Latest Updates
-
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ!
ಕೊನೆಯ ಮೊಘಲ್ ದೊರೆ ಜಾಫರ್ ಧರಿಸಿದ್ದ ವಜ್ರ ಖಚಿತ ಕಿರೀಟ ಏನಾಯಿತು? ಈಗ ಎಲ್ಲಿದೆ ಗೊತ್ತಾ?
ನೀವು ಮೊಘಲ್ ಸಾಮ್ರಾಜ್ಯ ಭಾರತದಲ್ಲಿ ಆಳ್ವಿಕೆ ಮಾಡಿರುವ ಕುರಿತಂತೆ ತಿಳಿದಿರುತ್ತೀರಿ. ಮೊಘಲ್ ದೊರೆಗಳು ದಶಕಗಳ ಕಾಲ ಆಳ್ವಿಕೆ ನಡೆಸಿದ್ದು. ಅದರಲ್ಲಿ ಹೆಚ್ಚಾಗಿ ನಾವು ಕೇಳುವುದು ಹುಮಾಯುನ್, ಅಕ್ಬರ್, ಜಹಾಂಗೀರ್, ಷಹಜಹಾನ್, ಮತ್ತು ಔರಂಗಜೇಬ್ ಹೆಸರುಗಳು. ಇನ್ನುಳಿದಂತೆ ಹತ್ತಾರು ಮಂದಿ ರಾಜರು ಈ ಸಮಯದಲ್ಲಿ ಆಳ್ವಿಕೆ ನಡೆಸಿದ್ದರು ಆವರ ಹೆಸರುಗಳು ಮಾತ್ರ ಇತಿಹಾಸದಲ್ಲಿ ಉಳಿಯಲಿಲ್ಲ.
ಹಾಗೆ ಮೊಘಲ್ ಆಳ್ವಿಕೆಯ ಕಾಲದಲ್ಲಿ ಅತ್ಯಂತ ಶ್ರೀಮಂತಿಕೆ ಇತ್ತು. 32 ಮಿಲಿಯನ್ ರೂಪಾಯಿಯಲ್ಲಿ ತಾಜ್ ಮಹಲ್ ಕಟ್ಟಲಾಗಿತ್ತು. ಹಾಗೆ ತಾಜ್ ಮಹಲ್‌ನ ಮೇಲಿದ್ದ ಅರ್ಧ ಚಂದ್ರಾಕೃತಿಯ ವಸ್ತುವನ್ನು ಸಂಪೂರ್ಣ ಚಿನ್ನದಿಂದಲೇ ಮಾಡಲಾಗಿತ್ತು. ಆದ್ರೆ ಬ್ರಿಟೀಷರ ಆಳ್ವಿಕೆಯ ಸಮಯದಲ್ಲಿ ಈ ಚಿನ್ನದ ವಸ್ತುವನ್ನು ಕೆಳಗಿಳಿಸಿ ಅಲ್ಲಿ ತಾಮ್ರದಿಂದ ಮಾಡಿದ ವಸ್ತುವನ್ನು ಇಟ್ಟುರು ಎಂದು ತಿಳಿದುಬರುತ್ತದೆ.

ಇನ್ನು ಮೊಘಲ್ ಆಳ್ವಿಕೆ ಭಾರತದಲ್ಲಿ ಕೊನೆಗೊಂಡಿದ್ದು ಹೇಗೆ ಎಂಬುದಕ್ಕೂ ಕೂಡ ಹಲವು ರೀತಿಯ ಘಟನೆಗಳು ಕಾರಣ ಎಂದು ವಿವರಿಸಲಾಗುತ್ತದೆ. ಅದರಲ್ಲೂ ಕೊನೆಯ ದೊರೆ ಬಹದ್ದೂರ್ ಶಾ ಜಾಫರ್ ಕುರಿತು ಬಹುತೇಕರಿಗೆ ತಿಳಿದಿರುವುದಿಲ್ಲ. ರಾಜ ಜಾಫರ್ ಆಳ್ವಿಕೆಯಲ್ಲಿ ಮೊಘಲ್ ಸಾಮ್ರಾಜ್ಯ ಬಹಳ ಶ್ರೀಮಂತಿಕೆಯಿಂದ ತುಂಬಿತ್ತು. ಆತ ಮೊಘಲರ ಕೊನೆಯ ರಾಜ ಎನಿಸಿಕೊಂಡಿದ್ದ. ಆತನ ನಂತರ ಮೊಘಲ್ ಸಾಮ್ರಾಜ್ಯದ ಆಳ್ವಿಕೆ ಕೊನೆಗೊಂಡಿತ್ತು.
ಅದರಲ್ಲು ಬಹದ್ದೂರ್ ಶಾ ಜಾಫರ್ ಧರಿಸುತ್ತಿದ್ದ ಕಿರೀಟ ಆಗಿನ ಕಾಲದ ಅತ್ಯಂತ ಅಮೂಲ್ಯ ಹಾಗೂ ದುಬಾರಿಯಾದ ವಸ್ತು ಎಂದು ಪರಿಗಣಿಸಲಾಗಿತ್ತು. ಇದು ಇತಿಹಾಸದ ಪುಟದಲ್ಲಿ ಜಾಗ ಪಡೆದಿದೆ. ಆದ್ರೆ ಈ ದುಬಾರಿ ಮೌಲ್ಯದ ಕಿರೀಟ ಕೊನೆಗೆ ಏನಾಯಿತು. ಅದು ಈಗ ಎಲ್ಲಿದೆ ಎಂಬುದು ನಿಮಗೆ ಗೊತ್ತಾ?
ಬಹದ್ದೂರ್ ಶಾ ಜಾಫರ್ ಧರಿಸುತ್ತಿದ್ದ ವಜ್ರ ಖಚಿತ ಕರೀಟವು ಈಗ ಲಂಡನ್‌ನಲ್ಲಿದೆ. 1857ರ ಮೊದಲ ಸ್ವಾತಂತ್ರ ಸಂಗ್ರಾಮದ ನಂತರ ಮೊಘಲ್ ಆಳ್ವಿಕೆ ಕೊನೆಗೊಂಡಿತು, ಹಾಗೆ ಈ ಸಮಯದಲ್ಲಿ ಬ್ರಿಟಿಷರು ಭಾರತದಿಂದ ಅಮೂಲ್ಯ ವಸ್ತುಗಳ ಹೊತ್ತೊಯ್ದಿದ್ದರು. ಅದರಲ್ಲಿ ಈ ಬಹದ್ದೂರ್ ಶಾ ಜಾಫರ್ ಕಿರೀಟ ಕೂಡ ಸೇರಿತ್ತು.
ಈ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯಾಗಿದ್ದ ಮೇಜರ್ ರಾಬರ್ಟ್ ಟೇಲರ್ ಎಂಬಾತ ಈ ಕಿರೀಟವನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು, ಅನಂತರ ಇಂಗ್ಲೆಂಡ್ ರಾಣಿ ವಿಕ್ಟೋರಿಯಾ ಕೈಗೆ ಹಸ್ತಾಂತರಿಸಿದ್ದರು. ಅನಂತರ ಅದನ್ನು ಲಂಡನ್ ವಸ್ತು ಸಂಗ್ರಹಾಲಯದಲ್ಲಿ ಇಡಲಾಗಿದೆ. ಅಲ್ಲಿಯೇ ಕೋಹಿನೂರ್ ಡೈಮಂಡ್ ಕೂಡ ಇರಿಸಲಾಗಿದೆ.
1857ರ ಸಮಯದಲ್ಲಿ ಬ್ರಿಟೀಷರು ಭಾರತದಲ್ಲಿ ಧಂಗೆಗೆ ಮುಂದಾದರು. ಈ ವೇಳೆ ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ ಬ್ರಿಟೀಷರ ವಿರುದ್ಧ ಯುದ್ಧಕ್ಕಿಳಿದ. ಆದ್ರೆ ಆತನಿಂದ ಬ್ರಿಟೀಷರ ವಿರುದ್ಧ ಹೋರಾಡಲು ಸಾಧ್ಯವಾಗಲಿಲ್ಲ. ಈ ವೇಳೆ ಸೆರೆಯಾದ ಮೊಘಲ್ ದೊರೆಯನ್ನು ಬರ್ಮಾ ದೇಶಕ್ಕೆ ಕಳುಹಿಸಲಾಗಿತ್ತು. ಮೊಘಲ್ ಸಾಮ್ರಾಜ್ಯದ ಕೊನೆಯ ದೊರೆ 1862ರಲ್ಲಿ ನಿಧನ ಹೊಂದಿದ.
ಅನಂತರ ಈ ಅಮೂಲ್ಯ ಕಿರೀಟವನ್ನು ಹರಾಜು ಕೂಡ ಹಾಕಲಾಗಿತ್ತು. ರಾಬರ್ಟ್ ಕ್ರಿಸ್ಟೋಫರ್ ಟೈಟ್ಲರ್ ಈ ಕಿರೀಟವನ್ನು ಖರೀದಿಸಿದರು. ಇದರ ನಂತರ ಬ್ರಿಟಿಷರು ದೆಹಲಿಯಲ್ಲಿ ಅವರ ಎಲ್ಲಾ ಅಮೂಲ್ಯ ವಸ್ತುಗಳನ್ನು ಹರಾಜು ಹಾಕಿದರು. ಈ ಹರಾಜಿನಲ್ಲಿ ಮೇಜರ್ ರಾಬರ್ಟ್ ಕ್ರಿಸ್ಟೋಫರ್ ಟೈಟ್ಲರ್ ಕಿರೀಟ ಮತ್ತು ಎರಡು ಸಿಂಹಾಸನಗಳನ್ನು ಖರೀದಿಸಿದರು. ಅವರು ಅವುಗಳನ್ನು ಇಂಗ್ಲೆಂಡ್‌ಗೆ ತೆಗೆದುಕೊಂಡು ಹೋದರು ಎಂದು ಹೇಳಲಾಗಿದೆ.
ಈ ಕಿರೀಟವು ವಜ್ರ, ಚಿನ್ನ, ಮುತ್ತುಗಳಿಂದ ಅಲಂಕರಿಸಲಾಗಿತ್ತು. ಅಂದಿನ ಕಾಲದಲ್ಲೇ ಇದೊಂದು ಅಮೂಲ್ಯ ವಸ್ತು ಎಂದು ಪರಿಗಣಿಸಲಾಗಿತ್ತು. ಇಂದಿಗೂ ಲಂಡನ್ ವಸ್ತು ಸಂಗ್ರಹಾಲಯದಲ್ಲಿ ಇರಿಸಲಾಗಿದೆ.



Click it and Unblock the Notifications
