Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದೆಹಲಿ ಕೆಂಪುಕೋಟೆ ಹಿಂದೆ ಬಿಳಿ ಬಣ್ಣದಿಂದ ಕೂಡಿತ್ತು..! ಈ ಅಚ್ಚರಿ ವಿಷಯ ನಿಮಗೆ ಗೊತ್ತಾ?
ದೆಹಲಿ ಹೆಸರು ಕೇಳಿದ ತಕ್ಷಣ ನಿಮಗೆ ಸಂಸತ್ ಭವನ ಹಾಗೂ ಕೆಂಪು ಕೋಟೆ ನೆನಪಿಗೆ ಬರಬಹುದು. ಕೆಂಪು ಕೋಟೆ ನಮ್ಮ ಇತಿಹಾಸದಲ್ಲಿ ಬಹುಮುಖ್ಯ ಅಂಶವಾಗಿ ಉಳಿದುಬಿಟ್ಟದೆ. ಸ್ವಾತಂತ್ರ್ಯೋತ್ಸವ ಹಾಗೂ ಸ್ವಾತಂತ್ರ್ಯದ ಹೋರಾಟಕ್ಕೂ ಈ ಕೆಂಪುಕೋಟೆಗು ನಿಕಟ ಸಂಬಂಧವಿರುವುದು ನಾವು ಅರಿತ್ತಿದ್ದೇವೆ. ಹೀಗಾಗಿಯೇ ಸ್ವಾತಂತ್ರ್ಯೋತ್ಸವದಂದು ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ. ಹಾಗೆ ಆ ದಿನದಂದು ಪ್ರಧಾನಿ ಭಾಷಣ ದೇಶವಾಸಿಗಳ ಉದ್ದೇಶಿಸಿ ಭಾಷಣ ಮಾಡುತ್ತಾರೆ.
ಇನ್ನು ಹೆಸರೇ ಹೇಳುವಂತೆ ಕೆಂಪು ಕೋಟೆಯ ಬಣ್ಣ ಕೆಂಪಾಗಿದೆ. ಆದ್ರೆ ನಿಮಗೆ ಗೊತ್ತಾ ಕೆಂಪು ಕೋಟೆ ಮೊದಲು ತಾಜ್‌ಮಹಲ್‌ನಂತೆಯೇ ಬಿಳಿ ಬಣ್ಣದಲ್ಲಿತ್ತು. ಹೌದು ನಿಮಗೆ ಅಚ್ಚರಿ ಎನಿಸಬಹುದು ಕೆಂಪು ಕೋಟೆಯ ಬಣ್ಣ ಬಿಳಿಯಾಗಿತ್ತು. ಆದರೆ ಇದನ್ನು ಕೆಂಪು ಬಣ್ಣದ ಕೋಟೆಯನ್ನಾಗಿ ಮಾಡಲಾಗಿತ್ತು ಎಂಬುದು ನಿಮಗೆ ಗೊತ್ತಾ?

ಈ ಬಿಳಿಯ ಕೋಟೆಯನ್ನು ಕೆಂಪು ಮಾಡುವ ಹಿಂದಿರುವ ಉದ್ದೇಶ ತಿಳಿಯಬೇಕಾದರೆ ಈ ಕೋಟೆಯ ಇತಿಹಾಸ ತಿಳಿಯಬೇಕಾಗುತ್ತದೆ. ಈ ಕೆಂಪು ಕೋಟೆಯನ್ನು ಮೊಘಲ್ ದೊರೆ 1638ರಿಂದ 1648ರ ನಡುವೆ ಷಹಜಹಾನ್ ನಿರ್ಮಿಸಿದ್ದ. ಅಂದಿನ ಕಾಲದಲ್ಲಿ ಇದೊಂದು ಅದ್ಭುತ ನಿರ್ಮಾಣವಾಗಿತ್ತು. ಹಾಗೆ ಮೊಘಲ್ ದೊರೆ ತನ್ನ ರಾಜಧಾನಿ ಬದಲಿಸಿದ ಕಾಣದಿಂದಾಗಿ ಈ ಭವ್ಯ ಕಟ್ಟಡ ದೆಹಲಿಯಲ್ಲಿ ನಿರ್ಮಿಸಲಾಗಿತ್ತು ಎಂಬುದು ಇತಿಹಾಸ ಪುಟದಲ್ಲಿ ಸೇರಿಕೊಂಡಿದೆ.
ಈ ಕೋಟೆಯನ್ನು ಕಿಲಾ ಎ ಮುಬಾರಕ್ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಇದರ ಅರ್ಥ ಪವಿತ್ರ ಕೋಟೆ ಎಂಬುದಾಗಿತ್ತು. ಷಹಜಹಾನ್ ತನ್ನ ರಾಜಧಾನಿಯನ್ನು ಆಗ್ರಾದಿಂದ ದೆಹಲಿಗೆ ಬದಲಾಯಿಸಿದಾಗ ಈ ಕೋಟೆಯ ನಿರ್ಮಾಣವಾಗಿತ್ತು. ಅಂದಿನಿಂದ ಇಂದಿನವರೆಗೂ ದೆಹಲು ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದಾಗಿರುವ ಜೊತೆಗೆ ಹಲವು ಐತಿಹಾಸಿಕ ಘಟನೆಗಳಿಗೂ ಇದು ಸಾಕ್ಷಿಯಾಗಿದೆ.
ಅಮೃತಶಿಲೆಯಲ್ಲಿ ನಿರ್ಮಾಣಗೊಂಡಿತ್ತು ಈ ಕೋಟೆ
ಹಷಜಹಾನ್ ಈ ಕೋಟೆಯನ್ನು ಮೊದಲು ಕೆಂಪು ಬಣ್ಣದ ಕಲ್ಲಿನಿಂದ ನಿರ್ಮಿಸಲಿಲ್ಲ. ಬದಲಿಗೆ ಬಿಳಿ ಅಮೃತಶಿಲೆಯ ಕಲ್ಲುಗಳಿಂದಲೇ ನಿರ್ಮಿಸಿದ್ದ. ಆದರೆ ಈ ಅಮೃತಶಿಲೆಗಳು ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವುದಿಲ್ಲ, ವರ್ಷಗಳು ಕಳೆದಂತೆ ಈ ಕಲ್ಲುಗಳು ತಮ್ಮ ಮೂಲ ರೂಪದಿಂದ ಕೆಂಪು ಬಣ್ಣಕ್ಕೆ ತಿರುಗಲು ಆರಂಭಿಸಿದ್ದವು. ಹವಾಮಾನದಲ್ಲಿನ ಬದಲಾವಣೆಗೆ ಈ ಕಲ್ಲಿನ ಸ್ವರೂಪ ಬದಲಿಗೆ ಕಾರಣವಾಗಿತ್ತು. ಇದು ಕೋಟೆಯ ಅಂದವನ್ನು ಕೆಡಿಸಿತ್ತು.
ಕೋಟೆಗೆ ಹೊಸ ರೂಪ ಕೊಟ್ಟ ಬ್ರಿಟಿಷರು
1857ರ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಬಳಿಕ ಬ್ರಿಟಿಷರು ಈ ಕೋಟೆಯನ್ನು ತಮ್ಮ ವಶಕ್ಕೆ ಪಡೆದರು. ಈ ಸಮಯದಲ್ಲಿ ಕೊನೆಯ ಮೊಘಲ್ ದೊರೆ ಬಹದ್ದೂರ್ ಶಾ ಜಾಫರ್ ಅನ್ನು ಬ್ರಿಟಿಷರು ವಶಕ್ಕೆ ಪಡೆದಿದ್ದರು. ಹೀಗಾಗಿ ಕೋಟೆ ಕೂಡ ಬ್ರಿಟಿಷರ ವಶದಲ್ಲಿತ್ತು. ಈ ಸಮಯದಲ್ಲಿ ಕೋಟೆಯ ಬಣ್ಣ ವಿಪರೀತ ಕೆಟ್ಟು ಹೋಗಿತ್ತು. ಅಮೃತಶಿಲೆಗಳು ಗುರುತು ಹಿಡಿಯಲಾಗದ ಸ್ಥಿತಿಗೆ ತಲುಪಿದ್ದವು. ಹೀಗಾಗಿ ಬ್ರಿಟಿಷರು ಈ ಮೂಲ ಅಮೃತಶಿಲೆಯನ್ನು ತೆಗೆದು ಎಷ್ಟು ವರ್ಷ ಇದ್ದರೂ ಹಾಳಾಗದಂತ ಎಲ್ಲಾ ಹವಾಮಾನದಲ್ಲೂ ಒಗ್ಗಿಕೊಳ್ಳುವ ಮರಳು ಕಲ್ಲುಗಳ ಬಳಸಿ ಮತ್ತೆ ಕೋಟೆ ದುರಸ್ಥಿ ಕಾರ್ಯಕ್ಕೆ ಮುಂದಾದರು. ಹೀಗಾಗಿ ಬಳಿಕ ಇದನ್ನು ಕೆಂಪು ಕೋಟೆಯಾಗಿ ಗುರುತಿಸಲಾಗಿದೆ.
ಈಗ ಕೆಂಪುಕೋಟೆಯು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿ ಗುರುತಿಸಲಾಗಿದೆ. ಇದರ ಒಳಗೆ ಇಂದಿಗೂ ಒಂದು ಬಿಳಿ ಬಣ್ಣದ ಮಸೀದಿ ಇರುವುದು ನೋಡಬಹುದು. ವರ್ಷವೂ ಲಕ್ಷಾಂತರ ಮಂದಿ ಪ್ರವಾಸಿಗರು ಈ ಕೋಟೆ ವೀಕ್ಷಿಸಲು ಬರುತ್ತಾರೆ.



Click it and Unblock the Notifications
