Latest Updates
-
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ! -
ವಿಶ್ವ ಸೊಳ್ಳೆ ದಿನ: ಮಳೆಗಾಲದಲ್ಲಿ ಬಾಲ್ಕನಿಯಲ್ಲಿ ಯೋಗ ಮಾಡುವಾಗ ಸೊಳ್ಳೆ ಕಡಿತದಿಂದ ಪಾರಾಗುವುದು ಹೇಗೆ? -
BWF ವರ್ಲ್ಡ್ಸ್ ದೆಹಲಿ: ಕ್ಯೂನಲ್ಲಿ ನಿಂತು ಸುಸ್ತಾಗಿದ್ದೀರಾ? ಈ 8 ನಿಮಿಷದ ವ್ಯಾಯಾಮ ನಿಮ್ಮ ನೋವನ್ನು ಮರೆಸುತ್ತೆ!
ಮನುಷ್ಯರ ಸಾವು ಮೊದಲೇ ತಿಳಿಯುವ ಶಕ್ತಿ ಈ 6 ಪ್ರಾಣಿಗಳಿಗಿದೆ..!
ಮಾನವ ಜೀವನದ ಭವಿಷ್ಯವನ್ನ ನಿಖರವಾಗಿ ಊಹಿಸಲು ಯಾರಿಗೂ ಸಾಧ್ಯವಿಲ್ಲ ಎಂದು ಹೇಳಲಾಗುತ್ತದೆ. ಅಂದ್ರೆ ಹುಟ್ಟು ಮತ್ತು ಸಾವು ಎಲ್ಲವೂ ದೇವ ನಿಶ್ಚಯ ಎಂಬುದು ಪುರಾತನ ವಾದವಾಗಿದೆ. ಶಿವನ ಹೊರತು ಸಾವು ಗೆದ್ದವರು ಯಾರು ಇಲ್ಲವೆಂದು ಪುರಾಣಗಳು ಹೇಳುತ್ತವೆ. ಅಂದ್ರೆ ಸಾಮಾನ್ಯವಾಗಿ ನಮ್ಮ ಜೀವನ ಒಗಟುಗಳಿಂದ ತುಂಬಿರುತ್ತೆ. ಒಬ್ಬರ ಹುಟ್ಟು, ಮದುವೆ, ಸಾವು ಇತ್ಯಾದಿಗಳು ಒಬ್ಬರಿಗೆ ಯಾವಾಗ ಆಗುತ್ತವೆ ಎಂದು ಯಾರೂ ನಿಖರವಾಗಿ ಹೇಳಲಾರರು.
ಇವುಗಳಲ್ಲಿ ಈಗ ಸಮಯ ಮತ್ತು ಅವಧಿಯನ್ನು ನೋಡಿ ಮದುವೆ ಮತ್ತು ಜನ್ಮವನ್ನು ಸರಿಪಡಿಸಬಹುದು. ಆದರೆ ಸಾವನ್ನು ಯಾರೂ ನಿಖರವಾಗಿ ಊಹಿಸಲು ಸಾಧ್ಯವಿಲ್ಲ. ಆದರೆ ಶಾಸ್ತ್ರಗಳ ಪ್ರಕಾರ, ಕೆಲವು ಪ್ರಾಣಿಗಳಿಗೆ ಮನುಷ್ಯನ ಮರಣವನ್ನು ಊಹಿಸುವ ಶಕ್ತಿ ಇದೆ ಎಂದು ಹೇಳಲಾಗುತ್ತದೆ. ಹಾಗಾದರೆ ಯಾವ ಪ್ರಾಣಿಗಳು ಮಾನವರ ಸಾವನ್ನು ಗ್ರಹಿಸುತ್ತವೆ? ಹೇಗೆ ಗ್ರಹಿಸುತ್ತವೆ ಎಂಬುದನ್ನು ತಿಳಿದುಕೊಳ್ಳೋಣ.

ನಾಯಿಗಳು
ನಾಯಿಗಳು ಮನುಷ್ಯನ ಸಾವನ್ನು ಮೊದಲೇ ಗ್ರಹಿಸಬಲ್ಲವು. ನಿಮ್ಮ ಮನೆಯಲ್ಲಿ ನಾಯಿಗಳಿದ್ದರೆ, ಸಾವು ಸನ್ನಿಹಿತವಾದರೆ ಮನೆಯಲ್ಲಿನ ನಾಯಿ ರಾತ್ರಿ ವೇಳೆ ಅಳಲು ಪ್ರಾರಂಭಿಸುತ್ತದೆಯಂತೆ. ಹಾಗಾಗಿ ಮನೆಯಲ್ಲಿ ನಾಯಿ ಕೂಗಿದರೆ ಮನೆಗೆ ಒಳ್ಳೆಯದಲ್ಲ ಎಂದು ಹಿರಿಯರು ಹೇಳುತ್ತಾರೆ. ಅದರಲ್ಲೂ ನಾಯಿಗಳು ರಾತ್ರಿ ಹೊತ್ತು ಮನೆಯ ಕಡೆ ತಿರುಗಿ ಅಳಲು ಆರಂಭಿಸುತ್ತವೆ ಎಂಬುದು ಪುರಾಣಗಳ ಪ್ರಕಾರ ಸಾವಿನ ಮುನ್ಸೂಚನೆಯಂತೆ. ಈ ರೀತಿ ನಾಯಿಗಳು ಮನೆಯನ್ನೇ ದಿಟ್ಟಿಸಿ ಅಳುತ್ತಿದ್ದರೆ ಆ ಮನೆಯಲ್ಲಿ ಸಾವು ಸಂಭವಿಸಬಹುದು ಅಥವಾ ಸಾವಿಗೆ ಸಮನಾದ ಅನಾಹುತಗಳು ಸಂಭವಿಸಬಹುದು ಎಂದು ಹೇಳಲಾಗುತ್ತದೆ.
ಬೆಕ್ಕುಗಳು
ನಾಯಿಯ ಪಕ್ಕದಲ್ಲಿ ಬೆಕ್ಕು ಮತ್ತೊಂದು ಮನೆಯ ಸಾಕುಪ್ರಾಣಿಯಾಗಿದೆ. ಪ್ರಾಚೀನ ಕಾಲದಿಂದಲೂ ಬೆಕ್ಕುಗಳು ಸಾವನ್ನು ಮುನ್ಸೂಚಿಸುತ್ತವೆ ಎಂದು ಹೇಳಲಾಗುತ್ತದೆ. ಅದೂ ಜ್ಯೋತಿಷ್ಯದ ಪ್ರಕಾರ ಮನೆಯಲ್ಲಿ 2 ಬೆಕ್ಕುಗಳು ಕಾದಾಡುವುದು ಒಳ್ಳೆಯದಲ್ಲ. ಹಾಗಿದ್ದರೆ ಆ ಮನೆಯಲ್ಲಿ ಸಾವು ಸಂಭವಿಸಲಿದೆ ಎಂದು ಹೇಳಲಾಗುತ್ತದೆ. ಇದರ ಜೊತೆ ಬೆಕ್ಕು ನಿಮ್ಮ ಮನೆಯ ದೇವರ ಕೋಣೆಯಲ್ಲಿ ಮಲ ಮೂತ್ರ ಮಾಡುತ್ತಿದ್ದರೆ ಅಶುಭ ಸಂಭವಿಸಲುದೆ ಎಂಬುದು ಶಾಸ್ತ್ರದ ವಾದವಾಗಿದೆ.
ಕಪ್ಪು ಚಿಟ್ಟೆ
ಬಹುವರ್ಣದ ಚಿಟ್ಟೆಗಳು ಮಂಗಳಕರ. ಆದರೆ ಕಪ್ಪು ಚಿಟ್ಟೆ ಸಾವಿನ ಸಂದೇಶವಾಹಕ ಎಂದು ಹೇಳಲಾಗುತ್ತದೆ. ಈ ಕಪ್ಪು ಚಿಟ್ಟೆ ರಾತ್ರಿಯಲ್ಲಿ ಮನೆಯ ಸುತ್ತಲೂ ಸುಳಿದಾಡಿದರೆ ಅದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ ಮನೆಯೊಳಗೆ ಕಪ್ಪು ಚಿಟ್ಟೆ ಸಾವನಪ್ಪಿದರೆ ಅದು ಹಿತವಲ್ಲ ಎನ್ನಲಾಗಿದೆ.
ಬಾವಲಿ
ಮರಗಳಿಂದ ನೇತಾಡುವ ಬಾವಲಿಗಳು ಸಾವಿನ ಸುದ್ದಿಯನ್ನು ತರುತ್ತವೆ ಎಂದು ಅನೇಕ ಜನರು ನಂಬುತ್ತಾರೆ. ಮತ್ತು ದಕ್ಷಿಣ ಅಮೆರಿಕಾದಲ್ಲಿ, ಬಾವಲಿಗಳು ಸಾವಿನ ಸಂದೇಶವಾಹಕರು ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಬಾವಲಿಗಳು ಮನೆಗೆ ನುಗ್ಗುವುದು ಶುಭಸೂಚಕವಲ್ಲ ಎನ್ನುತ್ತಾರೆ ಹಿರಿಯರು. ಅಲ್ಲದೆ ಬಾವಲಿಯ ರಕ್ತ ಮನೆಯಲ್ಲಿ ಬೀಳಬಾರದು ಎಂದು ಹೇಳಲಾಗುತ್ತದೆ.
ನರಿ
ಹಗಲಿನಲ್ಲಿ ನರಿ ಮನೆಗೆ ಬಂದರೆ ಆ ಮನೆಯಲ್ಲಿ ಯಾರಾದರೂ ಸಾಯುತ್ತಾರೆ ಎಂಬುದು ನಂಬಿಕೆ. ಆದರೆ ನರಿಗಳು ಯಾವಾಗಲೂ ಹಗಲಿನಲ್ಲಿ ಕಂಡುಬರುವುದಿಲ್ಲ. ಅಲ್ಲದೆ, ನರಿಗಳು ಜನವಸತಿ ಪ್ರದೇಶಗಳಿಂದ ದೂರವಿರುತ್ತವೆ. ಹಾಗಾಗಿ ಹಗಲಿನಲ್ಲಿ ನರಿ ಮನೆಗೆ ಬಂದರೆ ಸಾವು ಮನೆಗೆ ಪ್ರವೇಶಿಸಲಿದೆ ಎಂದರ್ಥವಂತೆ.
ಕೋಳಿ
ಕೋಳಿಗಳು ಯಾವಾಗಲು ಹಗಲು ಹೊತ್ತಿನಲ್ಲಿ ಮಾತ್ರ ಕೂಗುತ್ತವೆ. ಒಂದು ವೇಳೆ ಮಧ್ಯರಾತ್ರಿಯಲ್ಲಿ ಕೂಗಲು ಆರಂಭಿಸಿದರೆ ಆ ಮನೆ ಅಥವಾ ಆ ಊರಿನಲ್ಲಿ ಯಾರಾದರೂ ಸಾಯುತ್ತಾರೆ ಎಂಬ ಅಶುಭ ಸೂಚಕವಂತೆ. ಕೋಳಿಗಳು ಯಾರಾದರೂ ಸೂರ್ಯೋದಯಕ್ಕೂ ಮೊದಲೇ ಸಾಯುತ್ತಾರೆ ಎನ್ನುವ ಅರ್ಥದಲ್ಲಿ ಮಧ್ಯರಾತ್ರಿಯೇ ಅವರನ್ನು ಎಚ್ಚರಿಸಲು ಕೂಗುತ್ತವೆ ಎಂಬ ನಂಬಿಕೆ ಇದೆ. ಪಾಶ್ಚಿಮಾತ್ಯ ದೇಶದಲ್ಲಿ ಈ ರೀತಿ ಹೆಚ್ಚಾಗಿ ನಂಬುತ್ತಾರೆ.



Click it and Unblock the Notifications
