Latest Updates
-
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್
ಮಧ್ಯಮ ವರ್ಗಕ್ಕೆ ಬಜೆಟ್ ಕೊಡುಗೆ: ₹12 ಲಕ್ಷ ವರೆಗೂ ತೆರಿಗೆ ವಿನಾಯಿತಿ ಘೋಷಣೆ..!
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಮ್ಮ ಬಜೆಟ್‌ನಲ್ಲಿ ಮಧ್ಯಮ ವರ್ಗಕ್ಕೆ ಕೊಡುಗೆ ನೀಡಿದ್ದಾರೆ. ಅದರಲ್ಲೂ ವೇತನ ಪಡೆಯುವ ಮಂದಿಗೆ ಈ ಬಾರು ಬಂಪರ್ ಕೊಡುಗೆ ನೀಡಲಾಗಿದೆ. ಹಾಗೆ ತೆರಿಗೆ ವಿನಾಯಿತಿಯು ಸಂತಸ ತಂದಿದೆ. ವಾರ್ಷಿಕವಾಗಿ 12 ಲಕ್ಷ ರೂಪಾಯಿ ವರೆಗೆ ಆದಾಯ ಹೊಂದಿರುವವರು ಕೂಡ ತೆರಿಗೆಯಿಂದ ಹೊರಗುಳಿಯಲಿದ್ದಾರೆ.
ಹೊಸ ತೆರಿಗೆ ಪದ್ಧತಿಯಲ್ಲಿ ವ್ಯಕ್ತಿ 12 ಲಕ್ಷ ರೂಪಾಯಿವರೆಗೂ ಯಾವುದೇ ತೆರಿಗೆ ಪಾವತಿಸುವ ಅಗತ್ಯವಿರುವುದಿಲ್ಲ. 12,75,000 ರೂ.ಗಳವರೆಗೆ ಆದಾಯ ಪಡೆಯುವ ಜನರು ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ಹಾಗೆ ಈ ಟ್ಯಾಕ್ಸ್ ಸ್ಲ್ಯಾಬ್‌ನಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಹಿಂದೆ ಇದ್ದ ಹೊರೆ ಕಡಿಮೆಯಾಗಿದೆ. ಹಾಗಾದ್ರೆ ಯಾರಿಗೆಲ್ಲಾ ಈ ಹೊಸ ತೆರಿಗೆ ವಿನಾಯಿತಿ ಸಿಗುತ್ತಿದೆ ಎಂಬುದನ್ನು ತಿಳಿದುಕೊಳ್ಳೋಣ.

0-4 ಲಕ್ಷ ರೂಪಾಯಿಗಳವರೆಗೆ ತೆರಿಗೆ ಪಾವತಿಸುವಂತಿಲ್ಲ.
4-8 ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುವವರು ಶೇ.5ರಷ್ಟು ತೆರಿಗೆ ಪಾವತಿಸಬೇಕಿದೆ.
8-12 ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುವವರು ಶೇ.10ರಷ್ಟು ತೆರಿಗೆ ಪಾವತಿಸಬೇಕಿದೆ.
12-16 ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುವವರು ಶೇ.15ರಷ್ಟು ತೆರಿಗೆ ಪಾವತಿಸಬೇಕಿದೆ.
16-20 ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುವವರು ಶೇ.20ರಷ್ಟು ತೆರಿಗೆ ಪಾವತಿಸಬೇಕಿದೆ.
20-24 ಲಕ್ಷ ರೂಪಾಯಿಗಳ ವರೆಗೆ ವೇತನ ಪಡೆಯುವವರು ಶೇ.25ರಷ್ಟು ತೆರಿಗೆ ಪಾವತಿಸಬೇಕಿದೆ.
ನೀವು ವಾರ್ಷಿಕವಾಗಿ 24 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ವೇತನ ಪಡೆಯುತ್ತಿದ್ದರೆ ನೀವು ಶೇ.30ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ.
ಈ ಹಿಂದೆ 7 ಲಕ್ಷ ರೂವರೆಗಿನ ಆದಾಯಕ್ಕೆ ಟ್ಯಾಕ್ಸ್ ರಿಬೇಟ್ ನೀಡಲಾಗುತ್ತಿತ್ತು. ಈಗ ಈ ಪ್ರಕಾರ 12 ಲಕ್ಷ ರೂ. ವರೆಗಿನ ಆದಾಯಕ್ಕೆ ತೆರಿಗೆ ಕಟ್ಟುವ ಅವಶ್ಯಕತೆ ಇರುವುದಿಲ್ಲ. ವಾರ್ಷಿಕ ಆದಾಯ 12 ಲಕ್ಷ ರೂಪಾಯಿ ಆಗಿದ್ದರೆ ವಾರ್ಷಿಕ 80,000 ರೂಪಾಯಿ ವರೆಗೂ ತೆರಿಗೆ ಪ್ರಯೋಜನ ಪಡೆದು ಆದಾಯ ತೆರಿಗೆ ಪಾವತಿ ಉಳಿಸಬಹುದು. ಆದರೆ 12 ಲಕ್ಷ ರೂಪಾಯಿಗಿಂತ ಅಧಿಕ ಆದಾಯ ಹೊಂದಿದ್ದರೆ ತೆರಿಗೆ ಪಾವತಿಯ ಜೊತೆಗೆ ಅವರಿಗೆ ತೆರಿಗೆ ಪ್ರಯೋಜನ ಕೂಡ ಇದೆ. ಉದಾಹರಣೆಗೆ ವಾರ್ಷಿಕವಾಗಿ 16 ಲಕ್ಷ ರೂ. ಆದಾಯ ಗಳಿಸಿದರೆ ಅದರಲ್ಲಿ 1,20,000 ತೆರಿಗೆ ಕಟ್ಟಬೇಕಾಗುತ್ತದೆ, ಆದರೆ ಅವರಿಗೆ 50 ಸಾವಿರ ರೂಪಾಯಿ ತೆರಿಗೆ ಪ್ರಯೋಜನವಾಗುತ್ತದೆ.
ನೀವೇನಾದರು ವಾರ್ಷಿಕವಾಗಿ 50 ಲಕ್ಷ ರೂಪಾಯಿ ಆದಾಯ ಪಡೆದಿದ್ದರೆ ತೆರಿಗೆ ವಿನಾಯಿತಿ ರೂಪದಲ್ಲಿ 1,10,000 ರೂ. ಪಡೆದು ಒಟ್ಟು 10.80 ಲಕ್ಷ ರೂಪಾಯಿ ತೆರಿಗೆ ಪಾವತಿಸಬೇಕಾಗುತ್ತದೆ. ಸದ್ಯ ಈ ಹೊಸ ತೆರಿಗೆ ವಿನಾಯಿತಿಯು ಮಧ್ಯಮ ವರ್ಗದವರಿಗೆ ಸಂತಸ ತರುತ್ತಿದೆ. ಗಳಿಸಿದ ಹಣದಲ್ಲಿ ತೆರಿಗೆ ಪಾವತಿ ವಿನಾಯಿಸಿ ನಿರಾಳವಾಗಿಸಿದೆ.



Click it and Unblock the Notifications
