Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಶ್ರೀರಾಮ ಕಣ್ಣೀರು ಹಾಕಿದ್ದು ಯಾವಾಗ..!? ಅದೇ ಮೊದಲ ಬಾರಿ ಅದೇ ಕೊನೆ..!
ರಾಮಾಯಣ ಮಹಾಕಾವ್ಯ ಹಿಂದೂಗಳಿಗೆ ಅತ್ಯಂತ ಶ್ರೇಷ್ಠವಾದ ಗ್ರಂಥ ಎಂದು ನಂಬಲಾಗಿದೆ. ರಾಮಾಯಣ ಕಾವ್ಯ ಒಬ್ಬ ಮಾನವನ ರೂಪಿಸುತ್ತೆ. ಈ ಮಹಾಕಾವ್ಯದಲ್ಲಿ ವ್ಯಕ್ತಿತ್ವ ವಿಕಸನದ ಮಹತ್ವವಿದೆ. ರಾಮಾಯಣದ ಕಥೆ ಹಾಗೂ ಪಾತ್ರಗಳು ಇಂದಿಗೂ ಬದುಕಿನ ಪಾಠ ಹೇಳುತ್ತಿವೆ. ಇನ್ನು ರಾಮ ಆಳಿದ ಅಯೋಧ್ಯೆ ಭಾರತದ ಪ್ರಮುಖ ನಗರಗಳಲ್ಲಿ ಒಂದಾಗಿದೆ.
ರಾಮಾಯಣ ಕಾವ್ಯದಲ್ಲಿ ರಾಮನ ವ್ಯಕ್ತಿತ್ವ, ಸೀತಾಪಹರಣ, ಯುದ್ಧ, ರಾವಣ ಹೀಗೆ ನೂರಾರು ಕಥೆಗಳ ನೋಡಬಹುದು. ರಾಯಾಯಣ ಎಂದೆಂದಿಗೂ ಪ್ರಸ್ತುತ ಎನಿಸುವ ಕಾವ್ಯವಾಗಿದೆ. ಭಾರತದಲ್ಲೇ ಸಂಸ್ಕೃತ ಮತ್ತು ಇತರ ಪ್ರಾದೇಶಿಕ ಭಾಷೆಗಳಲ್ಲಿ ಬರೆದ ಸುಮಾರು 300 ರಾಮಾಯಣಗಳಿವೆ. ಇನ್ನು ನಾವು ರಾಮಾಯಣ ಕಾವ್ಯದಲ್ಲಿ ರಾಮನ ವ್ಯಕ್ತಿತ್ವವನ್ನು ಚಿತ್ರಿಸುವ ಕಥೆಯಾಗಿದೆ.

ರಾಮನ ಆದರ್ಶಗಳನ್ನು ಪಾಲಿಸಿದರೆ ಒಬ್ಬ ಮಾನವ ಪರಿಪಕ್ವವಾಗುತ್ತಾನೆ ಎಂದು ಹೇಳಲಾಗುತ್ತೆ. ಇನ್ನು ಕಷ್ಟಗಳು ಎದುರಾದಾಗ ರಾಮನಂತೆ ಎದುರಿಸಬೇಕು ಎಂದು ಹೇಳಲಾಗುತ್ತೆ. ಏಕೆಂದರೆ ರಾಮ ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಅಚಲನಾಗಿದ್ದನಂತೆ. ರಾಜ್ಯವನ್ನು ಆಳುವ ಅವಕಾಶ ಕೈ ತಪ್ಪಿದಾಗ, ವನವಾಸಕ್ಕೆ ಹೋಗುವಾಗ, ಸೀತೆಯ ಅಪಹರಣವಾದಾಗ, ಸೀತೆ ಅಗ್ನಿ ಪ್ರವೇಶ ಮಾಡುವಂತಹ ಸನ್ನಿವೇಶ ಎದುರಾದಾಗಲು ರಾಮ ಅಚಲನಾಗಿ ನಿಂತಿದ್ದ.
ಹೀಗಾಗಿ ರಾಮನಂತ ವ್ಯಕ್ತಿತ್ವ ನಿಮ್ಮದಾಗಬೇಕು ಎಂದು ಹೇಳಲಾಗುತ್ತದೆ. ಆದ್ರೆ ರಾಮನ ಕಣ್ಣಿನಲ್ಲೂ ಒಮ್ಮೆ ನೀರು ಬಂದಿತ್ತಂತೆ. ರಾಮ ಕಣ್ಣೀರು ಹಾಕಿರುವ ಸನ್ನಿವೇಶ ನಮಗೆ ಸಿಗುವುದು ಒಂದೇ ಒಂದು ಕಡೆ ಮಾತ್ರ. ಇಡೀ ಮಹಾಕಾವ್ಯದಲ್ಲಿ ನಾವು ರಾಮನ ಕಣ್ಣಲ್ಲಿ ನೀರು ನೋಡುವುದು ಒಂದೇ ಒಂದು ಪ್ರಸಂಗದಲ್ಲಿ ಮಾತ್ರ.
ಎಲ್ಲರನ್ನು ಕಾಯುವ, ಎಲ್ಲರು ಪಾಲಿಸುವಂತಹ, ಆದರ್ಶ ರಾಮ ಕಣ್ಣೀರು ಹಾಕಿದ್ದು ಯಾವಾಗ? ಆತನ ಕಣ್ಣೀರಿಗೆ ಕಾರಣವಾಗಿದ್ದು ಏನು?, ರಾಮನ ಕಣ್ಣೀರ ಕಥೆ ನಾವು ಅರ್ಥ ಮಾಡಿಕೊಳ್ಳಬೇಕಾದರೆ ಮತ್ತೆ ದಶರಥ ಯುದ್ಧ ಮಾಡುತ್ತಿದ್ದ ಕಾಲಕ್ಕೆ ತೆರಳಬೇಕು. ಆ ಕಥೆಯನ್ನು ನಾವಿಂದು ತಿಳಿಯೋಣ.
ದಶರಥ ದೇವರ ಜೊತೆ ಸೇರಿ ರಾಕ್ಷಸರ ವಿರುದ್ಧ ಯುದ್ಧ ಮಾಡುತ್ತಿರುವಾಗ ಆತನ ಹಿಂದೆ ನಿಂತಿದ್ದು ಆತನ ಪತ್ನಿ ಕೈಕೇಯಿ. ದಶರಥನ ರಥದಲ್ಲಿ ನಿಂತು ಹೋರಾಡುತ್ತಿರುವಾಗ ರಥದ ಚಕ್ರದ ಕೀಲು ಕಿತ್ತು ಬಂದಿರುತ್ತದೆ. ಈ ವೇಳೆ ಕೈಕೇಯಿ ತನ್ನ ಕೈ ಬೆರಳನ್ನು ರಥದ ಚಕ್ರಕ್ಕೆ ಹಾಕಿ ಯುದ್ಧ ಪೂರ್ಣ ಆಗುವವರೆಗೂ ಕುಳಿತ್ತಿದ್ದಳು. ಆಕೆಯ ಕೈಯಿಂದ ರಕ್ತ ಸುರಿದರು ಆಕೆ ಮಾತ್ರ ಗಂಡನ ಕಾಪಾಡಲಿ ನಿಂತಳು.
ಈ ವಿಚಾರ ತಿಳಿದ ದಶರಥ ಆಕೆಗೆ ಮೂರು ವರದಗಳ ಕೇಳುವಂತೆ ಹೇಳಿದ. ಆದ್ರೆ ಆಕೆ ನನಗೆ ಈಗ ಯಾವ ವರವೂ ಬೇಡ, ಆದ್ರೆ ನಾನು ಕೇಳಿದಾಗ ನೀವು ಅದನ್ನು ಮರು ಪ್ರಶ್ನಿಸದೆ ನಡೆಸಿಕೊಡಬೇಕು ಎಂದು ಬೇಡಿಕೊಂಡಳು. ಪತ್ನಿಯ ಈ ಮಾತು ಕೇಳಿದ ದಶರಥ ಆಯಿತು ಎಂದು ಮಾತು ಕೊಟ್ಟಿದ್ದನಂತೆ. ಆದ್ರೆ ಕೈಕೇಯಿ ಈ ವರವನ್ನು ಕೇಳಲು ಸರಿಯಾದ ಸಮಯಕ್ಕೆ ಕಾದಿದ್ದಳು.
ದಶರಥನಿಗೆ ಮೂವರು ಪತ್ನಿಯರಿರುತ್ತಾರೆ. ಅದರಲ್ಲಿ ಕೌಸಲ್ಯೆ, ಸುಮಿತ್ರೆ, ಕೈಕೇಯಿ. ಶ್ರೀರಾಮ ಕೌಸಲ್ಯೆಯ ಪುತ್ರ. ಹೀಗಾಗಿ ರಾಜಾಢಳಿತ ಮೊದಲ ಪತ್ನಿಯ ಮಗನಾಗಿದ್ದ ರಾಮನ ಪಾಲಾಗಬೇಕಿತ್ತು. ಪಟ್ಟಾಭಿಷೇಕದ ವಿಚಾರ ಬಂದಾಗ ಕೈಕೇಯಿ ರಾಮ ಅಧಿಕಾರಕ್ಕೆ ಬರುವುದಕ್ಕೆ ಅಡ್ಡಿಯಾಗಿದ್ದಳು. ಇದೇ ಸಂದರ್ಭವನ್ನು ಬಳಸಿಕೊಂಡ ಆಕೆ ದಶರಥನನ್ನು ಬಲೆಗೆ ಸಿಲುಕಿಸಿದಳು. ಶ್ರೀರಾಮನನ್ನು 14 ವರ್ಷ ವನವಾಸಕ್ಕೆ ಕಳುಹಿಸುವಂತೆ ದಶರಥನ ಬಳಿ ಕೇಳಿದಳು. ಆಕೆಯ ಮಾತು ತಿರಸ್ಕರಿಸದಂತಹ ಸ್ಥಿತಿಗೆ ದಶರಥ ಸಿಲುಕಿದ್ದ. ಹೀಗಾಗಿ ರಾಮ ಕಾಡಿಗೆ ಹೋಗಬೇಕಾಯಿತು.
ಆದ್ರೆ ಇದರಲ್ಲಿ ರಾಮನ ಕಣ್ಣೀರ ಕಥೆ ಎಲ್ಲಿದೆ ಎಂದು ನೀವು ಕೇಳಬಹುದು. ರಾಮ ವನವಾಸಕ್ಕೆ ತೆರಳುವ ಮುನ್ನ ದಶರಥ ಆಡಿದ ಮಾತುಗಳಿಂದ ರಾಮನ ಕಣ್ಣಲ್ಲಿ ನೀರು ಬಂದಿತ್ತು. ರಾಮನ ಕರೆದ ದಶರಥ ''ನಾನು ನಿನ್ನ ತಂದೆಯಲ್ಲ ವೈರಿ, ನಾನು ಎಂದೋ ಯಾವಾಗಲೋ ನೀಡಿದ ವರದವನ್ನು ಆ ಕೈಕೇಯಿ ನನಗೇ ಶಾಪವಾಗಿ ಕೊಡುವಳೆಂದು ಕನಸಿನಲ್ಲಿಯೂ ಎಣಿಸಿರಲಿಲ್ಲ. ಮಗನೇ ನನ್ನನ್ನು ಕ್ಷಮಿಸು'' ಎಂದು ಕೇಳಿದನು. ಈ ಮಾತುಗಳ ಕೇಳಿದ ರಾಮನ ಕಣ್ಣಲ್ಲಿ ನೀರು ಬಂದಿತ್ತು. ರಾಮಾಯಣ ಮಹಾಕಾವ್ಯದಲ್ಲಿ ಭಗವಂತನ ಕಣ್ಣಲ್ಲಿ ನೀರು ಬಂದ ಪ್ರಸಂಗವಿದು. ಆದ್ರೆ ಸೀತೆಯ ಅಪಹರಣವಾದಾಗ ರಾಮನ ಕಣ್ಣಲ್ಲಿ ನೀರು ತುಂಬಿತ್ತು. ಆದ್ರೆ ಆತ ಅಳಲಿಲ್ಲ ಎನ್ನಲಾಗಿದೆ.



Click it and Unblock the Notifications