Latest Updates
-
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ! -
ಶ್ವಾಸಕೋಶದ ಆರೋಗ್ಯಕ್ಕೆ 7 ನಿಮಿಷದ ಬೆಳಗಿನ ಅಭ್ಯಾಸ: ಕಲುಷಿತ ಗಾಳಿಯಿಂದ ರಕ್ಷಣೆ ಪಡೆಯುವುದು ಹೇಗೆ?
ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂಬುವುದರ ಹಿಂದಿದೆ ಈ 3 ಲೆಕ್ಕಾಚಾರ
ಆಷಾಢದಲ್ಲಿ ಹೊಸದಾಗಿ ಮದುವೆಯಾದ ಗಂಡ-ಹೆಂಡತಿ ಜೊತೆಗಿರಬಾರದು ಎಂದು ಆ ಸಮಯದಲ್ಲಿ ಪತ್ನಿಯನ್ನು ಅವಳ ತವರಿಗೆ ಕಳುಹಿಸಿಕೊಡುವ ಸಂಪ್ರದಾಯವಿದೆ. ಕರ್ನಾಟಕದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂದು ಹೇಳಿದರೆ ಆಂಧ್ರಪ್ರದೇಶದಲ್ಲಿ ಅತ್ತೆ-ಸೊಸೆ ಜೊತೆಗಿರಬಾರದು ಎಂದು ಹೇಳಲಾಗುವುದು, ಒಟ್ಟಿನಲ್ಲಿ ಆಷಾಢ ಮಾಸದಲ್ಲಿ ಹೊಸದಾಗಿ ಮದುವೆಯಾದವರು ಜೊತೆಗಿರಬಾರದು ಎಂಬ ಉದ್ದೇಶ ಈ ಆಚರಣೆಯಲ್ಲಿದೆ.

ಆಷಾಢದಲ್ಲಿ ನವ ದಂಪತಿಗೆ ವಿರಹ ವೇದನೆ ಅನುಭವಿಸುವ ಅನಿವಾರ್ಯವಿರುತ್ತದೆ. ಆದರೆ ನಮ್ಮ ಹಿರಿಯರು ಈ ರೀತಿಯ ಆಚರಣೆ ತಂದಿರುವುದೇಕೆ ಎಂಬ ಪ್ರಶ್ನೆ ಈಗೀನ ತಲೆಮಾರಿನವರಿಗೆ ಕಾಡುವುದುಂಟು, ಅದರಲ್ಲೂ ಹೊಸದಾಗಿ ಮದುವೆಯಾದವರಿಗೆ ಪತ್ನಿಯನ್ನು ತವರು ಮನೆಗೆ ಕಳುಹಿಸಬೇಕು ಎಂದು ಹೇಳಿದರೆ ಈಗೀನ ಕಾಲದಲ್ಲಿ ಈ ರೀತಿಯ ಆಚರಣೆಯ ಅಗ್ಯತವಿದೆಯೇ ಎಂದು ಮರುಪ್ರಶ್ನೆ ಹಾಕುತ್ತಾರೆ. ಆದರೆ ಹಿರಿಯರು ಆಷಾಢದಲ್ಲಿ ಪತಿ-ಪತ್ನಿ ದೂರವಿರಬೇಕು ಎಂದು ಹೇಳಿರುವುದರ ಹಿಂದೆ ಪಕ್ಕ ಲೆಕ್ಕಾಚಾರವಿದೆ, ಈ ಕಾರಣಕ್ಕಾಗಿಯೇ ಈ ಸಮಯದಲ್ಲಿ ನವ ದಂಪತಿ ಜೊತೆಯಾಗಿ ಇರಬಾರದು ಎಂದು ಹೇಳಲಾಗುವುದು.
ಅಷಾಢದಲ್ಲಿ ಪತಿ-ಪತ್ನಿ ಒಂದು ಸೇರಬಾರದು
ಹೌದು ಆಷಾಢ ಮಾಸದಲ್ಲಿ ನವ ದಂಪತಿ ದೈಹಿಕ ಸಂಪರ್ಕ ಮಾಡಬಾರದು ಎಂಬ ಕಾರಣ ಈ ಸಂಪ್ರದಾಯ ಪಾಲಿಸಲಾಗುವುದು. ಅದರ ಹಿಂದೆ ಇರುವ ಲೆಕ್ಕಚಾರ ಎಂದರೆ ಜೂನ್-ಜುಲೈ ತಿಂಗಳಿನಲ್ಲಿ ಗರ್ಭಿಣಿಯಾದರೆ ಚೈತ್ರ ಮಾಸದಲ್ಲಿ ಹೆರಿಗೆಯಾಗುತ್ತಾರೆ, ಈ ಸಮಯದಲ್ಲಿ ಉಷ್ಣಾಂಶ ಅಧಿಕವಿರುವುದರಿಂದ ಜನಿಸುವ ಮಗುವಿನ ಆರೋಗ್ಯಕ್ಕೆ ಒಳ್ಳೆಯದಲ್ಲ, ಈ ಕಾರಣದಿಂದ ಈ ಸಮಯದಲ್ಲಿ ಪತಿ-ಪತ್ನಿವಿರಬೇಕು ಎಂದು ಹೇಳಿರುವುದರ ಹಿಂದಿರುವ ಉದ್ದೇಶವಾಗಿದೆ.
ವೈದಿಕ ಕಾರಣ
ಮೊದಲ ಮಗು ಮನೆಯ ವಾರಸುದಾರ ಎಂಬ ಲೆಕ್ಕಚಾರ ತುಂಬಾ ಜನರಿಗಿದೆ. ಆಷಾಢದಲ್ಲಿ ಗರ್ಭಿಣಿಯಾದರೆ ಮಗು ಚೈತ್ರ ಮಾಸದಲ್ಲಿ ಜನಿಸುತ್ತದೆ, ಚೈತ್ರದಲ್ಲಿ ಸೂರ್ಯ ಮೇಷ ರಾಶಿಗೆ ಬರುತ್ತದೆ, ಬುಧ ಹಾಗೂ ಶುಕ್ರ ಸೂರ್ಯನಿಗೆ ಸಮೀಪದಲ್ಲಿ ಇರುತ್ತದೆ, ಈ ಸಮಯದಲ್ಲಿ ಬುಧ ದುರ್ಬಲವಾಗುವುದು, ಬುಧ ದುರ್ಬಲವಾಗಿರುವ ಸಮಯದಲ್ಲಿ ಮಗು ಜನಿಸಿದರೆ ಅದು ಅಷ್ಟು ಶುಭ ಎಂದು ಪರಿಗಣಿಸುವುದಿಲ್ಲ. ಈ ಕಾರಣಕ್ಕೆ ಮಗು ಈ ಸಮಯದಲ್ಲಿ ಜನಿಸಬಾರದೆಂಬ ಲೆಕ್ಕಚಾರ ಕೂಡ ಇದೆ.
ಆರ್ಥಿಕ ಕಾರಣ: ಇನ್ನು ಆಷಾಢ ಮಾಸದಲ್ಲಿ ಪೈರು ನಾಟಿ ಮಾಡುವ ಸಮಯ. ಈ ಸಮಯದಲ್ಲಿ ರೈತರು ತಮ್ಮ ಕೃಷಿ ಚಟುವಟಿಕೆಯಲ್ಲಿ ತೊಡಗಿಕೊಂಡಿರುತ್ತಾರೆ. ಈ ಸಮಯದಲ್ಲಿ ನವ ಜೋಡಿಗಳಿದ್ದರೆ ಅವರಿಗೆ ಕೆಲಸದ ಕಡೆ ಗಮನವಿರುವುದಿಲ್ಲ, ಪತ್ನಿಯ ಜೊತೆ ರೊಮ್ಯಾನ್ಸ್‌ನಲ್ಲಿ ಕಳೆದು ಕೆಲಸದ ಕಡೆ ಗಮನ ನೀಡುವುದಿಲ್ಲ, ಈ ಕಾರಣದಿಂದಾಗಿ ಕೃಷಿ ಕಡೆ ಗಮನ ಕೊಡದೆ ನಷ್ಟ ಉಂಟಾಗಬಹುದು ಎಂಬ ಕಾರಣಕ್ಕೆ ಈ ಸಮಯದಲ್ಲಿ ನವ ದಂಪತಿ ಜೊತೆಗಿರಬಾರದು ಎಂದು ಹೇಳಲಾಗಿದೆ.
ಈ ಮೂರು ಅಂಶಗಳಲ್ಲಿ ಮೂರನೇಯದು ಈಗೀನ ಐಟಿ ಬಿಟಿಯಲ್ಲಿ ಕೆಲಸ ಮಾಡುವವರಿಗೆ ಸೂಟ್ ಆಗದೇ ಇರಬಹುದು, ಆದರೆ ಉಳಿದೆರಡು ಕಾರಣ ಎಲ್ಲಾ ಕಾಲದಲ್ಲೂ ಸೂಕ್ತವಾಗಿರುವುದರಿಂದ ಈ ಆಚರಣೆ ಇಂದಿಗೂ ಪಾಲಿಸಲಾಗುವುದು.



Click it and Unblock the Notifications