Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಹಾದೇವಿ ಆನೆಗಾಗಿ ಕಣ್ಣೀರಿಟ್ಟ ಇಡೀ ತಾಲೂಕು: ಜಿಯೋ ವಿರುದ್ಧ ಆಕ್ರೋಶವೇಕೆ?
ಮಾನವರಿಗಿಂತ ಪ್ರಾಣಿಗಳು ಗುಣದಲಿ ಮೇಲೂ ಎಂಬ ಮಾತು ಕೇಳಿರುತ್ತೀರಿ. ಪ್ರಾಣಿಗಳಷ್ಟು ಮುಗ್ದತೆ, ಗುಣ, ಪ್ರಾಮಾಣಿಕತೆ ಮಾಲಿಕನಿಗೆ ಅವುಗಳು ತೋರಿಸುವ ಪ್ರೀತಿ ಮಾನವ ಸಂಬಂಧದಲ್ಲೂ ನೋಡಲು ಸಾಧ್ಯವಿಲ್ಲ. ಅದೇ ರೀತಿ ಮಾನವ ಹಾಗೆ ಪ್ರಾಣಿಗಳ ಸಂಬಂಧದಲ್ಲಿ ಇತಿಹಾಸದಿಂದಲೂ ಆನೆ, ನಾಯಿ ಸೇರಿ ಹಲವು ಪ್ರಾಣಿಗಳು ಮಾನವರೊಂದಿಗೆ ಅವಿನಾಭಾವ ಸಂಬಂಧ ಹೊಂದಿರುವುದು ನೋಡಬಹುದು.
ಅದ್ರಲ್ಲೂ ಆನೆಗಳು ದೈತ್ಯ ಪ್ರಾಣಿಗಳಾದರು ಮಾನವರೊಂದಿಗೆ ಹೊಂದಿಕೊಂಡಿರುವ ಪ್ರಾಣಿಗಳು. ಈಗಲೂ ಮಠ, ದೇವಾಲಯಗಳಲ್ಲಿ ಆನೆಗಳ ನೋಡಬಹುದು. ಮೈಸೂರು ದಸರದ ಆಕರ್ಷಣೆಗಳಲ್ಲಿ ಈ ಆನೆಗಳು ಕೂಡ ಒಂದು. ಹಾಗೆ ಕೇರಳದಲ್ಲಿ ಆನೆಗಳಿಲ್ಲದ ದೇವಾಲಯ ಹುಡುಕುವುದು ಕಷ್ಟವಾಗಬಹುದು. ಇನ್ನು ಆನೆಗಳು ಪ್ರವಾಸಕ್ಕೂ ಬಳಕೆಯಾಗುವ ಕಾರಣ ದೇಶದ ಹಲವು ಕಡೆಗಳಲ್ಲಿ ಆನೆ ಬಿಡಾರಗಳು, ಸಫಾರಿಗಳ ನೋಡಬಹುದು.

ಆನೆಗಳು ಕೂಡ ಮಾನವ ಹಾಗೂ ಅದನ್ನು ನೋಡಿಕೊಳ್ಳುವ ವ್ಯಕ್ತಿಯೊಂದಿಗೆ ಅತ್ಯಂತ ಪ್ರಿಯವಾಗಿ ಉಳಿದುಬಿಡುತ್ತದೆ. ಹಾಗೆ ಇಲ್ಲೊಂದು ಆನೆ ಈಗ ತನ್ನ ಸ್ಥಳಬದಲಾಯಿಸುತ್ತಿದ್ದು, ಇಡೀ ತಾಲೂಕು ಆ ಆನೆಯ ಬೀಳ್ಗೊಡುಗೆಯಲ್ಲಿ ಕಣ್ಣೀಟ್ಟಿದೆ. ಅಷ್ಟು ಮಾತ್ರವಲ್ಲ ಅಂಬಾನಿ ಕುಟುಂಬದ ವಿರುದ್ಧ ಇಡೀ ಜನತೆ ತಿರುಗಿ ಬಿದ್ದಿದ್ದಾರೆ.
ಅಷ್ಟಕ್ಕೂ ಏನಿದು ಆನೆ ಕಥೆ? ಜನರು ಅಂಬಾನಿ ಕುಟುಂಬಕ್ಕೆ ಹಿಡಿ ಶಾಪ ಹಾಕುತ್ತಿರೋದ್ಯಾಕೆ? ಎಂಬ ಕುರಿತು ನಾವಿಂದು ತಿಳಿದುಕೊಳ್ಳೋಣ.
ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಶಿರೋಲ್ ತಾಲೂಕಿನ ನಂದನಿ ಗ್ರಾಮದ ಜೈನ ಮಠದಲ್ಲಿ ಈ ಹೆಣ್ಣಾನೆಯನ್ನು ಸಾಕಲಾಗಿತ್ತು. ಮಹಾದೇವಿ ಎಂಬ ಹೆಸರಿನ ಈ ಆನೆ ಇಡೀ ತಾಲೂಕಿನಲ್ಲಿ ಬಹಳ ಫೇಮಸ್. ಅದು ದಶಕಗಳಿಂದ ಈದೇ ಜೈನ ಮಠದಲ್ಲಿದೆ, ಹಾಗೆ ಅದು ಯಾರಿಗೂ ಹಾನಿ ಮಾಡದ, ಹಾಗೆ ಬಹಳ ಸಾಧು ಸ್ವಭಾವದ ಆನೆಯಾಗಿದೆ.
ಈ ಆನೆ ಎಂದರೆ ಇಡೀ ಯಾಲೂಕಿನ ಜನರಿಗೆ ಅಚ್ಚುಮೆಚ್ಚು. ಮಹಾದೇವಿ ಬರುವಾಗ ರಸ್ತೆಯ ಬದಿಯಲ್ಲಿ ನಿಂತು ಹಣ್ಣು, ಹಸಿ ತರಕಾರಿಗಳ ನೀಡುವುದು ಅದರಿಂದ ಆಶೀರ್ವಾದ ಪಡೆಯುವುದು ನಡೆದೇ ಇತ್ತು. ಮಕ್ಕಳಗೆ ಅತ್ಯಂತ ಪ್ರಿಯವಾದ ಆನೆ ಇದಾಗಿತ್ತು. ಮಠದ ಹಲವು ಕಾರ್ಯಕ್ರಮಗಳಲ್ಲಿ ಮೆರವಣಿಗೆಗಳಲ್ಲಿ ಈ ಆನೆಯೇ ಮುಂಚೂಣಿಯ ಆಕರ್ಷಣೆ. ಈ ಆನೆಯನ್ನು ಜನರು ಪ್ರೀತಿಯಿಂದ ಮಾಧುರಿ ಎಂದು ಕೂಡ ಕರೆಯುತ್ತಿದ್ದರು.
ಹೀಗೆ ಊರಿನ ಸದಸ್ಯನಂತೆ ಇದ್ದ ಈ ಮಹಾದೇವಿ ಆನೆ ವಿಚಾರಿಸಲು ಎನ್‌ಜಿಒ ತಂಡವೊಂದು ಒಮ್ಮೆ ಭೇಟಿ ನೀಡಿತ್ತು, ಆನೆಯ ಆರೋಗ್ಯದಲ್ಲಿ ಏರುಪೇರಾಗಿದೆ, ಅದು ಮಾನಸಿಕ ಯಾತನೆ ಅನುಭವಿಸುತ್ತಿದೆ ಎಂಬ ವರದಿ ನೀಡಿದೆ. ಈ ಎನ್‌ಜಿಒ ಸಮಿತಿ ಅರಣ್ಯ ಇಲಾಖೆ ಹಾಗೂ ಸುಪ್ರೀಂ ಕೋರ್ಟ್ ನೇಮಿಸಿದ್ದ ಹೈಪವರ್ ಕಮಿಟಿ ಮುಂದೆ ಆನೆಯ ಆರೋಗ್ಯದ ಕುರಿತಾಗಿ ಕಳವಳ ವ್ಯಕ್ತಪಡಿಸಿತ್ತು. ಆದರೆ ಆನೆ ಇದ್ಯಾವುದೇ ಸಮಸ್ಯೆ ಇಲ್ಲದೆ ವರ್ಷಗಳಿಂದಲೂ ಇದೇ ಮಠದಲ್ಲಿತ್ತು.
ಈ ಪ್ರಕರಣ ಸಂಬಂಧ ಬಾಂಬೆ ಹೈಕೋರ್ಟ್ ವಿಚಾರಣೆ ಸಹ ನಡೆಸಿತ್ತು. ಜಯಲೂ 16ರಂದು ಈ ಮಹಾದೇವಿ ಆನೆಯನ್ನು ಜಾಮ್‌ನಗರದಲ್ಲಿರುವ ವಂಟಾರ ಪುನರ್ವಸತಿ ಸೌಲಭ್ಯ ಕೇಂದ್ರಕ್ಕೆ ರವಾನಿಸುವಂತೆ ಸೂಚನೆ ನೀಡಿತು. ಆದ್ರೆ ಈ ಆದೇಶದ ವಿರುದ್ಧ ಮಠ ಹಾಗೂ ಗ್ರಾಮಸ್ಥರು ಸುಪ್ರೀಂಕೋರ್ಟ್ ಮೆಟ್ಟಿಲೇರಿದರು. ಆದ್ರೆ ಸುಪ್ರೀಂ ಕೋರ್ಟ್ ಕೂಡ ತನ್ನ ಕೆಳ ನ್ಯಾಯಾಲಯದ ತೀರ್ಪನ್ನು ಎತ್ತಿ ಹಿಡಿಯಿತು. ಈ ಆದೇಶ ಹೊರಬೀಳುತ್ತಿದ್ದರೆ ಇಡೀ ತಾಲೂಕು ಆನೆಯ ನೋಡಲು ಮಠದ ಬಳಿ ಆಗಮಿಸಲು ಮುಂದಾಯಿತು.
ಎರಡು ದಿನದ ಹಿಂದೆ ಆನೆಯನ್ನು ಬೀಳ್ಕೊಡಲಾಯಿತು. ಈ ಸಮಯದಲ್ಲಿ 1 ಲಕ್ಷಕ್ಕೂ ಅಧಿಕ ಜನರು ಸೇರಿದ್ದರು. ಈ ವೇಳೆ ಗ್ರಾಮಸ್ಥರು ಕಣ್ಣೀರಲ್ಲಿ ಮುಳುಗಿದ್ದರು.
ಅಂಬಾನಿ ಕುಟುಂಬದ ವಿರುದ್ಧ ಸಿಟ್ಯಾಕೆ?
ಆನೆಯನ್ನು ರಿಲಾಯನ್ಸ್ ಅವರ ಸಹಯೋಗದೊಂದಿಗೆ ನಿರ್ಮಿಸಲಾಗಿರುವ ವಂಟಾರ ವನ್ಯಜೀವಿ ರಕ್ಷಣೆ ಮತ್ತು ಕಲ್ಯಾಣ ಕೇಂದ್ರಕ್ಕೆ ರವಾನಿಸಲಾಗುತ್ತಿದೆ. ಹೀಗಗಿ ಜನರು ಜಿಯೋ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜಿಯೋವನ್ನು ಬಹಿಷ್ಕರಿಸಲು ಕರೆ ನೀಡಲಾಗಿದೆ. ವಂಟಾರ ರಿಲಯನ್ಸ್ ತನ್ನ ದೊಡ್ಡ ಪ್ರಮಾಣದ ಸಂರಕ್ಷಣಾ ಪ್ರಯತ್ನಗಳ ಭಾಗವಾಗಿ ಅಭಿವೃದ್ಧಿಪಡಿಸಿದೆ. ಸುಮಾರು 3,000 ಎಕರೆಗಳಲ್ಲಿ ಹರಡಿರುವ ವಂಟಾರ ಪ್ರದೇಶವು ರಕ್ಷಿಸಲ್ಪಟ್ಟ ಪ್ರಾಣಿಗಳ ಆರೈಕೆ ಮತ್ತು ಚೇತರಿಕೆಗೆ ಸುರಕ್ಷಿತ ಮತ್ತು ನೈಸರ್ಗಿಕ ಪರಿಸರವನ್ನು ನೀಡುತ್ತದೆ.



Click it and Unblock the Notifications











