಾರ್ಥಿಗಳ ಮಧ್ಯೆಯೂ ಕೆಲವೇ ಕೆಲವು ಜನ ಉದಾರ ಮನಸ್ಸಿನವರೂ ಇರುತ್ತಾರೆ. ಆ ವ್ಯಕ್ತಿಗಳು ಬೇರೆಯವರಿಗೆ ಸಹಾಯ ಮಾಡೋದಕ್ಕೆ ಬಯಸುತ್ತಾರೆ. ಕಷ್ಟದಲ್ಲಿರುವವರ ಬೆನ್ನಿಗೆ ನಿಲ್ಲುತ್ತಾರೆ. ಈ 6 ರಾಶಿಯವರಿಗೆ ಉದಾರ ಮನಸ್ಸಿದ್ಯಂತೆ. ಅಷ್ಟಕ್ಕೂ ಆ 6 ರಾಶಿಯವರು ಯಾರು ಅನ್ನೋದನ್ನು ತಿಳಿಯೋಣ.

ಸಿಂಹ ರಾಶಿ
ಸಿಂಹ ರಾಶಿಯ ವ್ಯಕ್ತಿಗಳು ಉದಾರ ಸ್ವಭಾವದ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಇವರ ಮನಸ್ಸು ದೊಡ್ಡದು ಹಾಗೂ ನಿಸ್ವಾರ್ಥಕ್ಕೆ ಹೆಸರುವಾಸಿಯಾಗಿದ್ದಾರೆ. ಸಿಂಹ ರಾಶಿಯವರು ಯಾವಾಗಲೂ ತಮ್ಮ ಸಮಯ, ಸಂಪನ್ಮೂಲಗಳು ಮತ್ತು ಪ್ರೀತಿಯನ್ನು ಇತರರೊಂದಿಗೆ ಹಂಚಿಕೊಳ್ಳಲು ಸಿದ್ಧರಿರುತ್ತಾರೆ. ಸಿಂಹ ರಾಶಿಯವರು ತಮ್ಮ ಸುತ್ತ-ಮುತ್ತ ಇರುವ ಪ್ರತಿಯೊಬ್ಬರಿಗೂ ಬೆಲೆ ಕೊಡುವ ಗುಣ ಹೊಂದಿದ್ದಾರೆ.
ಧನು ರಾಶಿ
ಧನು ರಾಶಿಯವರು ಬೇರೆಯವರ ಕಷ್ಟಕ್ಕೆ ಸಹಾನುಭೂತಿಯನ್ನು ತೋರುತ್ತಾರೆ. ಧನು ರಾಶಿಯವರು ಪರೋಪಕಾರಿಗಳು. ಯಾರಿಗಾಗದರೂ ಕಷ್ಟ ಎಂದಾಗ ಇವರ ಮನಸ್ಸು ಮಿಡಿಯುತ್ತದೆ. ಇನ್ನೂ ಇತರರಿಗೆ ಬೆಂಬಲವಾಗಿ ನಿಲ್ಲುವ ಗುಣ ಕೂಡ ಇವರಲ್ಲಿದೆ. ಇನ್ನೂ ಇತರರೊಂದಿಗೆ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಮತ್ತು ಅದರಲ್ಲಿ ಆನಂದವನ್ನು ಕಂಡುಕೊಳ್ಳುತ್ತಾರೆ.
ಮೀನ ರಾಶಿ
ಮೀನ ರಾಶಿಯವರು ಕೂಡ ಮತ್ತೊಬ್ಬರ ಮೇಲೆ ಸಹಾನುಭೂತಿಯನ್ನು ಹೊಂದಿರುತ್ತಾರೆ. ಇವರು ಸ್ವಾಭಾವಿಕವಾಗಿ ಉದಾರ ವ್ಯಕ್ತಿಗಳು. ಇನ್ನೊಬ್ಬರ ನೋವನ್ನು ಅರ್ಥ ಮಾಡಿಕೊಳ್ಳುವ ಗುಣ ಇವರಲ್ಲಿದೆ. ತಮ್ಮಲ್ಲಿರುವ ವಸ್ತುವನ್ನು ಬೇರೆಯವರೊಂದಿಗೆ ಹಂಚಿಕೊಳ್ಳುತ್ತಾರೆ. ಹಾಗೂ ಬೇರೆಯವರ ಜೀವನ ಉತ್ತಮವಾಗಿ ಬದಲಾಗಲು ಇವರು ಕಾರಣಕರ್ತರಾಗುತ್ತಾರೆ.
ಕರ್ಕಾಟಕ ರಾಶಿ
ಕರ್ಕಾಟಕ ರಾಶಿಯವರೂ ಕೂಡ ಉದಾರಿಗಳು. ಮತ್ತು ಇತರರ ಮೇಲೆ ಅತೀವ ಕಾಳಜಿಯನ್ನು ಹೊಂದಿರುತ್ತಾರೆ. ಯಾರಿಗಾದರೂ ಕಷ್ಟ ಅಂತ ಬಂದಾಗ ಅವರ ಕಷ್ಟವನ್ನು ಆಲಿಸಿ ಅವರಿಗೆ ಹೆಗಲಾಗುತ್ತಾರೆ. ಇನ್ನೂ ತಮ್ಮ ಪ್ರೀತಿ ಪಾತ್ರರು, ಸ್ನೇಹಿತರಿಗೆ ಉದಾರತೆಯನ್ನು ತೋರುತ್ತಾರೆ. ತಮ್ಮ ಸುತ್ತ-ಮುತ್ತ ಇರುವವರನ್ನು ಖುಷಿ ಪಡಿಸಿ, ಇವರು ಕೂಡ ಖುಷಿಯಾಗಿ ಇರುತ್ತಾರೆ.
ಕುಂಭ ರಾಶಿ
ಕುಂಭ ರಾಶಿಯವರು ಮಾನವೀಯತೆ ಹಾಗೂ ಉದಾರತೆಯನ್ನು ಹೊಂದಿದ್ದಾರೆ. ಕುಂಭ ರಾಶಿಯವರು ತಮ್ಮ ಆಲೋಚನೆಗಳು, ನವೀನ ಚಿಂತನೆಯಿಂದ ಮತ್ತೊಬ್ಬರ ಬಾಳಿನಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರೋದಕ್ಕೆ ಇಚ್ಛಿಸುತ್ತಾರೆ. ಇನ್ನೂ ತಮಗೆ ಬೇಕಾದವರಿಗೆ ಈ ರಾಶಿಯವರು ಜ್ಞಾನ ಹಾಗೂ ಸಂಪನ್ಮೂಲಗಳನ್ನು ಧಾರೆ ಎರೆಯಲು ಸಿದ್ಧರಿರುತ್ತಾರೆ.
ವೃಷಭ ರಾಶಿ
ವೃಷಭ ರಾಶಿಯವರು ಕೂಡ ಉದಾರ ಮನಸ್ಸಿನವರು. ಹಾಗೂ ಇವರು ಇತರರ ಕಷ್ಟಕ್ಕೆ ಹೆಗಲಾಗುತ್ತಾರೆ. ವೃಷಭ ರಾಶಿಯವರು ಕಷ್ಟ ಪಟ್ಟು ಕೆಲಸ ಮಾಡುತ್ತಾರೆ. ಹಾಗೂ ತಮ್ಮ ಕೆಲಸದ ಫಲವನ್ನು ಇತರರ ಜೊತೆಗೆ ಹಂಚಿಕೊಳ್ಳುತ್ತಾರೆ. ಈ ರಾಶಿಯವರು ತಮ್ಮ ಪ್ರೀತಿಪಾತ್ರರಿಗೆ ಸುರಕ್ಷಿತ ಮತ್ತು ಸಮೃದ್ಧ ವಾತಾವರಣವನ್ನು ಸೃಷ್ಟಿಸುವುದರಲ್ಲಿ ಸಂತೋಷಪಡುತ್ತಾರೆ. ಇವರು ಉದಾರ ಕಾರ್ಯಗಳನ್ನು ಮಾಡೋದ್ರ ಮೂಲಕ ಹೆಸರುವಾಸಿಯಾಗಿರುತ್ತಾರೆ.



Click it and Unblock the Notifications