Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಮುಸ್ಲಿಂ ಕುಟುಂಬಕ್ಕೆ ಗೋವು ದಾನ ನೀಡಿದ ಅರ್ಚಕ: ಇದರ ಹಿಂದಿದೆ ಕಣ್ಣೀರ ಕಥೆ..!
ಭಾರತ ಭಾವೈಕ್ಯತೆಯ ನಾಡು. ಇಲ್ಲಿ ಸರ್ವ ಧರ್ಮ ಸಮಾನ ಎಂಬ ಭಾವದಿಂದ ಬದುಕುವವರಿರುವ ದೇಶ. ದಯೆಗಿಂತ ದೊಡ್ಡದಾದ ಧರ್ಮವಿಲ್ಲ ಎಂದು ನುಡಿದ ಮಹಾನಿಯರು ಜನಿಸಿದ ದೇಶವಿದು. ಈ ನೆಲದಲ್ಲಿ ಭಾವೈಕ್ಯತೆ ಅನ್ನೋದು ಹಾಸುಹೊಕ್ಕಾಗಿದೆ ಅದು ಆಗಾಗ ಕೆಲವು ಘಟನಾವಳಿಗಳ ಮೂಲಕ ರುಜುವಾತು ಸಹ ಆಗುತ್ತಿದೆ.
ಈಗ ಸಹ ಇಂತಹದ್ದೆ ಘಟನೆಯೊಂದು ನಡೆದಿದ್ದು, ಸಾಮಾಜಿಕ ಜಾತಾಣದಲ್ಲಿ ಈ ಕಥೆ ವೈರಲ್ ಆಗಿದೆ. ಗೋವನ್ನು ಕಳೆದುಕೊಂಡು ದುಃಖದಲ್ಲಿದ್ದ ಮುಸ್ಲಿಂ ಕುಟುಂಬವೊಂದಕ್ಕೆ ದೇವಾಲಯದ ಅರ್ಚಕರು ಗೋವನ್ನು ದಾನವಾಗಿ ನೀಡಿ ಮಾದರಿಯಾಗಿದ್ದು, ಇಲ್ಲಿ ಮಾನವೀಯತೆಗಿಂತಲೂ ದೊಡ್ಡ ಧರ್ಮವಿಲ್ಲ ಎಂದು ಸಾರಿದ್ದಾರೆ.

ಈ ಮಾನವೀಯ ಕಾರ್ಯ ಕಂಡು ಜನತೆ ಇದು ನಿಜವಾದ ಭಾರತ. ನಿಜ ಭಾರತದ ರೂಪ ಇರುವುದು ಇಲ್ಲಿಯೇ ಎಂದು ಕೊಂಡಾಡಿದ್ದಾರೆ. ಹಾಗಾದ್ರೆ ಏನಿದು ಕಥೆ? ಅವರು ಗೋವನ್ನು ಮುಸ್ಲಿಂ ಕುಟುಂಬಕ್ಕೆ ದಾನವಾಗಿ ನೀಡಿದ್ದೇಕೆ. ಮುಸ್ಲಿಂ ಕುಟುಂಬದ ಗೋವಿನ ಪ್ರೀತಿ ಎಂತಹದ್ದು ಎಂಬುದನ್ನು ನೋಡಿ.
ಈ ಘಟನೆ ನಡೆದಿರುವುದು ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಶ್ರೀ ಚಿಲ್ಕುರ್ ಬಾಲಾಜಿ ದೇವಾಲಯದ ಬಳಿ. ಇಲ್ಲಿ ನೂರಾರು ವರ್ಷದಿಂದ ನೆಲೆಸಿದ್ದ ಮುಸ್ಲಿಂ ಕುಟುಂಬವೊಂದು ವ್ಯವಸಾಯ ಮಾಡಿಕೊಂಡು ಜೀವನ ನಡೆಸುತ್ತಿದೆ. ಆದರೆ ಅವರು ವ್ಯವಸಾಯದ ಜೊತೆಗೆ ಮನೆಯಲ್ಲಿ ಗೋವುಗಳನ್ನೂ ಸಾಕಿದ್ದಾರೆ. ಆದರೆ ಅದರಲ್ಲಿ ಗೂಳಿಯೊಂದನ್ನು ಅವರು ವ್ಯವಸಾಯಕ್ಕಾಗಿ ಅವಲಂಬಿಸಿದ್ದರು. ಆದರೆ ಅದು ವಿದ್ಯುತ್ ಶಾಕ್ ತಗುಲಿ ಮೃತಪಟ್ಟಿತ್ತು.
ಮನೆಯಲ್ಲಿ ಪ್ರೀತಿಯಿಂದ ಸಾಕಿದ್ದ ಗೂಳಿ ಮೇಯಲು ಹೋದಾಗ ವಿದ್ಯುತ್ ತಂತಿ ತಗುಲಿ ಮೃತಪಟ್ಟಿತ್ತು. ಇದರಿಂದ ಆಘಾತಕ್ಕೊಳಗಾಗಿದ್ದ ಮೊಹಮ್ಮದ್ ಫೌಸ್ ಕುಟುಂಬ ದುಃಖಿಸಿತ್ತು. ಆ ಗೋವನ್ನು ಶಾಸ್ತ್ರದಂತೆ ಮಣ್ಣು ಮಾಡಲಾಗಿತ್ತು. ಆದರೆ ವ್ಯವಸಾಯಕ್ಕಾಗಿ ಅವಲಂಬಿಸಿದ್ದ ಗೂಳಿ ಇಲ್ಲದಾಗಿ ಮುಸ್ಲಿಂ ಕುಟುಂಬ ಚಿಂತೆಯಲ್ಲಿ ಮುಳುಗಿತ್ತು.
ಗೋಶಾಲೆಯಿಂದ ಗೋವು ದಾನ
ಈ ವಿಚಾರ ತಿಳಿದ ಶ್ರೀ ಚಿಲ್ಕುರ್ ಬಾಲಾಜಿ ದೇವಸ್ಥಾನದ ಪ್ರಧಾನ ಅರ್ಚಕ ಸಿಎಸ್ ರಂಗರಾಜನ್ ಮುಸ್ಲಿಂ ರೈತನಿಗೆ ಗೂಳಿಯನ್ನು ಉಡುಗೊರೆಯಾಗಿ ನೀಡಲು ಮುಂದಾಗಿದ್ದಾರೆ. ಚಿಲ್ಕೂರ್ ಬಾಲಾಜಿ ದೇವಸ್ಥಾನದ ಗೋಶಾಲೆಯಿಂದ ಗೂಳಿಯೊಂದನ್ನು ನೀಡಲು ನಿರ್ಧರಿಸಲಾಗಿತ್ತು. ಈ ದೇವಾಲಯವು 56 ಹಸುಗಳು, ಕರುಗಳು ಮತ್ತು ಗೂಳಿಗಳನ್ನು ಹೊಂದಿದೆ.
ವರದಿಗಳ ಪ್ರಕಾರ, ರೈತನಿಗೆ ದಾನ ಮಾಡಿದ ಗೂಳಿಯು ದೇವಾಲಯದ ಗೌಶಾಲೆಯಲ್ಲಿ ಹುಟ್ಟಿ ಬೆಳೆದಿದೆ. ಸಂಕಷ್ಟದಲ್ಲಿರುವ ರೈತರಿಗೆ ಆಸರೆಯಾಗುವುದು ಚಿಲುಕೂರು ಬಾಲಾಜಿ ದೇವಸ್ಥಾನದ ಸಂಪ್ರದಾಯವಾಗಿದೆ ಎಂದು ಅರ್ಚಕರು ಹೇಳಿದ್ದಾರೆ.
ಮಾನವೀಯತೆಯೇ ಧರ್ಮ
ಮಾನವೀಯತೆಯು ಧರ್ಮ, ಜಾತಿ ಅಥವಾ ಪಂಥವನ್ನು ನೋಡುವುದಿಲ್ಲ. ಸಹೃದಯರಿಗೆ ಸಹಾಯ ಮಾಡುವುದೇ ದೇವರ ಸೇವೆ ಎಂಬುದು ಚಿಲ್ಕೂರು ಬಾಲಾಜಿ ಅರ್ಚಕರ ಮಾತಾಗಿದೆ. ರೈತರ ಜೀವನೋಪಾಯದಲ್ಲಿ ಕೃಷಿಗಾಗಿ ಪ್ರಾಣಿಗಳು ವಹಿಸುವ ಪಾತ್ರವನ್ನು ಎತ್ತಿ ಹಿಡಿದ ರಂಗರಾಜನ್, ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ಮಾನವೀಯ ಕಾರ್ಯದಲ್ಲಿ ಭಾಗಿಯಾಗುವಂತೆ ಜನರಿಗೆ ಕರೆ ನೀಡಿದರು.
ಚಿಲ್ಕೂರ್ ಬಾಲಾಜಿ ದೇವಸ್ಥಾನ
ರಂಗಾರೆಡ್ಡಿ ಜಿಲ್ಲೆಯ ಉಸ್ಮಾನ್ ಸಾಗರ್ ದಂಡೆಯ ಮೇಲಿರುವ ಚಿಲ್ಕುರ್ ಬಾಲಾಜಿ ದೇವಾಲಯವು ತೆಲಂಗಾಣದ ಅತ್ಯಂತ ಹಳೆಯ ಹಿಂದೂ ದೇವಾಲಯಗಳಲ್ಲಿ ಒಂದಾಗಿದೆ ಮತ್ತು ಇದು 14ನೇ ಶತಮಾನದಷ್ಟು ಹಿಂದಿನದು ಎಂದು ಗುರುತಿಸಲಾಗಿದೆ. ಈ ದೇವಾಲಯದ ವಿಶೇಷ ಏನೆಂದರೆ ಈ ದೇವಾಲಯದಲ್ಲಿ ನೀವು ಎಲ್ಲಿ ಹುಡುಕಿದರು ನಿಮಗೆ ಕಾಣಿಕೆ ಹುಂಡಿ ಸಿಗುವುದಿಲ್ಲ. ಈ ದೇವಾಲಯದಲ್ಲಿ ಆರತಿ ತಟ್ಟೆಗಾಗಲಿ, ಹುಂಡಿಗಾಗಲಿ ಹಣ, ಕಾಣಿಕೆ ಹಾಕುವಂತಿಲ್ಲ. ಹೀಗಾಗಿ ಈ ದೇವಾಲಯ ಇಡೀ ರಾಜ್ಯದಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿದೆ.



Click it and Unblock the Notifications
