Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಮರಳಿ ಯತ್ನವ ಮಾಡು: ಸಾಲ ಸಿಗದೆ ಅಲೆದಾಡಿ ₹63 ಸಾವಿರ ಕೋಟಿ ಮೌಲ್ಯದ ಕಂಪನಿ ಕಟ್ಟಿದ ಕಥೆ..!
ಕೆಲವರ ಜೀವನದಲ್ಲಿ ಒಂದೇ ಒಂದು ಟರ್ನಿಂಗ್ ಪಾಯಿಂಟ್ ಅವರ ಜೀವನವನ್ನೇ ಬದಲಾಯಿಸಿ ಬಿಡುತ್ತದೆ. ಇಂತಹ ನೂರಾರು ಉದಾಹರಣೆಗಳು ನಮ್ಮ ಮುಂದಿದೆ. ಇಲ್ಲೊಬ್ಬ ಸ್ಟಾರ್ಟ್‌ಅಪ್ ಉದ್ಯಮಿಯ ಕಥೆಯು ಸಹ ಇದೇ ರೀತಿ ಆಗಿದೆ. ಆತನಿಗೆ ಮೊದಲು ಸಾಲ ನೀಡಲು ಹಿಂದೇಟು ಹಾಕಿದ ಬ್ಯಾಂಕ್‌ಗಳು ಈಗ ಅವರ ಜೊತೆಯೇ ವ್ಯವಹಾರ ನಡೆಸಲು ಮುಂದಾಗಿವೆ.
ಹೌದು ಈ ಕಥೆ ರೇಜರ್ ಪೇ ಎಂಬ ಕಂಪನಿ ಹುಟ್ಟಿದ ಕಥೆ. ಇಂದು ಹತ್ತು ಹಲವು ಕಂಪನಿಗಳು ಇದೆ ಪೇಮೆಂಟ್ ಗೇಟ್ ವೇಯನ್ನು ತಮ್ಮ ವ್ಯವಹಾರಕ್ಕೆ ಬಳಸಿಕೊಳ್ಳುತ್ತಿವೆ. ಆದ್ರೆ ಈ ಕಂಪನಿ ಹುಟ್ಟಿದ ಕಥೆ ಕೇಳಿದ್ರೆ ನಿಮಗೂ ಶಾಕ್ ಆಗುತ್ತೆ. ಈ ಕಂಪನಿಗೆ ಮೊದಲು ಹಣವಿಲ್ಲದೆ ಸಾಲ ಮಾಡಲು ಮುಂದಾದಾಗ 100 ಬ್ಯಾಂಕ್‌ಗಳು ತಿರಸ್ಕರಿಸಿದ್ದವು.

ಹರ್ಷಿಲ್ ಮಾಥುರ್ ಎಂಬ ಕಾರ್ಪೋರೇಟ್ ಕಂಪನಿಯ ಉದ್ಯೋಗಿ ಮತ್ತೋರ್ವ ಉದ್ಯಮಿಯ ಸೇರಿಸಿಕೊಂಡು ಈ ಕಂಪನಿ ಕಟ್ಟಿದ್ದಾರೆ. ಬೆಂಗಳೂರು ಮೂಲದ ಈ ಕಂಪನಿ ಈಗ ಬರೋಬ್ಬರಿ 63 ಸಾವಿರ ಕೋಟಿ ಮೌಲ್ಯವಾಗಿ ಬೆಳೆದು ನಿಂತಿದೆ. 2014 ರಲ್ಲಿ ಸಹ ಹಳೆಯ ವಿದ್ಯಾರ್ಥಿ ಶಶಾಂಕ್ ಕುಮಾರ್ ಜೊತೆಗೆ ರೇಜರ್‌ಪೇ ಪ್ರಾರಂಭಿಸಲು ಕಾರಣವಾಯಿತು. ಬೆಂಗಳೂರು ಮೂಲದ ಸ್ಟಾರ್ಟಪ್ ಇದಾಗಿದ್ದು, ಇದೊಂದು ಸಾಮಾನ್ಯ ಪರಿಕಲ್ಪನೆ ಎಂದು ಬ್ಯಾಂಕ್‌ಗಳು ಇಬ್ಬರ ಐಡಿಯಾವನ್ನು ನಿರಾಕರಿಸಿದ್ದವು.
Razorpay ಒಂದು ಸಮಗ್ರ ಡಿಜಿಟಲ್ ಪೇಮೆಂಟ್ ಪರಿಹಾರ ಪೂರೈಕೆದಾರರಾಗಿದ್ದು, ಸುಲಭ ಏಕೀಕರಣ ಮತ್ತು ಡೆವಲಪರ್-ಸ್ನೇಹಿ APIಗಳೊಂದಿಗೆ ಆನ್‌ಲೈನ್ ಪಾವತಿಗೆ ಅನುಕೂಲಕರವಾದ ಕಾರ್ಯವಿಧಾನವಾಗಿದೆ. ಹೀಗಾಗಿ ಭಾರತದಲ್ಲಿ ಕ್ಷಿಪ್ರ ಬೆಳವಣಿಗೆಯ ಆನ್‌ಲೈನ್ ಕ್ರಾಂತಿಯಲ್ಲಿ ಈ ಸಂಸ್ಥೆ ಬಹುಕೋಟಿ ಉದ್ಯಮವಾಗಿ ಬದಲಾಗಿದೆ.
ಉದ್ಯಮಕ್ಕೆ ಅವರ ವಿಭಿನ್ನ ವಿಧಾನದಿಂದಾಗಿ ಹರ್ಷಿಲ್ ವಿಶಿಷ್ಟ ಸವಾಲುಗಳನ್ನು ಎದುರಿಸಿದರು. ಈ ರಂಗದಲ್ಲಿ ಈಗಾಗಲೇ ದೊಡ್ಡ ದೊಡ್ಡ ಕಂಪನಿಗಳು ಹಿಡಿತ ಸಾಧಿಸಿದ್ದರೂ ಉದ್ಯಮಶೀಲತೆ ಹಾಗೂ ಉದ್ಯಮ ಸ್ನೇಹಿ ತಂತ್ರಾಂಶ ಎಲ್ಲರಿಗೂ ಇಷ್ಟವಾಗಿತ್ತು.
ಇದು ಸಾಂಪ್ರದಾಯಿಕ ಕಾಗದ-ಆಧಾರಿತ KYC ಪ್ರಕ್ರಿಯೆಯನ್ನು ಬದಲಿಸುವ ಮೂಲಕ ವ್ಯಾಪಾರಗಳಿಗೆ ಸಂಪೂರ್ಣ ಡಿಜಿಟಲ್ ಆನ್‌ಬೋರ್ಡಿಂಗ್ ಪ್ರಕ್ರಿಯೆಯನ್ನು ನೀಡಿದ ಮೊದಲ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆಯಿತು. ಉದ್ಯಮ ಕ್ಷೇತ್ರದಲ್ಲಿ ಬಂದ ಎಲ್ಲಾ ಮೊದಲುಗಳನ್ನು ಅಳವಡಿಸಿಕೊಂಡ ಮೊದಲ ಸಂಸ್ಥೆ ಇದಾಗಿತ್ತು, ಹೀಗಾಗಿ ಉದ್ಯಮ ಬಹಳ ಅಲ್ಪ ಕಾಲದಲ್ಲಿಯೇ ಹೆಚ್ಚು ಪ್ರಸಿದ್ಧಿ ಪಡೆಯಿತು.
ಹರ್ಷಿಲ್ ಮತ್ತು ಶಶಾಂಕ್ ಇಬ್ಬರೂ ಈ ಸಂಸ್ಥೆ ಆರಂಭಿಸುವ ಮೊದಲು ಕಾರ್ಪೊರೇಟ್ ಜಗತ್ತಿಗೆ ಹೊಸಬರಾಗಿದ್ದರು-ಮೈಕ್ರೋಸಾಫ್ಟ್‌ನಲ್ಲಿ ಶಶಾಂಕ್ ಮತ್ತು US-ಆಧಾರಿತ ತೈಲಕ್ಷೇತ್ರದ ಸೇವಾ ಪೂರೈಕೆದಾರರಾದ ಸ್ಕ್ಲಂಬರ್ಗರ್ ಎಂಬ ಸಂಸ್ಥೆಯಲ್ಲಿ ಹರ್ಷಿಲ್ ಉದ್ಯೋಗಿಗಳಾಗಿದ್ದರು. ಅವರು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೂ ದುಡಿಯಬೇಕಿತ್ತು. ಇದರಿಂದ ಹೊರಬರಲು ಯೋಜನೆ ರೂಪಿಸುವಾಗ ಈ ಐಡಿಯಾ ಅವರಿಗೆ ಬಂದಿತ್ತು.
ಮೊದಲು 100 ಬ್ಯಾಂಕ್‌ಗಳು ಅವರ ಆಲೋಚನೆಯನ್ನು ನಿರಾಕರಿಸಿದವು. ಆದರೆ ಓರ್ವ ಯುವ ಮ್ಯಾನೇಜರ್ ಇವರಲ್ಲಿ ಹೊಸತನ್ನು ಸಾಧಿಸುವ ಗುರಿ ಇದೆ ಎಂದು ಮನಗಂಡು ಮೊದಲು ಸಾಲ ನೀಡಲು ಮುಂದೆ ಬಂದರು. ಆದರೆ ಈಗ ಅಂತಾರಾಷ್ಟ್ರೀಯ ಮಟ್ಟದ ದೊಡ್ಡ ದೊಡ್ಡ ಕಂಪನಿಗಳು ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿವೆ. ಈಗ ಕಂಪನಿಯ ಒಟ್ಟು ಮೌಲ್ಯ 63,000 ಕೋಟಿ ರೂಪಾಯಿ ಆಗಿದೆ.
ಬ್ಯಾಂಕ್ ಹಣ ನೀಡಲಿಲ್ಲ ಎಂದು ಕೈ ಕಟ್ಟಿ ಕುಳಿತ್ತಿದ್ದರೆ ಇಂದು 63 ಸಾವಿರ ಕೋಟಿಯ ಕಂಪನಿ ಹುಟ್ಟುತ್ತಿರಲಿಲ್ಲ. ಇವರ ಕಥೆ ಅದೆಷ್ಟೋ ಜನರಿಗೆ ಈಗ ಸ್ಪೂರ್ತಿಯಾಗಿದೆ. ಮರಳಿ ಯತ್ನವ ಮಾಡು ಎಂಬುದು ಇವರಿಂದ ಸತ್ಯವಾಗಿದೆ.



Click it and Unblock the Notifications
