Latest Updates
-
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಮಳೆಗಾಲದಲ್ಲಿ ಕರೆಂಟ್ ಹೋದರೆ ಫ್ರಿಜ್ ಆಹಾರ ಹಾಳಾಗುತ್ತಾ? ಸುರಕ್ಷಿತವಾಗಿಡಲು ಇಲ್ಲಿವೆ ಸರಳ ಟಿಪ್ಸ್ -
ಐಟಿಆರ್ ಸಲ್ಲಿಕೆಗೆ ಇನ್ನು 4 ದಿನ ಬಾಕಿ: ಭಾರಿ ದಂಡದಿಂದ ಪಾರಾಗಲು ಈ ಕೆಲಸಗಳನ್ನು ಇಂದೇ ಮಾಡಿ! -
IMD ಮಳೆ ಎಚ್ಚರಿಕೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಈ 12 ನಿಮಿಷದ ವರ್ಕೌಟ್ ಮಾಡಿ ಫಿಟ್ ಆಗಿರಿ! -
ಭಾರತ-ಜಿಂಬಾಬ್ವೆ ಟಿ20 ಪಂದ್ಯದ ಮಜಾ ಸವಿಯುತ್ತಲೇ ಮನೆಯ ಜವಾಬ್ದಾರಿ ನಿಭಾಯಿಸುವುದು ಹೇಗೆ? ಸ್ಮಾರ್ಟ್ ಟಿಪ್ಸ್ ಇಲ್ಲಿದೆ!
ಈ 9 ತಪ್ಪುಗಳನ್ನು ಮಾಡುವವನಿಗೆ ಹಣ ಉಳಿತಾಯ ಮಾಡಲು ಸಾಧ್ಯವಾಗುವುದೇ ಇಲ್ಲ!
ಯಾರು ಸಾಲಗಾರರಾಗುತ್ತಾರೆ? ಯಾರು ಜೀವನದಲ್ಲಿ ಈ ತಪ್ಪುಗಳನ್ನು ಮಾಡುತ್ತಾರೋ ಅವರು ಖಂಡಿತ ಸಾಲದ ಸುಳಿಯಲ್ಲಿ ಸಿಲುಕುತ್ತಾರೆ. ಆದ್ದರಿಂದೀ ಬಗೆಯ ತಪ್ಪುಗಳನ್ನು ಮಾಡುತ್ತಿದ್ದರೆ ಇಂದೇ ತಪ್ಪುಗಳನ್ನು ಸರಿಪಡಿಸಲು ಪ್ರಯತ್ನಿಸಿ.
ಮನುಷ್ಯನನ್ನು ಆರ್ಥಿಕವಾಗಿ ತೊಂದರೆಗೆ ಒಳಗಾಗಿಸುವ ವಿಷಯಗಳು
ಈಗ ಖರೀದಿಸುವ ನಂತರ ಹಣ ಕೊಟ್ಟರಾಯ್ತು: ನಮ್ಮನ್ನು ತೊಂದರೆಗೆ ಸಿಲುಕಿಸುವ ಇಂಥ ಹಲವು ಯೋಜನೆಗಳಿವೆ, ಸ್ಕೀಮ ಅಂತ ಬರ್ತಾರೆ, ಕ್ರೆಡಿಟ್ ಕಾರ್ಡ್ ಇವೆ, ಅವೆಲ್ಲಾ ಈಗ ಖರೀದಿಸುವ ಸ್ವಲ್ಪ-ಸ್ವಲ್ಪ ಕೊಟ್ಟು ಮುಗಿಸುವ ಎಂಬ ಆಲೋಚನೆ ಹುಟ್ಟು ಮಾಡುತ್ತದೆ. ಆದರೆ ನಮ್ಮ ಇಂಥ ಅಭ್ಯಾಸ ನಮ್ಮನ್ನು ಆರ್ಥಿಕ ತೊಂದರೆಗೆ ಸಿಲುಕಿಸುತ್ತದೆ.

ಪ್ರತಿಬಾರಿ ಹೊರಗಡೆಯಿಂದಲೇ ಆಹಾರ ಸೇವಿಸುವುದು:ಕೆಲವರಿಗೆ ಇದು ಅನನಿವಾರ್ಯ ಇನ್ನು ಕೆಲವರಿಗೆ ಮನೆಯಲ್ಲಿ ಅಡುಗೆ ಮಾಡಲು ಸೋಮಾರಿತನ, ವಿಷಯ ಏನೇ ಆಗಿರಲಿ ಈ ಅಭ್ಯಾಸದಿಂದ ನಾವು ತುಂಬಾ ಹಣವನ್ನು ಖರ್ಚು ಮಾಡುತ್ತೇವೆ, ಹಣ ಕೈಯಲ್ಲಿ ನಿಲ್ಲುವುದಿಲ್ಲ, ಇದರಿಂದ ಕೂಡ ಆರ್ಥಿಕ ತೊಂದರೆ ಉಂಟಾಗುವುದು.
ಲಕ್ಷುರಿ ವಸ್ತುಗಳನ್ನು ಸಾಲದಲ್ಲಿ ತೆಗೆದುಕೊಳ್ಳುವುದು:ಲಕ್ಷುರಿ ವಸ್ತುಗಳನ್ನು ಹಣವಿದ್ದಾಗ ಖರೀದಿಸಬೇಕು. ಆದರೆ ಕೆಲವರು ಬೇರೆಯವರಿಗೆ ನಮ್ಮಲ್ಲಿ ಇದೆ ಎಂದು ತೋರಿಸುವ ಸಲುವಾಗಿ ಸಾಲ ಸೋಲ ಮಾಡಿ ಲಕ್ಷುರಿ ವಸ್ತುಗಳನ್ನು ಖರೀದಿಸುತ್ತಾರೆ. ನಾವು ನಮ್ಮ ಬಜೆಟ್ ಮೀರಿ ಲಕ್ಷುರಿ ವಸ್ತುಗಳಿಗೆ ಹಾಕುವುದರಿಂದ ಮನಸ್ಸಿನ ನೆಮ್ಮದಿ ಹಾಳಾಗುವುದು.
ಎಲ್ಲದಕ್ಕೂ ಕ್ರೆಡಿಟ್ ಕಾರ್ಡ್ ಉಜ್ಜುವುದು: ಕ್ರೆಡಿಟ್ ಕಾರ್ಡ್ ಬಳಸದೇ ಇದ್ದರೆ ಜಾಣತನ, ಆದರೆ ಕೆಲವರಿಗೆ ಕ್ರೆಡಿಟ್ ಲಿಮಿಟ್ ಎಷ್ಟಿದೆಯೋ ಅಷ್ಟೂ ಖರೀದಿಸಬೇಕು, ಆದರೆ ಈ ಅಭ್ಯಾಸ ನಮ್ಮನ್ನು ಪ್ರತಿಮಾಸ ಸಾಲಗಾರನ್ನಾಗಿಸುತ್ತದೆ.
ಒಂದೇ ಆದಾಯದ ಮೂಲ
ಮನುಷ್ಯ ಯಾವತ್ತೂ ಒಂದೇ ಆದಾಯವನ್ನು ನಂಬಿಕೊಂಡು ಕೂರಬಾರದು, ಒಂದು ಕೆಲಸವಿದ್ದರೆ ಅದರ ಜೊತೆಗೆ ಹೂಡಿಕೆ ಮುಂತಾದ ಆದಾಯದ ಬಗ್ಗೆ ಕೂಡ ಯೋಚಿಸಬೇಕು, ಹಲವು ಮೂಲಗಳಿಂದ ಹಣ ಬರುವಂತಿರಬೇಕು. ಒಂದೇ ಆದಾಯದ ಮೂಲವನ್ನು ನಂಬಿಕೊಂಡು ಇದ್ದರೆ ಆ ವ್ಯಕ್ತಿ ಕೆಲಸ ಕಳೆದುಕೊಂಡರೆ ಅಥವಾ ಕಾಯಿಲೆ ಬಿದ್ದರೆ, ಮರಣಿಸಿದರೆ ಮನೆಯ ಪರಿಸ್ಥಿತಿ ಶೋಚನೀಯವಾಗುತ್ತದೆ, ಹಾಗಾಗಿ ಒಂದೇ ಆದಾಯದ ಮೂಲ ಮನೆಗೆ ಒಳ್ಳೆಯದಲ್ಲ, ಚಿಕ್ಕ-ಪುಟ್ಟ ಆದಾಯವಾದರೂ ಬೇರೆ ಕಡೆಯಿಂದ ಬರುವಂತಿರಬೇಕು.
ಎಮರ್ಜೆನ್ಸಿ ಫಂಡ್ ಇಲ್ಲದಿರುವುದು
ಇದೇ ಬಹುತೇಕರು ಮಾಡುವ ತಪ್ಪು, ಕೆಲಸ ಹೋದರೂ ಎರಡು ವರ್ಷ ಇರಬಲ್ಲೇ ಎಂದು ಹೇಳುವಷ್ಟು ಹಣ ನಮ್ಮ ಬಳಿ ಉಳಿತಾಯ ಮಾಡಿಡಬೇಕು, ಆವಾಗ ಆಪತ್ತು ಕಾಲದಲ್ಲಿ ಈ ಹಣ ನಮಗೆ ತುಂಬಾನೇ ಸಹಾಯ ಮಾಡುತ್ತದೆ.
ಬೇಗನೆ ಹಣಮಾಡಲು ಜೂಜಾಡುವುದು:
ಆನ್‌ಲೈನ್ ಗೇಮ್ ಆಡಿ ಹಣ ಕಳೆದುಕೊಂಡು ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗುತ್ತದೆ, ಜೂಜಾಟದಿಂದ ಹಣ ಕೆಲವೊಮ್ಮೆ ಬರುತ್ತದೆ, ಆದರೆ ಬಂದ ಹಣ ಉಳಿಯಲ್ಲ, ಅದನ್ನು ಮತ್ತೆ ಜೂಜಿಗೆ ಹಾಕಿ ಕಳೆದುಕೊಳ್ಳುತ್ತಾರೆ, ಹೀಗೆ ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ.
ಹಣವನ್ನು ಹೂಡಿಕೆ ಮಾಡದೆ ಹಾಗೇ ಇಟ್ಟುಕೊಳ್ಳುವುದು
ನಮ್ಮ ಬಳಿ ಒಂದು ಲಕ್ಷ ಹಣವಿದೆ ಅಂದುಕೊಳ್ಳೋಣ, ಈ ಹಣ ಮನೆಯ ಬೀರುವಿನಲ್ಲಿಟ್ಟರೆ ಹೆಚ್ಚಾಗಲ್ಲ, ಅವ್ಯಕತೆ ಇದ್ದಾಗ ಆ ಹಣ ತೆಗೆಯುವುದರಿಂದ ಹಣ ಕಡಿಮೆಯಾಗುತ್ತಾ ಬರುವುದು. ಆದರೆ ಅದೇ ಒಂದು ಲಕ್ಷ ಹಣ ಹೂಡಿಕೆಯಲ್ಲಿ ಹಾಕಿದರೆ ಮತ್ತಷ್ಟು ಹಣ ಗಳಿಸಲು ಸಾಧ್ಯವಾಗುವುದು.
ಬೇರೆಯವರ ಸಲಹೆ ಕೇಳಿ ಹಣ ಹೂಡಿಕೆ ಮಾಡುವುದು
ಯಾರೋ ಹೇಳಿದರು ಎಂದು ಹಣದ ಹೂಡಿಕೆ ಮಾಡುವುದು, ಇದರ ಬಗ್ಗೆ ಚೆನ್ನಾಗಿ ವಿಚಾರಿಸಿ ಸಾಧಕ-ಬಾಧಕ ತಿಳಿದುಕೊಂಡು ಹಣದ ಹೂಡಿಕೆ ಮಾಡಬೇಕಾಗುತ್ತದೆ, ಅಲ್ಲದೆ ಅನುಭವ ಇಲ್ಲದ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದು, ಉದಾಹರಣೆಗೆ ಕಬ್ಬಿಣದ ವ್ಯಾಪಾರ ಬಗ್ಗೆ ಯಾವುದೇ ಜ್ಞಾನವಿಲ್ಲದೆ ಸ್ಟೀಲ್ ಬ್ಯುಸ್‌ನೆಸ್‌ಗೆ ಇಳಿಯುವುದು ಇವೆಲ್ಲಾ ನಷ್ಟವನ್ನು ಉಂಟು ಮಾಡುತ್ತದೆ.



Click it and Unblock the Notifications