Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ನೇಪಾಳ ಅರಾಜಕತೆ ಭವಿಷ್ಯ ನುಡಿದಿದ್ದ ಜ್ಯೋತಿಷಿ: ಭಾರತಕ್ಕೂ 2039ರಲ್ಲಿ ಇದೇ ಸ್ಥಿತಿ..!?
ನೇಪಾಳದಲ್ಲಿ ಸರ್ಕಾರದ ವಿರುದ್ಧ ಅಲ್ಲಿನ ಜನರು ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ. ಈ ಪ್ರತಿಭಟನೆ ಹಿಂಸಾರೂಪ ಪಡೆದುಕೊಂಡಿದೆ. ಹಾಗೆ ಸರ್ಕಾರದಲ್ಲಿ ಈಗ ಯಾರು ಅಧಿಕಾರದಲ್ಲಿಲ್ಲ. ಬದಲಿಗೆ ಸೇನೆ ನೇಪಾಳದ ಹಿಡಿತ ಸಾಧಿಸಿದೆ. ಹಾಗೆ ರಾಜಧಾನಿಯನ್ನು ಬಿಟ್ಟು ರಾಜಕೀಯ ನಾಯಕರು ಬೇರೆಡೆ ತೆರಳಿದ್ದಾರೆ.
ಕೆಲವೇ ವರ್ಷಗಳ ಹಿಂದೆ ಇದೇ ಸೆಪ್ಟೆಂಬರ್‌ನಲ್ಲಿ ನೇಪಾಳವು ಹೊಸ ಸಂವಿಧಾನವನ್ನು ಅಂಗೀಕರಿಸಿತ್ತು. ಆದ್ರೆ ಈಗ ಪ್ರಜಾಪ್ರಭುತ್ವ ಅಂತ್ಯಗೊಳ್ಳುವ ಭೀತಿಯು ಎದುರಾಗಿದೆ. ಹಾಗೆ ಅಲ್ಲಿನ ಭ್ರಷ್ಟಾಚಾರದ ವಿರುದ್ಧ ಭುಗಿಲೆದ್ದಿದ್ದ ಅಸಮಾಧಾನವು ಪ್ರಧಾನಮಂತ್ರಿ ಕೆ.ಪಿ ಶರ್ಮಾ ಒಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಿದೆ. ಹಾಗೆ ಹಲವರು ಮೃತಪಟ್ಟಿದ್ದಾರೆ.

ಇನ್ನು ಸರ್ಕಾರಕ್ಕೆ ಸಂಬಂಧಿಸಿದಂತೆ ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಸಚಿವರನ್ನು ಸಿಕ್ಕ ಸಿಕ್ಕಲ್ಲಿ ಜನರು ಓಡಿಸಿ ಹೊಡೆಯುವ ದೃಶ್ಯಗಳು ಸೆರೆಯಾಗುತ್ತಿದೆ. ಇನ್ನು ನೇಪಾಳದಲ್ಲಿನ ಈ ಅರಾಜಕತೆ ಕುರಿತು ಭಾರತದ ಜ್ಯೂತಿಷಿಯೊಬ್ಬರು ಈ ಮೊದಲೇ ಭವಿಷ್ಯ ನುಡಿದಿದ್ದರು. ನೇಪಾಳದಲ್ಲಿ ಪ್ರಜಾಪ್ರಭುತ್ವ ಅಂತ್ಯವಾಗಲಿದೆ ಎಂದು ಅವರು ಹೇಳಿದ್ದರು.
2023ರಲ್ಲಿಯೇ ನೇಪಾಳ ಉದ್ವಿಘ್ನತೆ ಕುರಿತು ಜ್ಯೋತಿಷಿಯೊಬ್ಬರು ಹೇಳಿದ್ದರು. ಅವರು 2013ರಲ್ಲಿ ಎಕ್ಸ್‌ನಲ್ಲಿ ಈ ಕುರಿತಾಗಿ ಪೋಸ್ಟ್ ಮಾಡಿದ್ದರು. ಪ್ರಶಾಂತ್ ಕಿನಿ ಎಂಬ ಬಳಕೆದಾರ 2023 ರ ಡಿಸೆಂಬರ್‌ನಲ್ಲಿ ನೇಪಾಳವು 2025 ರ ವೇಳೆಗೆ ಪ್ರಜಾಪ್ರಭುತ್ವದ ಪತನ ಮತ್ತು ರಾಜಪ್ರಭುತ್ವಕ್ಕೆ ಮರಳುತ್ತದೆ ಎಂದು ಭವಿಷ್ಯ ನುಡಿದಿದ್ದರು.
ಇದರ ನಂತರ ಕಳೆದ ಮಂಗಳವಾರ ಅವರು ಭಾರತ ಮುಂದಿನದು ಎಂಬ ಆಘಾತಕಾರಿ ಭವಿಷ್ಯ ನುಡಿದಿದ್ದಾರೆ. ದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದ್ದಂತೆ, ಎರಡು ವರ್ಷಗಳ ಹಳೆಯ ಪೋಸ್ಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಹಾಗೆ ಇದು ಎಲ್ಲರ ಅಚ್ಚರಿಗೂ ಕಾರಣವಾಗಿದೆ. ಅವರ ಪ್ರಕಾರ ನೇಪಾಳದ ಬಗ್ಗೆ ನನ್ನ ಭವಿಷ್ಯ. ನೇಪಾಳದಲ್ಲಿ ಪ್ರಜಾಪ್ರಭುತ್ವದ ಅಂತ್ಯ ಹತ್ತಿರದಲ್ಲಿದೆ. 2025 ರಲ್ಲಿ ನೇಪಾಳಕ್ಕೆ ರಾಜಪ್ರಭುತ್ವ ಮರಳುತ್ತದೆ ಎಂದು ಬರೆದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅವರ ಈ ಭವಷ್ಯ 2 ವರ್ಷದ ಬಳಿಕ ಈಗ ನಿಜವಾಗುತ್ತಿದೆ.
ಭಾರತದಲ್ಲೂ ಪ್ರಜಾಪ್ರಭುತ್ವಕ್ಕೆ ಅಪಾಯ!
ಪ್ರಶಾಂತ್ ಕಿನಿ ಅವರ ಭವಿಷ್ಯದಂತೆ 2039ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳಲಿದೆಯಂತೆ. ಆದರೆ ಈ ಸಮಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲವಂತೆ. ಅವರ ಪ್ರಕಾರ, 2039 ರಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ.... ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ. 2039 ರ ನಂತರ, ಯಾವುದೇ ಚುನಾವಣೆಗಳಿಲ್ಲ... ಪ್ರಜಾಪ್ರಭುತ್ವದ ಅಂತ್ಯ.... ಒಟ್ಟು 91 ವರ್ಷಗಳ ಪ್ರಜಾಪ್ರಭುತ್ವ ಅಂತ್ಯ..'' ಎಂದು ಅವರು ಬರೆದುಕೊಂಡಿದ್ದಾರೆ.
ನೇಪಾಳ ಪ್ರತಿಭಟನೆಯ ಭವಿಷ್ಯವಾಣಿಗಳ ಹೊರತಾಗಿ, ಕಿನಿ ಅವರ ಇತರ ಭವಿಷ್ಯವಾಣಿಗಳು ಈಗ ಸಾಮಾಜಿಕ ಮಾಧ್ಯಮದಲ್ಲಿಯೂ ಹರಿದಾಡುತ್ತಿವೆ. ಅಕ್ಟೋಬರ್ 2023 ರಲ್ಲಿ ಅವರು ಹೇಳಿದಂತೆ. ಕತಾರ್‌ನಲ್ಲಿ ಜೂನ್ 2025 ಮತ್ತು ಜುಲೈ 2026 ರ ನಡುವೆ ಆಡಳಿತ ವರ್ಗವು ಗಂಭೀರ ಸಮಸ್ಯೆಗಳ ಎದುರಿಸಲಿದೆ ಮತ್ತು 2028/29 ರಲ್ಲಿ ದೇಶವು ಆರ್ಥಿಕ ಕುಸಿತ, ದೊಡ್ಡ ಪ್ರಮಾಣದ ಬಾಂಬ್ ದಾಳಿ, ಸಂಭವನೀಯ ಭಯೋತ್ಪಾದಕ ದಾಳಿಗಳು ಸೇರಿದಂತೆ ದೊಡ್ಡ ವಿನಾಶವನ್ನು ಅನುಭವಿಸುತ್ತದೆ ಎಂಬ ಆತಂಕಕಾರಿ ಪೋಸ್ಟ್ ಅವರು ಮಾಡಿದ್ದಾರೆ.
ಈ ಎಲ್ಲಾ ಭವಿಷ್ಯವಾಣಿಗಳು ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದ, ನೋಡಿದವರು ಅಚ್ಚರಿಯ ಜೊತೆಗೆ ಆಘಾತಕ್ಕೆ ಒಳಾಗಿದ್ದಾರೆ. ಹಾಗೆ ನೇಪಾಳದಲ್ಲಿ ನಡೆದಿರುವ ಘಟನೆಯನ್ನು ಅವರು 2 ವರ್ಷ ಮುನ್ನವೆ ನಿಖರವಾಗಿ ಭವಿಷ್ಯ ನುಡಿದಿರುವುದು ಹಾಗೆ ಭಾರತದ ಕುರಿತಾದ ಅವರ ಭವಿಷ್ಯದಿಂದ ಎಲ್ಲರಲ್ಲೂ ಭಯ ಕಾಡುತ್ತಿದೆ.



Click it and Unblock the Notifications