Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪುರಿ ಜಗನ್ನಾಥನ ಕಥೆ ಏನು ಗೊತ್ತಾ? ವಿಜ್ಞಾನಕ್ಕೆ ಸವಾಲಾಗಿದೆ ಈ ದೇವಾಲಯ!!
ಒಡಿಶಾದಲ್ಲಿರುವ ಪುರಿ ಜಗನ್ನಾಥನ ದೇವಾಲಯ ಇಡೀ ವಿಶ್ವದಲ್ಲೇ ಪ್ರಸಿದ್ಧ ದೇವಾಲಯ. ಹಾಗೆ ಹಿಂದೂಗಳ ಪವಿತ್ರ 4 ಧಾಮಗಳಲ್ಲಿ ಜಗನ್ನಾಥ ಧಾಮ ಕೂಡ ಒಂದಾಗಿದೆ. ಪ್ರತಿ ವರ್ಷ ಅಲ್ಲಿ ನಡೆಯುವ ರಥಯಾತ್ರೆ ವೀಕ್ಷಿಸಲು ವಿಶ್ವದ ಮೂಲೆ ಮೂಲೆಯಿಂದಲೂ ಭಕ್ತರು ಆಗಮಿಸುತ್ತಾರೆ. ಭಾರತದಲ್ಲಿ ನಡೆಯುವ ಕುಂಭಮೇಳ ಬಿಟ್ಟರೆ ಇದು ಅತ್ಯಂತ ದೊಡ್ಡ ಧಾರ್ಮಿಕ ಸಮ್ಮೇಳನ ಎನ್ನಬಹುದು.
ಹಾಗೆ ಇದೇ ಜೂನ್ 27ರಂದು ವರ್ಷದ ಜಗನ್ನಾಥ ಯಾತ್ರೆ ಆರಂಭಗೊಳ್ಳುತ್ತದೆ. ಆಷಾಢ ಮಾಸದಲ್ಲಿ ನಡೆಯುವ ಈ ಉತ್ಸವ ಕಣ್ತುಂಬಿಕೊಳ್ಳಲು ಲಕ್ಷಾಂತರ ಭಕ್ತರು ಸೇರುತ್ತಾರೆ. ರಥೋತ್ಸವ ಎಂದೂ ಕರೆಯಲ್ಪಡುವ ಈ ಸಮಾರಂಭದಲ್ಲಿ ಜಗನ್ನಾಥನ ವಿಗ್ರಹ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯರ ವಿಗ್ರಹಗಳನ್ನು ರಥದ ಮೇಲೆ ಇರಿಸಲಾಗುತ್ತದೆ.

ಈ ಮೂರು ಮೂರ್ತಿಗಳು ದೇವಾಲಯದಿಂದ ಹೊರಬರುವುದು ಈ ದಿನ ಮಾತ್ರ. ಹೀಗಾಗಿ ದೇವರ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ರಥಯಾತ್ರೆಯಲ್ಲಿ ಭಾಗಿಯಾಗುತ್ತಾರೆ. ಇದಲ್ಲದೆ ಹಲವು ರೀತಿಯ ಕಥೆಗಳು, ಪುರಾಣಗಳಲ್ಲಿ ಈ ದೇವಾಲಯದ ಮಹತ್ವವನ್ನು ನೋಡಬಹುದು.
ಪುರಿ ಜಗನ್ನಾಥನ ಕಥೆ ಏನು?
ಈ ಜಗನ್ನಾಥ ದೇವಾಲಯನ್ನು ಕ್ರಿ.ಶ 12ನೇ ಶತಮಾನದಲ್ಲಿ ಅನಂತ ಬರ್ಮ ಚೋಡಗಂಗಾ ದೇವ್ ನಿರ್ಮಿಸಿದರು. ಆದರೆ ಅನಂತ ಭೀಮ ದೇವ್ ಈ ದೇವಾಲಯವನ್ನು ಪೂರ್ಣಗೊಳಿಸಿದರು ಎಂಬ ಉಲ್ಲೇಖವಿದೆ. ಹಾಗೆ ಇದು ಸಹ ಅತ್ಯಂತ ಎತ್ತರದ ಗೋಪುರ ಹೊಂದಿರುವ ದೇವಾಲಯಗಳಲ್ಲಿ ಸ್ಥಾನ ಪಡೆದಿದೆ. ಈ ಜಗನ್ನಾಥನು ವಿಷ್ಣುವಿನ ಅವತಾರವೆಂದು ಪರಿಗಣಿಸಲಾಗುತ್ತದೆ. ಹಾಗೆ ಶ್ರೀಕೃಷ್ಣನ ಅವತಾರವೆಂದು ಕೂಡ ಕರೆಯಲಾಗಿದೆ. ಜಗನ್ನಾಥನ ದೈವಿಕ ರೂಪವನ್ನು ಸ್ಕಂದ ಪುರಾಣ ಮತ್ತು ಬ್ರಹ್ಮ ಪುರಾಣದಲ್ಲಿಯೂ ವಿವರಿಸಲಾಗಿದೆ.
ಜಗನ್ನಾಥ ಎಂದರೆ ಜಗತ್ತಿಗೆ ಪ್ರಭು ಎಂಬ ಅರ್ಧ ನೀಡಲಿದೆ. ಜಗತ್ತು-ಬ್ರಹ್ಮಾಂಡ, ನಾಥ-ಪ್ರಭು ಎಂಬ ಅರ್ಥ ನೀಡಲಿದೆ. ಸನಾತನ ಪವಿತ್ರ ಧರ್ಮಗ್ರಂಥಗಳಲ್ಲಿ ಪುರುಷೋತ್ತಮ, ಭಗವಂತ, ಪರಮ್ ದೇವ್ ಎಂಬೆಲ್ಲಾ ಹಸರುಗಳಿಂದಲೂ ಕರೆಯಲಾಗುತ್ತದೆ. ಸ್ಕಂದ-ಪುರಾಣದ ಪ್ರಕಾರ ಭಗವಾನ್ ಬ್ರಹ್ಮನು ರಾಜ ಇಂದ್ರದ್ಯುಮ್ನನಿಗೆ ತನ್ನ ವಿಶ್ವರೂಪ ತೋರಿಸಿದ ಎಂದು ಹೇಳಲಾಗಿದೆ.
ಇಲ್ಲಿ ಜಗನ್ನಾಥನ ವಿಗ್ರಹವು ಮರದಿಂದ ಮಾಡಲಾಗಿದೆ. ಮೂರು ವಿಗ್ರಹಗಳನ್ನು 12 ವರ್ಷಗಳಿಗೊಮ್ಮೆ ಬದಲಾಯಿಸಲಾಗುತ್ತದೆ. ಇದು ಈ ದೇವಾಲಯದ ಅಚ್ಚರಿಯ ಸಂಗತಿಗಳಲ್ಲಿ ಒಂದಾಗಿದೆ. 12 ವರ್ಷದಲ್ಲಿ ಒಮ್ಮೆ ಈ ಮೂರ್ತಿಗಳ ಬದಲಾಯಿಸುವಾಗ ಅರ್ಚಕರು ಮಾತ್ರ ದೇವಾಲಯದಲ್ಲಿ ಇರಲಿದ್ದಾರೆ. ಹಾಗೆ ಇಡೀ ನಗರ ಕತ್ತಲೆಯಿಂದ ಕೂಡಿರಲಿದೆ ಎನ್ನಲಾಗಿದೆ. ಏಕೆಂದರೆ ವಿಷ್ಣು ರಾಜ ಇಂದ್ರದ್ಯುಮ್ನನ ಕನಸಿನಲ್ಲಿ ಬಂದು ಸಮುದ್ರದ ಆಳದಿಂದ ಮರಗಳ ದಿಮ್ಮಿಯನ್ನು ತಂದು ಈ ಮೂರ್ತಿಗಳ ಕೆತ್ತುವಂತೆ ಹೇಳಿದ್ದನಂತೆ.
ಆದರೆ ಮೂರ್ತಿ ಕೆತ್ತನೆ ಮಾಡುವಾಗ ಯಾರೊಬ್ಬರು ಅದನ್ನು ನೋಡಬಾರದು ಎಂದನಂತೆ. ಹೀಗಾಗಿ ಇಡೀ ನಗರ ಕತ್ತಲೆಯಲ್ಲಿ ಮುಳುಗಿತ್ತಂತೆ. ಹಗಲಿನಲ್ಲಿ ಕತ್ತಲು ಕವಿದಿದ್ದರಿಂದ ಭಯ ಆವರಿಸಿ ಯಾರೊಬ್ಬರು ಮನೆಯಿಂದ ಹೊರಬರಲಿಲ್ಲ ಎಂಬ ಪುರಾತನ ಕಥೆಯೊಂದಿದೆ.
ಇನ್ನು ಈ ದೇವಾಲಯದಲ್ಲಿ ಅಡುಗೆ ಕೋಣೆ ಇಂದಿಗೂ ದೊಡ್ಡ ರಹಸ್ಯವಾಗಿಯೇ ಉಳಿದಿದೆ. ಏಕೆಂದರೆ ಅಲ್ಲಿನ ಅಡುಗೆ ಮನೆಯಲ್ಲಿ ಮಣ್ಣಿನ ಮಡಿಕೆಗಳನ್ನು ಒಂದರ ಮೇಲೆ ಒಂದರಂತೆ ಜೋಡಿಸಿ ಕೆಳಗೆ ದೊಡ್ಡದಾಗಿ ಬೆಂಕಿ ಹಾಕಿ ಪ್ರಸಾದ ಬೇಯಿಸುತ್ತಾರೆ. ಲಕ್ಷಾಂತರ ಜನರಿಗೆ ಪ್ರಸಾದ ವಿತರಣೆ ಕಾರ್ಯ ನಡೆಯಲಿದೆ.
ಇನ್ನು ಈ ದೇವಾಲಯದಲ್ಲಿ ವಿಜ್ಞಾನಗಳಿಗೆ ಸವಾಲು ಹಾಕುವಂತಹ ಗಲವು ವಿದ್ಯಮಾನಗಳು ನಡೆಯುತ್ತಲೇ ಇರಲಿದೆ. ದೇವಾಲಯದ ಮೇಲಿನ ಬಾವುಟವು ಗಾಳಿಗೆ ವಿರುದ್ಧ ದಿಕ್ಕಿನಲ್ಲಿ ಹಾರಾಡುವುದು, ದೇವಾಲಯದ ನೆರಳು ಬೀಳದೆ ಇರುವುದು, ದೇವಾಲಯದ ಮೇಲೆ ಪಕ್ಷಿಗಳು ಹಾರಾಡದೆ ಇರುವುದು ಇಂತಹ ಹತ್ತು ಹಲವು ವಿಸ್ಮಯಗಳು ಇಂದಿಗೂ ಅಚ್ಚರಿ ಮೂಡಿಸುತ್ತವೆ.



Click it and Unblock the Notifications