Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ತರ್ರೇರೆ, ಈತನಿಗೆ ಬಂಡಿ ಊಟ ಸಾಕಾಗುತ್ತಿರಲಿಲ್ಲ, ಕಲ್ಲು ಮಣ್ಣು, ನಾಯಿ, ಬೆಕ್ಕು ಎಲ್ಲಾ ತಿನ್ನುತ್ತಿದ್ದ, ವೈದ್ಯಕೀಯ ಲೋಕದ ಅಚ್ಚರಿ
ಕೆಲವರು ಕೂತಲ್ಲಿಯೇ ನಾಲ್ಕು ಜನ ತಿನ್ನುವ ಆಹಾರ ತಿನ್ನುತ್ತಾರೆ, 10 ಜನರ ಊಟವನ್ನು ಒಬ್ಬರೇ ತಿನ್ನುವವರೂ ಇರಬಹುದು ಆದರೆ ತಿನ್ನುವ ವಿಷಯದಲ್ಲಿ ಈ ವ್ಯಕ್ತಿಯಂಥ ವ್ಯಕ್ತ ಇನ್ನೂ ಹುಟ್ಟಿಲ್ಲ. ಈ ವ್ಯಕ್ತಿ 18ನೇ ಶತಮಾನದಲ್ಲಿ ಇದ್ದರು. ಈತನ ಹೆಸರು ತರ್ರೇರೆ.
ಈತ ರಸ್ತೆಯಲ್ಲಿ ನಡೆಯುತ್ತಿದ್ದರೆ ಜನರು ಭಯ ಪಡುತ್ತಿದ್ದರು ಅದಕ್ಕೆ ಕಾರಣವೂ ಇತ್ತು ಈತ ಬರೀ ಆಹಾರ ಮಾತ್ರ ಸೇವಿಸುತ್ತಿರಲಿಲ್ಲ, ತನ್ನ ಕೈಗೆ ಏನು ಸಿಗುತ್ತೋ ಎಲ್ಲವನ್ನೂ ತಿನ್ನುತ್ತಿದ್ದ.

ತರ್ರೇರೆ ಎಂಬುವುದು ಆತನ ನಿಕ್ ನೇಮ್ , "bom-bom tarrare ಎಂಬ ಫ್ರೆಂಚ್ ಕತೆಯ ಒಂದು ಪಾತ್ರ. ಈತ 1772 ಫ್ರಾನ್ಸ್‌ನಲ್ಲಿ ಜನಿಸಿದನು, ಈತ ಚಿಕ್ಕಂದಿನಲ್ಲಿಯೂ ಎಲ್ಲಾ ಮಕ್ಕಳಿಗಿಂತ ತುಸು ಹೆಚ್ಚಾಗಿ ತಿನ್ನುತ್ತಿದ್ದ, 17 ವರ್ಷದ ಹುಡುಗನಾಗಿದ್ದಾಗ ಒಂದು ದನವನ್ನು ಒಬ್ಬನೇ ತಿನ್ನುತ್ತಿದ್ದ, ಆಗ ಅವನ ತೂಕ 45 ಕೆಜಿ ಇತ್ತು.
ಮಗನ ತಿನ್ನುವ ಅಭ್ಯಾಸ ತಂದೆ-ತಾಯಿಗೆ ತಲೆ ನೀವಾಯ್ತು, ಈತನಿಗೆ ಎಷ್ಟು ಕೊಟ್ಟರೂ ಸಾಕಾಗುತ್ತಿರಲಿಲ್ಲ, ಈತನಿಗೆ ಆಹಾರ ನೀಡಲು ತಂದೆ ತಾಯಿ ಕಷ್ಟ ಪಡುತ್ತಿದ್ದರು, ಅವರಿಗೆ ಆರ್ಥಿಕ ಸಂಕಟ ಎದುರಾಗಿತ್ತು. ಆತನ ಮುಂದೆ ಒಂದು ಬಂಡಿ ಆಹಾರ ಇಟ್ಟರೂ ಅದನ್ನು ತಿಂದು ಮುಗಿಸಿ ಆಹಾರ ಸಿಗದೆ ಅಳುವ ಮಗುವಿನಂತೆ ಹಸಿವು ಹಸಿವು ಎಂದು ಅಳುತ್ತಿದ್ದ.
ಮನೆಯವರಿಗೆ ಈತನ ಸಾಕುವುದು ಅಸಾಧ್ಯ ಎಂಬ ಪರಿಸ್ಥಿತಿ ಬಂತು, ಈತನಿಗೆ ಆಹಾರ ಹಾಕಲು ಇನ್ನು ನಮ್ಮಿಂದ ಸಾಧ್ಯವಿಲ್ಲ ಎಂದು ಆತನನ್ನು ಮನೆಯಿಂದಲೇ ಹೊರಹಾಕುತ್ತಾರೆ, ಆತ ತಿನ್ನುವ ಶೈಲಿ ಅಷ್ಟೊಂದು ದೊಡ್ಡ ತಲೆ ನೋವಾಗಿತ್ತು, ಸುಮಾರು ನೂರು ಜನ ತಿನ್ನುತ್ತಿದ್ದ ಆಹಾರವನ್ನು ಈತನೊಬ್ಬನೇ ತಿನ್ನುತ್ತಿದ್ದ, ಹೀಗಾಗಿ ಮನೆಯವರು ಇನ್ನು ನಾವು ಇವನನ್ನು ಮನೆಯಲ್ಲಿಟ್ಟರೆ ನಾವು ಹಸಿವಿನಿಂದ ಸಾಯಬೇಕಾಗುತ್ತದೆ ಎಂದು ಆತನನ್ನು ಮನೆಯಿಂದ ಹೊರಹಾಕುತ್ತಾರೆ, ಅಲ್ಲಿದ ಅಲೆದಾಟದ ಬದುಕು ಸಾಗಿಸಲಾರಂಭಿಸುತ್ತಾನೆ.
ಮನೆಯಿಂದ ಹೊರಬಿದ್ದ ಮೇಲೆ ಜೀವನ ತುಂಬಾನೇ ಕಷ್ಟವಾಯ್ತು
ಮನೆಯವರೇ ಊಟ ಹಾಕಲ್ಲ ಎಂದ ಮೇಲೆ ಬೇರೆಯವರು ಊಟ ಹಾಕುತ್ತಾರೋ ಅದು ಈ ಬಕಾಸುರನಿಗೆ, ಜನರು ಈತ ಬರ್ತಾ ಇದ್ದಾನೆ ಎಂದರೆ ಊಟ ಹಾಕಲು ಎದುರುತ್ತಿದ್ದರು, ಅವರು ತಿಂಗಳು ತಿನ್ನುತ್ತಿದ್ದ ಆಹಾರ ಈತನನ್ನು ಕರೆದರೆ ಒಂದೇ ಹೊತ್ತಿನಲ್ಲಿ ನೀಡಬೇಕಾಗಿತ್ತು. ಹಾಗಾಗಿ ಯಾರೂ ಈತನ ಊಟಕ್ಕೆ ಕರೆಯುತ್ತಿರಲಿಲ್ಲ, ಹೀಗಾಗಿ ಈತ ಇಡಿ ಫ್ರಾನ್ಸ್‌ನಲ್ಲಿ ಗೊತ್ತು ಗುರಿಯಿಲ್ಲದೆ ತಿರುಗಾಡುತ್ತಿದ್ದ, ಹೀಗೆ ತಿರುಗುತ್ತಿದ್ದಾಗ ಒಂದು ಸ್ಟ್ರೀಟ್ ಬ್ಯಾಂಡ್‌ನ ಭಾಗವಾಗುತ್ತಾನೆ, ಅದು ವೇಶ್ಯೆಯರು ಬೀದಿಯಲ್ಲಿ ನೃತ್ಯ ಮಾಡುವ ಬ್ಯಾಂಡ್ ಆಗಿ, ಅದರಲ್ಲಿ ಇವನಿಗೆ ತಿನ್ನುವ ಕೆಲಸ ಮಾಡಬೇಕಾಗಿತ್ತು, ಈತ ತಿನ್ನುವುದನ್ನು ನೋಡಲು ಜನ ಸೇರುತ್ತಿದ್ದರು, ಈತ ಬರೀ ಆಹಾರವಲ್ಲ ಕಲ್ಲು, ಮಣ್ಣು , ಎಲ್ಲಾ ಬಗೆಯ ಪ್ರಾಣಿಗಳು ಹೀಗೆ ಎಲ್ಲವನ್ನು ತಿನ್ನುತ್ತಿದ್ದ.
ಈತ ಬೆಕ್ಕನ್ನು ಹಿಡಿದು ಅದರ ರಕ್ತಹೀರಿ, ಬೆಕ್ಕು ಪೂರ್ತಿ ತಿಂದು ಮೂಳೆ ಮಾತ್ರ ಉಳಿಸುತ್ತಿದ್ದ, ನಾಯಿಯನ್ನು ತಿನ್ನುತ್ತಿದ್ದ, ಹಾವು ತಿನ್ನುತ್ತಿದ್ದ ಹೀಗೆ ಏನು ಕೊಟ್ಟರೂ ತಿನ್ನುತ್ತಿದ್ದ, ಎಲ್ಲರು ಅವನು ತಿನ್ನುವುದನ್ನು ಕುತೂಹಲದಿಂದ ನೋಡುತ್ತಿದ್ದರೇ ವಿನಃ ಏಕೆ ಹೀಗೆ ಮಾಡುತ್ತಿದ್ದ ಎಂದು ಯೋಚಿಸುತ್ತಿರಲಿಲ್ಲ.
ಇನ್ನು ಈತನ ಆಕಾರ ಕೂಡ ತಿಂಬಾನೇ ವಿಚಿತ್ರವಾಗಿತ್ತು, ಆತನ ಡೊಳ್ಳು ಹೊಟ್ಟೆ ಜೋತು ಬಿದ್ದಿತ್ತು ಅದನ್ನು ಎತ್ತಿ ಹೊಟ್ಟೆ ಸುತ್ತ ಬೆಲ್ಟ್‌ನಲ್ಲಿ ಸುತ್ತಿ ಇಡುತ್ತಿದ್ದ, ತಿಂದಾಗ ಹೊಟ್ಟೆಯನ್ನು ಬಿಡುತ್ತಿದ್ದ ಇಲ್ಲದಿದ್ದರೆ ಚೀಲದಂತೆ ಸುತ್ತಿಡುತ್ತಿದ್ದ.
1789ರಲ್ಲಿ ಫ್ರಾನ್ಸ್ ಕ್ರಾಂತಿ ನಡೆಯುತ್ತೆ, ಆಗ ಫ್ರಾನ್ಸ್‌ನ ಮಿಲಿಟರಿ ಗುಂಪಿಗೆ ಸಹಾಯಕನಾಗಿ ಸೇರುತ್ತಾನೆ, ಆತ ಯದ್ಧಕ್ಕೆ ಹೋಗುತ್ತಿರಲಿಲ್ಲ, ಆದರೆ ಜನರಿಗೆ ಅವರ ಕೆಲಸ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದ, ಜನ ಅವನಿಗೆ ಆಹಾರ ನೀಡುತ್ತಿದ್ದರು, ಅದನ್ನು ತಿನ್ನುತ್ತಿದ್ದ.
ಈ ಮಿಲಿಟರಿಯಲ್ಲಿ ಸೇವೆಯಲ್ಲಿರುವಾಗ ಆರೋಗ್ಯ ಕೈ ಕೊಡುತ್ತೆ, ಮಿಲಿಟರಿ ಆಸ್ಪತ್ರೆ ಸೇರುತ್ತಾನೆ, ಎಷ್ಟು ತಿಂದರೂ ಹಸಿವು ಮಾತ್ರ ಕಡಿಮೆಯಾಗುತ್ತಿರಲಿಲ್ಲ, ಈತನ ಮೈ ತೂಕ ಹೆಚ್ಚಾಗುತ್ತಿತ್ತು, ಆದರೆ ಅಷ್ಟೆಲ್ಲಾ ತಿಂದರೂ ಆತನ ದೇಹದಲ್ಲಿ ಪೋಷಕಾಂಶದ ಕೊರತೆ ಎದ್ದು ಕಾಣುತ್ತಿತ್ತು.
ಅಲ್ಸಾಂಡರ್ ಈತನ ಪರಿಸ್ಥಿತಿಯನ್ನು ತನ್ನ ಲಾಭಕ್ಕಾಗಿ ಬಳಸಲು ಯೋಚಿಸಿ ಇದನ್ನು ಗೂಢಚಾರಿಯನ್ನಾಗಿ ಮಾಡಿದನು, ಆತ ಕೆಲವೊಂದು ದಾಖಲೆಗಳನ್ನು ಚಿಕ್ಕ ಮರದ ಬಾಕ್ಸ್‌ನಲ್ಲಿ ಹಾಕಿ ಅದನ್ನು ತರ್ರೇರೆಗೆ ನೀಡುತ್ತಿದ್ದ, ತರ್ರೇರೆ ಅದನ್ನು ನುಂಗುತ್ತಿದ್ದ, ನಂತರ ಆ ಬಾಕ್ಸ್ ಮಲದ ಮೂಲಕ ಹೊರ ಬರುವಾಗ ಕಾದು ನಂತರ ಅದರಲ್ಲಿರುವ ಸಂದೇಶ ಓದುತ್ತಿದ್ದರು.
ಕೊನೆಗೆ ಪರ್ಷಿಯನ್ ಸೈನಿಕರ ಕೈಯಲ್ಲಿ ಸಿಕ್ಕಿ ಬೀಳುತ್ತಾನೆ, ಈತನ ಗೂಢಚಾರ ಕೆಲಸದ ಬಗ್ಗೆ ತಿಳಿಯುತ್ತದೆ, ಕೋಪದಿಂದ ಆತನನ್ನು ನೇಣಿಗೆ ಹಾಕಲು ಆಜ್ಞೆ ನೀಡಲಾಗುವುದು, ಆದರೆ ತರ್ರೇರೆ ತನ್ನ ಪರಿಸ್ಥಿತಿ ಬಗ್ಗೆ ಹೇಳಿ ಕಣ್ಣೀರು ಹಾಕಿದಾಗ ಅವರಿಗೆ ಬೇಸರವಾಗಿ ಆತನಿಗೆ ಆಹಾರ ನೀಡಿ ಫ್ರಾನ್ಸ್‌ಗೆ ಮರಳುವಂತೆ ಹೇಳುತ್ತಾರೆ. ಆತ ಫ್ರಾನ್ಸ್ಗೆ ಬರಳಿ ಇನ್ನು ನನ್ನಿಂದ ಈ ರೀತಿ ಸಂದೇಶ ನೀಡುವ ಕೆಲಸ ಮಾಡಲಾಗುವುದು ಎಂದು ಹೇಳುತ್ತಾನೆ.
ಆತ ನನ್ನನ್ನು ಆಸ್ಪತ್ರೆಗೆ ಸೇರಿಸಿ ಎಲ್ಲರಂತೆ ನನ್ನನ್ನು ಮಾಡಿ ಎಂದು ಕೇಳುತ್ತಾನೆ, ವೈದ್ಯರು ತುಂಬಾ ಔಷಧ ಟ್ರೈ ಮಾಡುತ್ತಾರೆ, ಆದರೆ ಯಾವುದೂ ವರ್ಕ್ ಆಗಲ್ಲ, ಒಂದು ದಿನ ಆಸ್ಪತ್ರೆಯಲ್ಲಿ ರೋಗಿಯ ರಕ್ತವನ್ನು ಹೀರಿ ಕುಡಿದಿದ್ದು ಗಮನಕ್ಕೆ ಬರುತ್ತದೆ, ಇನ್ನು ಕೆಲವು ದಿನದಲ್ಲಿ 14 ತಿಂಗಳ ಮಗು ಕಾಣೆಯಾಗುತ್ತೆ, ಅದನ್ನು ಈತನೇ ತಿಂದಿರಬಹುದೆಂಬ ಸಂಶಯ ಮೂಡುತ್ತೆ, ಆಸ್ಪತ್ರೆಯಿಂದಲೂ ಹೊರ ಹಾಕಲಾಗುವುದು, ಇದಾಗಿ ಕೆಲವು ಸಮಯದ ನಂತರ ಮತ್ತೆ ಆಸ್ಪತ್ರೆಗೆ ಬರುತ್ತಾನೆ. ಆಗ ಸಾಯುವ ಸ್ಥಿತಿಯಲ್ಲಿದ್ದ, ಹೀಗೆ 26 ವರ್ಷಕ್ಕೆ ಸಾವನ್ನಪ್ಪುತ್ತಾನೆ. ಆತನ ಆರೋಗ್ಯ ಇಂದಿಗೂ ವೈದ್ಯಕೀಯ ಜಗತ್ತಿಗೆ ಈಗಲೂ ಒಂದೇ ಮಿಸ್ಟರಿ.



Click it and Unblock the Notifications
