Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ಉಳಿತಾಯದ ಹಣವೆಲ್ಲಾ ರಾಮನಿಗೆ ಅರ್ಪಿಸಿದ ನೇಕಾರ..! ಸೀತೆಗಾಗಿ 196 ಅಡಿ ಸೀರೆ ಉಡುಗೊರೆ..! ಎಷ್ಟು ದುಬಾರಿ ಗೊತ್ತಾ?!
ಜನವರಿ 22, ಎಲ್ಲಾ ಶ್ರೀರಾಮ ಭಕ್ತರು ಕಾತುರದಿಂದ ಎದುರು ನೋಡುತ್ತಿರುವ ದಿನ. ಅಯೋಧ್ಯೆಯಲ್ಲಿ ಶ್ರೀರಾಮನನ್ನು ಕಣ್ತುಂಬಿಕೊಳ್ಳಲು ಭಕ್ತರು ರಾಮ ಜಪ ಆರಂಭಿಸಿದ್ದಾರೆ. ಈಗಾಗಲೇ ಭಕ್ತರು ಅಯೋಧ್ಯೆಯೆಡೆಗೆ ಪ್ರಯಾಣ ಮಾಡುತ್ತಿದ್ದಾರೆ. ಅದೆಷ್ಟೋ ಭಕ್ತರ ದಶಕಗಳ ಕನಸು ಇಡೇರುವ ಶುಭಗಳಿಗೆಯನ್ನು ಕಣ್ತುಂಬಿಕೊಳ್ಳಲು ಹಾತೊರೆಯುತ್ತಿದ್ದಾರೆ.
ಈ ಹಂಬಲದ ನಡುವೆಯೂ ವಿಶ್ವದ ಮೂಲೆ ಮೂಲೆಯಿಂದಲೂ ರಾಮನಿಗಾಗಿ ಉಡುಗೊರೆಗಳ ಹೊತ್ತು ತರುತ್ತಿದ್ದಾರೆ. ಇದೀಗ ಇಲ್ಲೊಬ್ಬರು ತಮ್ಮ ಜೀವನದ ಉಳಿತಾಯದ ಹಣವನ್ನು ಒಟ್ಟು ಮಾಡಿ ಸೀತಾ ದೇವಿಗೆ ಅರ್ಪಿಸಲು ಮುಂದಾಗಿದ್ದಾರೆ. ಹೌದು ಆತ ದುಡಿದ ಹಣವನ್ನು ಉಳಿಸಿ ಅದರಿಂದ ರಾಮನಿಗೆ 196 ಅಡಿಯ ಸೀರೆ ಉಡುಗೊರೆ ನೀಡಲು ಮುಂದಾಗಿದ್ದಾರೆ.
ಜನವರಿ 22 ರಂದು ನಿಗದಿಯಾಗಿರುವ ಅದರ ಪ್ರತಿಷ್ಠಾಪನೆ ಸಮಾರಂಭದ ಮೊದಲು 196 ಅಡಿ ಸೀರೆಯನ್ನು ಉಡುಗೊರೆಯಾಗಿ ನೀಡುತ್ತಿದ್ದಾರೆ. ಜುಜಾರು ನಾಗರಾಜು , ಧರ್ಮಾವರಂನ ಸಣ್ಣ ನೇಕಾರರಾಗಿದ್ದು, ಅವರು ಸೀತಾ ದೇವಿಯ ವಿಗ್ರಹಕ್ಕೆ ರೇಷ್ಮೆ ಸೀರೆಯನ್ನು ತಯಾರಿಸಲು ತಮ್ಮ ಇಡೀ ಜೀವನ ಉಳಿತಾಯ ಹಣವನ್ನು ಮುಡಿಪಾಗಿಟ್ಟಿದ್ದಾರೆ.

ಆಂಧ್ರಪ್ರದೇಶದ ವ್ಯಕ್ತಿಯೊಬ್ಬರು ಅಯೋಧ್ಯೆಯ ರಾಮಮಂದಿರಕ್ಕೆ ಉಡುಗೊರೆ ನೀಡಲು 196 ಅಡಿ ಉದ್ದದ ಬೃಹತ್ ಸೀರೆಯನ್ನು ನೇಯ್ದಿದ್ದಾರೆ. ಧರ್ಮಾವರಂನ ಜುಜಾರು ನಾಗರಾಜು ಎಂಬುವರು ತಮ್ಮ ಜೀವಮಾನದ ಉಳಿತಾಯದ 3.5 ಲಕ್ಷ ರೂ.ಗಳನ್ನು ಸೀರೆ ತಯಾರಿಸಲು ವ್ಯಯಿಸಿದ್ದಾರೆ. 'ಜೈ ಶ್ರೀ ರಾಮ್' ಪಠಣವನ್ನು ಸೀರೆಯ ಮೇಲೆ 13 ಭಾಷೆಗಳಲ್ಲಿ 32,200 ಬಾರಿ ಕಸೂತಿ ಮಾಡಲಾಗಿದೆಯಂತೆ.
ಕುಶಲಕರ್ಮಿಯು 2022ರಲ್ಲಿ ಯೋಜನೆಯನ್ನು ಪ್ರಾರಂಭಿಸಿದರು ಮತ್ತು ಅಂದಿನಿಂದ ತಮಿಳು, ತೆಲುಗು, ಕನ್ನಡ, ಮರಾಠಿ, ಉರ್ದು, ಮಲಯಾಳಂ ಮತ್ತು ಒಡಿಯಾ ಸೇರಿದಂತೆ 13 ವಿವಿಧ ಭಾಷೆಗಳಲ್ಲಿ 'ಜೈ ಶ್ರೀ ರಾಮ್' ಎಂದು ಒಟ್ಟು 32,200 ಬಾರಿ ಸೀರೆಯ ಮೇಲೆ ಕಸೂತಿ ಮಾಡಿದ್ದಾರೆ, ಇದರ ಬೆಲೆ ಅವರಿಗೆ 3.5 ಲಕ್ಷ ರೂ ಆಗಿದೆಯಂತೆ.
ಈ ಸೀರೆಗೆ ಮೂಲತಃ 1.5 ಲಕ್ಷ ರೂಪಾಯಿ ವೆಚ್ಚವಾಗಬಹುದೆಂದು ಅಂದಾಜಿಸಲಾಗಿದ್ದರೂ, ನಾಗರಾಜು ಅವರ ಕುಟುಂಬದ ಆದಾಯದ ಮೇಲೆ ಭಾರಿ ಖರ್ಚು ಮಾಡಲಾಗಿದ್ದರೂ, ಅವರು 'ರಾಮ ಕೋಟಿ ವಸ್ತ್ರಂ' ಎಂಬ ವಿಶೇಷ ಬಟ್ಟೆಯ ಮೇಲೆ ಮೇರುಕೃತಿಯನ್ನು ರಚಿಸಲು ತಮ್ಮ ಎಲ್ಲಾ ಉಳಿತಾಯವನ್ನು ವ್ಯಯಿಸಿದ್ದಾರೆ.
ಕಸೂತಿ ಜೊತೆಗೆ ಹಿಂದೂ ಪುರಾಣಗಳಲ್ಲಿನ ಎರಡು ಪ್ರಮುಖ ಮಹಾಕಾವ್ಯಗಳಲ್ಲಿ ಒಂದಾದ ರಾಮಾಯಣದಲ್ಲಿ ಭಗವಾನ್ ರಾಮನ ಜೀವನದಿಂದ 168 ಚಿತ್ರಾತ್ಮಕ ಚಿತ್ರಣಗಳನ್ನು ಸಹ ಈ ಸೀರೆ ಒಳಗೊಂಡಿದೆ. ಸೀರೆಯು ಸಾಂಪ್ರದಾಯಿಕ ಭಾರತೀಯ ಸೀರೆಯ ಸರಾಸರಿ ಉದ್ದಕ್ಕಿಂತ ಸುಮಾರು 11 ಪಟ್ಟು ಉದ್ದವಾಗಿದೆ ಮತ್ತು 16 ಕೆಜಿ ತೂಕ ಹೊಂದಿದೆ. ಇದನ್ನು ತಯಾರಿಸಲು ಅರ್ಧ ವರ್ಷ ತೆಗೆದುಕೊಂಡಿದ್ದಾರೆ. ನಾಗರಾಜು ಪ್ರತಿದಿನ ಸುಮಾರು 10 ಗಂಟೆಗಳ ಕಾಲ ಮಗ್ಗದಲ್ಲಿ ಈ ಸೀರೆಗಾಗಿ ಕಳೆದಿದ್ದಾರೆ. ಅಯೋಧ್ಯೆಯಲ್ಲಿ ರಾಮ ಮಂದಿರದ ಪ್ರತಿಷ್ಠಾಪನೆಯ ಸಮಯಕ್ಕೆ ಸಿದ್ಧ ಮಾಡಿದ್ದಾರೆ.
ಸೀರೆ ಹಸ್ತಾಂತರಿಸುವ ಬಗ್ಗೆ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನೊಂದಿಗೆ ಮಾತನಾಡಿದ್ದೇನೆ ಎಂದು ನಾಗರಾಜು ತಿಳಿಸಿದರು. ಟ್ರಸ್ಟ್ ಸದಸ್ಯರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ನಂತರ ನಾನು ವಿಶೇಷ ಸೀರೆಯನ್ನು ವೈಯಕ್ತಿಕವಾಗಿ ಹಸ್ತಾಂತರಿಸಲು ಅಯೋಧ್ಯೆಗೆ ಹೋಗುತ್ತೇನೆ. ಕೆಲವು ಕಾರಣಗಳಿಂದಾಗಿ, ಜನವರಿ 22 ರಂದು ಉಡುಗೊರೆಯನ್ನು ನೀಡಲು ಸಾಧ್ಯವಾಗದಿದ್ದರೆ, ಅದನ್ನು ಸ್ವಲ್ಪ ಸಮಯದ ನಂತರ ಮತ್ತೊಂದು "ಶುಭ" ಸಂದರ್ಭದಲ್ಲಿ ಹಸ್ತಾಂತರಿಸಲು ಪ್ರಯತ್ನಿಸುತ್ತೇನೆ ಎಂದಿದ್ದಾರೆ.



Click it and Unblock the Notifications
