Latest Updates
-
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ -
ಮಧುರೈಗೆ ಹೋಗ್ತಿದ್ದೀರಾ? ಈ ಪವಿತ್ರ ದೇಗುಲಗಳಿಗೂ ಭೇಟಿ ನೀಡೋದನ್ನ ಮರೀಬೇಡಿ.. ಪಟ್ಟಿ ಇಲ್ಲಿದೆ
ಕಾಂಬೋಡಿಯಾ-ಥೈಲ್ಯಾಂಡ್ ಸಂಘರ್ಷ: ಬೌದ್ಧರ ನಾಡಲ್ಲಿ ಸಮರಕ್ಕೆ ನಾಂದಿಯಾಗಿದ್ದು ಹಿಂದೂ ದೇವಾಲಯ.!
ವಿಶ್ವದ ಹಲವು ದೇಶಗಳು ಈಗ ಯುದ್ಧಾಂತಕದಲ್ಲಿ ಮುಳುಗಿವೆ. ಕಳೆದ ಕೆಲವು ವರ್ಷಗಳಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಹಲವು ರಾಷ್ಟ್ರಗಳ ನಡುವಿನ ಬಿಕ್ಕಟ್ಟು ದೊಡ್ಡದಾಗಿ ಯುದ್ಧದವರೆಗೂ ಅದರ ತೀವ್ರತೆ ಹರಡಿಕೊಂಡಿದೆ. ಈಗ ಥೈಲ್ಯಾಂಡ್ ಹಾಗೂ ಕಾಂಬೋಡಿಯಾ ನಡುವಿನ ಯುದ್ಧವು ಇಡೀ ವಿಶ್ವಕ್ಕೆ ಆತಂಕದ ಜೊತೆಗೆ ಆಘಾತ ಮೂಡಿಸಿದೆ.
ಎರಡೂ ಬೌದ್ಧ ರಾಷ್ಟ್ರಗಳಾಗಿದ್ದರೂ ಶಾಂತಿಯ ಸಾರುವ ಮಂದಿ ಕಾಲು ಕೆರೆದುಕೊಂಡು ಯುದ್ಧಕ್ಕೆ ನಿಂತಿರುವುದು ಎಲ್ಲರಲ್ಲೂ ಆತಂಕ ಮೂಡಿಸಿದೆ. ಹಾಗೆ ಇದಕ್ಕೆ ಕಾರಣವೇನು ಎಂಬ ಚಿಂತೆಯಲ್ಲಿ ಮುಳುಗಿದ್ದಾರೆ. ಥೈಲ್ಯಾಂಡ್ ಎಂದಕೂಡಲೆ ಅದು ಪ್ರವಾಸಿಗರಿಗೆ ಸ್ವರ್ಗ ಎಂಬ ಭಾವನೆ ಮೂಡುತ್ತದೆ. ಥೈಲ್ಯಾಂಡ್ ಕೂಡ ಪ್ರವಾಸಿಗರನ್ನು ಸ್ವಾಗತಿಸುವ ದೇಶ. ಅಲ್ಲಿನ ಪ್ರಾಕೃತಿಕ ಸೌಂದರ್ಯ, ಆಧುನಿಕ ಜೀವನ ಶೈಲಿ, ಹಾಗೆ ರಾಜಧಾನಿ ಬ್ಯಾಂಗ್‌ಕಾಕ್ ನೋಡಲೆಂದೆ ಲಕ್ಷಾಂತರ ಮಂದಿ ತೆರಳುತ್ತಾರೆ.

ಹಾಗೆ ಇನ್ನೊಂದು ಕಡೆ ಕಾಂಬೋಡಿಯಾ ಕೂಡ ಪ್ರವಾಸಿಗರ ಸೆಳೆಯುವ ದೇಶವಾಗಿದೆ. ಥೈಲ್ಯಾಂಡ್ ಸ್ವಲ್ಪ ದೊಡ್ಡ ದೇಶವಾಗಿದೆ. ಈ ಎರಡು ಏಷ್ಯಾ ದೇಶಗಳು ಈಗ ಕಾಲು ಕೆರೆದುಕೊಂಡು ಯುದ್ಧಕ್ಕೆ ನಿಂತಿವೆ. ಈ ಯುದ್ಧಕ್ಕೆ ಕಾರಣವಾಗಿರುವುದು ಗಡಿ ಪ್ರದೇಶ ಅಂತಲೂ ಹಾಗೆ ಒಂದು ಹಿಂದೂ ದೇವಾಲಯ ಅಂತಲೂ ಸುದ್ದಿ ಹರಿದಾಡುತ್ತಿದೆ.
ಕಾಂಬೋಡಿಯಾ ಹಾಗೂ ಥೈಲ್ಯಾಂಡ್ ಸುಮಾರು 800 ಕಿ.ಮೀ ಉದ್ದದ ಗಡಿ ಭಾಗವು ಹಿಂದಿನಿಂದಲೂ ಉದ್ವಿಗ್ನತೆಗೆ ಕಾರಣವಾಗಿದೆ. ಈ ಗಡಿಯಲ್ಲಿ ಹಿಂಸಾಚಾರ ಕೂಡ ಭುಗಿಲೆದ್ದಿದೆ. ಈ ಪ್ರದೇಶದಲ್ಲಿ ಯುದ್ಧದ ಆತಂಕ ಉಂಟಾಗಿರುವುದು ಇದೇ ಮೊದಲಲ್ಲ. ಹಲವು ಬಾರಿ ಈ ರೀತಿಯ ಉದ್ವಿಗ್ನತೆ ನಡೆದಿದೆ. ಹಾಗೆ ಈ ಗಡಿಯಲ್ಲಿರುವ 11ನೇ ಶತಮಾನದ ಹಿಂದೂ ದೇವಾಲಯ ಕೂಡ ಈ ಆತಂಕ ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಬೌದ್ಧರ ನಾಡಿನಲ್ಲಿ ಹಿಂದೂ ದೇವಾಲಯ ಬಂದಿದ್ದು ಹೇಗೆ?
ಪ್ರಿಯಾ ವಿಹಾರ್ ದೇವಾಲಯವು ಶಿವನಿಗೆ ಅರ್ಪಿತವಾದ ಹಿಂದೂ ದೇವಾಲಯವಾಗಿದೆ. ಈ ದೇವಾಲಯವು ಎರಡು ದೇಶಗಳ ನಡುವಿನ ಗಡಿ ಭಾಗವಾದ ಡಾಂಗ್ರೆಕ್ ಪರ್ವತ ಶ್ರೇಣಿಯಲ್ಲಿದೆ. ಆದ್ರೆ ಈ ಪ್ರದೇಶವನ್ನು ಎರಡೂ ದೇಶಗಳು ತಮ್ಮದೆಂದು ಘೋಷಿಸಿಕೊಳ್ಳುತ್ತಿವೆ. ಇದು ವಿವಾದದ ಕಿಡಿ ಹೊತ್ತಿಸುತ್ತಿದೆ. ಈ ವಿವಾದ ಹೊತ್ತಿಕೊಂಡಿದ್ದು, ಬರೋಬ್ಬರಿ 1907ಕ್ಕೂ ಹಿಂದೆ.
ವಿವಾದ ಆರಂಭಗೊಂಡಿದ್ದು ಎಲ್ಲಿಂದ?
ಕಾಂಬೋಡಿಯಾ ಫ್ರೆಂಚ್ ವಸಾಹತುಶಾಹಿಗಳ ಆಳ್ವಿಕೆಯಲ್ಲಿತ್ತು, ಈ ಸಮಯದಲ್ಲಿ ಅಧಿಕಾರಿಗಳು ತಯಾರು ಮಾಡಿದ್ದ ನಕ್ಷೆಯನ್ನು ಕಾಂಬೋಡಿಯಾ ಇಂದಿಗೂ ಬಳಸುತ್ತಿದೆ. ದೇವಾಲಯ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳ ಮೇಲೆ ತನ್ನ ಹಕ್ಕನ್ನು ಪ್ರತಿಪಾದಿಸಲು ಕಾಂಬೋಡಿಯಾ ಈ ನಕ್ಷೆಯನ್ನು ಬಳಸುತ್ತದೆ. ಆದ್ರೆ ಥೈಲ್ಯಾಂಡ್ ವಾದವೇ ಬೇರೆಯಾಗಿದೆ. ಈ ನಕ್ಷೆಯೇ ತಪ್ಪು, ಇದನ್ನು ನಾವು ಅಧಿಕೃತವಾಗಿ ಒಪ್ಪಲು ಸಾಧ್ಯವಿಲ್ಲ ಶತಮಾನದಿಂದ ದೇವಾಲಯ ಹಾಗೂ ಆ ಪ್ರದೇಶ ನಮಗೆ ಸೇರಿದ್ದು ವಾದಿಸುತ್ತಾ ಬಂದಿದೆ.

ಈ ಉದ್ವಿಗ್ನತೆ ಮುಂದುವರೆದಾಗಲೇ ಕಾಂಬೋಡಿಯಾ ಈ ಪ್ರಕರಣವನ್ನು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯಿತು. ಈ ದೇವಾಲಯವು ಕಾಂಬೋಡಿಯಾ ಪ್ರದೇಶದಲ್ಲಿದೆ ಎಂಬ ತೀರ್ಪು ಕೂಡ ಹೊರಬಿತ್ತು. ಆದ್ರೆ ಈ ದೇವಾಲಯದ ಸುತ್ತಲಿನ 4.6 ಚ.ಕಿ.ಮೀ ಪ್ರದೇಶವು ಸೂಕ್ತ ನಕ್ಷೆಯೊಂದಿಗೆ ಗುರುತಿಸಿಲ್ಲ. ಅದು ಥೈಲ್ಯಾಂಡ್‌ಗೆ ಸೇರುವ ಪ್ರದೇಶ ಎಂದು ಥೈಲ್ಯಾಂಡ್ ವಾದಿಸಿತು.
ಆದ್ರೆ ಇತ್ತೀಚಿಗೆ ಅಂದರೆ 2025ರ ಫೆಬ್ರವರಿಯಲ್ಲಿ ಕಾಂಬೋಡಿಯಾ ಸೈನಿಕರು ಈ ದೇವಾಲಯ ಹಾಗೂ ಗಡಿ ಪ್ರದೇಶದ ಭಾಗದಲ್ಲಿ ತೆರಳಿ ತಮ್ಮ ರಾಷ್ಟ್ರಗೀತೆ ಹಾಡಿದ್ದರು. ಇದು ಥೈಲ್ಯಾಂಡ್ ಸರ್ಕಾರದ ಮುನಿಸಿಗೆ ಕಾರಣವಾಯಿತು. ವಿವಾದಾತ್ಮಕ ಪ್ರದೇಶದಲ್ಲಿ ಈ ರೀತಿ ನಡೆದುಕೊಂಡಿದ್ದು ಸರಿಯಲ್ಲ ಎಂದು ಥೈಲ್ಯಾಂಡ್ ವಾದಿಸಿತ್ತು. ಹಾಗೆ ಥೈಲ್ಯಾಂಡ್ ಸೈನಿಕರು ಗಡಿ ಪ್ರದೇಶಕ್ಕೆ ಧಾವಿಸಿದ್ದರು. ಇದು ಎರಡು ದೇಶಗಳ ನಡುವಿನ ಉದ್ವಿಗ್ನತೆಗೆ ಕಾರಣವಾಯಿತು.
ರಾಜಕೀಯವಾಗಿ ಗೆದ್ದ ಕಾಂಬೋಡಿಯಾ
ಈ ಗಡಿ ಪ್ರದೇಶ ದಶಕಗಳಿಂದಲೂ ವಿವಾದದಲ್ಲಿ ಮುಳುಗಿದ್ದರು. ಈ ದೇವಾಲಯದ ವಿಚಾರವಾಗಿ ಹಾಗೆ ಗಡಿ ಸಮಸ್ಯೆಯನ್ನು ಕಾಂಬೋಡಿಯಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಗೆಲ್ಲುವ ಹಂಬಲದಲ್ಲಿತ್ತು. ಇದರ ಭಾಗವಾಗಿ 2008ರಲ್ಲಿ ಪ್ರಿಯಾ ವಿಹಾರ್ ದೇವಾಲಯವನ್ನು ವಿಶ್ವಪಾರಂಪರಿಕ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿತ್ತು. ಇದು ಥೈಲ್ಯಾಂಡ್ ನೆಲದಲ್ಲಿ ಉದ್ವಿಗ್ನತೆ ಹೆಚ್ಚಾಗಲು ಕಾರಣವಾಯಿತು. 2011ರಲ್ಲಿ ಎರಡು ದೇಶಗಳ ನಡುವೆ ಘರ್ಷಣೆಗೆ ಇದು ಕಾರಣವಾಯಿತು. ಈ ಸಮಯದಲ್ಲಿ 11 ಜನ ಮೃತಪಟ್ಟರು.
ಮತ್ತೆ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಈ ಕುರಿತ ವಿಚಾರಣೆ ನಡೆದಿತ್ತು. ಇದು 2013 ರಲ್ಲಿ ದೇವಾಲಯದ ಮೇಲೆ ಮಾತ್ರವಲ್ಲದೆ ಸುತ್ತಮುತ್ತಲಿನ ಭೂಮಿಯ ಮೇಲೂ ಕಾಂಬೋಡಿಯಾ ಹಕ್ಕನ್ನು ಮತ್ತೆ ಪಡೆದುಕೊಂಡಿತು. ಹಾಗೆ ಈ ಗಡಿ ಭಾಗದಲ್ಲಿನ ಹಿಂಸಾಚಾರ ತಡೆಯಲು ಮಿಲಿಟರಿ ಪಡೆ ನಿಯೋಜನೆಯಿಂದ ಕಡಿಮೆಯಾಗುವ ಬದಲಾಗಿ ಮತ್ತಷ್ಟು ಆತಂಕಗಳು ಹೆಚ್ಛಾದವು. ಇಂದಿಗೂ ಈ ಗಡಿ ವಿವಾದ ಹಾಗೆಯೇ ಜೀವಂತವಾಗಿ ಉಳಿದಿದೆ. ಹಾಗೆ ಈಗ ನಡೆಯುತ್ತಿರುವ ಯುದ್ಧಕ್ಕೂ ಕೂಡ ಕಾರಣವಾಗಿದೆ.
ಈ ದೇವಾಲಯಕ್ಕೂ ಭಾರತಕ್ಕೂ ಇರುವ ನಂಟೇನು?
ಬೌಧ ದೇಶವಾದರೂ ಅಲ್ಲಿನ ಹಿಂದೂ ದೇವಾಲಯವೇ ದೇಶದ ಹೆಗ್ಗುರುತಾಗಿದೆ. ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿಸುವ ಮೂಲಕ ಆ ದೇವಾಲಯವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಗುರಿ ಹೊಂದಲಾಗಿದೆ. ಈ ದೇವಾಲಯವು 9ನೇ ಶತಮಾನದ ರಚನೆಯಂತೆ ಕಾಣಿಸುತ್ತದೆ, ಆದ್ರೆ 11ನೇ ಶತಮಾನದಲ್ಲಿ ಖಮೇರ್ ಸಾಮ್ರಾಜ್ಯದ ಆಳ್ವಿಕೆಯ ಕಾಲದಲ್ಲಿ ನಿರ್ಮಿಲಸಾಗಿತ್ತು ಎಂದು ಹೇಳಲಾಗಿದೆ. ಅಲ್ಲಿನ ರಾಜ ಮೊದಲನೇ ಸೂರ್ಯವರ್ಮನ್ ಅಡಿಪಾಯ ಹಾಕಿದ್ದನು ಹಾಗೆ ಎರಡನೇ ಸೂರ್ಯವರ್ಮನ್ ಈ ದೇವಾಲಯವನ್ನು ಪೂರ್ಣಗೊಳಿಸಿದನು ಎಂದು ಇತಿಹಾಸ ಹೇಳುತ್ತದೆ.
ಶಿವನಿಗೆ ಸಮರ್ಪಿತವಾದ ಈ ದೇವಾಲಯವು ಶಾಸ್ತ್ರೀಯ ಖಮೇರ್ ವಾಸ್ತುಶಿಲ್ಪ ನೋಡಬಹುದು. ಮುಖ್ಯ ದೇವಾಲಯವಾದ ಪ್ರಸಾತ್ ತಾ ಮುಯೆನ್ ಥಾಮ್ ಅನ್ನು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ ಮತ್ತು ಈ ದೇವಾಲಯದಲ್ಲಿ ಗ್ರಂಥಾಲಯ ಹಾಗೆ ಶಿವಲಿಂಗ ಕೂಡ ಇದೆ ಎಂದು ಹೇಳಲಾಗಿದೆ. ಪ್ರಾಚೀನ ಕಾಲದಲ್ಲಿ ಈ ದೇವಾಲಯದಲ್ಲಿ ಧಾರ್ಮಿಕ ಆಚರಣೆಗಳು, ತೀರ್ಥಯಾತ್ರೆಗಳು ಮತ್ತು ಪ್ರಾರ್ಥನೆಗಳು ನಡೆಯುತ್ತಿದ್ದವು. ಈ ಪ್ರಾಚೀನ ಶಿವನ ದೇವಾಲಯವನ್ನು ಸಂರಕ್ಷಿಸಲು 2018ರಲ್ಲಿ ಭಾರತ ಸರ್ಕಾರ ಕಾಂಬೋಡಿಯಾದೊಂದಿಗೆ ತಿಳುವಳಿಕೆ ಒಪ್ಪಂದಕ್ಕೆ ಸಹಿ ಹಾಕಿತ್ತು. ಎರಡು ದೇಶಗಳು ಬಹುಸಂಖ್ಯಾತ ಬೌಧ ಧರ್ಮ ಪಾಲಿಸುತ್ತಿದ್ದರೂ ಅಲ್ಲಿ ಹಿಂದೂ ಧರ್ಮದ ಕುರುಹುಗಳು ಇರುವುದು ನೋಡಬಹುದು, ಹಿಂದೆ ಹಿಂದೂ ರಾಜರುಗಳಿಂದ ಈ ಪ್ರದೇಶಗಳು ಆಳಲ್ಪಟ್ಟವು ಎಂದು ಕೂಡ ತಿಳಿದುಬರುತ್ತದೆ.



Click it and Unblock the Notifications














