Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಶಬರಿಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ ಮುಗಿಸಿದ ವ್ಯಕ್ತಿ: ಧಾರ್ಮಿಕ ಭಾವನೆಗೆ ಧಕ್ಕೆ ತಂದ ವೀಡಿಯೋ
ಶಬರಿಮಲೆಗೆ ಮಾಲೆ ಹಾಕುವುದು ಎಂದರೆ ಯಾರು ಆ ಕಠಿಣ ವ್ರತ ನಿಯಮಗಳನ್ನು ಪಾಲಿಸಲು ಸಾಧ್ಯವೋ ಅವರು ಮಾತ್ರೆ ಹಾಕಬೇಕು. ಮಾಲೆ ಹಾಕುವ ಕೆಲ ದಿನಗಳ ಮೊದಲೇ ಈ ವ್ರತ ನಿಯಮ ಶುರು ಮಾಡುತ್ತಾರೆ, ಮಾಲೆ ಹಾಕಿದ ದಿನದಿಂದ 41 ದಿನಗಳವರೆಗೆ ಆ ಕಠಾಇಣ ನಿಯಮ ಅನುಸರಿಸಬೇಕು, ಮಾಲೆ ಹಾಕಿದ ಮೇಲೆ ಅವರನ್ನು ಸ್ವಾಮಿಗಳೆಂದು ಕರೆಯುತ್ತೇವೆ, ಏಕೆಂದರೆ ಅವರು ಅಷ್ಟೂ ಸ್ವಾಮಿಯಂತೆಯೇ ವರ್ತಿಸಬೇಕು.
ಮಲೆಗೆ ಮಾಲೆ ಹಾಕಿ ಹೆಣ್ಣು ನೋಡುವ ಶಾಸ್ತ್ರ
ಆದರೆ ಇಲ್ಲೊಬ್ಬರು ಮಲೆಗೆ ಮಾಲೆ ಹಾಕಿ, ನಂತರ ಹೆಣ್ಣು ನೋಡಲು ಹೋಗಿರುವ ವೀಡಿಯೋ ತುಂಬಾನೇ ವೈರಲ್ ಆಗಿದೆ, ಏನು ಕಾಲ ಬಂತ ಸ್ವಾಮಿ ಎಂದು ಜನ ಅವರ ವರ್ತನೆಗೆ ಬೇಸರ ವ್ಯಕ್ತಪಡಿಸಿದ್ದಾರೆ, ಇನ್ನೂ ವಿಶೇಷತೆಯೆಂದರೆ ಅವರ ಮನೆಯ ಹಿರಿಯರು ಇದಕ್ಕೆ ಸಾಥ್ ನೀಡಿದ್ದಾರೆ.

ಮನೆಗೆ ಹುಡುಗಿ ನೋಡಲು ಬಂದಾಗ ಆ ಹುಡುಗಿಯ ಸಂಭ್ರಮ, ಮಾಲೆಧಾರಿ ವ್ಯಕ್ತಿ ಹಾಗೂ ಆ ವ್ಯಕ್ತಿ ಇಬ್ಬರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದು ನಂತರ ಜೊತೆಯಾಗಿ ನಿಂತು ಫೋಟೋ ತೆಗಿಸಿಕೊಂಡ ವೀಡಿಯೋ ಇದೀಗ ನೆಟ್ಟಿಗರ ಗಮನ ಸೆಳೆದಿದೆ.
ಮಾಲೆ ಹಾಕಿದಾಗ ಸ್ತ್ರೀಯರನ್ನು ಹಾಗೂ ಹೆಂಡತಿಯ ಮುಖವನ್ನು ನೋಡುವುದು ತಪ್ಪಾಗುತ್ತದೆ ಎಂದು ವ್ರತಾಚರಣೆಯ ನಿಯಮವೇ ಹೇಳುತ್ತದೆ.
ಗುರುಗಳು ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ಉದ್ದೇಶ ಬಹುಶಃ ಈ ತಪ್ಪನ್ನು ಮಾಡಬೇಡಿ ಎಂದು ತಿಳಿಸಲಿಕ್ಕೆ ಎನಿಸುತ್ತದೆ.
ಸ್ವಾಮಿ ಶರಣು ಅಯ್ಯಪ್ಪಾ..... ಎಂದು ಕೆಲವರು ಪೋಸ್ಟ್ ಹಾಕುತ್ತಿದ್ದಾರೆ.
ಮಾಲೆಧಾರಿ ವ್ಯಕ್ತಿ ಸ್ತ್ರೀಯನ್ನು ಮೋಹಿಸಬಾರದು ಎಂದು ವ್ರತ ನಿಯಮದಲ್ಲಿದೆ
* ಶಬರಿಮಲೆಗೆ ಮಾಲೆ ಹಾಕಿ ಹೋಗುವುದು ಎಂದರೆ ತಮಾಷೆಯ ವಿಷಯವಲ್ಲ, 41 ದಿನ ಕಟ್ಟುನಿಟ್ಟಿನ ವ್ರತ ಮಾಡಬೇಕು.
* ಹೆಣ್ಣಿನ ಸಂಪರ್ಕ ಮಾಡಬಾರದು, ಹೆಣ್ಣಿನ ಬಗ್ಗೆ ಯಾವುದೇ ಮೋಹವಿರಬಾರದು
* ಸಾತ್ವಿಕ ಆಹಾರವನ್ನಷ್ಟೇ ಸೇವಿಸಬೇಕು.
* ಹಾಸಿಗೆಯಲ್ಲಿ ಮಲಗಬಾರದು
* ಮದ್ಯ, ಧೂಮಪಾನ ಮಾಡಬಾರದು
* ಕೆಟ್ಟ ಆಲೋಚನೆ ಮಾಡಬಾರದು
* ಕೆಟ್ಟ ಪದಗಳನ್ನು ಮಾತನಾಡಬಾರದು.
ಮಾಲೆಹಾಕಿದಾಗ ಹೆಣ್ಣು ನೋಡಲು ಹೋದರೆ ಅದು ತಪ್ಪೇ?
ಅಯ್ಯಪ್ಪಸ್ವಾಮಿ ವ್ರತ ನಿಯಮದ ಪ್ರಕಾರ ಹೆಣ್ಣಿನ ಮೇಲೆ ಮಾಲೆ ಹಾಕಿದಾಗ ಯಾವುದೇ ಮೋಹ ಉಂಟಾಗಬಾರದು. ಹೆಣ್ಣು ನೋಡಲು ಹೋಗಿ ಆ ಹೆಣ್ಣು ಇಷ್ಟವಾದಾಗ ಅವಳ ಬಗ್ಗೆ ಮೋಹಗಳು ಹುಟ್ಟಿಕೊಳ್ಳುವುದು.
ಹಾಗಾದರೆ ಪ್ರೀತಿಯಲ್ಲಿ ಇದ್ದವರು ಮಾಲೆಧಾರಿ ಆದರೆ ಅವರಲ್ಲಿ ಮೋಹಗಳು ಇರುವುದಿಲ್ಲವೇ?
ಪ್ರೀತಿಯಲ್ಲಿರುವವರು, ಮದುವೆಯಾದವರು ಮಲೆಗೆ ಮಾಲೆ ಹಾಕಿದಾಗ ಅಯ್ಯಪ್ಪಸ್ವಾಮಿ ಕಠಿಣ ನಿಯಮಗಳನ್ನು ಪಾಲಿಸುತ್ತಾರೆ. ಈ ಅವಧಿಯಲ್ಲಿ ತನ್ನ ಮಡದಿ ಅಥವಾ ಸ್ನೇಹಿತೆಯೊಂದಿಗೆ ಹೆಚ್ಚಿನ ಕರೆ ಮಾಡುವುದಿಲ್ಲ. ಯಾವುದೇ ರೊಮ್ಯಾಂಟಿಕ್ ಮಾತುಗಳನ್ನಾಡಲ್ಲ, ಹೀಗಾಗಿ ಈ ರೀತಿ ಮಲೆಗೆ ಮಾಲೆ ಹಾಕಿ ಇಂಥ ಕಾರ್ಯಗಳನ್ನು ಮಾಡಬಾರದು ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಶ್ರೀ ಧರ್ಮಶಾಸ್ತ ಅಯ್ಯಪ್ಪ ಎಂಬ ಸೋಷಿಯಲ್ ಮೀಡಿಯಾ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಆಗಿದೆ, ಯಾರೂ ಈ ಕಾರ್ಯ ಮಾಡಬೇಡಿ ಎಂದು ಹೇಳಲು ಆ ಪೇಜ್‌ನಲ್ಲಿ ಈ ವೀಡಿಯೋ ಪೋಸ್ಟ್ ಮಾಡಿರಬಹುದು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ
ಧಾರ್ಮಿಕ ಭಾವನೆಗಳನ್ನು ಗೌರವಿಸಬೇಕು, ಅದಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಬಾರದು, ಆದರೆ ಈ ವ್ಯಕ್ತಿ ಮಾಲೆಧಾರಿಯಾಗಿ ಹೆಣ್ಣು ನೋಡಲು ಹೋಗಿದ್ದು ಮಾತ್ರವಲ್ಲ ಅದನ್ನು ವೀಡಿಯೋ ಮಾಡಿ ಹಾಕಿದ್ದಾರೆ. ನಾವು ಅಯ್ಯಪ್ಪಸ್ವಾಮಿ ವ್ರತ ನಿಯಮ ಅನುಸರಿಸುವುದಾದರೆ ಮಾತ್ರ ಮಾಲೆಹಾಕಬೇಕು, ಶೋಕಿಗಾಗಿ ಮಾಲೆ ಹಾಕಬಾರದು, ಈ ಕುರಿತು ನಿಮ್ಮ ಅಭಿಪ್ರಾಯವೇನು?



Click it and Unblock the Notifications
