Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಬೆಳ್ತಂಗಡಿಯ ಮನೆಯಲ್ಲಿ ಪ್ರೇತ ಕಾಟ, 22 ವರ್ಷಗಳ ಹಿಂದೆ ನಡೆದಿತ್ತಂತೆ ಇಂಥದ್ಧೇ ಘಟನೆ: ಹುಲಿಕಲ್ ನಟರಾಜ್ ಏನಂತಾರೆ?
ದೆವ್ವ ಭೂತಗಳ ಬಗ್ಗೆ ತುಂಬಾ ಅಂತೆ ಕಂತೆಗಳ ಬಗ್ಗೆ ಕೇಳುತ್ತೇವೆ, ಕೆಲವರು ದೆವ್ವ ಇದೆಯೆಂದು ಹೇಳಿದರೆ ಇನ್ನು ಕೆಲವರು ದೆವ್ವ ಇಲ್ಲ ಎಂದು ಹೇಳುತ್ತಾರೆ, ಅದೇನೆ ಇರಲಿ ಸದ್ಯಕ್ಕೆ ದಕ್ಷಿಣಕನ್ನಡದ ಬೆಳ್ತಂಗಡಿಯ ಮನೆಯೊಂದು ರಾಜ್ಯ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಅಲ್ಲಿ ದೆವ್ವವಿದೆಯೆಂದು ಎಂಬ ಸುದ್ದಿ ಜೋರಾಗಿ ಹರಡಿದೆ. ಏನಿದು ಪ್ರಕರಣ, ಇದರ ಬಗ್ಗೆ ಹುಲಿಕಲ್ ನಟರಾಜ್ ಅವರು ಖಾಸಗಿ ಸುದ್ದಿ ವಾಹಿನಿ ಜೊತೆಗೆ ಮಾತನಾಡಿದಾಗ ಏನು ಹೇಳಿದರು ಎಂದು ನೋಡೋಣ ಬನ್ನಿ:

ಏನಿದು ಪ್ರಕರಣ?
ಬೆಳ್ತಂಗಡಿಯ ಮಾಲಾಡಿಯ ಮನೆಯೊಂದರಲ್ಲಿ ಪ್ರೇತ ಕಾಟವಿದೆಯೆಂದು ಮನೆಯನ್ನೇ ತೊರೆದಿದ್ದಾರೆ, ಆ ಮನೆಯಲ್ಲಿರುವವರೆ ಕಳೆದ 2-3 ತಿಂಗಳಿಂದ ತುಂಬಾನೇ ತೊಂದರೆ ಉಂಟಾಗುತ್ತಿದೆ, ಆ ಮನೆಯಲ್ಲಿ ನೆಲೆಸಲು ಭಯಪಟ್ಟು ಆ ಮನೆಯವರೆಲ್ಲಾ ಬೇರೆ ಕಡೆಗೆ ಹೋಗಿ ಇದ್ದಾರೆ. ಆ ಮನೆಯಲ್ಲಿ ಅಗೋಚರ ಶಕ್ತಿಯಿದೆ ಎಂದು ಆ ಮನೆಯಲ್ಲಿ ನೆಲೆಸಿದ್ದವರು ಬಲವಾಗಿ ನಂಬಿದ್ದಾರೆ, ನಮಗೆ ಅದರಿಂದ ತೊಂದರೆ ಉಂಟಾಗುತ್ತಿದೆ ಎಂದು ಹೇಳುತ್ತಿದ್ದಾರೆ. ಇದೀಗ ಆ ಸುದ್ದಿ ಎಲ್ಲಾ ಕಡೆ ಹರಡಿದ್ದು ಅಕ್ಕ ಪಕ್ಕದ ಗ್ರಾಮದಿಂದ ಆ ಮನೆಗೆ ಜನರು ಆಗಮಿಸುತ್ತಿದ್ದಾರೆ. ಆ ಮನೆಯಲ್ಲಿ ಪ್ರೇತದ ಸಮಸ್ಯೆಯಿದೆ ಎಂಬ ಸುದ್ದಿ ಸಾಕಷ್ಟು ಜನರಲ್ಲಿ ಕುತೂಹಲ ಕೆರಳಿಸಿದೆ.
ಈ ಮನೆಯಲ್ಲಿ ಯಾರೋ ಇದ್ದಾರೆ ಎಂಬ ಅನುಭವ ಉಂಟಾಗಿದೆ ಎನ್ನುತ್ತಿರುವ ಮನೆಯವರು
ಆ ಮನೆಯಲ್ಲಿ ಗಂಡ-ಹೆಂಡತಿ, ಮಕ್ಕಳು ಎಲ್ಲರೂ ನಮಗೆ ಈ ಪ್ರೇತದಿಂದ ತೊಂದರೆಯಾಗುತ್ತಿದೆ ಎಂಬುವುದಾಗಿ ಹೇಳಿದ್ದಾರೆ. 15 ವರ್ಷದಿಂದ ಆ ಮನೆಯ ಒಡೆಯ ಉಮೇಶ್ ಎಂಬುವವರು ಕುಟುಂಬದ ಜೊತೆಗೆ ವಾಸಿಸುತ್ತಿದ್ದಾರೆ, ಈ ರೀತಿಯ ಅನುಭವ ಯಾವತ್ತಿಗೂ ಆಗಿರಲಿಲ್ಲ, ಆದರೆ ಊರು ತಿಂಗಳಿನಿಂದ ನಮಗೆ ಕೆಲ ತೊಂದರೆಗಳು ಉಂಟಾಗುತ್ತಿತ್ತು. ನಾವು ತುಂಬಾ ಕಡೆ ವಿಚಾರಿಸಿದಾಗ ಮಾಟ, ಮಂತ್ರ ಮಾಡಿದ್ದಾರೆ ಎಂದು ಹೇಳುತ್ತಿದ್ದಾರೆ, ಇದುವರೆಗೆ ಈ ಸಮಸ್ಯೆ ಇರಲಿಲ್ಲ, ಆದರೆ ಈಗ ಸಮಸ್ಯೆಯಾಗುತ್ತಿದೆ ಎಂಬುವುದಾಗಿ ಹೇಳುತ್ತಿದ್ದಾರೆ.
ಮಕ್ಕಳು ತೆಗೆದ ಫೋಟೋದಲ್ಲಿ ಬಿಳಿಯ ಆಕೃತಿ
ಆ ಮನೆಯ ಮಗಳು ತೆಗೆದ ಪೋಟೋದಲ್ಲಿ ದೆವ್ವದ ಆಕಾರ ಕಂಡು ಬಂದಿದೆ ಎಂದು ಹೇಳಲಾಗುತ್ತಿದೆ, ಆ ಮಕ್ಕಳೇ ಹೇಳುವಂತೆ ಏನೋ ಶಬ್ದ ಬಂದಾಗ ಅಕ್ಕ ಯೂಟ್ಯೂಬ್ ನೋಡ್ತಾ ಇದ್ದಳು, ಅವಳ ಕೈಯಿಂದ ಮೊಬೈಲ್ ತೆಗೆದು ನಾನು ಫೋಟೋ ಕ್ಲಿಕ್ ಮಾಡಿದೆ, ಆದರೆ ಮೊದಲಿಗೆ ಏನೂ ಕಾಣಲಿಲ್ಲ, ಆದರೆ ಝೂಮ್ ಮಾಡಿ ನೋಡಿದಾಗ ಬಿಳಿಯಾಕಾರದಲ್ಲಿ ಒಂದು ಆಕೃತಿ ಕಂಡು ಬಂದು ಭಯವಾಯ್ತು ಎಂದು ಹೇಳಿದ್ದಾರೆ, ಈ ಫೋಟೋವನ್ನು ಫೆಬ್ರವರಿ 2ರಂದು ಕ್ಲಿಕ್ಕಿಸಲಾಗಿದೆ.
ಮನೆಯಲ್ಲಿ ಇದ್ದಕ್ಕಿದ್ದಂತೆ ಬಟ್ಟೆಗೆ ಬೆಂಕಿ ಹೊತ್ತಿಕೊಳ್ಳುತ್ತೆ, ಔಷಧ ಬಾಟಲಿಗಳು ನೆಲಕ್ಕೆ ಬೀಳುತ್ತೆ, ದೂಡಿದ ಅನುಭವವಾಗುತ್ತೆ
ಕತ್ತಲಾಗುತ್ತಿದ್ದಂತೆ ಆ ಮನೆಯಲ್ಲಿ ವಾಸಿಸುವುದು ಭಯವಾಗುತ್ತೆ, ನಮ್ಮನ್ನು ದೂಡಿದಂತೆ ಅನಿಸುತ್ತದೆ, ಬಟ್ಟೆಗೆ ಬೆಂಕಿ ಹೊತ್ತಿಕೊಳ್ಳುತ್ತೆ, ಮನೆಗೆ ಪ್ರಸಾದ ತಂದಿಟ್ಟರೆ ಅದು ಅಲ್ಲಿರಲ್ಲ, ನಮ್ಮನ್ನು ದೂಡಿದಂಥ ಅನುಭವ ಉಂಟಾಗುತ್ತದೆ ಹೀಗೆ ತಮ್ಮ ಅನುಭವಗಳ ಬಗ್ಗೆ ಹೇಳುತ್ತಿದ್ದಾರೆ.
ಒಟ್ಟಿನಲ್ಲಿ ಈ ಪ್ರೇತದ ಕತೆ ಜನರಲ್ಲಿ ತುಂಬಾನೇ ಕುತೂಹಲ ಉಂಟು ಮಾಡಿದೆ, ಹೀಗಾಗಿ ನೂರಾರು ಸಂಖ್ಯೆಯಲ್ಲಿ ಜನರು ಅಲ್ಲಿಗೆ ಬರ್ತಾ ಇದ್ದಾರೆ.
ಹುಲಿಕಲ್ ನಟರಾಜ್ ಕೂಡ ಆ ಸ್ಥಳಕ್ಕೆ ಬರಲು ಸಿದ್ಧವಿದ್ದಾರೆ
ಈ ದೆವ್ವಭೂತ ಅದು ಈ 21ನೇ ಶತಮಾನದಲ್ಲಿ ಇದೆ ಎಂದರೆ ನಂಬುವಂಥ ವಿಷಯವಲ್ಲ, ಅಂಥದ್ದೇನೂ ಇರಲ್ಲ, ಬೇರೆ ಯಾವುದೋ ಕಾರಣವಿರಬಹುದು ಅಥವಾ ಬೇರೆ ಯಾರೋ ಮಾಡ್ತಲೂ ಇರಬಹುದು, ಇದರ ಬಗ್ಗೆ ಅಲ್ಲಿಗೆ ನಾ ನು ಬಂದರೆ ನನಗೆ ತಿಳಿಯುತ್ತೆ, ಆ ಮನೆಯಲ್ಲಿ ಎರಡು ದಿನ ನೆಲೆಸಲು ಕೂಡ ನಾನು ಸಿದ್ದ ಎಂದು ಹುಲಿಕಲ್ ನಟರಾಜ್ ಹೇಳಿದ್ದಾರೆ.
ಸುಮಾರು 22 ವರ್ಷಗಳ ಹಿಂದೆ ಕೂಡ ಇಂಥದ್ದೇ ಘಟನೆ ನಡೆದಿತ್ತೇ?
ಇದೀಗ ಈ ಸುದ್ದಿ ಕೇಳಿ ಬಂದ ಅಲ್ಲಿಯ ಸ್ಥಳೀಯರೊಬ್ಬರು ಸುಮಾರು 22 ವರ್ಷಗಳ ಹಿಂದೆ ಅಲ್ಲಿಗೆ ಸಮೀಪವಿರುವ ಮತ್ತೊಂದು ಗ್ರಾಮದಲ್ಲಿ ಈ ರೀತಿಯ ಘಟನೆ ನಡೆದಿತ್ತು, ಪೊಲೀಸ್ ಆಫೀಸರ್‌ಗಳು ಕೂಡ ಬಂದಿದ್ದರು. ಆ ಮನೆಯಲ್ಲಿ ಕಾಯಿಸ;ು ಇಟ್ಟ ಹಾಲಿನ ಪಾತ್ರೆ ಕೆಳಗ್ಗೆ ಬೀಳ್ತಾ ಇತ್ತು, ಮನೆ ಮೇಲೆ ಕಲ್ಲುಗಳು ಬೀಳ್ತಾ ಇತ್ತು, ಕಿಟಕಿಗಳಿಗೆ ಕಲ್ಲುಗಳು ಬಿದ್ದು ಪುಡಿಪುಡಿಯಾಗ್ತಾ ಇತ್ತು, ಆದರೆ ಏಕೆ ಆಯ್ತು ಎಂಬುವುದು ಮಾತ್ರ ತಿಳಿಯಲೇ ಇಲ್ಲ, ಕೊನೆಗೆ ಆ ಮನೆಯನ್ನು ಖಾಲಿ ಮಾಡಿ ಹೋದರು, ಆ ಮನೆಯಲ್ಲಿ ಯಾರೂ ಇರಲೇ ಎಂಬುವುದಾಗಿ ಹೇಳಿದ್ದಾರೆ.
ಹುಲಿಕಲ್ ನಟರಾಜ್ ಬಂದ ಮೇಲೆ ಈ ಸಮಸ್ಯೆಗೆ ಪರಿಹಾರ ಸಿಗುವುದೇ ಕಾದು ನೋಡಬೇಕಷ್ಟೇ:



Click it and Unblock the Notifications