Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಅಯೋಧ್ಯೆ ರಾಮನಿಗೆ ಸೂರ್ಯ ತಿಲಕ: 12 ಗಂಟೆಗೆ ಸೂರ್ಯ ರಶ್ಮಿ ಸ್ಪರ್ಶ..!
ರಾಮ ನವಮಿಯ ಈ ದಿನವು ದೇಶದ ಬಹುತೇಕ ಎಲ್ಲಾ ರಾಮನ ದೇವಾಲಯದಲ್ಲೂ ವಿಶೇಷ ಪೂಜೆ ಇರುವುದು ನೋಡಬಹುದು. ಅದರಲ್ಲೂ ರಾಮನ ದೇವಾಲಗಳಲ್ಲಿ ಈ ದಿನ ವಿಶೇಷ. ಹಾಗೆ ಅಯೋಧ್ಯೆಯಲ್ಲಿ ಇದು 2ನೇ ರಾಮನವಮಿಯಾಗಿದೆ. ಕಳೆದ ವರ್ಷ 500 ವರ್ಷದ ಬಳಿಕ ಮೊದಲ ರಾಮನವಮಿ ಆಚರಿಸಲಾಗಿತ್ತು. ಈ ವರ್ಷ 2ನೇ ರಾಮನವಮಿಯಾಗಿದೆ.
ಹೀಗಾಗಿ ಅಯೋಧ್ಯೆ ರಾಮ ಮಂದಿರದಲ್ಲಿ ರಾಮನವಮಿ ಆಚರಣೆ ಬಹಳ ವಿಶೇಷ ಎನಿಸಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ವಿರಾಜಮಾನನಾಗಿರುವ ಸೂರ್ಯವಂಶಜ ಬಾಲಕರಾಮನಿಗೆ ಮಂದಿರದಲ್ಲಿ ನಡೆಯಲಿರುವ ಎರಡನೇ ರಾಮನವಮಿಯಂದು ಸೂರ್ಯತಿಲಕ ಸಮರ್ಪಣೆಯಾಗಿದೆ. ಚೈತ್ರ ಶುಕ್ ನವಮಿಯಂದು, ಭಗವಾನ್ ಶ್ರೀ ರಾಮನ ಅವತಾರದ ಮಹಾ ಹಬ್ಬವನ್ನು ಆಚರಿಸಲಾಗುತ್ತದೆ.

ಪುರಾಣಗಳ ಪ್ರಕಾರ ರಾಮಲಲ್ಲಾ ಚೈತ್ರ ಮಾಸದ ಶುಕ್ಲ ಪಕ್ಷದ 9ನೇ ದಿನದಂದು ಪುನರ್ವಸು ನಕ್ಷತ್ರ ಮತ್ತು ಕರ್ಕಾಟಕ ಲಗ್ನದಲ್ಲಿ ಜನಿಸಿದನು ಎಂದು ಹೇಳಲಾಗಿದೆ. ಇಂದು ಚೈತ್ರ ಶುಕ್ಲ ನವಮಿ ತಿಥಿ. ಹೀಗಾಗಿ ಅಯೋಧ್ಯೆ ಸೇರಿ ರಾಮನ ದೇವಾಲಯದಲ್ಲಿ ವಿಶೇಷ ಪೂಜೆ ನೋಡಬಹುದು, ಹಾಗೆ ಇಂದು ಎಲ್ಲೆಡೆ ರಾಮನ ಹುಟ್ಟಿದ ದಿನದ ಸಂಭ್ರಮ.
ಇನ್ನು ಕಳೆದ ವರ್ಷದಿಂದ ರಾಮನ ದೇವಾಲಯ ಅಯೋಧ್ಯೆಯಲ್ಲಿ ಸೂರ್ಯ ರಶ್ಮಿಯು ರಾಮನ ಸ್ಪರ್ಶಿಸುವುದು ನೋಡಬಹುದು. ಅದರಲ್ಲೂ ಈ ದಿನದಂದು ಸೂರ್ಯನ ಕಿರಣ ರಾಮನ ಹಣೆಯನ್ನು ಮುಟ್ಟುತ್ತದೆ. ಇದಕ್ಕೆ ಸೂರ್ಯ ತಿಲಕ ಎಂದು ಕರೆಯಲಾಗಿದೆ. ಇಂದು ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಸೂರ್ಯನ ಕಿರಣ ಬಾಲರಾಮನ ಹಣೆಯನ್ನು ಸ್ಪರ್ಶಿಸಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಪ್ರಕಾರ ಬೆಳಗ್ಗೆ 09:30 ರಿಂದ ಬೆಳಗ್ಗೆ 10:30ರ ವರೆಗೆ ವಿಶೇಷ ಅಭಿಷೇಕ ನೆರವೇರಿದೆ. ನಂತರ 10 ನಿಮಿಷಗಳ ಕಾಲ ರಾಮನಿಗೆ ಪರದೆ ಹಾಕಲಾಗಿತ್ತು. ನಂತರ ಅಲಂಕಾರ ಮಾಡಿ ಮಧ್ಯಾಹ್ನ 11:4ರ ವರೆಗೂ ರಾಮನ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಈ ಸಮಯದಲ್ಲಿ ಸಾವಿರಾರು ಮಂದಿ ಭಕ್ತರು ರಾಮನ ದರ್ಶನ ಪಡೆದಿದ್ದಾರೆ.
ನಂತರ ಮತ್ತೆ ರಾಮನಿಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಸಮಯದಲ್ಲಿ ಸೂರ್ಯ ರಶ್ಮಿ ರಾಮನ ಸ್ಪರ್ಶಿಸಿದೆ. ಸರಿಯಾಗಿ 12 ಗಂಟೆಗೆ ಸೂರ್ಯನ ಕಿರಣವು ಬಾಲ ರಾಮನ ಹಣೆಯನ್ನು ಸ್ಪರ್ಶಿಸಿತು. ಇದೇ ಸಮಯದಲ್ಲಿ ರಾಮ ಜನಿಸಿದ ಎಂಬ ಪ್ರತೀತಿ ಹೀಗಾಗಿ 12 ಗಂಟೆಗೆ ಈ ಪ್ರಕ್ರಿಯೆ ನಡೆಸಲಾಗುತ್ತದೆ. ಸೂರ್ಯ ತಿಲಕದ ಬಳಿಕ ಆರತಿ ನೆರವೇರಿಸಲಾಗಿದೆ.
ನಂಬಿಕೆಗಳ ಪ್ರಕಾರ ಸೂರ್ಯ ವಂಶದಲ್ಲಿ ರಾಮನು ಸರಿಯಾಗಿ 12 ಗಂಟೆಗೆ ಜನಿಸಿದನು ಎಂದು ಹೇಳಲಾಗಿದೆ. ಸೂರ್ಯ ದೇವರನ್ನು ಅವರ ಕುಟುಂಬ ದೇವತೆ ಎಂದು ಪರಿಗಣಿಸಲಾಗುತ್ತದೆ. ಭಗವಾನ್ ಶ್ರೀ ರಾಮ ಜನಿಸಿದಾಗ ಸೂರ್ಯ ತನ್ನ ಪೂರ್ಣ ಪ್ರಭಾವದಲ್ಲಿದ್ದನೆಂದು ನಂಬಲಾಗಿದೆ. ಆದ್ದರಿಂದ ರಾಮ ನವಮಿಯಂದು ಶ್ರೀರಾಮನ ಸೂರ್ಯ ತಿಲಕವು ವಿಶೇಷ ಮಹತ್ವವನ್ನು ಪಡೆದುಕೊಂಡಿದೆ.
ಸೂರ್ಯ ರಶ್ಮಿ ಬೀಳುವ ಹಿಂದಿದೆ ವಿಜ್ಞಾನ
ರಾಮನ ಮೂರ್ತಿ ಮೇಲೆ ಸೂರ್ಯನ ಕಿರಣ ಬೀಳುವುದರ ಹಿಂದೆ ವಿಜ್ಞಾನದ ಕೌತುಕವಿದೆ. ಕನ್ನಡಿಗಳು ಮತ್ತು ಲೆನ್ಸ್ ಗಳ ಸಹಾಯದಿಂದ ಈ ವಿದ್ಯಮಾನ ನಡೆಯುವಂತೆ ಮಾಡಲಾಗಿದೆ. 10 ಮಂದಿ ಭಾರತೀಯ ವಿಜ್ಞಾನಿಗಳು ಇದಕ್ಕಾಗಿ ಶ್ರಮಿಸಿದ್ದಾರೆ. ರೂರ್ಕಿಯ ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್ (CBRI) ವಿಜ್ಞಾನಿಗಳು ಇದರ ಹಿಂದಿರುವ ತಂತ್ರಜ್ಞರಾಗಿದ್ದಾರೆ.
ಆಪ್ಟೋ- ಮೆಕಾನಿಕಲ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುತ್ತದೆ. ನಾಲ್ಕು ಕನ್ನಡಿಗಳು ಹಾಗೂ ನಾಲ್ಕು ಲೆನ್ಸ್ ಗಳನ್ನು ಟಿಲ್ಟ್ ಯಾಂತ್ರಿಕತೆ ಮತ್ತು ಪೈಪಿಂಗ್ ವ್ಯವಸ್ಥೆಯಲ್ಲಿ ಅಳವಡಿಸಲಾಗಿದೆ. ಇದು ಗರ್ಭಗುಡಿಯ ಮೇಲಿನಿಂದ ಒಂದು ಪೈಪ್ ಮೂಲಕ ಬೆಳಕು ಹಾದು ಒಳಬರಲು ಸಹಾಯ ಮಾಡಲಿದೆ.



Click it and Unblock the Notifications