Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಹಾಡುತ್ತಾ, ಕುಣಿಯುತ್ತಾ ಪಾಠ ಮಾಡುವ ಈ ಟೀಚರ್..! ವಿಡಿಯೋ ವೈರಲ್
ಮಕ್ಕಳಿಗೆ ಶಾಲೆಯಲ್ಲಿ ಹೇಗೆ ಹೇಳಿಕೊಡುತ್ತಾರೋ ಅವರು ಅಷ್ಟು ಬೇಗ ಅಷ್ಟು ರೀತಿಯ ವಿಷಯಗಳ ಕಲಿಯುತ್ತಾರೆ. ಆದ್ರೆ ಮಕ್ಕಳಿಗೆ ಹೇಗೆ ಕಲಿಸಬೇಕು ಎಂಬುದೇ ದೊಡ್ಡ ಸವಾಲು. ಅವರಿಗೆ ಹೊಡೆದು, ಬೆದರಿಸಿ ಕಲಿಯಲು ಹೋದರೆ ಈ ಭಯದಿಂದ ಕಲಿಯರು ಅದು ಬೇಕಾದ ಸಮಯಕ್ಕೆ ನೆನಪಾಗದೆ ಇರಬಹುದು. ಮಕ್ಕಳ ಬುದ್ದಿವಂತಿಕೆ, ಕಲಿಕೆಯಲ್ಲಿ ಪ್ರಾಥಮಿಕ ಶಾಲೆ ಶಿಕ್ಷಕರ ಪಾತ್ರ ಮಹತ್ವ ಪಡೆದಿರುತ್ತದೆ.
ಪ್ರಾಥಮಿಕ ಶಾಲೆಯಲ್ಲಿ ಕಲಿಸಿಕೊಟ್ಟ ಪಾಠಗಳು ಬಹಳ ಕಾಲ ನೆನಪಿನಲ್ಲಿ ಉಳಿಯುತ್ತವೆ. ಇನ್ನು ಕೆಲವೊದು ಶಾಲೆಯಲ್ಲಿ ಅಲ್ಲಿರುವ ಶಿಕ್ಷಕಿಯರು ಸ್ವಲ್ಪ ವಿಭಿನ್ನವಾಗಿ ಮಕ್ಕಳಿಗೆ ಕಲಿಸಿಕೊಡಲು ಮುಂದಾಗುತ್ತಾರೆ. ನೀವು ಕಾರ್ಕಳದ ವಂದನಾ ಟೀಚರ್ ಕುರಿತು ಕೇಳಿರಬಹುದು, ಅವರು ಶಾಲೆಯಲ್ಲಿ ಹಾಡು, ಡ್ಯಾನ್ಸ್ ಮೂಲಕ ಮಕ್ಕಳಿಗೆ ಪಾಠ ಮಾಡುವ ಹಲವು ವಿಡಿಯೋಗಳು ನೋಡಲು ಸಿಗುತ್ತಿದ್ದವು.

ಇದೇ ರೀತಿಯ ಮತ್ತೋರ್ವ ಟೀಚರ್ ವಿಡಿಯೋ ಈಗ ವೈರಲ್ ಆಗುತ್ತಿದೆ. ವಂದನಾ ಟೀಚರ್ ಕಾರ್ಕಳದ ಶಾಲೆಯೊಂದರಲ್ಲಿ ಮಕ್ಕಳಿಗೆ ಹಾಡಿನ ಮೂಲಕ ನೃತ್ಯದ ಮೂಲಕ ಪಾಠ ಮಾಡುತ್ತಿದ್ದರು. ಇದು ಬಹಳ ಮೆಚ್ಚುಗೆಯ ಜೊತೆಗೆ ಈ ರೀತಿ ವಿಧಾನದಿಂದ ಮಕ್ಕಳು ಬಹುಬೇಗ ಅರ್ಥ ಮಾಡಿಕೊಳ್ಳುವುದು ಹಾಗೂ ಬೇಗ ಅರಿತುಕೊಳ್ಳುತ್ತಿದ್ದರು.
ಮಕ್ಕಳಿಗೆ ಸುಲಭವಾಗಿ ಕಲಿಸಬಹುದಾದ ಅಕ್ಷರ ಮಾಲೆ, ರಜೆಯಲ್ಲಿ ಕಲಿಯಬೇಕಾದ ಹಾಡುಗಳು, ತರಕಾರಿಗಳ ಹಾಡು, ಹೂಗಳ ಹಾಡು, ಪ್ರಾರ್ಥನೆಗಳು, ಪರಿಸರ ಗೀತೆ, ಕಾಗುಣಿತದ ಹಾಡು, ಶಾಲೆಯಲ್ಲಿ ಆಚರಿಸುವ ದಿನಾಚರಣೆಗಳಿಗೆ ಹೊಂದುವ ದೇಶಭಕ್ತಿ ಗೀತೆಗಳ ಮೂಲಕ ವಂದನಾ ಟೀಚರ್ ಮನೆ ಮಾತಾಗಿದ್ದರು.
ಈಗ ಬಿಹಾರದ ಬಂಕಾ ಜಿಲ್ಲೆಯ ಶಿಕ್ಷಕಿ ಸಹ ಈಗ ಇಂತಹ ವಿಚಾರವಾಗಿ ಸುದ್ದಿಯಾಗಿದ್ದಾರೆ. ಶಿಕ್ಷಕಿ ಖುಷ್ಬೂ ಕುಮಾರಿ ಅವರು ಪ್ರೋಥೋಮೋಟ್ ಮಾಧ್ಯಮಿಕ ವಿದ್ಯಾಲಯದಲ್ಲಿ ತಮ್ಮ ವಿನೂತನ ಬೋಧನಾ ವಿಧಾನಗಳಿಗಾಗಿ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದಾರೆ. ಖುಷ್ಬೂ ಅವರು ಭಾರತ ಸರ್ಕಾರದ ಚಹಕ್ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ತರಬೇತಿಯನ್ನು ಬಳಸಿಕೊಂಡು ಸಂಕೀರ್ಣವಾದ ವಿಷಯಗಳನ್ನು ಸರಳಗೊಳಿಸುವ ವಿಶಿಷ್ಟವಾದ ಬೋಧನಾ ಶೈಲಿಯ ಮೂಲಕ ಗಮನ ಸೆಳೆದಿದ್ದಾರೆ.
ಅವರು ಹಿಂದಿ ವರ್ಣಮಾಲೆಯ ಸಂಕೀರ್ಣ ಅಕ್ಷರಗಳನ್ನು ಸುಲಭವಾಗಿ ಬರೆಯುವುದು ಹೇಗೆ? ನೆನಪಿನಲ್ಲಿ ಇಟ್ಟುಕೊಳ್ಳುವ ಸುಲಭ ಮಾರ್ಗವೇನು ಎಂಬುದನ್ನು ಮಕ್ಕಳಿಗೆ ಹೇಳಿಕೊಡುತ್ತಿದ್ದಾರೆ. ಅವರು ಪ್ರಾಯೋಗಿಕವಾಗಿ ಹಾಡು ಹೇಳಿ ಕೈ ಬಳಸಿ ಸಹ್ನೆ ಮೂಲಕ ಆ ಅಕ್ಷರ ಹೇಗೆ ಕಾಣಿಸುತ್ತದ ಎಂಬುದನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿದ್ದಾರೆ.
ಈ ರೀತಿಯ ಕಲಿಕೆಯಿಂದ ಮಕ್ಕಳು ಬೇಗ ಕಲಿಯುವ ಜೊತೆಗೆ ಬಹಳ ಕಾಲ ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ. ಮಕ್ಕಳು ಸಹ ಶಿಕ್ಷಕಿಯ ಜೊತೆಗೆ ಅಭ್ಯಾಸ ಮಾಡುವುದರಿಂದ ಈ ಹಾಡು ಹಾಗೂ ಆ ಪದ ಅವರ ಮನದಲ್ಲಿ ಗಾಢವಾಗಿ ಉಳಿದು ಬಿಡುತ್ತದೆ.
मात्रा का ज्ञान।
— Khushboo Anand 🇮🇳 (@Tchr_Khushboo) August 10, 2024
बच्चों की समझ बेहतर तरीके से विकसित हो इसके लिए हमें भी कभी-कभी बच्चा बनना पड़ता है और बच्चा बनकर बच्चों को पढ़ाना व सीखने-सिखाने की प्रक्रिया में मदद करना अत्यंत ही आनंद की अनुभूति देता है..😊☺️#Tchr_Khushboo #GovernmentSchool #Bihar pic.twitter.com/PxMsX2GAR0
ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ವಿಶೇಷ ಕರ್ತವ್ಯದ ಅಧಿಕಾರಿ (OSD) ಸಂಜಯ್ ಕುಮಾರ್, ಆಕೆಯ ತರಗತಿಯ ತುಣುಕುಗಳು ಬಿಹಾರದ ಶಿಕ್ಷಕರ ಫೇಸ್‌ಬುಕ್ ಗುಂಪಿನಲ್ಲಿ ವೈರಲ್ ಆದ ನಂತರ ಶಿಕ್ಷಕಿಯ ಕಾರ್ಯ ಮೆಚ್ಚಿಗೆ ಹೊಳಿಕೆಯ ಮಾತುಗಳ ಆಡಿದ್ದಾರೆ. ಔಪಚಾರಿಕ ಶಿಕ್ಷಣ ವ್ಯವಸ್ಥೆಯಿಂದ ಹೊರಗುಳಿದ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವ ಉದ್ದೇಶದಿಂದ ಖುಷ್ಬೂ ಅವರಿಗೆ ತರಬೇತಿ ನೀಡಿದ ಚಹಕ್ ಕಾರ್ಯಕ್ರಮವು ಸರ್ಕಾರಿ ಯೋಜನೆಯಾಗಿದೆ.
ಸದ್ಯ ಈ ವಿಡಿಯೋ ನೋಡಿದ ಮಂದಿ ಮಕ್ಕಳಿಗೆ ಈ ರೀತಿಯ ಶಿಕ್ಷಕರು ಸಿಕ್ಕಿದರೆ ಅವರಿಗೆ ಹೆಚ್ಚುವರಿಯಾಗಿ ಟ್ಯೂಷನ್ ಕೊಡಿಸುವುದು, ಮನೆಯಲ್ಲಿ ತಂದೆ ತಾಯಿ ಹೇಳಿಕೊಡುವುದು ಇದ್ಯಾವುದೂ ಬೇಕಾಗಿಯೇ ಇಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.



Click it and Unblock the Notifications
